World Tuberculosis Day 2024: ಟಿಬಿ ಬಗ್ಗೆ ಭಯಬೇಡ, ಈ ಚಿಕಿತ್ಸೆಯಿಂದ ಕ್ಷಯ ಶಮನ

| Updated By: ಅಕ್ಷಯ್​ ಪಲ್ಲಮಜಲು​​

Updated on: Mar 23, 2024 | 4:32 PM

ಒಂದು ಕಾಲದಲ್ಲಿ ಜನರನ್ನು ಭಯಭೀತರನ್ನಾಗಿಸಿದ್ದ ಕಾಯಿಲೆಗಳಲ್ಲಿ ಈ ಕ್ಷಯ ರೋಗ ಅಥವಾ ಟಿಬಿ ಕೂಡ ಒಂದು. ಒಬ್ಬರಿಂದ ಇನ್ನೊಬ್ಬರಿಗೆ ಸಾಂಕ್ರಾಮಿಕವಾಗಿ ಹರಡುವ ಈ ಕ್ಷಯರೋಗಕ್ಕೆ ಸರಿಯಾದ ಚಿಕಿತ್ಸೆ ಪಡೆದುಕೊಳ್ಳದೇ ಹೋದರೆ ಜೀವಕ್ಕೆ ಕಂಟಕ ಎದುರಾಗಬಹುದು. ಈ ರೋಗದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಮಾರ್ಚ್‌ 24ರಂದು ವಿಶ್ವದಾದ್ಯಂತ ಕ್ಷಯರೋಗ (ಟಿಬಿ) ದಿನವನ್ನು ಆಚರಿಸಲಾಗುತ್ತದೆ.

World Tuberculosis Day 2024: ಟಿಬಿ ಬಗ್ಗೆ ಭಯಬೇಡ, ಈ ಚಿಕಿತ್ಸೆಯಿಂದ ಕ್ಷಯ ಶಮನ
Follow us on

ಕ್ಷಯ ರೋಗವೆನ್ನುವುದು ಅತ್ಯಂತ ಭಯಾನಕ ಹಾಗೂ ನೋವನ್ನು ಉಂಟು ಮಾಡುವ ಸಾಂಕ್ರಾಮಿಕ ರೋಗಗಳಲ್ಲಿ ಒಂದು. ಇದು ‘ಬ್ಯಾಕ್ಟೀರಿಯಂ ಟ್ಯೂಬರ್‌ಕ್ಯುಲೋಸಿಸ್’ ಎಂಬ ಬ್ಯಾಕ್ಟೀರಿಯಾದಿಂದ ರೋಗವು ಬರುತ್ತದೆ. ಸಾಂಕ್ರಾಮಿಕ ಕಾಯಿಲೆವಾಗಿರುವ ಈ ಕ್ಷಯರೋಗವು ಒಬ್ಬರಿನಿಂದ ಇನ್ನೊಬ್ಬರಿಗೆ ಸುಲಭವಾಗಿ ಹರಡಬಲ್ಲದು. ಸೋಂಕಿತ ವ್ಯಕ್ತಿಯು ಕೆಮ್ಮಿದಾಗ, ಸೀನಿದಾಗ ಅಥವಾ ಆ ವ್ಯಕ್ತಿಯ ಕಫದಿಂದಲೂ ಹರಡುವ ಸಾಧ್ಯತೆಯಿದೆ. ಶ್ವಾಸಕೋಶದ ಮೇಲೆ ದೀರ್ಘ ಪರಿಣಾಮ ಬೀರುವ ಕಾರಣ ಪ್ರಾರಂಭದಲ್ಲಿಯೇ ಸರಿಯಾದ ಚಿಕಿತ್ಸೆಯನ್ನು ಮಾಡುವುದು ಒಳ್ಳೆಯದು. ರೋಗ ಲಕ್ಷಣಗಳು ಗಂಭೀರವಾದರೆ ದೇಹದ ಇತರ ಭಾಗಗಳಿಗೂ ಹಾನಿಯಾಗುತ್ತದೆ. ರೋಗ ನಿರೋಧಕ ಶಕ್ತಿ ಕಡಿಮೆಯಿರುವ ವ್ಯಕ್ತಿಗಳಲ್ಲಿ ಈ ರೋಗ ಬರುವ ಸಾಧ್ಯತೆಯೂ ಅಧಿಕವಾಗಿರುತ್ತದೆ. ಈ ಗಂಭೀರ ಆರೋಗ್ಯ ಸಮಸ್ಯೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಕ್ಷಯ ರೋಗ ದಿನವನ್ನು ಆಚರಿಸಲಾಗುತ್ತದೆ

ವಿಶ್ವ ಕ್ಷಯ ರೋಗ ದಿನದ ಇತಿಹಾಸ

ಡಾ.ರಾಬರ್ಟ್ ಕೋಚ್ ಟಿಬಿಗೆ ಕಾರಣವಾಗುವ ಬ್ಯಾಕ್ಟೀರಿಯಾವನ್ನು1882ರಲ್ಲಿ ಕಂಡುಹಿಡಿದರು. ವಿಜ್ಞಾನಿಯ ಈ ಆವಿಷ್ಕಾರವನ್ನು ನೆನಪಿಸಲು ಮಾರ್ಚ್ 24 ರಂದು ವಿಶ್ವ ಕ್ಷಯ ದಿನವೆಂದು ಆಚರಿಸಲಾಗುತ್ತದೆ.

ಇದನ್ನೂ ಓದಿ: ಕಾಮಾಲೆ ಬಂದರೆ ಆತಂಕ ಬೇಡ, ಶೀಘ್ರವಾಗಿ ಗುಣ ಪಡಿಸಿಕೊಳ್ಳುವುದು ಹೇಗೆ?

ವಿಶ್ವ ಕ್ಷಯ ರೋಗ ದಿನದ ಮಹತ್ವ

ಪ್ರತಿ ವರ್ಷ ಮಾರ್ಚ್ 26 ರಂದು ವಿಶ್ವದೆಲ್ಲೆಡೆಯಲ್ಲಿ ಟಿವಿ ದಿನವನ್ನಾಗಿ ಆಚರಿಸಲಾಗುತ್ತದೆ. ವಿಶ್ವದೆಲ್ಲೆಡೆ ಅನೇಕರು ಈ ಕಾಯಿಲೆಗೆ ತುತ್ತಾಗಿ ಸಾವನ್ನಪ್ಪುತ್ತಿದ್ದಾರೆ. ಆರೋಗ್ಯದ ಮೇಲೆ ಗಂಭೀರ ಬ್ಯಾಕ್ಟೀರಿಯಾವು ಬೀರುವ ಪರಿಣಾಮದ ಬಗ್ಗೆ ಜಾಗೃತಿ ಮೂಡಿಸುವ ಸದುದ್ದೇಶವನ್ನು ಹೊಂದಿದೆ. ಈ ದಿನದಂದು ಕ್ಷಯ ರೋಗದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಹಾಗೂ ಅಭಿಯಾನಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