ಚೀತಾಗಳು ಮನುಷ್ಯರ ಮೇಲೆ ದಾಳಿ ಮಾಡಿದ ಇತಿಹಾಸವೇ ಇಲ್ಲ: ಯಾಕೆ ಗೊತ್ತಾ?

ಚೀತಾಗಳು ಮನುಷ್ಯರ ಮೇಲೆ ದಾಳಿ ಮಾಡುವುದು ಅತ್ಯಂತ ಅಪರೂಪ. ಅವುಗಳ ದವಡೆಗಳು ಚಿಕ್ಕದಾಗಿ, ಹಲ್ಲುಗಳು ಮತ್ತು ನಖಗಳು ಬಲವಾಗಿರುವುದಿಲ್ಲ. ಚೀತಾಗಳು ಸಾಮಾನ್ಯವಾಗಿ ತಮ್ಮ ಗಾತ್ರಕ್ಕಿಂತ ಚಿಕ್ಕ ಪ್ರಾಣಿಗಳನ್ನು ಬೇಟೆಯಾಡುತ್ತವೆ. ಮನುಷ್ಯರನ್ನು ದೊಡ್ಡ ಹಾಗೂ ಅಪಾಯಕಾರಿ ಎಂದು ಭಾವಿಸುತ್ತವೆ. ನಾಚಿಕೆ ಸ್ವಭಾವ, ಗಾಯದ ಭೀತಿ ಮತ್ತು ಮನುಷ್ಯರೊಂದಿಗಿನ ಸುದೀರ್ಘ ಸಂಬಂಧವೂ ದಾಳಿ ಮಾಡದಿರಲು ಕಾರಣ.

ಚೀತಾಗಳು ಮನುಷ್ಯರ ಮೇಲೆ ದಾಳಿ ಮಾಡಿದ ಇತಿಹಾಸವೇ ಇಲ್ಲ: ಯಾಕೆ ಗೊತ್ತಾ?
ಚೀತಾ
Image Credit source: Tv9 kannada

Updated on: Feb 25, 2026 | 4:22 PM

ಚೀತಾಗಳು (Cheetahs) ಮನುಷ್ಯರ ಮೇಲೆ ದಾಳಿ ಮಾಡಿದ ನಿದರ್ಶನಗಳು ಇಲ್ಲವೇ ಇಲ್ಲ ಎನ್ನುವಷ್ಟು ಅಪರೂಪ. ಇದಕ್ಕೆ ಮುಖ್ಯವಾದ ಕಾರಣಗಳು ಅವುಗಳ ದೇಹದ ರಚನೆ ಮತ್ತು ಅವುಗಳ ಸ್ವಭಾವದಲ್ಲಿವೆ. ಚೀತಾಗಳ ದವಡೆಗಳು ಚಿಕ್ಕದಾಗಿರುತ್ತವೆ ಮತ್ತು ಅವುಗಳ ಹಲ್ಲುಗಳು ಮನುಷ್ಯನಂತಹ ದೊಡ್ಡ ಗಾತ್ರದ ಪ್ರಾಣಿಯನ್ನು ಕೊಲ್ಲುವಷ್ಟು ಬಲವಾಗಿರುವುದಿಲ್ಲ. ಇವುಗಳ ನಖಗಳು (ಉಗುರು) ನಾಯಿಗಳ ನಖಗಳಂತೆ ಇರುತ್ತವೆ (Non-retractable). ಇವು ಕೇವಲ ಓಡುವಾಗ ವೇಗಕ್ಕೆ ಹಿಡಿತ ನೀಡಲು ಬಳಕೆಯಾಗುತ್ತವೆಯೇ ಹೊರತು, ಬೇಟೆಯನ್ನು ಸೀಳಲು ಅಥವಾ ಗಾಯಗೊಳಿಸಲು ಹುಲಿ-ಸಿಂಹಗಳ ನಖಗಳಂತೆ ಚೂಪಾಗಿರುವುದಿಲ್ಲ.

