World Biriyani Day 2024 : ಘಮ ಘಮಿಸುವ ತಲಪಾಕಟ್ಟಿ ಬಿರಿಯಾನಿಯ ರುಚಿಯೇ ಅದ್ಭುತ, ರೆಸಿಪಿ ಮಾಡೋದು ಸುಲಭ

ಆಹಾರ ಪ್ರಿಯರಿಗಂತೂ ವಿವಿಧ ಬಗೆಯ ಆಹಾರಗಳ ರುಚಿ ಸವಿಯುವುದೆಂದರೆ ಬಲು ಇಷ್ಟ. ಬಿರಿಯಾನಿ ತಂದು ಮುಂದೆಯಿಟ್ಟರೆ ಹೊಟ್ಟೆ ತುಂಬುವಷ್ಟು ತಿಂದು ತೆಗುವವರೇ ಹೆಚ್ಚು. ಭಾರತದಲ್ಲಿ ವಿವಿಧ ಬಗೆಯ ಬಿರಿಯಾನಿಯೂ ಲಭ್ಯವಿದ್ದು, ತಮಿಳುನಾಡಿನಲ್ಲಿ ತಲಪಾಕಟ್ಟಿ ಬಿರಿಯಾನಿಯೂ ಸಿಕ್ಕಾಪಟ್ಟೆ ಫೇಮಸ್. ಮನೆಯಲ್ಲೇ ಈ ಕೆಲವೇ ಕೆಲವು ಪದಾರ್ಥಗಳಿದ್ದರೆ ಸುಲಭವಾಗಿ ಈ ಬಿರಿಯಾನಿ ರೆಸಿಪಿ ಮಾಡಿ ರುಚಿ ಸವಿಯಬಹುದು.

World Biriyani Day 2024 : ಘಮ ಘಮಿಸುವ ತಲಪಾಕಟ್ಟಿ ಬಿರಿಯಾನಿಯ ರುಚಿಯೇ ಅದ್ಭುತ, ರೆಸಿಪಿ ಮಾಡೋದು ಸುಲಭ
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on:Jul 03, 2024 | 12:43 PM

ಭಾರತದ ವಿವಿಧ ರಾಜ್ಯಗಳಿಗೆ ಭೇಟಿಕೊಟ್ಟರೆ ಅಲ್ಲಿನ ಜನಪ್ರಿಯ ಅಡುಗೆಯನ್ನು ನೀವು ಸವಿಯುವುದನ್ನು ಮಿಸ್ ಮಾಡುವುದೇ ಇಲ್ಲ. ಕೆಲವು ಕಡೆ ಸಿಹಿ ತಿಂಡಿಗಳು ಫೇಮಸ್ ಆದರೆ, ಇನ್ನು ಕೆಲವು ಕಡೆ ಮಸಾಲೆಯುಕ್ತ ಆಹಾರ ಜನಪ್ರಿಯತೆಯನ್ನು ಪಡೆದುಕೊಂಡಿರುತ್ತದೆ. ಭಾರತದ ಯಾವ ಮೂಲೆಗೆ ಹೋದರೂ ವಿವಿಧ ಬಗೆಯ ಬಿರಿಯಾನಿಗಳು ಲಭ್ಯವಿದ್ದು, ತಮಿಳುನಾಡಿನಲ್ಲಿ ತಲಪಾಕಟ್ಟಿ ಬಿರಿಯಾನಿ ರುಚಿಯ ವಿಚಾರದಲ್ಲಿ ಅತ್ಯದ್ಭುತ.

ತಮಿಳಿನಾಡಿನ ಈ ಬಿರಿಯಾನಿಗೆ ತಲಪಾಕಟ್ಟಿ ಹೆಸರು ಬಂದದ್ದು ಹೇಗೆ?

