AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Deepavali 2023: ನರಕ ಚತುರ್ದಶಿ ದಿನ ಅಭ್ಯಂಗ ಸ್ನಾನಕ್ಕೆ ಯಾವ ಎಣ್ಣೆ ಬಳಸಬೇಕು? ಎಣ್ಣೆ ಸ್ನಾನದಿಂದ ಲಭಿಸುವ ಪ್ರಯೋಜನಗಳೇನು?

ನಾಳೆ ನರಕ ಚತುರ್ದಶಿ. ಈ ಶುಭ ದಿನದಂದು ಜನರು ಮುಂಜಾನೆ ಬೇಗನೇ ಎದ್ದು, ಅಭ್ಯಂಗ ಸ್ನಾನ ಮಾಡಿ, ಹೊಸ ಬಟ್ಟೆಗಳನ್ನು ಧರಿಸಿ ದೇವರನ್ನು ಭಕ್ತಿಪೂರ್ವಕವಾಗಿ ಪೂಜಿಸುತ್ತಾರೆ. ನರಕ ಚತುರ್ದಶಿಯ ಅಭ್ಯಂಗ ಸ್ನಾನಕ್ಕೆ ಯಾವ ಎಣ್ಣೆಯನ್ನು ಬಳಸಬೇಕು ಮತ್ತು ಈ ಎಣ್ಣೆ ಸ್ನಾನದಿಂದ ಲಭಿಸುವ ಆರೋಗ್ಯ ಪ್ರಯೋಜನಗಳೇನು ಎಂಬುದನ್ನು ನೋಡೋಣ.

Deepavali 2023: ನರಕ ಚತುರ್ದಶಿ ದಿನ ಅಭ್ಯಂಗ ಸ್ನಾನಕ್ಕೆ ಯಾವ ಎಣ್ಣೆ ಬಳಸಬೇಕು? ಎಣ್ಣೆ ಸ್ನಾನದಿಂದ ಲಭಿಸುವ ಪ್ರಯೋಜನಗಳೇನು?
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
| Edited By: |

Updated on: Nov 11, 2023 | 5:41 PM

Share

ನರಕ ಚತುರ್ದಶಿ ಹಬ್ಬವನ್ನು ಪ್ರತಿವರ್ಷ ಕಾರ್ತಿಕ ಮಾಸದ ಕೃಷ್ಣ ಪಕ್ಷದ ಚತುರ್ದಶಿ ದಿನದಂದು ಆಚರಿಸಲಾಗುತ್ತದೆ. ಈ ಬಾರಿ ನವೆಂಬರ್ 12 ಅಂದರೆ ನಾಳೆ ನರಕ ಚತುರ್ದಶಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬದ ದಿನ ಜನರು ಮುಂಜಾನೆ ಬೇಗ ಎದ್ದು ಸಂಪೂರ್ಣ ದೇಹಕ್ಕೆ ಎಣ್ಣೆಯನ್ನು ಹಚ್ಚಿ ಅಭ್ಯಂಗ ಸ್ನಾನ ಮಾಡುತ್ತಾರೆ. ಅಭ್ಯಂಗಸ್ನಾನದ ನಂತರ ಹೊಸ ಬಟ್ಟೆ ಧರಿಸಿ ದೇವರಿಗೆ ನೈವೇದ್ಯವಿಟ್ಟು ಪೂಜಿಸಲಾಗುತ್ತದೆ. ಈ ಆಚರಣೆಯು ನಕಾರಾತ್ಮಕ ಆಲೋಚನೆಗಳ ಶುದ್ಧೀಕರಣ ಮತ್ತು ಸಕಾರಾತ್ಮಕತೆ, ಭರವಸೆ ಮತ್ತು ಸಮೃದ್ಧಿಯಿಂದ ತುಂಬಿದ ಹೊಸ ಜೀವನದ ಆರಂಭವನ್ನು ಸೂಚಿಸುತ್ತದೆ. ನರಕ ಚತುರ್ದಶಿಯ ದಿನ ಅಭ್ಯಂಗ ಸ್ನಾನ ಮಾಡುವುದರಿಂದ ಪವಿತ್ರ ಗಂಗಾ ಸ್ನಾನ ಮಾಡಿದಷ್ಟೇ ಪುಣ್ಯ ಸಿಗುತ್ತದೆ ಎಂಬ ನಂಬಿಕೆಯೂ ಇದೆ. ಈ ದಿನ ಅಭ್ಯಂಗ ಸ್ನಾನಕ್ಕೆ ಯಾವ ಎಣ್ಣೆಯನ್ನು ಬಳಸಿದರೆ ಒಳ್ಳೆಯದು ಮತ್ತು ಈ ಎಣ್ಣೆ ಸ್ನಾನದಿಂದ ಲಭಿಸುವ ಆರೋಗ್ಯ ಪ್ರಯೋಜನಗಳೇನು ಎಂಬುದನ್ನು ನೋಡೋಣ.

