
ಆಪರೇಷನ್ ಸಿಂಧೂರ್ (Operation Sindoor) ಕಾರ್ಯಾಚರಣೆಯ ಬಳಿಕ ಎಲ್ಲೆಡೆ ಭಾರತೀಯ ಸೈನ್ಯ ಶಕ್ತಿ, ಪರಾಕ್ರಮಗಳ ಬಗ್ಗೆಯೇ ಮಾತು. ಅದಲ್ಲೂ ಈ ಕಾರ್ಯಾಚರಣೆಯ ನಂತರ ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಪ್ರತಿಕಾಗೋಷ್ಠಿ ನಡೆಸಿ ಗಮನ ಸೆಳೆದದ್ದು ಮಾತ್ರಲ್ಲದೆ ಹೆಣ್ಣು ಅಂದ್ರೆ ಹೀಗಿರಬೇಕು ಎಂದು ಇವರಿಬ್ಬರನ್ನು ಎಲ್ಲರೂ ಸ್ಫೂರ್ತಿಯಾಗಿ ತೆಗೆದುಕೊಂಡಿದ್ದಾರೆ. ಈ ನಡುವೆ 1999 ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ (Kargil War) ಹೋರಾಡಿದ ಧೈರ್ಯಶಾಲಿ ಮಹಿಳಾ ಸೈನ್ಯಾಧಿಕಾರಿಯ ಕಥೆಯೊಂದು ಸಖತ್ ವೈರಲ್ ಆಗುತ್ತಿದೆ. ಮಹಿಳಾ ಸೇನಾಧಿಕಾರಿಯಾಗಿದ್ದ ಯಶಿಕಾ ಹತ್ವಾಲ್ ತ್ಯಾಗಿ (Yashika Hatwal Tyagi) ಕಾರ್ಗಿಲ್ ಯುದ್ಧದ ಸಮಯದಲ್ಲಿ ತಾನು ಗರ್ಭಿಣಿಯಾಗಿದ್ದರೂ, ಎರಡು ವರ್ಷದ ಮಗುವಿನ ತಾಯಿಯಾಗಿದ್ದರೂ ಇದ್ಯಾವುದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ದೇಶವೇ ಮೊದಲು ಎಂದು ದಿಟ್ಟತನದಿಂದ ಶತ್ರು ಸೈನ್ಯದ ವಿರುದ್ಧ ಹೋರಾಡಿದ್ದರು. ಇವರ ಈ ಪ್ರೇರಣಾದಾಯಕ ಸ್ಟೋರಿ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
1999 ರಲ್ಲಿ ನಡೆದ ಕಾರ್ಗಿಲ್ ಯುದ್ಧ ಹಾಗೂ ಈ ಯುದ್ಧದಲ್ಲಿ ಪರಾಕ್ರಮದಿಂದ ಹೋರಾಡಿ ದೇಶಕ್ಕೆ ಗೆಲು ತಂದುಕೊಟ್ಟ ಹೆಮ್ಮೆಯ ಸೈನಿಕರ ಬಗ್ಗೆ ನಿಮಗೆಲ್ಲರಿಗೂ ಗೊತ್ತೇ ಇದೆ ಅಲ್ವಾ. ಈ ಯುದ್ಧಲ್ಲಿ ಹೋರಾಡಿದವರಲ್ಲಿ ಮಹಿಳಾ ಸೈನ್ಯಾಧಿಕಾರಿ ಯಶಿಕಾ ಹತ್ವಾಲ್ ತ್ಯಾಗಿ ಕೂಡಾ ಒಬ್ರು. ತಾನು ಗರ್ಭಿಣಿಯಾಗಿದ್ದರೂ, ಎರಡು ವರ್ಷ ವಯಸ್ಸಿನ ಮಗುವಿನ ತಾಯಿಯಾಗಿದ್ದರೂ, ಇದ್ಯಾವುದ ಬಗ್ಗೆ ಯೋಚಿಸಿದೆ ದೇಶವೇ ಮೊದಲು ಎಂದು ಯುದ್ಧದಲ್ಲಿ ಶತ್ರು ಸೇನೆಯ ವಿರುದ್ಧ ಧೈರ್ಯದಿಂದ ಹೋರಾಡಿದ ದಿಟ್ಟ ಹೆಣ್ಣು ಇವರು.
