AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Peace Day 2023: ವಿಶ್ವ ಶಾಂತಿ ದಿನವನ್ನು ಏಕೆ ಆಚರಿಸಲಾಗುತ್ತದೆ? ಈ ದಿನದ ಇತಿಹಾಸ ಮಹತ್ವ ಇಲ್ಲಿದೆ 

ವಿಶ್ವ ಶಾಂತಿಯ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಹಾಗೂ ವ್ಯಕ್ತಿಗಳು, ಸಮುದಾಯಗಳು ಮತ್ತು ರಾಷ್ಟ್ರಗಳ ನಡುವೆ ಶಾಂತಿ, ಸಹಬಾಳ್ವೆಯನ್ನು ಬೆಳೆಸುವ ಸಲುವಾಗಿ ಪ್ರತಿವರ್ಷ ಸೆಪ್ಟೆಂಬರ್ 21 ರಂದು ಅಂತಾಷ್ಟ್ರೀಯ ಶಾಂತಿ ದಿನವನ್ನು ಆಚರಿಸಲಾಗುತ್ತದೆ.

World Peace Day 2023: ವಿಶ್ವ ಶಾಂತಿ ದಿನವನ್ನು ಏಕೆ ಆಚರಿಸಲಾಗುತ್ತದೆ? ಈ ದಿನದ ಇತಿಹಾಸ ಮಹತ್ವ ಇಲ್ಲಿದೆ 
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on: Sep 20, 2023 | 5:59 PM

Share
ಸುಸ್ಥಿರ ಪ್ರಪಂಚದ ಅಸ್ತಿತ್ವಕ್ಕೆ ಶಾಂತಿ ಅತ್ಯಗತ್ಯ. ಶಾಂತಿಯು  ಸಾಮರಸ್ಯ ಸಮಾಜ ಮತ್ತು ಜೀವನದ  ಕೀಲಿಯಾಗಿದೆ. ಶಾಂತಿಯ ಮೂಲಕ ಮಾತ್ರ ಪ್ರತಿಯೊಂದು ದೇಶವು ಸಹೋದರತೆಯಿಂದ ಇರಲು ಹಾಗೂ ಮಾನವರಾದ ನಾವು ಸುಸ್ಥಿರ ಜೀವನವನ್ನು ನಡೆಸಲು ಸಾಧ್ಯ. ಯುದ್ಧ ಮತ್ತು ಹಿಂಸಾಚಾರದಿಂದ  ಏನನ್ನೂ ಸಾಧಿಸಲು ಸಾಧ್ಯವಿಲ್ಲ.  ಇತಿಹಾಸ ತೆರೆದು ನೋಡಿದರೆ ವಿಶ್ವವು ಅನೇಕ ಯುದ್ಧಗಳು, ಹಿಂಸಾಚಾರ ಚುವಟಿಕೆಗಳಿಂದ ನಳುಗಿ ಹೋಗಿದೆ. ವಿಶ್ವ ಯದ್ಧದ ಸಂದರ್ಭದಲ್ಲಿ ಜಗತ್ತಿನಲ್ಲಿ ಶಾಂತಿ ಎಂಬುದೇ ಇರಲಲಿಲ್ಲ. ಜನರು ಪ್ರತಿದಿನ ನೋವು ಮತ್ತು ಭಯದಿಂದಲೇ ಜೀವನ ನಡೆಸುತ್ತಿದ್ದರು. ಹೀಗೆ ಶಾಂತಿಯ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ವಿಶ್ವ ಸಂಸ್ಥೆಯು ಪ್ರಪಂಚದಾದ್ಯಂತ ಎಲ್ಲಾ ದೇಶಗಳಲ್ಲೂ ಶಾಂತಿಯನ್ನು ಕಾಪಾಡಲು, ಅಂತರಾಷ್ಟ್ರೀಯ ಯುದ್ಧಗಳನ್ನು ಕೊನೆಗೊಳಿಸಲು ಮತ್ತು ದೇಶಗಳ ನಡುವೆ ಸಹೋದರತ್ವವನ್ನು ಬೆಳೆಸಲು ಅಂತರಾಷ್ಟ್ರೀಯ ಶಾಂತಿ ದಿನದ ಆಚರಣೆಯನ್ನು ಜಾರಿಗೆ ತಂದಿತು.

ಅಂತರಾಷ್ಟ್ರೀಯ ಶಾಂತಿ ದಿನದ ಇತಿಹಾಸ:

