World Map : ವಿಶ್ವ ಭೂಪಟದಲ್ಲಿರುವ ಮಾಹಿತಿಯು ತಪ್ಪಾಗಿದೆಯೇ, ವಿಜ್ಞಾನಿಗಳು ಈ ರೀತಿ ಹೇಳುತ್ತಿರುವುದು ಏಕೆ?

ಪ್ರಪಂಚವನ್ನು ಸುತ್ತಾಡಿ ಹೇಗಿದೆ ಎಂದು ನೋಡುವುದು ತುಂಬಾನೇ ಕಷ್ಟ. ಕುಳಿತಲ್ಲಿಂದಲೇ ಈ ಪ್ರಪಂಚವನ್ನು ನೋಡಲು ಸುಲಭವಾದ ಮಾರ್ಗವೆಂದರೆ ಅದುವೇ ಈ ವಿಶ್ವ ಭೂಪಟ ಅಥವಾ ನಕ್ಷೆಗಳು. ಹೀಗಾಗಿ ಪ್ರಪಂಚದ ಭೌಗೋಳಿಕತೆಯನ್ನು ಅರ್ಥಮಾಡಿಕೊಳ್ಳಲು ನಾವು ವಿಶ್ವ ಭೂಪಟ ಅಥವಾ ನಕ್ಷೆಗಳನ್ನು ಬಳಸುತ್ತೇವೆ. ಆದರೆ ನಾವು ಪ್ರಪಂಚವು ನೋಡಲು ಬಳಸುವ ವಿವಿಧ ಭೂಪಟಗಳು ನೀಡುವ ಕೆಲವು ಮಾಹಿತಿಗಳು ತಪ್ಪಾಗಿವೆ ಎನ್ನಲಾಗಿದೆ.

World Map : ವಿಶ್ವ ಭೂಪಟದಲ್ಲಿರುವ ಮಾಹಿತಿಯು ತಪ್ಪಾಗಿದೆಯೇ, ವಿಜ್ಞಾನಿಗಳು ಈ ರೀತಿ ಹೇಳುತ್ತಿರುವುದು ಏಕೆ?
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Sep 12, 2024 | 6:23 PM

ಇಡೀ ಜಗತ್ತನ್ನು ನೋಡಲು ಯಾರಿಂದಲೂ ಸಾಧ್ಯವಿಲ್ಲ, ಆದರೆ ಪ್ರತಿಯೊಬ್ಬರೂ ಪ್ರಪಂಚದಲ್ಲಿರುವ ದೇಶಗಳ ಬಗೆಗಿನ ಮಾಹಿತಿಗಾಗಿ ವಿವಿಧ ನಕ್ಷೆಗಳನ್ನು (ವಿಶ್ವ ಭೂಪಟ) ಬಳಸುತ್ತಾರೆ. ಶಾಲಾ ದಿನಗಳಲ್ಲಿ ನಿಮ್ಮ ಶಿಕ್ಷಕರು ಪ್ರಪಂಚದಲ್ಲಿರುವ ದೇಶಗಳು ಹಾಗೂ ಖಂಡಗಳ ಮಾಹಿತಿಯನ್ನು ನೀಡುವ ಸಂದರ್ಭದಲ್ಲಿ ವಿಶ್ವ ಭೂಪಟ ಹಾಗೂ ನಕ್ಷೆಗಳನ್ನು ಬಳಸಿದ್ದೀರಬಹುದು. ವಾಸ್ತವವಾಗಿ, ವಿಶ್ವ ಭೂಪಟವು ಪ್ರಪಂಚದ ಸರಿಯಾದ ಚಿತ್ರವನ್ನು ತೋರಿಸುವುದಿಲ್ಲ. ದೇಶಗಳ ಆಕಾರ, ವಿಸ್ತೀರ್ಣ, ಎತ್ತರಗಳಿಗೆ ಸಂಬಂಧ ಪಟ್ಟಂತೆ ತಪ್ಪಾದ ಮಾಹಿತಿಯನ್ನು ನೀಡಿದೆ ಎನ್ನಲಾಗಿದೆ. ಪ್ರಪಂಚದ ಬಹುತೇಕ ನಕ್ಷೆಗಳು ನಿಖರತೆಯಿಂದ ದೂರವಿದೆ. ನಿಖರವಾದ ಮಾಹಿತಿಯನ್ನು ನೀಡುವ ಯಾವುದೇ ನಕ್ಷೆಯು ಈ ಜಗತ್ತಿನಲ್ಲಿಯೇ ಇಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಮರ್ಕೇಟರ್ ನಕ್ಷೆ

