Year Ender 2024 : ಈ ವರ್ಷ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆದ ಕಿಚನ್ ಹ್ಯಾಕ್ಗಳು ಇವೆ ನೋಡಿ
ಹೊಸ ವರ್ಷದ ಆರಂಭಕ್ಕೆ ಇನ್ನೇನೂ ಕೆಲವೇ ದಿನಗಳಷ್ಟೇ ಬಾಕಿ ಉಳಿದಿವೆ. ಈಗಾಗಲೇ 2025 ಅನ್ನು ಸಂಭ್ರಮದಿಂದ ಬರ ಮಾಡಿಕೊಳ್ಳಲು ಸಿದ್ಧತೆಗಳು ನಡೆಯುತ್ತಿದೆ. ಕಳೆದ ವರ್ಷದಂತೆ ಈ ವರ್ಷವೂ ಗೂಗಲ್ ಯಾವೆಲ್ಲಾ ವಿಷಯಗಳು ಟ್ರೆಂಡ್ ಆಗಿದೆ ಎನ್ನುವುದು ಹಂಚಿಕೊಂಡಿದ್ದಾರೆ. 2024 ರ ವರ್ಷ ಕೆಲವು ಕಿಚನ್ ಹ್ಯಾಕ್ ಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೆಂಡ್ ಆಗಿದ್ದು, ಅಡುಗೆ ಮನೆ ಹಾಗೂ ಕಿಚನ್ ಹ್ಯಾಕ್ ಬಗ್ಗೆ ಆಸಕ್ತಿಯಿರುವವರಿಗಾಗಿ ಮಾಹಿತಿ ಇಲ್ಲಿದೆ.
ಈಗಿನ ಕಾಲದಲ್ಲಿ ಕೆಲಸಕ್ಕೆ ತೆರಳುವ ಮಹಿಳೆಯರಿಗೆ ವೈಯುಕ್ತಿಕ ಜೀವನ ಹಾಗೂ ಉದ್ಯೋಗ ಎರಡನ್ನು ನಿಭಾಯಿಸಿಕೊಂಡು ಹೋಗುವುದು ಕಷ್ಟದ ಕೆಲಸ. ಅದ್ರಲ್ಲಿ ಸಂಜೆ ಮನೆಗೆ ಬಂದ ಮೇಲು ಮನೆ ಕೆಲಸಗಳು ರಾಶಿ ರಾಶಿ ಬಿದ್ದಿರುತ್ತವೆ. ಕೆಲವರಂತೂ ಎಲ್ಲವನ್ನು ನಿಭಾಯಿಸಿಕೊಂಡು ಹೋಗಲು ಒದ್ದಾಡುತ್ತಿರುತ್ತಾರೆ. ಈ ಅಡುಗೆಮನೆಯ ಕೆಲಸಗಳಿಗೆ ಸುಖಾಸುಮ್ಮನೆ ಸಮಯ ವ್ಯರ್ಥ ಮಾಡುವ ಬದಲು ಕೆಲವು ಟಿಪ್ಸ್ ಗಳ ಮೂಲಕ ಕೆಲಸವನ್ನು ಸುಲಭವಾಗಿಸಬಹುದು. ಆದರೆ 2024 ರಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಕೆಲವು ಕಿಚನ್ ಹ್ಯಾಕ್ ಗಳು ಟ್ರೆಂಡ್ ಆಗಿವೆ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ ಈ ಹ್ಯಾಕ್ ಗಳನ್ನು ಗೃಹಿಣಿಯರಿಗೆ ಬಲು ಉಪಯೋಗದಾಯಕವಾಗಿದೆ.
- ಪುದೀನ ಮತ್ತು ಕೊತ್ತಂಬರಿ ಸೊಪ್ಪನ್ನು ಸಂಗ್ರಹಿಸಿಡುವ ವಿಧಾನ : ಪುದೀನ ಮತ್ತು ಕೊತ್ತಂಬರಿ ಸೊಪ್ಪನ್ನು ತಾಜಾವಾಗಿಡಲು ಬಯಸಿದರೆ ಗಾಳಿಯಾಡದ ಗಾಜಿನ ಕಂಟೇನರ್‌ನಲ್ಲಿ ಹಾಕಿ ರೆಫ್ರಿಜರೇಟರ್‌ನಲ್ಲಿ ಇಡಬಹುದು. ಈ ವಿಧಾನವನ್ನು ಅನುಸರಿಸಿದರೆ ಪುದೀನ ಮತ್ತು ಕೊತ್ತಂಬರಿ ಸೊಪ್ಪನ್ನು ಹೆಚ್ಚು ಸಮಯದವರೆಗೆ ತಾಜಾವಾಗಿರಿಸಬಹುದು.
- ಬೆಳ್ಳುಳ್ಳಿ ಸಿಪ್ಪೆಯನ್ನು ಸುಲಿಯುವುದು : ಬೆಳ್ಳುಳ್ಳಿಯ ಎಸಳನ್ನು ಒಂದು ಜಾರ್ ನಲ್ಲಿ ಹಾಕಿ ಬಲವಾಗಿ ಅಲ್ಲಾಡಿಸಿ. ಈ ವಿಧಾನದ ಮೂಲಕ ಬೆಳ್ಳುಳ್ಳಿಯ ಸಿಪ್ಪೆಗಳನ್ನು ಸುಲಿಯಬಹುದಾಗಿದ್ದು, ಈ ವರ್ಷ ಈ ಮಾಹಿತಿಯೂ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ.
