World Dolphin Day 2024 : ಸಂಪ್ರದಾಯದ ಹೆಸರಿನಲ್ಲಿ ನಡೆದ ಮಾರಣಹೋಮಕ್ಕಾಗಿ ಈ ದಿನದ ಆಚರಣೆ, ಏನಿದರ ವಿಶೇಷ?

ಆರೋಗ್ಯಕರ ಜಲವಾಸಿಗಳಲ್ಲಿ ಒಂದಾದ ಈ ಡಾಲ್ಫಿನ್​​​ಗಳು ಪರಿಸರ ವ್ಯವಸ್ಥೆವನ್ನು ಕಾಪಾಡಲು ಸಹಕಾರಿಯಾಗಿದೆ. ಹೀಗಾಗಿ ಈ ಡಾಲ್ಫಿನ್​​ಗಳ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಸೆಪ್ಟೆಂಬರ್ 12 ರಂದು ವಿಶ್ವ ಡಾಲ್ಫಿನ್ ದಿನವನ್ನು ಆಚರಿಸಲಾಗುತ್ತದೆ. ಹಾಗಾದ್ರೆ ಈ ದಿನವನ್ನು ಆಚರಿಸುವುದರ ಹಿಂದಿನ ಇತಿಹಾಸ ಹಾಗೂ ಪರಿಸರ ಸಂರಕ್ಷಣೆಯಲ್ಲಿ ಇವುಗಳ ಪಾತ್ರ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

World Dolphin Day 2024 : ಸಂಪ್ರದಾಯದ ಹೆಸರಿನಲ್ಲಿ ನಡೆದ ಮಾರಣಹೋಮಕ್ಕಾಗಿ ಈ ದಿನದ ಆಚರಣೆ, ಏನಿದರ ವಿಶೇಷ?
ವಿಶ್ವ ಡಾಲ್ಫಿನ್ ದಿನ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Sep 12, 2024 | 11:03 AM

ಪರಿಸರ ವ್ಯವಸ್ಥೆಯಲ್ಲಿ ಪ್ರತಿಯೊಂದು ಜೀವಿಗಳ ಪಾತ್ರವು ಅಗಾಧವಾದದ್ದು. ಆರೋಗ್ಯಕರ ಜಲವಾಸಿಗಳಲ್ಲಿ ಒಂದಾಗಿರುವ ಈ ಡಾಲ್ಫಿನ್​​​​ಗಳು ಪರಿಸರ ವ್ಯವಸ್ಥೆಯಲ್ಲಿ ಆದರ್ಶ ಪರಿಸರ ಸೂಚಕಗಳಾಗಿ ಕಾರ್ಯನಿರ್ವಹಿಸುತ್ತವೆ. ಈ ಡಾಲ್ಫಿನ್​​​​​ಗಳು ತಮ್ಮ ಬುದ್ಧಿವಂತಿಕೆ ಮತ್ತು ವರ್ಚಸ್ಸಿಗೆ ಹೆಸರುವಾಸಿಯಾದ ಅಸಾಧಾರಣ ಪ್ರಭೇದಗಳಾಗಿವೆ. ಪ್ರಪಂಚದಾದ್ಯಂತದ ಅನೇಕ ಜಾತಿಯ ಡಾಲ್ಫಿನ್​​​​​ಗಳಿದ್ದು, ಈ ಜೀವಿಗಳು ಹೆಚ್ಚಾಗಿ ಬೆಚ್ಚಗಿನ, ಸಮಶೀತೋಷ್ಣ ಮತ್ತು ಶೀತ ಸಮುದ್ರಗಳಲ್ಲಿ ಕಂಡುಬರುತ್ತದೆ. ಸಮುದ್ರಗಳು ನದಿಗಳು, ಸರೋವರಗಳು ಅಥವಾ ಕೊಲ್ಲಿಗಳಲ್ಲಿ ವಾಸಿಸುವ ಈ ಜೀವಿಗಳ ಕಿವಿಯು ಬಹಳ ಸೂಕ್ಷ್ಮವಾಗಿದೆ.