ಅಭ್ಯಂಗ ಸ್ನಾನಕ್ಕೆ ಯಾವ ಎಣ್ಣೆ ಬಳಸಬೇಕು?

ಆಯುರ್ವೇದದಲ್ಲಿ ದೇಹಕ್ಕೆ ಎಣ್ಣೆ ಹಚ್ಚಿ ಬಿಸಿ ನೀರಿನಿಂದ ಸ್ನಾನ ಮಾಡುವುದನ್ನು ಅಭ್ಯಂಗಸ್ನಾನ ಎಂದು ಕರೆಯಲಾಗುತ್ತದೆ. ಇದರ ಉದ್ದೇಶವು ದೇಹ ಮತ್ತು ಮನಸ್ಸನ್ನು ಶುದ್ಧೀಕರಿಸುವುದಾಗಿದೆ. ವಿಶೇಷವಾಗಿ ನರಕ ಚತುರ್ದಶಿಯ ದಿನ ಎಲ್ಲರೂ ಅಭ್ಯಂಗಸ್ನಾನ ಮಾಡುತ್ತಾರೆ. ಅಭ್ಯಂಗಸ್ನಾನಕ್ಕೆ ಕೆಲವರು ಎಳ್ಳೆಣ್ಣೆಯನ್ನು ಬಳಸಿದರೆ, ಇನ್ನೂ ಕೆಲವರು ಕೊಬ್ಬರಿ ಎಣ್ಣೆಯನ್ನು ಬಳಸುತ್ತಾರೆ. ಆದರೆ ಬೇರೆ ಎಣ್ಣೆಗಳಿಗಿಂತ ಎಳ್ಳೆಣ್ಣೆಯು ಹೆಚ್ಚು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಏಕೆಂದರೆ ಎಳ್ಳು ಬೀಜಗಳಲ್ಲಿ ಕೊಬ್ಬಿನಾಮ್ಲಗಳು, ಒಮೆಗಾ-6, ಕಬ್ಬಿಣಾಂಶ, ಕ್ಯಾಲ್ಸಿಯಂ, ಮೆಗ್ನೇಸಿಯಮ್ ಸಮೃದ್ಧವಾಗಿದ್ದು, ಇದು ನಮ್ಮ ದೇಹಕ್ಕೆ ಹಲವು ವಿಧದಲ್ಲಿ ಪ್ರಯೋಜನಕಾರಿಯಾಗಿದೆ.

ಅಭ್ಯಂಗ ಸ್ನಾನದ ಸರಿಯಾದ ವಿಧಾನ:

