AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Womens Fashion Tips : ಮಹಿಳೆಯರೇ, ಆಫೀಸಿನಲ್ಲಿ ನೀವು ಸ್ಟೈಲಿಶ್ ಆಗಿ ಕಾಣಬೇಕಾ? ಈ ರೀತಿ ಡ್ರೆಸ್ ಮಾಡಿಕೊಳ್ಳಿ

ಫ್ಯಾಷನ್ ಎಂದ ಕೂಡಲೇ ಮೊದಲು ನೆನಪಿಗೆ ಬರುವುದೇ ಹೆಣ್ಣು ಮಕ್ಕಳು. ಆದರೆ ಕೆಲವೊಮ್ಮೆ ಫ್ಯಾಷನ್ ಜೊತೆಗೆ ಆರಾಮದಾಯಕ ಮತ್ತು ಸೊಗಸಾದ ಬಟ್ಟೆಗಳನ್ನು ಧರಿಸುವುದು ತಿಳಿದಿರಬೇಕು. ಆಫೀಸಿಗೆ ಹೋಗುವ ಮಹಿಳೆಯರು ಯಾವ ರೀತಿಯ ಉಡುಗೆಯನ್ನು ಧರಿಸಬೇಕೆನ್ನುವ ಸ್ವಲ್ಪ ಮಟ್ಟಿಗಿನ ಜ್ಞಾನವನ್ನು ಹೊಂದಿರಬೇಕು. ಈ ಉಡುಗೆ ತೊಡುಗೆಗಳು ಕೆಲಸ ಮಾಡುವ ಸ್ಥಳ ಗಳಲ್ಲಿ ನಿಮ್ಮ ಘನತೆ ಹಾಗೂ ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ. ಹೀಗಾಗಿ ಮಹಿಳೆಯರಿಗೆ ಕೆಲವು ಸಲಹೆಗಳು ಇಲ್ಲಿದೆ.

Womens Fashion Tips : ಮಹಿಳೆಯರೇ, ಆಫೀಸಿನಲ್ಲಿ ನೀವು ಸ್ಟೈಲಿಶ್ ಆಗಿ ಕಾಣಬೇಕಾ? ಈ ರೀತಿ ಡ್ರೆಸ್ ಮಾಡಿಕೊಳ್ಳಿ
ಸಾಂದರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on: Sep 13, 2024 | 4:06 PM

Share

ಉದ್ಯೋಗಕ್ಕೆ ತೆರಳುವ ಹೆಣ್ಣು ಮಕ್ಕಳು ಗಡಿಬಿಡಿಯಲ್ಲಿ ಬಟ್ಟೆ ಬಗ್ಗೆ ಗಮನ ಕೊಡದೆ ಯಾವುದಾದರೊಂದು ಉಡುಗೆಯನ್ನು ಧರಿಸಿಕೊಂಡು ಹೋಗುತ್ತಾರೆ. ಆದರೆ ಸ್ಟೈಲಿಶ್ ಆಗಿ ಕಾಣುವುದರೊಂದಿಗೆ ಆಫೀಸಿನಲ್ಲಿ ಪ್ರತಿದಿನ ನಿಮ್ಮನ್ನು ಪ್ರೆಸೆಂಟಬಲ್ ಆಗಿಟ್ಟುಕೊಳ್ಳುವುದು ಮುಖ್ಯ. ಹೀಗಾಗಿ ನೀವು ಧರಿಸುವ ಉಡುಗೆಯು ಆರಾಮದಾಯಕವಲ್ಲದಿದ್ದರೆ, ನಿಮ್ಮ ಕೆಲಸದ ಮೇಲೆ ಪರಿಣಾಮ ಬೀರಬಹುದು. ಕಚೇರಿಗೆ ಹೋಗುವ ಮಹಿಳೆಯರು ಆರಾಮದಾಯಕ ಉಡುಗೆಯನ್ನು ಆಯ್ಕೆ ಮಾಡಿಕೊಳ್ಳುವುದು ಬಹಳ ಮುಖ್ಯ.