ಈ ಡಾಲ್ಫಿನ್‌ಗಳು ಶಿಳ್ಳೆ ಹೊಡೆಯುವ ಮೂಲಕ ಅಥವಾ ಕಡಿಮೆ ಆವರ್ತನದ ಧ್ವನಿ ತರಂಗಗಳು ಹಾಗೂ ಪ್ರತಿಧ್ವನಿಗಳನ್ನು ಬಳಸುವ ಮೂಲಕ ಪರಸ್ಪರ ಸಂವಹನ ನಡೆಸುತ್ತವೆ. ಪರಿಸರ ವ್ಯವಸ್ಥೆಯಲ್ಲಿ ಅತೀ ಮುಖ್ಯವಾದ ಜೀವಿಯಾಗಿರುವ ಡಾಲ್ಫಿನ್​​​​​ಗಳ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ದಿನವು ಬಹಳ ಮಹತ್ವದ್ದಾಗಿದೆ.

ಇದನ್ನೂ ಓದಿ: ಒತ್ತು ಶಾವಿಗೆಗೆ ಕಾಯಿ ಹಾಲು, ವ್ಹಾವ್ ಸೂಪರ್​​​ ಕಾಂಬಿನೇಷನ್

ವಿಶ್ವ ಡಾಲ್ಫಿನ್ ದಿನದ ಇತಿಹಾಸ ಹಾಗೂ ಮಹತ್ವ

ಸೆಪ್ಟೆಂಬರ್ 12, 2021 ರಂದು, 1,428 ಕ್ಕೂ ಹೆಚ್ಚು ಡಾಲ್ಫಿನ್‌ಗಳನ್ನು ಸಂಪ್ರದಾಯದ ಹೆಸರಿನಲ್ಲಿ ಒಂದೇ ಬಾರಿಗೆ ಕ್ರೂರವಾಗಿ ಹತ್ಯೆ ಮಾಡಲಾಯಿತು. ಡೆನ್ಮಾರ್ಕ್ ನ ಫೈರೋ ದ್ವೀಪದಲ್ಲಿ ಈ ಘಟನೆಯು ನಡೆದಿತ್ತು. ಈ ವೇಳೆ ಯಲ್ಲಿ ಹಲವು ಪ್ರಾಣಿ ಪ್ರೇಮಿಗಳ ಸಂಘಟನೆಗಳು ಒಂದೆಡೆ ಸೇರಿದ್ದವು. ಈ ಜೀವಿಗಳ ಹತ್ಯೆಯನ್ನು ಮತ್ತು ಡಾಲ್ಫಿನ್‌ಗಳ ರಕ್ಷಣೆ ಮತ್ತು ಸಂರಕ್ಷಣೆಗಾಗಿ ಸಕ್ರಿಯವಾಗಿರುವ ಸಲುವಾಗಿ ‘ಸೆಪ್ಟೆಂಬರ್ 12’ ಅನ್ನು ‘ವಿಶ್ವ ಡಾಲ್ಫಿನ್ ದಿನ’ ಎಂದು ಆಚರಿಸಲು ನಿರ್ಧರಿಸಲಾಯಿತು.

ಈ ಜೀವಿಗಳು ಆವಾಸಸ್ಥಾನಗಳ ಪರಿಸರ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಅದಲ್ಲದೇ, ಈ ಡಾಲ್ಫಿನ್‌ಗಳ ಸಂರಕ್ಷಣೆಯು ತಮ್ಮ ಜೀವನೋಪಾಯಕ್ಕಾಗಿ ಜಲಚರ ವ್ಯವಸ್ಥೆಯನ್ನು ಅವಲಂಬಿಸಿರುವ ಜನರಿಗೆ ಪ್ರಯೋಜನ ನೀಡುತ್ತದೆ. ಹೀಗಾಗಿ ಪರಿಸರ ವ್ಯವಸ್ಥೆಯಲ್ಲಿ ಈ ಜೀವಿಗಳು ಬಹಳ ಮುಖ್ಯವಾಗಿದೆ. ಇವುಗಳ ಸಂರಕ್ಷಣೆಗಾಗಿ ಪ್ರತಿ ವರ್ಷ ವಿಶ್ವ ಡಾಲ್ಫಿನ್ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