Kannada Rajyotsava 2026: ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ; ಕನ್ನಡ ರಾಜ್ಯೋತ್ಸವಕ್ಕೆ ಶುಭಕೋರಲು ಇಲ್ಲಿವೆ ಸಂದೇಶಗಳು
ಇಂದು ಕನ್ನಡಿಗರ ಪಾಲಿಗೆ ಹಬ್ಬದ ದಿನ. ಕನ್ನಡ ರಾಜ್ಯೋತ್ಸವದ ಸುದಿನ. ನವೆಂಬರ್ 1ರಂದು ನಾಡಿನಾದ್ಯಂತ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಸುದಿನ ನಿಮ್ಮ ಪ್ರೀತಿಪಾತ್ರರಿಗೆ ಶುಭಾಶಯಗಳನ್ನು ತಿಳಿಸಲು, ವಾಟ್ಸಾಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ನಲ್ಲಿ ಸ್ಟೇಟಸ್ ಹಂಚಿಕೊಳ್ಳಲು ಇಲ್ಲಿವೆ ನೋಡಿ ಅರ್ಥಪೂರ್ಣ ಶುಭ ಸಂದೇಶಗಳು.

ಕನ್ನಡ ರಾಜ್ಯೋತ್ಸವImage Credit source: adobe stock
ಇಂದು ನಾಡಿನೆಲ್ಲೆಡೆ ಕನ್ನಡ ರಾಜ್ಯೋತ್ಸವದ (Kannada Rajyotsava) ಸಂಭ್ರಮ. ಇದು ಕನ್ನಡಿಗರ ಪಾಲಿಗೆ ಸಂಭ್ರಮದ ದಿನ. ನಮ್ಮ ರಾಜ್ಯ ಒಗ್ಗೂಡಿದ ನೆನಪಿಗಾಗಿ ಪ್ರತಿವರ್ಷ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ಈ ಕನ್ನಡ ಹಬ್ಬದ ದಿನ ನಾಡಿನಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ. ಈ ಶುಭ ಸಂದರ್ಭದಲ್ಲಿ ನಿಮ್ಮ ಪ್ರೀತಿಪಾತ್ರರಿಗೆ ಶುಭಾಶಯಗಳನ್ನು ತಿಳಿಸಲು, ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್‌ಗಳಲ್ಲಿ ಸ್ಟೇಟಸ್ ಹಂಚಿಕೊಳ್ಳಲು ಇಲ್ಲಿವೆ ಶುಭ ಸಂದೇಶಗಳು.
ಕನ್ನಡ ರಾಜ್ಯೋತ್ಸವಕ್ಕೆ ಈ ರೀತಿ ಶುಭಾಶಯ ಕೋರಿ:
- ಎಲ್ಲಾದರೂ ಇರು ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು. ಕನ್ನಡವೇ ಸತ್ಯ, ಕನ್ನಡವೇ ನಿತ್ಯ. ಸಮಸ್ತ ನಾಡಿನ ಕನ್ನಡಾಭಿಮಾನಿಗಳಿಗೆ ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಶಯಗಳು.
- ಕನ್ನಡದ ಮಾತು ಚೆನ್ನ, ಕನ್ನಡದ ನೆಲ ಚೆನ್ನ, ಕನ್ನಡಿಗರ ಮನಸ್ಸು ಚಿನ್ನ… ನಾಡಿನ ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
- ಕನ್ನಡದ ಬಗೆಗಿನ ಈ ಪ್ರೀತಿ ಬರೀ ನವೆಂಬರ್‌ಗೆ ಸೀಮಿತವಾಗಿರಬಾರದು. ಬದುಕಿನ ಪ್ರತಿಕ್ಷಣದಲ್ಲೂ ಕನ್ನಡವನ್ನೇ ಉಸಿರಾಡೋಣ. ಎಲ್ಲರಿಗೂ ರಾಜ್ಯೋತ್ಸವದ ಶುಭಾಶಯಗಳು
- ಕನ್ನಡ ಕಲಿಸೋಣ, ಕನ್ನಡ ಬೆಳೆಸೋಣ, ನಾಡಿನ ಅಭಿವೃದ್ಧಿಗೆ ಶ್ರಮಿಸೋಣ, ಎಲ್ಲರಿಗೂ ಕನ್ನಡ ಹಬ್ಬದ ಶುಭಾಶಯಗಳು.