ಪ್ರಪಂಚದಲ್ಲಿ ವಿವಿಧ ವಿಶ್ವ ಭೂಪಟ ಅಥವಾ ನಕ್ಷೆಗಳಲ್ಲಿ ಒಂದಾದ ಈ ಮರ್ಕೇಟರ್ ನಕ್ಷೆಯನ್ನು ಹೆಚ್ಚು ಬಳಸಲಾಗುತ್ತದೆ. 1569 ರಲ್ಲಿ ಗೆರಾರ್ಡಸ್ ಮರ್ಕೇಟರ್ ರಚಿಸಿದ್ದರು. ಇದರ ಉದ್ದೇಶ ನಾವಿಕರಿಗೆ ಸರಿಯಾದ ದಿಕ್ಕನ್ನು ತೋರಿಸುವುದಾಗಿದೆ. ಭೂಮಿಯ ಆಕಾರವನ್ನು ತೋರಿಸುವುದರೊಂದಿಗೆ ಧ್ರುವಕ್ಕೆ ಹತ್ತಿರವಾಗುತ್ತಿದ್ದಂತೆ ನಿಖರತೆ ಕ್ಷೀಣಿಸಲು ಪ್ರಾರಂಭಿಸುತ್ತದೆ ಎನ್ನಲಾಗಿದೆ.

ಗಾಲ್-ಪೀಟರ್ಸ್ ನಕ್ಷೆ

ವಿಶ್ವದ ಎರಡನೇ ಅತ್ಯಂತ ಜನಪ್ರಿಯ ನಕ್ಷೆಗಳಲ್ಲಿ ಗಾಲ್-ಪೀಟರ್ಸ್. ಇದನ್ನು ಜರ್ಮನ್ ಇತಿಹಾಸಕಾರ ಮತ್ತು ಚಲನಚಿತ್ರ ನಿರ್ಮಾಪಕ ಅರ್ನೋ ಪೀಟರ್ಸ್ 1947 ರಲ್ಲಿ ಸಿದ್ಧಪಡಿಸಿದರು. ಇದನ್ನು ಮರ್ಕೇಟರ್‌ಗೆ ಪರ್ಯಾಯವಾಗಿ ಬಳಸಲಾಗುತ್ತದೆ. ಇತರ ನಕ್ಷೆಗಳಿಗೆ ಹೋಲಿಸಿದರೆ ಇದು ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಇದು ನೀಡುವ ಮಾಹಿತಿ ನಿಖರವಾಗಿರುತ್ತದೆ ಎನ್ನಲಾಗಿದೆ. ವಿಶ್ವಸಂಸ್ಥೆಯು ಇದನ್ನು ಒಪ್ಪಿಕೊಳ್ಳಲು ಕಾರಣವಾಗಿದ್ದು, ಆದರೆ ಈ ನಕ್ಷೆಯು ಕೆಲವು ಸಣ್ಣಪುಟ್ಟ ತಪ್ಪುಗಳನ್ನು ಒಳಗೊಂಡಿದೆ.