ವಿಶ್ವಸಂಸ್ಥೆಯು ಸಾಮಾನ್ಯ ಸಭೆಯು ಪ್ರಪಂಚದಾದ್ಯಂತ ಶಾಂತಿಯನ್ನು ಕಾಪಾಡಲು, ಅಂತರಾಷ್ಟ್ರೀಯ ಯುದ್ಧಗಳನ್ನು ಕೊನೆಗೊಳಿಸಲು ಮತ್ತು ರಾಷ್ಟ್ರ ರಾಷ್ಟ್ರಗಳ ನಡುವೆ ಸಹೋದರತ್ವವನ್ನು ಬೆಳೆಸುವ ಸಲುವಾಗಿ 1981 ರಲ್ಲಿ ಮೊದಲ ಬಾರಿಗೆ ಅಂತರಾಷ್ಟ್ರೀಯ ಶಾಂತಿ ದಿನವನ್ನು ಆಚರಿಸಲು ನಿರ್ಧರಿಸಿತು.   1982 ರಲ್ಲಿ ಈ ದಿನವನ್ನು ಸಪ್ಟೆಂಬರ್ ತಿಂಗಳ ಮೂರನೇ ಮಂಗಳವಾರದಂದು ಆಚರಿಸಲಾಯಿತು.  ಹೀಗೆ 1982 ರಿಂದ 2001 ರ ವರೆಗೆ ಅಂತರಾಷ್ಟ್ರೀಯ ಶಾಂತಿ ದಿನವನ್ನು ಸೆಪ್ಟೆಂರ್ ತಿಂಗಳ ಮೂರನೇ ಮಂಗಳವಾರದಂದು ಆಚರಿಸಲಾಯಿತು. ನಂತರ ವಿಶ್ವ ಸಂಸ್ಥೆಯು 2002 ರಿಂದ ಅಂತರಾಷ್ಟ್ರೀಯ ಶಾಂತಿ ದಿನವನ್ನು  ಸೆಪ್ಟೆಂಬರ್ 21 ನೇ ತಾರೀಕಿನಂದು ಆಚರಿಸಲು ನಿರ್ಧರಿಸಿತು. ಅಂದಿನಿಂದ ಪ್ರತಿವರ್ಷ ಸೆಪ್ಟೆಂಬರ್ 21 ರಂದು ಅಂತರಾಷ್ಟ್ರೀಯ ಶಾಂತಿ ದಿನವನ್ನು ಆಚರಿಸಲಾಗುತ್ತಿದೆ.  ವಿಶ್ವ ಶಾಂತಿ ದಿನದಂದು ನ್ಯೂಯಾರ್ಕ್ ನಗರದಲ್ಲಿ ಇರುವ  ವಿಶ್ವಸಂಸ್ಥೆಯ ಪ್ರಧಾನ ಕಛೇರಿಯಲ್ಲಿ ವಿಶ್ವಸಂಸ್ಥೆಯ ಶಾಂತಿ ಗಂಟೆಯನ್ನು ಬಾರಿಸಲಾಗುತ್ತದೆ. ಪೀಸ್ ಬೆಲ್ ಅನ್ನು 1954 ರಲ್ಲಿ ಯುನೈಟೆಡ್ ನೇಷನ್ಸ್ ಅಸೋಸಿಯೇಷನ್ ಆಫ್ ಜಪಾನ್ ಕೊಡುಗೆಯಾಗಿ ನೀಡಿತು. ಅಲ್ಲದೆ ಈ ವಿಶೇಷ ದಿನದಂದು ಎಲ್ಲಾ ರಾಷ್ಟ್ರಗಳಲ್ಲೂ   ಶಾಂತಿಯ ಸಂಕೇತವಾಗಿ ಬಿಳಿ ಪಾರಿವಾಳಗಳನ್ನು ಹಾರಿಸುವ ಸಂಪ್ರದಾಯವಿದೆ.

ಅಂತರಾಷ್ಟ್ರೀಯ ಶಾಂತಿ ದಿನದ ಪ್ರಾಮುಖ್ಯತೆ:

ವ್ಯಕ್ತಿಗಳು, ಸಮುದಾಯಗಳು ಮತ್ತು ರಾಷ್ಟ್ರಗಳ  ನಡುವೆ ಶಾಂತಿ, ತಿಳುವಳಿಕೆ ಮತ್ತು ಸಹಯೋಗವನ್ನು ಬೆಳೆಸಲು ವಿಶ್ವಸಂಸ್ಥೆಯು ಪ್ರತಿವರ್ಷ ಅಂತರಾಷ್ಟ್ರೀಯ ಶಾಂತಿ ದಿನವನ್ನು ಆಚರಿಸುತ್ತಾ ಬಂದಿದೆ. ಸಂಘರ್ಷಗಳನ್ನು ಪರಿಹರಿಸುವುದು, ಹಿಂಸಾಚಾರವನ್ನು ಕಡಿಮೆ ಮಾಡುವುದು ಮತ್ತು ಸಾಮರಸ್ಯದ ಸಂಬಂಧಗಳನ್ನು ಅಭಿವೃದ್ಧಿಪಡಿಸುವ ಪ್ರಾಮುಖ್ಯತೆಯ ಜ್ಞಾಪನೆಯಾಗಿ ಈ ದಿನವನ್ನು ಆಚರಿಸಲಾಗುತ್ತದೆ.
ಈ ದಿನವನ್ನು ಆಚರಿಸುವ ಮುಖ್ಯ ಉದ್ದೇಶವು ಶಾಂತಿಯ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮತ್ತು ಜಾಗೃತಿಯನ್ನು ಮೂಡಿಸುವುದು. ಅಂತರಾಷ್ಟ್ರೀಯ ಶಾಂತಿ ದಿನದಂದು ವಿಶ್ವಸಂಸ್ಥೆ ಸೇರಿದಂತೆ ವಿವಿಧ ಸಂಸ್ಥೆಗಳು ಪ್ರಪಂಚದಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಮತ್ತು ಶಾಂತಿಯ ಅಗತ್ಯ ಮತ್ತು ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯಲು ಎಲ್ಲಾ ದೇಶಗಳು ಸಭೆಗಳು ಮತ್ತು ಸಮ್ಮೇಳನಗಳನ್ನು ಏರ್ಪಡಿಸುತ್ತವೆ.
ಮತ್ತಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.