ತಮಿಳುನಾಡಿನ ದಿಂಡುಕ್ಕಲ್ ಜಿಲ್ಲೆಯ ಪ್ರಸಿದ್ಧ ಖಾದ್ಯವಾದ ತಲಪಾಕಟ್ಟಿ ಬಿರಿಯಾನಿಗೆ ಈ ಹೆಸರು ಬರಲು ಕಾರಣವು ಇದೆ. ನಾಗಸ್ವಾಮಿ ನಾಯ್ಡು ಎಂಬುವವರ ಕೈಯ ರುಚಿಯಲ್ಲಿ ತಯಾರಾದ ಬಿರಿಯಾನಿಯೇ ಈ ತಲಪಾಕಟ್ಟಿ ಬಿರಿಯಾನಿ. ಈ ವ್ಯಕ್ತಿಯೂ ಯಾವಾಗಲೂ ತಲೆಗೆ ಪೇಟ ಕಟ್ಟಿಕೊಳ್ಳುತ್ತಿದ್ದರಿಂದ ತಲಪಾಕಟ್ಟಿ ನಾಗಸ್ವಾಮಿ ನಾಯ್ಡು ಎಂದೇ ಕರೆಯುತ್ತಿದ್ದರು. (ತಮಿಳಿನಲ್ಲಿ ತಲಪಾಕಟ್ಟಿ ಎಂದರೆ ಪೇಟ ಕಟ್ಟಿಕೊಂಡವ ಎಂದರ್ಥ). ಹೀಗಾಗಿ ಇದಕ್ಕೆ ತಲಪಾಕಟ್ಟಿ ಬಿರಿಯಾನಿ ಎಂಬ ಹೆಸರು ಬಂದಿದೆ ಎನ್ನಲಾಗಿದೆ.

ತಲಪಾಕಟ್ಟಿ ಬಿರಿಯಾನಿ ಮಾಡಲು ಬೇಕಾಗುವ ಸಾಮಗ್ರಿಗಳು

ಹಸಿರು ಮೆಣಸಿನಕಾಯಿ, ಸಣ್ಣ ಎರಡು ಇಂಚಿನ ದಾಲ್ಟಿನ್ನಿ, ಆರರಿಂದ ಏಳು ಏಲಕ್ಕಿ, ನಾಲ್ಕೈದು ಲವಂಗ, ಶುಂಠಿ, ಸೋಂಪು ಕಾಳು, ಬಿರಿಯಾನಿ ಎಲೆ, ಬಾಸುಮತಿ ಅಕ್ಕಿ, ಚಿಕನ್, ತುಪ್ಪ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಟೊಮೊಟೊ, ಈರುಳ್ಳಿ, 1/2 ಟೀಸ್ಪೂನ್ ಕೆಂಪು ಮೆಣಸಿನ ಪುಡಿ, 1/2 ಕಪ್ ಮೊಸರು 1/2 ಕಪ್ ಪುದೀನಾ, 1 ಕಪ್ ಕೊತ್ತಂಬರಿ ಸೊಪ್ಪು, ಎರಡು ಚಮಚ ನಿಂಬೆ ರಸ, ರುಚಿಗೆ ತಕ್ಕಷ್ಟು ಉಪ್ಪು.

ಇದನ್ನೂ ಓದಿ: ಭಟ್ಕಳ ಬಿರಿಯಾನಿ ರುಚಿ ಜೊತೆ ಆರೋಗ್ಯವನ್ನು ಹೆಚ್ಚಿಸುತ್ತೆ, ಅದು ಹೇಗೆ ?