ಇದನ್ನೂ ಓದಿ: ನಿಮ್ಮ ದಿನವನ್ನು ಧನಾತ್ಮಕ ಅಲೋಚನೆಯೊಂದಿಗೆ ಆರಂಭಿಸುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್

ಆರ್ಥರ್ ರಾಬಿನ್ಸನ್ ನಕ್ಷೆ

ಅಮೇರಿಕನ್ ಕಾರ್ಟೋಗ್ರಾಫರ್ ಆರ್ಥರ್ ರಾಬಿನ್ಸನ್ ಸಹ ನಕ್ಷೆಯನ್ನು ಸಿದ್ಧಪಡಿಸಿದರು. ಈ ನಕ್ಷೆಯನ್ನು 1963 ರಲ್ಲಿ ಅಭಿವೃದ್ಧಿಪಡಿಸಲಾಯಿತು. ಇದು ನಿಖರತೆ ಹೆಸರುವಾಸಿಯಾಗಿದೆ. ಈ ನಕ್ಷೆಯಲ್ಲಿ ಪ್ರತಿಯೊಂದು ಗಡಿಯನ್ನು ಕಾಣುವಂತೆ ಚಿತ್ರಿಸಲಾಗಿದೆ.

*ಆಥಾಗ್ರಾಫ್ ನಕ್ಷೆ

ಜಪಾನಿನ ವಾಸ್ತುಶಿಲ್ಪಿ ಹಾಜಿಮೆ ನರುಕಾವಾ ಅವರು 1999 ರಲ್ಲಿ ಆಥಾಗ್ರಾಫ್ ನಕ್ಷೆಯನ್ನು ಸಿದ್ಧಪಡಿಸಿದರು, ಅದರಲ್ಲಿ ವೃತ್ತಾಕಾರದ ಮೇಲ್ಮೈಯನ್ನು 96 ತ್ರಿಕೋನಗಳಾಗಿ ವಿಂಗಡಿಸಲಾಗಿದೆ. ಎಲ್ಲಾ ನಕ್ಷೆಗಳಲ್ಲಿ ಇದು ಅತ್ಯಂತ ನಿಖರವಾಗಿದೆ ಎಂದು ಪರಿಗಣಿಸಲಾಗಿದೆ.

ವಿಶ್ವದ ಭೂಪಟಗಳು ನೀಡುವ ಮಾಹಿತಿ ಎಷ್ಟು ಸರಿಯಾಗಿದೆ?

ಪ್ರಪಂಚದ ಹೆಚ್ಚಿನ ನಕ್ಷೆಗಳು ಇತಿಹಾಸದ ಸಾಮ್ರಾಜ್ಯಶಾಹಿ ಶಕ್ತಿಗಳ ಬಗ್ಗೆ ಹೆಚ್ಚು ಮಾಹಿತಿ ಒದಗಿಸುತ್ತದೆ. ಈ ವಿಶ್ವದ ನಕ್ಷೆಯಲ್ಲಿ ತೋರಿಸಿದ್ದಕ್ಕಿಂತ ಗ್ರೀನ್‌ಲ್ಯಾಂಡ್ ತುಂಬಾ ಚಿಕ್ಕದಾಗಿದೆ. ಆದರೆ ನಕ್ಷೆಯಲ್ಲಿ ಈ ದ್ವೀಪದ ಗಾತ್ರವು ಆಫ್ರಿಕಾಕ್ಕೆ ಸಮನಾಗಿರುತ್ತದೆ ಎಂದು ತೋರಿಸಲಾಗಿದೆ. ಆದರೆ ವಾಸ್ತವದಲ್ಲಿ ಆಫ್ರಿಕಾವು ಗ್ರೀನ್‌ಲ್ಯಾಂಡ್‌ಗಿಂತ 14.5 ಪಟ್ಟು ದೊಡ್ಡದಾಗಿದೆ. ಹೆಚ್ಚಿನ ವಿಶ್ವ ಭೂಪಟ ಅಥವಾ ನಕ್ಷೆಗಳಲ್ಲಿ ಸ್ಕ್ಯಾಂಡಿನೇವಿಯನ್ ದೇಶವನ್ನು ಭಾರತಕ್ಕಿಂತ ದೊಡ್ಡದಾಗಿ ತೋರಿಸಲಾಗಿದ್ದು, ಆದರೆ ಈ ಮಾಹಿತಿ ನಿಜವಾಗಿಲ್ಲ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