International Picnic Day 2025: ಪಿಕ್ನಿಕ್‌ ದಿನದ ಆಚರಣೆ ಹೇಗೆ ಪ್ರಾರಂಭವಾಯಿತು? ಈ ವಿಶೇಷ ಆಚರಣೆಯ ಇಂಟರೆಸ್ಟಿಂಗ್‌ ಕಥೆ ತಿಳಿಯಿರಿ

ಪಿಕ್ನಿಕ್‌ ಹೋಗೋದು ಎಂದ್ರೆ ಎಲ್ಲರಿಗೂ ಇಷ್ಟ. ಇದು ನಮ್ಮ ಪ್ರೀತಿಪಾತ್ರರು, ಕುಟುಂಬಸ್ಥರು ಸ್ನೇಹಿತರೊಂದಿಗೆ ಒಂದು ಸುಂದರ ಕ್ಷಣವನ್ನು ಕಳೆಯಲು ಅನುವು ಮಾಡಿಕೊಡುತ್ತದೆ. ಪಿಕ್ನಿಕ್‌ ಎನ್ನುವುದು ಪಾರ್ಕ್‌, ಝೂ ಸೇರಿದಂತೆ ಒಂದಷ್ಟು ಸ್ಥಳಗಳಲ್ಲಿ ಪ್ರೀತಿಪಾತ್ರರೊಂದಿಗೆ ಸಮಯ ಕಳೆಯಲು ಒಂದೊಳ್ಳೆ ಆಯ್ಕೆಯಾಗಿದೆ. ನಿಮ್ಗೂ ಕೂಡಾ ಹೀಗೆ ಪಿಕ್ನಿಕ್‌ ಹೋಗೋದು ಎಂದರೆ ಇಷ್ಟನಾ? ಹಾಗಾದರೆ ಪಿಕ್ನಿಕ್‌ ದಿನದ ಆಚರಣೆ, ಇದರ ಇತಿಹಾಸ ಮತ್ತು ಮಹತ್ವವನ್ನು ತಿಳಿಯಿರಿ.

International Picnic Day 2025: ಪಿಕ್ನಿಕ್‌ ದಿನದ ಆಚರಣೆ ಹೇಗೆ ಪ್ರಾರಂಭವಾಯಿತು? ಈ ವಿಶೇಷ ಆಚರಣೆಯ ಇಂಟರೆಸ್ಟಿಂಗ್‌ ಕಥೆ ತಿಳಿಯಿರಿ
ಅಂತಾರಾಷ್ಟ್ರೀಯ ಪಿಕ್ನಿಕ್‌ ದಿನ

Updated on: Jun 18, 2025 | 9:53 AM

ಪ್ರೀತಿಪಾತ್ರರೊಂದಿಗೆ ಒಂದೊಳ್ಳೆ ಸಮಯ ಕಳೆಯಲು ಪಿಕ್ನಿಕ್‌ ಒಂದೊಳ್ಳೆ ಆಯ್ಕೆಯಾಗಿದೆ. ಹೆಚ್ಚಿನವರು ಬಿಡುವಿನ ಸಮಯದಲ್ಲಿ ಸ್ನೇಹಿತರ ಜೊತೆ, ಕುಟುಂಬಸ್ಥರೊಂದಿಗೆ ಪಿಕ್ನಿಕ್‌ ಹೋಗಲು ಇಷ್ಟ ಪಡುತ್ತಾರೆ. ಹೀಗೆ ಪಿಕ್ನಿಕ್‌ (Picnic) ಹೋಗುವ ಮೂಲಕ ಪ್ರೀತಿಪಾತ್ರರೊಂದಿಗೆ ಒಂದೊಳ್ಳೆ ಸಮಯವನ್ನು ಕಳೆಯುವುದರ ಜೊತೆಗೆ ಹೀಗೆ ಹೊರಗಡೆ ಸುತ್ತಾಡಲು ಹೋಗುವುದರಿಂದ ಒತ್ತಡ ಕಡಿಮೆಯಾಗಿ ಮನಸ್ಸಿಗೂ ಒಂದು ರೀತಿಯ ಮುದ ಸಿಗುತ್ತದೆ. ಈ ಪಿಕ್ನಿಕ್‌ಗೂ ಒಂದು ದಿನವಿದ್ದು, ಪ್ರತಿವರ್ಷ ಜೂನ್‌ 18 ರಂದು ಅಂತಾರಾಷ್ಟ್ರೀಯ ಪಿಕ್ನಿಕ್‌ ದಿನವನ್ನು (International Picnic Day) ಆಚರಿಸಲಾಗುತ್ತದೆ. ಈ ಆಚರಣೆ ಹೇಗೆ ಪ್ರಾರಂಭವಾಯಿತು? ಈ ದಿನದ ಇತಿಹಾಸ ಮತ್ತು ಮಹತ್ವ ಏನೆಂಬುದನ್ನು ತಿಳಿಯೋಣ ಬನ್ನಿ.

