ಅಂಗಾಂಗ ದಾನಕ್ಕೂ ಮೊದಲು ಈ ವಿಷಯಗಳು ನಿಮಗೆ ತಿಳಿದಿರಲಿ
World Organ Donation Day 2024: ಅಂಗಾಂಗ ದಾನ ಮಾಡುವುದೆಂದರೆ ಒಬ್ಬ ವ್ಯಕ್ತಿಗೆ ಹೊಸ ಜೀವನವನ್ನು ನೀಡುತ್ತಿದ್ದೀರಿ ಎನ್ನುವುದನ್ನು ಸೂಚಿಸುತ್ತದೆ. ಈ ಅಂಗಾಂಗ ದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಮರಣಾನಂತರ ಅಂಗಗಳನ್ನು ದಾನ ಮಾಡಲು ಹೆಚ್ಚಿನ ಜನರನ್ನು ಪ್ರೇರೇಪಿಸುವ ಸಲುವಾಗಿ ಪ್ರತಿವರ್ಷ ಆಗಸ್ಟ್ 13 ರಂದು ವಿಶ್ವ ಅಂಗದಾನ ದಿನವನ್ನು ಆಚರಿಸಲಾಗುತ್ತದೆ. ಹಾಗಾದ್ರೆ ಈ ದಿನದ ಇತಿಹಾಸ ಹಾಗೂ ಮಹತ್ವದ ಕುರಿತಾದ ಸಂಪೂರ್ಣ ಮಾಹಿತಿಯೂ ಇಲ್ಲಿದೆ.
ಅಂಗಾಗ ದಾನವನ್ನು ಶ್ರೇಷ್ಠ ದಾನವೆಂದು ಪರಿಗಣಿಸಲಾಗಿದ್ದು, ಬದುಕಿರುವಾಗಲೇ ಕೆಲವು ಅಂಗಗಳನ್ನು ದಾನ ವ್ಯಕ್ತಿಯ ಜೀವವನ್ನು ಉಳಿಸಬಹುದು. ಅದಲ್ಲದೇ ಮರಣದ ನಂತರದ ದೇಹದ ಕೆಲವು ಅಂಗಗಳನ್ನು ದಾನ ಮಾಡಿ ಎಂಟು ಜನರಿಗೆ ಹೊಸ ಜೀವನವನ್ನು ನೀಡಬಹುದು. ನೂರು ವರ್ಷದವರೆಗೆ ಕಾರ್ನಿಯೂ ಮತ್ತು ಚರ್ಮ 70 ವರ್ಷದವರೆಗೆ ಕಿಡ್ನಿ ಮತ್ತು ಲಿವರ್, 50 ವರ್ಷದವರೆಗೆ ಹೃದಯ ಮತ್ತು ಶ್ವಾಸಕೋಶ ಮತ್ತು 40 ವರ್ಷದವರೆಗೆ ಹೃದಯದ ಕವಾಟಗಳನ್ನು ದಾನ ಮಾಡಬಹುದಾಗಿದೆ. ಆದರೆ ಈ ಅಂಗಾಂಗ ದಾನದ ಬಗ್ಗೆ ಕೆಲವರಿಗೆ ತಪ್ಪು ಕಲ್ಪನೆಗಳಿದ್ದು, ಈ ಬಗ್ಗೆ ಜಾಗೃತಿ ಮೂಡಿಸಲೆಂದು ಆಗಸ್ಟ್ 13 ರಂದು ವಿಶ್ವ ಅಂಗಾಗ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ವಿಶ್ವದ ಮೊದಲ ಅಂಗದಾನ ಮಾಡಿದ್ದೂ ಯಾವಾಗ? ಹಾಗೂ ಮಹತ್ವ
ವಿಶ್ವದ ಮೊದಲ ಅಂಗದಾನವನ್ನು ಅಮೇರಿಕಾದಲ್ಲಿ 1954ರಲ್ಲಿ ಮಾಡಲಾಯಿತು. ರೊನಾಲ್ಡ್ ಲೀ ಹೆರಿಕ್ ಎಂಬ ವ್ಯಕ್ತಿ 1954ರಲ್ಲಿ ತನ್ನ ಅವಳಿ ಸಹೋದರನಿಗೆ ಮೂತ್ರಪಿಂಡವನ್ನು ದಾನ ಮಾಡಿದನು. ಈ ಮೂತ್ರಪಿಂಡದ ಕಸಿಯನ್ನು ಯಶಸ್ವಿಯಾಗಿ ಡಾ. ಜೋಸೆಫ್ ಮರ್ರೆ ಮಾಡಿದರು. 