ಚೀತಾಗಳು ಸಾಮಾನ್ಯವಾಗಿ ತಮ್ಮ ಗಾತ್ರಕ್ಕಿಂತ ಚಿಕ್ಕದಾದ ಅಥವಾ ಸಮನಾದ ಪ್ರಾಣಿಗಳನ್ನು (ಉದಾಹರಣೆಗೆ ಜಿಂಕೆ, ಮೊಲ) ಬೇಟೆಯಾಡುತ್ತವೆ. ನಿಂತಿರುವ ಮನುಷ್ಯನು ಚೀತಾಗಿಂತ ಎತ್ತರವಾಗಿ ಕಾಣುತ್ತಾನೆ. ಹೀಗಾಗಿ, ಚೀತಾಗಳು ಮನುಷ್ಯನನ್ನು ತನಗಿಂತ ದೊಡ್ಡ ಮತ್ತು ಅಪಾಯಕಾರಿ ಪ್ರಾಣಿ ಎಂದು ಭಾವಿಸುತ್ತವೆ. ಚೀತಾಗಳು ತುಂಬಾ ನಾಚಿಕೆ ಸ್ವಭಾವದ ಪ್ರಾಣಿಗಳು. ಮನುಷ್ಯರನ್ನು ಕಂಡ ಕೂಡಲೇ ಅವು ಎದುರಿಸುವ ಬದಲು ಅಲ್ಲಿಂದ ಓಡಿ ಹೋಗಲು ಬಯಸುತ್ತವೆ.

ಇಲ್ಲಿದೆ ನೋಡಿ ಪೋಸ್ಟ್​​;

ಚೀತಾಗೆ ಒಂದು ಸಣ್ಣ ಗಾಯವಾದರೂ ಅದು ಅದರ ಸಾವಿಗೆ ಕಾರಣವಾಗಬಹುದು. ಯಾಕೆಂದರೆ, ಗಾಯಗೊಂಡರೆ ಅದಕ್ಕೆ ವೇಗವಾಗಿ ಓಡಲು ಸಾಧ್ಯವಾಗುವುದಿಲ್ಲ, ಓಡಲು ಸಾಧ್ಯವಾಗದಿದ್ದರೆ ಬೇಟೆಯಾಡಿ ಹೊಟ್ಟೆ ತುಂಬಿಸಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ, ಮನುಷ್ಯರಂತಹ ಪ್ರಾಣಿಗಳೊಂದಿಗೆ ಹೋರಾಡಿ ಸುಮ್ಮನೆ ಅಪಾಯ ಮೈಮೇಲೆ ಎಳೆದುಕೊಳ್ಳಲು ಅವು ಇಷ್ಟಪಡುವುದಿಲ್ಲ.

ಇದನ್ನೂ ಓದಿ: ಚಾಮುಂಡಿ ಬೆಟ್ಟದ ಮೂಲ ದೇವರು ಯಾರು? ಮಹಾಬಲೇಶ್ವರ ದೇವಾಲಯದ ನಿಗೂಢ ಸತ್ಯ ಇಲ್ಲಿದೆ ನೋಡಿ

ಚೀತಾಗಳನ್ನು ಸಾವಿರಾರು ವರ್ಷಗಳಿಂದ ಮನುಷ್ಯರು ಪಳಗಿಸುತ್ತಾ ಬಂದಿದ್ದಾರೆ. ಪ್ರಾಚೀನ ಈಜಿಪ್ಟ್ ಮತ್ತು ಭಾರತದ ರಾಜರುಗಳು ಚೀತಾಗಳನ್ನು ಬೇಟೆಗಾಗಿ ಜೊತೆಯಲ್ಲಿ ಇಟ್ಟುಕೊಳ್ಳುತ್ತಿದ್ದರು. ಈ ದೀರ್ಘಕಾಲದ ಒಡನಾಟದಿಂದಾಗಿ ಮನುಷ್ಯರ ಬಗ್ಗೆ ಅವುಗಳಿಗೆ ಸ್ವಲ್ಪ ಮಟ್ಟದ ಸಹನೆ ಮತ್ತು ಹೊಂದಾಣಿಕೆ ಬೆಳೆದಿರಬಹುದು ಎಂದು ವಿಜ್ಞಾನಿಗಳು ನಂಬುತ್ತಾರೆ. ಕಾಡಿನಲ್ಲಿರುವ ಚೀತಾಗಳು ಮನುಷ್ಯರಿಂದ ದೂರವಿರಲು ಪ್ರಯತ್ನಿಸುತ್ತವೆ. ಪ್ರಾಣಿ ಸಂಗ್ರಹಾಲಯಗಳಲ್ಲಿ ಅಥವಾ ಮನುಷ್ಯರು ಸಾಕಿದ ಚಿರತೆಗಳು ಕೆಲವೊಮ್ಮೆ ಹೆದರಿದಾಗ ಅಥವಾ ಪ್ರಚೋದನೆಗೊಳಗಾದಾಗ ಪರಚಬಹುದು ಅಥವಾ ಕಚ್ಚಬಹುದು. ಆದರೆ, ಅವುಗಳು ಮನುಷ್ಯರನ್ನು ಸಾಯಿಸುವ ಉದ್ದೇಶದಿಂದ ದಾಳಿ ಮಾಡುವುದಿಲ್ಲ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​​ ಮಾಡಿ

 

 

Follow Us