AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀವು ನೈಸರ್ಗಿಕ ಬಣ್ಣಗಳೊಂದಿಗೆ ಹೋಳಿ ಆಡಲು ಬಯಸುತ್ತೀರಾ? ಇಲ್ಲಿದೆ ಮನೆಯಲ್ಲಿಯೇ ಇದನ್ನು ತಯಾರಿಸುವ ವಿಧಾನ

Holi 2022: ತಜ್ಞರ ಪ್ರಕಾರ, ಹೋಳಿ ಸಮಯದಲ್ಲಿ ಬಣ್ಣಗಳಿಂದ ಉಂಟಾಗುವ ಹಾನಿಯಿಂದ ಚರ್ಮವನ್ನು ರಕ್ಷಿಸಲು ನಾವು ನೈಸರ್ಗಿಕ ಬಣ್ಣಗಳನ್ನು ಬಳಸಬೇಕು. ನೀವು ಮನೆಯಲ್ಲಿ ಹೋಳಿ ಬಣ್ಣಗಳನ್ನು ಸಹ ಮಾಡಬಹುದು. ಅವುಗಳನ್ನು ಹೇಗೆ ಮಾಡುವುದು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ನೀವು ನೈಸರ್ಗಿಕ ಬಣ್ಣಗಳೊಂದಿಗೆ ಹೋಳಿ ಆಡಲು ಬಯಸುತ್ತೀರಾ? ಇಲ್ಲಿದೆ ಮನೆಯಲ್ಲಿಯೇ ಇದನ್ನು ತಯಾರಿಸುವ ವಿಧಾನ
ಸಾಂದರ್ಭಿಕ ಚಿತ್ರ
TV9 Web
| Updated By: preethi shettigar|

Updated on: Mar 14, 2022 | 6:45 PM

Share

ಹೋಳಿ, ಬಣ್ಣಗಳ ಹಬ್ಬ (Holi 2022) ಹತ್ತಿರದಲ್ಲಿದೆ. ಈ ಹಬ್ಬವನ್ನು ದೇಶದಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ದಿನ ಪರಸ್ಪರ ಬಣ್ಣಗಳನ್ನು ಹಚ್ಚಿಕೊಂಡು ಹೋಳಿ ಆಡಲಾಗುತ್ತದೆ. ಈ ಹಬ್ಬಕ್ಕೆ(Festival) ಮಾರುಕಟ್ಟೆಯಲ್ಲಿ ಸಿಂಥೆಟಿಕ್ ಬಣ್ಣಗಳು(Colour) ಲಭ್ಯವಿದ್ದು, ನಮ್ಮ ತ್ವಚೆ ಹಾಗೂ ಆರೋಗ್ಯಕ್ಕೆ ಇದು ಹಾನಿಕರ. ವಾಸ್ತವವಾಗಿ ಈ ಬಣ್ಣಗಳನ್ನು ಹಾನಿಕಾರಕ ರಾಸಾಯನಿಕಗಳಿಂದ ತಯಾರಿಸಲಾಗುತ್ತದೆ. ತಜ್ಞರ ಪ್ರಕಾರ, ಹೋಳಿ ಸಮಯದಲ್ಲಿ ಬಣ್ಣಗಳಿಂದ ಉಂಟಾಗುವ ಹಾನಿಯಿಂದ ಚರ್ಮವನ್ನು(Skin) ರಕ್ಷಿಸಲು ನಾವು ನೈಸರ್ಗಿಕ ಬಣ್ಣಗಳನ್ನು ಬಳಸಬೇಕು. ನೀವು ಮನೆಯಲ್ಲಿ ಹೋಳಿ ಬಣ್ಣಗಳನ್ನು ಸಹ ಮಾಡಬಹುದು. ಅವುಗಳನ್ನು ಹೇಗೆ ಮಾಡುವುದು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ಕೆಂಪು ಬಣ್ಣ

ಕೆಂಪು ಬಣ್ಣವನ್ನು ಮಾಡಲು, ಕೆಲವು ಕೆಂಪು ದಾಸವಾಳದ ಹೂವುಗಳನ್ನು ತೆಗೆದುಕೊಳ್ಳಿ. ಅವುಗಳನ್ನು ಒಣಗಿಸಿ. ಒಣಗಿದ ಹೂವುಗಳನ್ನು ರುಬ್ಬುವ ಮೂಲಕ ಉತ್ತಮವಾದ ಪುಡಿಯನ್ನು ಮಾಡಿಕೊಳ್ಳಿ. ಇದಕ್ಕಾಗಿ ನೀವು ಕೆಂಪು ಚಂದನವನ್ನು ಸಹ ಬಳಸಬಹುದು. ಪುಡಿಯ ಪ್ರಮಾಣವನ್ನು ಹೆಚ್ಚಿಸಲು, ಅಕ್ಕಿ ಹಿಟ್ಟನ್ನು ಸಮಾನ ಪ್ರಮಾಣದಲ್ಲಿ ಮಿಶ್ರಣ ಮಾಡಿ. ಇದಲ್ಲದೆ ದಾಳಿಂಬೆ ಸಿಪ್ಪೆಯನ್ನು ನೀರಿನಲ್ಲಿ ಕುದಿಸಿ ಕುಡಿ ಕೆಂಪು ಬಣ್ಣ ತಯಾರಿಸಬಹುದು.