1990 ರಲ್ಲಿ ವೈದ್ಯಕೀಯ ವಿಭಾಗದಲ್ಲಿ ಈ ಶಸ್ತ್ರಚಿಕಿತ್ಸೆಗಾಗಿ ಡಾ. ಜೋಸೆಫ್ ಮರ್ರೆ ಅವರಿಗೆ ನೊಬೆಲ್ ಪ್ರಶಸ್ತಿ ದೊರೆಯಿತು. ಅಂಗಾಂಗ ದಾನದ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ವಿಶ್ವ ಅಂಗದಾನ ದಿನವು ಮಹತ್ವದ್ದಾಗಿದೆ. ಹೀಗಾಗಿ ಈ ದಿನದಂದು ಸೆಮಿನಾರ್ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಅಂಗಾಂಗದ ದಾನಕ್ಕೂ ಮುನ್ನ ಈ ವಿಷಯಗಳ ಬಗ್ಗೆ ತಿಳಿದಿರಲಿ
- ಅಂಗಾಂಗ ದಾನ ಮಾಡುವುದಕ್ಕೆ ಸಂಬಂಧಿಸಿದ ಎಲ್ಲಾ ಖರ್ಚು ವೆಚ್ಚಗಳನ್ನು ಆಸ್ಪತ್ರೆಯೇ ಭರಿಸುತ್ತದೆ ಅಥವಾ ದಾನ ಪಡೆದುಕೊಳ್ಳುವ ವ್ಯಕ್ತಿಯೂ ಅಥವಾ ಕುಟುಂಬದವರು ನೋಡಿಕೊಳ್ಳುತ್ತಾರೆ.
- ಹೃದಯ ಸ್ತಂಭನವಾಗಿ ಸಾವು ಸಂಭವಿಸಿದಲ್ಲಿ ಈ ಕೆಲವು ಅಂಗಾಂಗಗಳನ್ನು ದಾನ ಮಾಡಲಾಗುವುದಿಲ್ಲ. ಆದರೆ ಅಂಗಾಂಶಗಳಾದ ಅಕ್ಷಿಪಟಲ,ಹೃದಯದ ಕವಾಟಗಳು, ಚರ್ಮ, ಮೂಳೆ, ಟೆಂಡಾನ್, ಲಿಗಮೆಂಟ್‌ಗಳು, ರಕ್ತನಾಳಗಳು ಕುಟುಂಬದವರ ಒಪ್ಪಿಗೆಯಿದ್ದಲ್ಲಿ ಮಾತ್ರ ದಾನ ಮಾಡಬಹುದು.
- ಶ್ವಾಸಕೋಶ ದಾನಕ್ಕೆ 6 ಗಂಟೆ, ಹೃದಯ ದಾನಕ್ಕೆ 5ರಿಂದ 6 ಗಂಟೆ, ಲಿವರ್ ದಾನಕ್ಕೆ 12 ಗಂಟೆ, ಮೆದೋಜಿರಕ ಗ್ರಂಥ ದಾನಕ್ಕೆ 24 ಗಂಟೆ ಹಾಗೂ ಕಿಡ್ನಿ ದಾನಕ್ಕೆ 48 ಗಂಟೆಗಳು ತಗಲುತ್ತದೆ.
- ಕ್ಯಾನ್ಸರ್, ಏಡ್ಸ್ ಮತ್ತು ಮಾದಕ ದ್ರವ್ಯ ಸೇವನೆ ಮಾಡುವವರಿದ್ದರೆ ಅಂತಹವರು ಅಂಗಾಂಗ ದಾನ ಮಾಡುವಂತಿಲ್ಲ.
- ಭಾರತ ಸರ್ಕಾರವು ಅಂಗಾಂಗ ದಾನಕ್ಕೆ 1994ರಲ್ಲಿ ಕಾನೂನನ್ನು ರಚಿಸಿದೆ. ಹೀಗಾಗಿ ಅಂಗಾಂಗಗಳನ್ನು ಹಣಕ್ಕಾಗಿ ಮಾರುವಂತಿಲ್ಲ ಹಾಗೂ ಹಣಕೊಟ್ಟು ಖರೀದಿಸುವಾಗಿಲ್ಲ.
- ಪ್ರತಿಯೊಬ್ಬ ವ್ಯಕ್ತಿಗೂ ಅಂಗಾಂಗ ದಾನ ಮಾಡುವ ಮುಕ್ತ ಅವಕಾಶವಿದ್ದು, ಮಕ್ಕಳೂ ಅಂಗಾಂಗ ದಾನ ಮಾಡಬೇಕೆಂದುಕೊಂಡಿದ್ದರೆ ಇದಕ್ಕೆ ತಂದೆ ತಾಯಿಯ ಒಪ್ಪಿಗೆ ಇರಬೇಕು.
ಹೆಚ್ಚಿನ ಜೀವನಶೈಲಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