ಇತ್ತೀಚಿಗೆ ರಾಜ್ ಶಮಾನಿ ಪಾಡ್‌ಕ್ಯಾಸ್ಟ್‌ನಲ್ಲಿ ತಾನು ಗರ್ಭಿಣಿಯಾಗಿದ್ದಾಗ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ಕಥೆಯ ಬಗ್ಗೆ, ಕಾರ್ಗಿಲ್ ಯುದ್ಧದ ಬಗ್ಗೆ ಯಶಿಕಾ ಹತ್ವಾಲ್ ತ್ಯಾಗಿ ಮಾತನಾಡಿದ್ದಾರೆ. ಪಾಡ್‌ಕ್ಯಾಸ್ಟ್‌ನಲ್ಲಿ, ಯಾಶಿಕಾ ತ್ಯಾಗಿ, ತಾನು ಕಾರ್ಗಿಲ್ ಯುದ್ಧದಲ್ಲಿ ಹೋರಾಡಲು ಹೋದಾಗ ನಾನು ಎರಡನೇ ತ್ರೈಮಾಸಿಕ ಅವಧಿಯ ಗರ್ಣಿಣಿಯಾಗಿದ್ದೆ, ಅಲ್ಲದೆ ನನಗೆ 2 ವರ್ಷದ ಮಗು ಕೂಡ ಇತ್ತು ಎಂದು ಹೇಳಿದ್ದಾರೆ. ಈ ಕುರಿತ ವಿಡಿಯೋವನ್ನು vcast_7773 ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ಇದನ್ನೂ ಓದಿ: ಮುಖೇಶ್ ಅಂಬಾನಿಯವರಿಂದ ಕಲಿಯಬೇಕಾದ ಯಶಸ್ಸಿನ ಪಾಠಗಳಿವು
ವಿಡಿಯೋ ಇಲ್ಲಿದೆ ನೋಡಿ:
ಕಾರ್ಗಿಲ್ ಯುದ್ಧದ ಸಮಯದಲ್ಲಿ ಅವರು ಲೇಹ್‌ನಿಂದ ಸಿಯಾಚಿನ್ ಹಿಮನದಿಯವರೆಗಿನ ಲಾಜಿಸ್ಟಿಕ್ಸ್ ಕಾರ್ಯಾಚರಣೆ ನಡೆಸಿದ್ದರು. ಗರ್ಭಿಣಿಯಾಗಿದ್ದರೂ, ಧೈರ್ಯದಿಂದ ಹೋರಾಡಿದರು. 1999 ರ ಮೇ ತಿಂಗಳಲ್ಲಿ ಯುದ್ಧ ಆರಂಬವಾಗುತ್ತದೆ ಎಂದು ನಮಗೆ ತಿಳಿದಿರಲಿಲ್ಲ, ತುರ್ತು ಪರಿಸ್ಥಿತಿಯ ಕಾರಣದಿಂದಾಗಿ ನನ್ನ ಮಗನನ್ನು ನನ್ನ ಬಳಿಯೇ ಇಟ್ಟುಕೊಳ್ಳಬೇಕಾಯಿತು. ಮತ್ತು ಮಗುವನ್ನು ಕಮಾಂಡಿಂಗ್ ಅಧಿಕಾರಿಯ ಬಳಿ ಕಮಾಂಡಿಂಗ್‌ನಲ್ಲಿ ಇಟ್ಟುಕೊಳ್ಳಲು ಅನುಮತಿ ಕೇಳಿದ್ದೆ ಇದಕ್ಕೆ ಒಪ್ಪಿಗೆಯನ್ನು ಕೂಡ ನೀಡಿದ್ದರು. ಅಲ್ಲದೆ ಆ ಸಮಯದಲ್ಲಿ ನಾನು ಎರಡನೇ ಮಗುವಿನ ಗರ್ಭಿಣಿಯಾಗಿದ್ದೆ ಎಂದು ಹೇಳಿಕೊಂಡಿದ್ದಾರೆ. ಇವರ ಈ ಸ್ಪೂರ್ತಿದಾಯಕ ಕಥೆಗೆ ಭಾರತೀಯರೆಲ್ಲರೂ ತಲೆ ಬಾಗಿದ್ದಾರೆ.
ಪ್ರಸ್ತುತ ಸೇನೆಯಿಂದ ನಿವೃತ್ತಿಯನ್ನು ಪಡೆದಿರುವ ಯಶಿಕಾ ತ್ಯಾಗಿ ಪ್ರೇರಕಾ ಭಾಷಣಕಾರರಾಗಿ, ನಾಯಕತ್ವ ತರಬೇತುದಾರರಾಗಿ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:49 pm, Wed, 14 May 25