ನರಕ ಚತುರ್ದಶಿಯ ಶುಭ ದಿನ ಕೆಟ್ಟದರ ವಿರುದ್ಧ ಒಳ್ಳೆಯದರ ವಿಜಯವನ್ನು ಸಂಕೇತಿಸುತ್ತದೆ. ಈ ದಿನ ಸೂರ್ಯೋದಯಕ್ಕೂ ಮೊದಲೇ ಎದ್ದು ಅಭ್ಯಂಗ ಸ್ನಾನ ಮಾಡಿದರೆ ಗಂಗಾ ಸ್ನಾನ ಮಾಡಿದಷ್ಟೇ ಪುಣ್ಯ ಸಿಗುತ್ತದೆ ಎಂಬ ನಂಬಿಕೆಯೂ ಇದೆ. ನರಕ ಚತುರ್ದಶಿಯ ಮುನ್ನಾ ದಿನ ಅಂದರೆ ತ್ರಯೋದಶಿಯ ದಿನ ಸ್ನಾನದ ಹಂಡೆಗಳಿಗೆ ನೀರು ತುಂಬುವ ಮೂಲಕ ಹಬ್ಬಕ್ಕೆ ಚಾಲನೆ ನೀಡಲಾಗುತ್ತದೆ. ಅಂದು ನೀರಿನ ಪಾತ್ರೆ, ಹಂಡೆಗಳನ್ನು ಶುದ್ಧೀಕರಿಸಿ, ಪೂಜಿಸಿ ಬಳಿಕ ಹಂಡೆಗಳಿಗೆ ನೀರು ತುಂಬಲಾಗುತ್ತದೆ. ಮರುದಿನ ಅಂದರೆ ನರಕ ಚತುರ್ದಶಿಯ ದಿನದಂದು ಸೂರ್ಯೋದಯಕ್ಕೂ ಮುಂಚೆಯೇ ಎದ್ದು, ಎಳ್ಳೆಣ್ಣೆಯನ್ನು ಸಂಪೂರ್ಣ ದೇಹಕ್ಕೆ ಹಚ್ಚಿ, ಹಾಗೂ ತಲೆಗೂದಲಿಗೂ ಎಳ್ಳೆಣ್ಣೆಯನ್ನು ಹಚ್ಚಿ, ಚೆನ್ನಾಗಿ ಮಸಾಜ್ ಮಾಡಿ, 30 ನಿಮಿಷಗಳ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಬೇಕು.

ಸ್ನಾನಕ್ಕೆ ಸಾಬೂನು ಬಳಸುವ ಬದಲು ಕಡ್ಲೆ ಹಿಟ್ಟು ಅಥವಾ ಶ್ರೀಗಂಧದ ಪುಡಿಗೆ ಸ್ವಲ್ಪ ಮೊಸರನ್ನು ಬೆರಿಸಿ ಅದನ್ನು ಚರ್ಮಕ್ಕೆ ಅನ್ವಯಿಸಿ ಸ್ನಾನ ಮಾಡಬಹುದು. ಅಥವಾ ಉಬ್ಟಾನ್ ಬಳಸಬಹುದು. ಉಬ್ಟಾನ್ ನೀವು ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದು. ಅದಕ್ಕಾಗಿ 2 ಚಮಚ ಕಡ್ಲೆ ಹಿಟ್ಟು, 2 ಚಮಚ ಶ್ರೀಗಂಧ ಪುಡಿ, ಅರ್ಧ ಚಮಚ ಅರಶಿನ ಪುಡಿ, ಒಂದು ಚಮಚ ಹಸಿ ಹಾಲು ಅಥವಾ ಮೊಸರು, ರೋಸ್ ವಾಟರ್, ಒಂದು ಚಮಚ ಜೇನು ತುಪ್ಪ ಬೇಕಾಗುತ್ತವೆ. ಈ ಎಲ್ಲಾ ಪದಾರ್ಥಗಳನ್ನು ಮಿಶ್ರಣ ಮಾಡಿದರೆ ಉಬ್ಟಾನ್ ಸಿದ್ದ. ಹಾಗೂ ತಲೆಗೂದಲನ್ನು ಸೀಗೆಕಾಯಿ ಪುಡಿ ಅಥವಾ ಅಂಟುವಾಳವನ್ನು ಬಳಸಬಹುದು.

ಅಭ್ಯಂಗ ಸ್ನಾನ ಮಾಡುವುದರ ಪ್ರಯೋಜನಗಳು:

ಧಾರ್ಮಿಕ ಪ್ರಾಮುಖ್ಯತೆ ಮಾತ್ರವಲ್ಲದೆ ಎಣ್ಣೆ ಸ್ನಾನವು ಹಲವಾರು ಆರೋಗ್ಯ ಪ್ರಯೋಜನಗಳನ್ನು ಕೂಡಾ ಹೊಂದಿದೆ.