  1. ಆರಾಮದಾಯಕ ಬಟ್ಟೆಗಳ ಆಯ್ಕೆಯಿರಲಿ : ಉದ್ಯೋಗದ ಸ್ಥಳಗಳಲ್ಲಿ ನೀವು ಆತ್ಮವಿಶ್ವಾಸದಲ್ಲಿದ್ದರೆ ಇತರರನ್ನು ಸೆಳೆಯಲು ಸಾಧ್ಯ. ಜೀನ್ಸ್-ಶರ್ಟ್, ಸೂಟ್ ಅಥವಾ ಸೀರೆಯನ್ನೇ ಆಯ್ಕೆ ಮಾಡಿಕೊಳ್ಳುವಾಗ ನಿಮಗೆ ಆರಾಮದಾಯಕವಾಗಿದೆಯೇ ಎಂದು ಯೋಚಿಸಿ. ಬಟ್ಟೆಗಳ ಬಣ್ಣಗಳ ಬಗ್ಗೆಯು ಹೆಚ್ಚು ಗಮನ ಕೊಡಿ. ಉಡುಗೆಗಳು ಆರಾಮದಾಯಕ ಹಾಗೂ ಫಿಟ್ ಆಗಿದ್ದರೆ ನೀವು ಕೆಲಸವನ್ನು ಅಷ್ಟೇ ಆತ್ಮವಿಶ್ವಾಸದೊಂದಿಗೆ ಮಾಡಲು ಸಾಧ್ಯ.
  2. ಸೈಜ್ ಮತ್ತು ಕಂಫರ್ಟ್ ಗೆ ಗಮನ ಕೊಡಿ : ಬಟ್ಟೆಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಸೈಜ್ ಸರಿಯಿದೆಯೇ, ಕಂಫರ್ಟ್ ಅಗಿದೆಯೇ ಎನ್ನುವುದರ ಕಡೆಗೆ ಗಮನಹರಿಸಬೇಕು. ಸಡಿಲವಾದ ಉಡುಗೆಗಳು ಹಾಗೂ ಬಿಗಿಯಾದ ಉಡುಗೆಗಳು ನಿಮ್ಮನ್ನು ಆರಾಮದಾಯಕವಾಗಿರಿಸುವುದಿಲ್ಲ. ಹೀಗಾಗಿ ಸೈಜ್ ಬಗ್ಗೆ ಹೆಚ್ಚು ಗಮನ ಕೊಡಿ. ಅದಲ್ಲದೆ, ಮಾರುಕಟ್ಟೆಗೆ ಯಾವುದಾದರೂ ಟ್ರೆಂಡ್ ಬಂದರೆ ಅದನ್ನು ಅನುಸರಿಸುವುದು ಸರಿಯಲ್ಲ. ಇದು ಎಲ್ಲರಿಗೂ ಕೂಡ ಇದು ಸರಿಹೊಂದದೇ ಇರಬಹುದು.
  3. ಕ್ಯಾಶುಯಲ್ ವೇರ್ ತಪ್ಪಿಸಿ: ನೀವು ಧರಿಸುವ ಉಡುಗೆಗಳು ನಿಮ್ಮ ಘನತೆ ಹಾಗೂ ಆತ್ಮವಿಶ್ವಾಸವನ್ನು ಪ್ರತಿನಿಧಿಸುತ್ತದೆ. ಅದಲ್ಲದೇ, ವೃತ್ತಿಪರ ನೋಟವು ನಿಮ್ಮ ಪ್ರಶಾಂತತೆಯನ್ನು ತೋರಿಸುತ್ತದೆ. ವಾರದಲ್ಲಿ ಐದು ದಿನ ಕ್ಯಾಶುಯಲ್ ವೇರ್ ನಲ್ಲಿ ಆಫೀಸ್ ಗೆ ಹೋಗುವುದು ಸರಿಯಲ್ಲ. ಆಫೀಸ್ ವೇರ್ ಉಡುಗೆಗಳು ನಿಮ್ಮ ವ್ಯಕ್ತಿತ್ವವನ್ನು ಬಿಂಬಿಸುತ್ತದೆ ಎನ್ನುವುದನ್ನು ಮರೆಯದಿರಿ.
  4. ಪಾದರಕ್ಷೆಗಳು ಬಟ್ಟೆಗೆ ಹೊಂದಿಕೆಯಾಗುವಂತಿರಲಿ : ಹೆಚ್ಚಿನ ಮಹಿಳೆಯರು ಉಡುಗೆ ತೊಡುಗೆಗಳಿಗೆ ಗಮನ ಹರಿಸುವಷ್ಟು ಪಾದರಕ್ಷೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಆಫೀಸಿಗೆ ಧರಿಸುವ ಬಟ್ಟೆಗಳಿಗೆ ಹೊಂದಿಕೆಯಾಗುವ ಉತ್ತಮ ಗುಣಮಟ್ಟದ ಪಾದರಕ್ಷೆಗಳನ್ನು ಖರೀದಿಸುವುದು ಉತ್ತಮ. ಹೆಚ್ಚಿನ ಜನರು ಮೊದಲು ನಿಮ್ಮ ಪಾದರಕ್ಷೆಗಳನ್ನು ಗಮನಿಸುತ್ತಾರೆ ಎನ್ನುವುದು ಅನೇಕರಿಗೆ ತಿಳಿದಿಲ್ಲ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