ಹಳದಿ ಬಣ್ಣ

ಹಳದಿ ಬಣ್ಣವನ್ನು ಮಾಡಲು ಸಮಾನ ಪ್ರಮಾಣದಲ್ಲಿ ಅರಿಶಿಣ ಪುಡಿ ಮತ್ತು ಕಾಳುಗಳ ಹಿಟ್ಟು ತೆಗೆದುಕೊಳ್ಳಿ. ಅವುಗಳನ್ನು ಮಿಶ್ರಣ ಮಾಡುವ ಮೂಲಕ ಹಳದಿ ಬಣ್ಣ ಮಾಡಿ. ನೀವು ಮತ್ತಷ್ಟು ಬಣ್ಣದ ಪುಡಿಯನ್ನು ಮಾಡಲು ಬಯಸಿದರೆ, ಸೇವಂತಿ ಹೂವುಗಳನ್ನು ತೆಗೆದುಕೊಳ್ಳಿ. ಅದನ್ನು ಪುಡಿಮಾಡಿ ನೀರಿನಲ್ಲಿ ಕುದಿಸಿ ಬಣ್ಣವನ್ನು ಮಾಡಿಕೊಳ್ಳಬಹದು.

ಹಸಿರು ಬಣ್ಣ

ಹಸಿರು ಬಣ್ಣವನ್ನು ಮಾಡಲು ಮದರಂಗಿ ಎಲೆ ಬಳಸಿ. ಮದರಂಗ ಸೊಪ್ಪಿನ ಪುಡಿ. ಇದರ ಹೊರತಾಗಿ ಹಸಿರು ಬಣ್ಣವನ್ನು ಮಾಡಲು ನೀವು ಹಸಿರು ಎಲೆಗಳ ತರಕಾರಿಗಳನ್ನು ನೀರಿನಲ್ಲಿ ಕುದಿಸಿ ಹಸಿರು ಬಣ್ಣವನ್ನು ಮಾಡಬಹುದು.

ನೇರಳೆ ಬಣ್ಣ

ನೇರಳೆ ಬಣ್ಣವನ್ನು ಮಾಡಲು ನಿಮಗೆ ಬೀಟ್ರೂಟ್ ಅಗತ್ಯವಿದೆ. ಅವುಗಳನ್ನು ಕತ್ತರಿಸಿ. ಅದರ ನೀರನ್ನು ರಾತ್ರಿಯಿಡೀ ನೆನೆಸಿಡಿ ನಂತರ ಅದನ್ನು ಒಣಗಿಸಿ. ಈ ಬಣ್ಣಕ್ಕಾಗಿ ನೀವು ಈರುಳ್ಳಿ ಕೂಡ ಬಳಸಬಹುದು.

ನೀಲಿ ಬಣ್ಣ

ನೀಲಿ ಬಣ್ಣವನ್ನು ಮಾಡಲು ನಿಮಗೆ ನೀಲಿ ದಾಸವಾಳದ ಹೂವಿನ ದಳಗಳು ಬೇಕಾಗುತ್ತವೆ. ಈ ದಳಗಳನ್ನು ಒಣಗಿಸಿ. ನಂತರ ಅದನ್ನು ಪುಡಿ ಮಾಡಿ. ಬಳಿಕ ನೀವು ಅದನ್ನು ಅಕ್ಕಿ ಹಿಟ್ಟಿನಲ್ಲಿ ಮಿಶ್ರಣ ಮಾಡಿ. ಹೀಗೆ ಮಾಡಿದರೆ ನಿಮ್ಮ ನೀಲಿ ಬಣ್ಣದ ಹೋಳಿ ಬಣ್ಣ ಸಿದ್ಧವಾಗುತ್ತದೆ. ಇನ್ನೂ ತಿಳಿ ಬಣ್ಣಕ್ಕಾಗಿ ನೀವು ಜಕರಂಡಾ ಹೂವುಗಳನ್ನು ಬಳಸಬಹುದು. ಇದಕ್ಕೆ ಈ ಹೂಗಳನ್ನು ಒಣಗಿಸಿ ಪುಡಿ ಮಾಡಿಕೊಳ್ಳಿ.

ಇದನ್ನೂ ಓದಿ: ಹೋಳಿ ಬಣ್ಣ ಆಡುವ ಮುನ್ನ ನಿಮ್ಮ ಮುಖದ ಕಾಂತಿ ಬಗ್ಗೆ ಎಚ್ಚರಿಕೆ ವಹಿಸಿ

ಹೋಳಿ ಹಬ್ಬವನ್ನು ಆಚರಣೆ ಮಾಡುವ ಉದ್ದೇಶ ಏನು ಗೊತ್ತಾ ?