ದೇಹದಲ್ಲಿ ರಕ್ತದ ಹರಿವನ್ನು ಸುಧಾರಿಸುತ್ತದೆ:

ನರಕ ಚತುರ್ಥಿಯ ದಿನದಂದು ಸಂಪೂರ್ಣ ದೇಹಕ್ಕೆ ಎಳ್ಳೆಣ್ಣೆಯನ್ನು ಹಚ್ಚಿ ಮಸಾಜ್ ಮಾಡಲಾಗುತ್ತದೆ. ಇದರಿಂದ ರಕ್ತದ ಹರಿವು ಹೆಚ್ಚಾಗುತ್ತದೆ, ಮತ್ತು ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಕಾರಿಯಾಗಿದೆ. ಮತ್ತು ಇದರಿಂದ ನೀವು ದೀರ್ಘಕಾಲದವರೆಗೆ ಆರೋಗ್ಯ ಸಮಸ್ಯೆಗಳಿಂದ ದೂರವಿರಬಹುದು.

ಚರ್ಮಕ್ಕೆ ಪ್ರಯೋಜನಕಾರಿ:

ಎಳ್ಳೆಣ್ಣೆಯಲ್ಲಿ ಅನೇಕ ವಿಧದ ಜೀವಸತ್ವಗಳು ಮತ್ತು ಉತ್ಕರ್ಷಣ ನಿರೋಧಕಗಳು ಕಂಡುಬರುತ್ತದೆ. ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಅಲ್ಲದೆ ಇದರಲ್ಲಿ ಕಂಡುಬರುವ ಉತ್ಕರ್ಷಣ ನಿರೋಧಕ ಅಂಶಗಳು ಚರ್ಮಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ತೊಡೆದುಹಾಕುತ್ತದೆ. ಎಳ್ಳೆಣ್ಣೆಯು ಚರ್ಮವನ್ನು ತೇವವಾಗಿರಿಸುತ್ತದೆ, ಬ್ಯಾಕ್ಟೀರಿಯಾಗಳ ಹಾನಿಯಿಂದ ಚರ್ಮವನ್ನು ರಕ್ಷಿಸುತ್ತದೆ ಹಾಗೂ ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ.

ಇದನ್ನೂ ಓದಿ:ದೀಪಾವಳಿಯಂದು ಗೋಮಯ ಹಣತೆ ಬೆಳಗಿಸಿ, ಹಬ್ಬ ಆಚರಿಸಿ

ಮೂಳೆಗಳನ್ನು ಬಲಪಡಿಸಲು ಸಹಕಾರಿ:

ಎಣ್ಣೆ ಸ್ನಾನ ಮಾಡುವುದರಿಂದ ಮೂಳೆಗಳ ಆರೋಗ್ಯವೂ ಸುಧಾರಿಸುತ್ತದೆ. ವಿಶೇಷವಾಗಿ ಎಳ್ಳೆಣ್ಣೆಯು ಉರಿಯೂತ ನಿವಾರಕವಾಗಿರುವುದರಿಂದ, ಇದು ಕೀಲು ನೋವಿನಿಂದ ಪರಿಹಾರವನ್ನು ಒದಗಿಸುತ್ತದೆ. ಅಲ್ಲದೆ ನಿಯಮಿತ ಎಣ್ಣೆ ಸ್ನಾದದಿಂದ ಸಂಧಿವಾತ ಮತ್ತು ಆಸ್ಟಿಯೊಪೊರೋಸಿಸ್ನಂತಹ ಮೂಳೆ ಸಂಬಂಧಿ ಕಾಯಿಗಳು ಬಾರದಂತೆ ನೋಡಿಕೊಳ್ಳಬಹುದು.

ಎಳ್ಳೆಣ್ಣೆ ಕೂದಲಿಗೂ ಪ್ರಯೋಜನಕಾರಿಯಾಗಿದೆ:

ಅಭ್ಯಂಗ ಸ್ನಾನದಲ್ಲಿ ಕೂದಲಿಗೂ ಕೂಡಾ ಎಳ್ಳೆಣ್ಣೆಯನ್ನು ಹಚ್ಚಲಾಗುತ್ತದೆ. ಇದು ನೆತ್ತಿಯ ಆರೋಗ್ಯವನ್ನು ಸುಧಾರಿಸಲು, ಕೂದಲಿಗೆ ನೈಸರ್ಗಿಕ ಹೊಳಪನ್ನು ನೀಡಲು ಸಹಕಾರಿಯಾಗಿದೆ. ಅಲ್ಲದೆ ಇದು ತಲೆಹೊಟ್ಟು ಮತ್ತು ಕೂದಲಿನ ಶುಷ್ಕತೆಯ ಸಮಸ್ಯೆಯನ್ನು ಹೋಗಲಾಡಿಸುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