- ಪನ್ನೀರ್ ತಾಜಾವಾಗಿಡುವ ವಿಧಾನ : ಮಾರುಕಟ್ಟೆಯಿಂದ ತಂದ ಪನ್ನೀರ್ ಉಳಿದಿದ್ದರೆ ಅದನ್ನು ತಾಜಾವಾಗಿಡಲು ಗಾಳಿಯಾಡದ ಡಬ್ಬದಲ್ಲಿ ನೀರು ತುಂಬಿಸಿ. ಉಳಿದ ಪನ್ನೀರನ್ನು ಅದರಲ್ಲಿ ಹಾಕಿಟ್ಟರೆ ದೀರ್ಘಕಾಲದವರೆಗೆ ತಾಜಾವಾಗಿರಿಸಬಹುದು.
- ತೆಳು ಗ್ರೇವಿ ದಪ್ಪವಾಗಿಸುವುದು : ಕೆಲವೊಮ್ಮೆ ಗ್ರೇವಿ ಮಾಡುವಾಗ ನೀರು ಹೆಚ್ಚಾಗಿ ತೆಳುವಾಗಿ ಬಿಡುತ್ತದೆ. ಈ ತೆಳು ಗ್ರೇವಿಯನ್ನು ದಪ್ಪವಾಗಿಸಲು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆದ ಈ ಕಿಚನ್ ಹ್ಯಾಕ್ ಅನ್ನು ಅನುಸರಿಸಬಹುದು. ಕಾರ್ನ್‌ಸ್ಟಾರ್ಚ್ ಅಥವಾ ಮ್ಯಾಶ್ ಆಲೂಗಡ್ಡೆಯನ್ನು ಬಳಸಿ ತೆಳು ಗ್ರೇವಿಯನ್ನು ದಪ್ಪವಾಗಿಸಬಹುದು.
- ಎಣ್ಣೆ ಚಿಮ್ಮುವುದನ್ನು ತಡೆಯುವುದು : ಪೂರಿ, ಪಕೋಡ ಅಥವಾ ಇತರ ವಸ್ತುಗಳನ್ನು ಕರಿಯುವಾಗ ಎಣ್ಣೆಗೆ ಒಂದು ಹನಿ ನೀರು ಬಿದ್ದರೆ ಎಣ್ಣೆ ಚಿಮ್ಮುತ್ತದೆ. ಇದನ್ನು ತಪ್ಪಿಸಲು ಪ್ಯಾನ್‌ನಲ್ಲಿ ಒಂದು ಚಿಟಿಕೆ ಉಪ್ಪು ಹಾಕಿ, ನೀರಿನಾಂಶವಿದ್ದರೂ ಕೂಡ ಎಣ್ಣೆ ಚಿಮ್ಮುವುದಿಲ್ಲ.
- ನಿಂಬೆಯಿಂದ ಹೆಚ್ಚು ರಸ ತೆಗೆಯುವುದು : ಶರಬತ್ ಅಥವಾ ಪಾನೀಯವನ್ನು ಮಾಡಲು ಹೊರಟಾಗ ಈ ನಿಂಬೆಯಿಂದ ರಸ ಹಿಂಡುವುದೇ ದೊಡ್ಡ ಕೆಲಸವಾಗುತ್ತದೆ. ಎಷ್ಟೇ ಹಿಂಡಿದರೂ ರಸ ಬರದೇ ಇದ್ದಾಗ ಈ ಸಿಂಪಲ್ ಟ್ರಿಕ್ಸನ್ನು ಅನುಸರಿಸಬಹುದು. ಹತ್ತು ಸೆಕೆಂಡುಗಳ ಕಾಲ ಮೈಕ್ರೋವೇವ್‌ನಲ್ಲಿ ನಿಂಬೆಯನ್ನು ಬಿಸಿ ಮಾಡಕೊಳ್ಳಿ. ಆ ಬಳಿಕ ನಿಂಬೆಯಿಂದ ರಸವನ್ನು ತೆಗೆಯಬಹುದು.
- ಅನ್ನ ಮಾಡುವಾಗ ತಳ ಹಿಡಿಯುವುದನ್ನು ತಪ್ಪಿಸುವುದು : ಅನ್ನವನ್ನು ಮಾಡುವಾಗ ಕೆಲವೊಮ್ಮೆ ನೀರು ಕಡಿಮೆಯಾಗಿ ತಳ ಹಿಡಿಯುತ್ತದೆ. ಅನ್ನ ಮಾಡುವಾಗ ಪಾತ್ರೆಯ ಕೆಳಭಾಗಕ್ಕೆ ಸ್ವಲ್ಪ ತುಪ್ಪ ಹಚ್ಚಿಕೊಳ್ಳಿ, ಹೀಗೆ ಮಾಡಿದ್ರೆ ಅನ್ನ ಪಾತ್ರೆಗೆ ಅಂಟಿಕೊಳ್ಳುವುದಿಲ್ಲ ಹಾಗೂ ತಳ ಹಿಡಿಯುವುದಿಲ್ಲ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