- ಗಗನ ಗಾಳಿಯಲಿ ಜಿಗಿದು ಜೀವಿಸಲಿ, ಚೆಲುವ ಕನ್ನಡದ ಬಾವುಟ, ರುಗೋ ಭೂಮಿಯಲಿ ಮಿನುಗಿ ತೋರಿಸಲಿ, ಚೆಲುವ ಕನ್ನಡದ ಭೂಪಟ… ಸಮಸ್ತ ಕನ್ನಡಿಗರಿಗೆ ರಾಜ್ಯೋತ್ಸವದ ಶುಭಾಶಯಗಳು.
- ನಮ್ಮ ರಾಜ್ಯದ ಸುವರ್ಣ ಪರಂಪರೆಯನ್ನು ನೆನಪಿಸಿಕೊಳ್ಳೋಣ ಮತ್ತು ಕರ್ನಾಟಕದಲ್ಲಿ ಹುಟ್ಟಿರುವುದಕ್ಕೆ ಹೆಮ್ಮೆ ಪಡೋಣ. ಕರ್ನಾಟಕ ರಾಜ್ಯೋತ್ಸವ ದಿನದ ಶುಭಾಶಯಗಳು.
- ರಾಜ್ಯೋತ್ಸವದ ಹಬ್ಬ ನಿಮ್ಮೆಲ್ಲರಿಗೂ ಹರ್ಷಭರಿತವಾಗಿರಲಿ. ಕರ್ನಾಟಕದ ಶ್ರೇಷ್ಟತೆಯನ್ನು ಉಜ್ವಲಿಸೋಣ. ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
- ಈ ಪುಣ್ಯನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
- ಹಸಿರಾಗಲಿ ಕರ್ನಾಟಕ, ಉಸಿರಾಗಲಿ ಕನ್ನಡ, ತಾಯಿ ಕನ್ನಡಾಂಬೆಗೆ ಜಯವಾಗಲಿ. ಎಲ್ಲರಿಗೂ ಕರ್ನಾಟಕದ ರಾಜ್ಯೋತ್ಸವದ ಶುಭಾಶಯಗಳು.
- ಕರ್ನಾಟಕ ಬರೀ ನಾಡಲ್ಲ, ನಮ್ಮ ಸಂಸ್ಕೃತಿಯ ಧಾತು. ಕನ್ನಡ ಕೇವಲ ನುಡಿಯಲ್ಲ, ನಮ್ಮಂತರಂಗದ ಮಾತು, ಸರ್ವರಿಗೂ ಕನ್ನಡ ರಾಜ್ಯೋತ್ಸವ ಶುಭಾಶಯಗಳು.
- ಕನ್ನಡವನ್ನು ಉಳಿಸೋಣ, ಬೆಳೆಸೋಣ. ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
- ತಾಯಿ ಭುವನೇಶ್ವರಿಗೆ ನಮಿಸೋಣ, ಕನ್ನಡಮ್ಮನ ವೈಭವದ ತೇರನ್ನೆಳೆದು ಸಂಭ್ರಮಿಸೋಣ. ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು
- ಎಲ್ಲಾದರು ಇರು, ಎಂತಾದರು ಇರು… ಎಂದೆಂದಿಗು ನೀ ಕನ್ನಡವಾಗಿರು’ ಎಂಬ ಕವಿವಾಣಿಯಂತೆಯೇ ಬದುಕೋಣ. ಸಮಸ್ತ ಕನ್ನಡಿಗರಿಗೂ ರಾಜ್ಯೋತ್ಸವದ ಶುಭಾಶಯಗಳು.
- ಕನ್ನಡಮ್ಮನ ಬಹುದೊಡ್ಡ ಹಬ್ಬವಿದು. ಬದುಕು ನೀಡಿದ ಈ ಭೂಮಿಗೆ ಋಣಿಯಾಗಿರೋಣ. ಸರ್ವರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Follow Us