ಅಂತಾರಾಷ್ಟ್ರೀಯ ಪಿಕ್ನಿಕ್ ದಿನದ ಇತಿಹಾಸ:

ಅಂತಾರಾಷ್ಟ್ರೀಯ ಪಿಕ್ನಿಕ್ ದಿನವನ್ನು ಪ್ರತಿ ವರ್ಷ ಜೂನ್ 18 ರಂದು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ. ಪಿಕ್ನಿಕ್ ಎಂಬ ಪದವು ಫ್ರೆಂಚ್ ಪದ ‘ಪಿಕ್-ನಿಕ್’ ನಿಂದ ಬಂದಿದೆ, ಇದರರ್ಥ ಎಲ್ಲರೂ  ಆಹಾರವನ್ನು ಹಂಚಿಕೊಳ್ಳುವ ಸಾಮಾಜಿಕ ಕಾರ್ಯಕ್ರಮ. ಪಿಕ್ನಿಕ್ ದಿನದ ಇತಿಹಾಸ ಇನ್ನೂ ಸಂಪೂರ್ಣವಾಗಿ ಸ್ಪಷ್ಟವಾಗಿಲ್ಲವಾದರೂ, ಫ್ರೆಂಚ್ ಕ್ರಾಂತಿಯ ಸಮಯದಲ್ಲಿ ಪಿಕ್ನಿಕ್‌ಗಳು ಒಂದು ರೀತಿಯ ಅನೌಪಚಾರಿಕ ಊಟದ ಕಾರ್ಯಕ್ರವಾಗಿ ಪ್ರಾರಂಭವಾಯಿತು ಎಂದು ನಂಬಲಾಗಿದೆ.

ವರದಿಯ ಪ್ರಕಾರ, 19 ನೇ ಶತಮಾನದಲ್ಲಿ ಇಂಗ್ಲೆಂಡ್‌ನಲ್ಲಿ ಪಿಕ್ನಿಕ್‌ಗಳು ಜನಪ್ರಿಯವಾದವು. ನಂತರದ ವರ್ಷಗಳಲ್ಲಿ, ರಾಜಕೀಯ ಪ್ರತಿಭಟನೆಗಳ ಸಮಯದಲ್ಲಿ ಪಿಕ್ನಿಕ್‌ಗಳು ಸಾಮಾನ್ಯ ಸಭೆಯಾದವು. ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಪೋರ್ಚುಗಲ್‌ನಲ್ಲಿ ನಡೆದ ಪಿಕ್ನಿಕ್ ಅನ್ನು ಅತಿದೊಡ್ಡ ಪಿಕ್ನಿಕ್ ಎಂದು ದಾಖಲಿಸಿದೆ. ಆ ಕಾರ್ಯಕ್ರಮದಲ್ಲಿ ಸುಮಾರು 20,000 ಜನರು ಭಾಗವಹಿಸಿದ್ದರು.

ಇದನ್ನೂ ಓದಿ
ಹವಾಮಾನ ಬದಲಾವಣೆಯಿಂದ ಬರಡಾಗುತ್ತಿದೆ ಭೂಮಿ
ಮಕ್ಕಳ ಪಾಲಿನ ರಿಯಲ್‌ ಹೀರೋಗಳ ದಿನದ ಇತಿಹಾಸವನ್ನು ತಿಳಿಯಿರಿ
ವಿಶ್ವ ಸಾಗರ ದಿನವನ್ನು ಏಕೆ ಆಚರಿಸಲಾಗುತ್ತದೆ?
ರಾಷ್ಟ್ರೀಯ ಬೆಸ್ಟ್‌ ಫ್ರೆಂಡ್ ದಿನದ ಮಹತ್ವವನ್ನು ತಿಳಿಯಿರಿ

ಇದನ್ನೂ ಓದಿ: ಹವಾಮಾನ ಬದಲಾವಣೆಯಿಂದ ಬರಡಾಗುತ್ತಿದೆ ಭೂಮಿ

ಪಿಕ್ನಿಕ್ ದಿನವನ್ನು ಹೇಗೆ ಆಚರಿಸುವುದು?

ಪಿಕ್ನಿಕ್ ಎಂದರೆ ಸ್ನೇಹಿತರು, ಕುಟುಂಬ ಮತ್ತು ಆಪ್ತರೊಂದಿಗೆ ಸುಂದರವಾದ ಸ್ಥಳಕ್ಕೆ ಹೋಗುವುದು ಮತ್ತು  ಪ್ರಕೃತಿಯ ನಡುವೆ ಆನಂದಿಸುವುದು. ಇದೊಂದು ರೀತಿಯಲ್ಲಿ ಸಣ್ಣ ಪ್ರವಾಸವಾಗಿದ್ದು, ಪ್ರೀತಿಪಾತ್ರರೊಂದಿಗೆ ಹೊರಗಡೆ ಹೋಗುವ ಮೂಲಕ ಒಂದೊಳ್ಳೆ ಸಮಯವನ್ನು ಕಳೆಯಬಹುದು. ಇತ್ತೀಚಿನ ಬ್ಯುಸಿ ಜೀವನಶೈಲಿ, ಕೆಲಸದ ಒತ್ತಡದ ಕಾರಣ ಜನರಿಗೆ ತಮ್ಮ ಕುಟುಂಬ ಹಾಗೂ ಸ್ನೇಹಿತರೊಂದಿಗೆ ಸಮಯ ಕಳೆಯಲು ಟೈಂ ಸಿಗುತ್ತಿಲ್ಲ. ಹೀಗಿರುವಾಗ ಪಿಕ್ನಿಕ್‌ ಡೇ ಸಂದರ್ಭದಲ್ಲಿ ಒಂದೊಳ್ಳೆ ಸ್ಥಳಕ್ಕೆ ಪಿಕ್ನಿಕ್‌ ಹೋಗುವ ಮೂಲಕ ಪ್ರೀತಿಪಾತ್ರರೊಂದಿಗೆ ಒಂದೊಳ್ಳೆ ಟೈಮ್‌ ಸ್ಪೆಂಡ್‌ ಮಾಡುವುದರ ಜೊತೆಗೆ ಒತ್ತಡವನ್ನು ಸಹ ಕಡಿಮೆ ಮಾಡಬಹುದು.

ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:52 am, Wed, 18 June 25