ತಲಪಾಕಟ್ಟಿ ಬಿರಿಯಾನಿ ಮಾಡುವ ವಿಧಾನ

  • ಅಕ್ಕಿಯನ್ನು ಅರ್ಧ ಘಂಟೆಯವರೆಗೆ ನೀರಿನಲ್ಲಿ ನೆನೆಸಿಟ್ಟುಕೊಳ್ಳಿ.
  • ಮೊದಲಿಗೆ ಚಿಕನ್ ನನ್ನು 15-20 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಬೇಯಿಸಿಕೊಳ್ಳಿ.
  • ಒಂದು ಮಿಕ್ಸಿ ಜಾರಿಗೆ ಕೊತ್ತಂಬರಿ ಬೀಜ, ಜೀರಿಗೆ, ಸೋಂಪು ಕಾಳು, ದಾಲ್ಚಿನ್ನಿ, ಏಲಕ್ಕಿ, ಲವಂಗ, ಗರಂ ಮಸಾಲೆ ಚಕ್ಕೆ, ಸ್ಟಾರ್ ಹೂವನ್ನು ನೀರು ಹಾಕದೇ ರುಬ್ಬಿಕೊಂಡು ಬಿರಿಯಾನಿ ಮಸಾಲಾ ತಯಾರಿಸಿಕೊಳ್ಳಿ.
  • ಒಂದು ಬಾಣಲೆಗೆ ಎಣ್ಣೆ ಅಥವಾ ತುಪ್ಪವನ್ನು ಹಾಕಿ ಬಿಸಿಯಾಗುತ್ತಿದ್ದಂತೆ ಬಿರಿಯಾನಿ ಎಲೆ ಮತ್ತು ದಾಲ್ಚಿನ್ನಿ ಹಾಕಿ ಫ್ರೈ ಮಾಡಿಕೊಳ್ಳಿ.
  • ಇದಕ್ಕೆ ಕತ್ತರಿಸಿಟ್ಟ ಈರುಳ್ಳಿ ಹಾಗೂ ಹಸಿರು ಮೆಣಸಿನಕಾಯಿ ತಿಳಿ ಕಂದು ಬಣ್ಣ ಬರುವವರೆಗೆ ಚೆನ್ನಾಗಿ ಹುರಿದು ಕೊಳ್ಳಿ.
  • ಆ ಬಳಿಕ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹಸಿ ವಾಸನೆ ಹೋಗುವವರೆಗೆ ಫ್ರೈ ಮಾಡಿಕೊಳ್ಳಿ.
  • ಟೊಮ್ಯಾಟೊ ಸೇರಿಸಿ ಬೇಯುತ್ತಿದ್ದಂತೆ, ರುಬ್ಬಿಟ್ಟ ಬಿರಿಯಾನಿ ಮಸಾಲಾ, ಅರಿಶಿನ ಪುಡಿ ಹಾಗೂ ಮೆಣಸಿನ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಂಡು ಒಂದು ನಿಮಿಷಗಳ ಕಾಲ ಹಾಗೆ ಬಿಡಿ.
  • ನಂತರದಲ್ಲಿ ಮೊಸರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ಎಣ್ಣೆ ಬಿಡುವವರೆಗೂ ಕೈಯಾಡಿಸುತ್ತ ಇರಿ.
  • ಈಗಾಗಲೇ ಬೇಯಿಸಿಟ್ಟ ಚಿಕನ್ ತುಂಡುಗಳನ್ನು ಸೇರಿಸಿಕೊಂಡು, ಐದು ಹತ್ತು ನಿಮಿಷಗಳ ಕಾಲ ಹಾಗೆಯೇ ಬಿಡಿ.
  • ತದನಂತರದಲ್ಲಿ ನೆನೆಸಿಟ್ಟ ಅಕ್ಕಿಯನ್ನು ಬೆರೆಸಿ 2 ನಿಮಿಷಗಳ ಕಾಲ ಕೈಯಾಡಿಸಿ ಅಗತ್ಯವಿದ್ದಷ್ಟು ನೀರು ಸೇರಿಸಿಕೊಳ್ಳಿ.
  • ನಂತರ ರುಚಿಗೆ ತಕ್ಕಷ್ಟು ಉಪ್ಪು, ಕೊತ್ತಂಬರಿ ಸೊಪ್ಪು ಪುದೀನಾ ಹಾಗೂ ಒಂದೆರಡು ಚಮಚ ನಿಂಬೆರಸವನ್ನು ಹಿಂಡಿ ಎರಡು ಸೀಟಿಗೆ ಪ್ರೆಶರ್ ಕುಕ್ಕರ್ ನಲ್ಲಿ ಬೇಯಲು ಬಿಡಿ.
  • ತಣ್ಣಗಾದ ಬಳಿಕ ಪ್ರೆಶರ್ ಕುಕ್ಕರ್ ಮುಚ್ಚಳ ತೆಗೆದರೆ ರುಚಿಕರವಾದ ಬಿರಿಯಾನಿ ಸವಿಯಲು ಸಿದ್ಧವಿರುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:41 pm, Wed, 3 July 24

ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