ಖಿನ್ನತೆಯ ಸಮಸ್ಯೆಯಿಂದ ಬಳಲುತ್ತಿರುವ ಯುವಕರು ಹೃದ್ರೋಗದ ಅಪಾಯವನ್ನು ಹೊಂದಿರಬಹುದು. ಹೊಸ ಅಧ್ಯಯನದಲ್ಲಿ ಈ ವಿಷಯ ಬೆಳಕಿಗೆ ಬಂದಿದೆ. ಖಿನ್ನತೆ ಮತ್ತು ಹತಾಶೆಯಿಂದ ಬಳಲುತ್ತಿರುವ ಯುವಕರಲ್ಲಿ ಹೃದಯದ ಆರೋಗ್ಯವು ಉತ್ತಮವಾಗಿರುವುದಿಲ್ಲ ಎಂದು ಅಧ್ಯಯನವು ಹೇಳಿದೆ. ಅಧ್ಯಯನದ ಪ್ರಕಾರ, ಖಿನ್ನತೆಯಿಂದ ಬಳಲುತ್ತಿರುವ ಅಥವಾ ಮಾನಸಿಕ ಅಸ್ವಸ್ಥತೆ ಹೊಂದಿರುವ ಯುವಕರು ಹೃದಯಾಘಾತ, ಪಾರ್ಶ್ವವಾಯು ಮತ್ತು ಇತರ ಹೃದಯ ಸಂಬಂಧಿ ಕಾಯಿಲೆಗಳಿಗೆ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ.
ಜಾನ್ಸ್ ಹಾಪ್ಕಿನ್ಸ್ ಮೆಡಿಸಿನ್‌ನ ಸಂಶೋಧಕರು ತಮ್ಮ ಅಧ್ಯಯನದಲ್ಲಿ 18 ರಿಂದ 49 ವರ್ಷದೊಳಗಿನ 5 ಲಕ್ಷಕ್ಕೂ ಹೆಚ್ಚು ಜನರ ಡೇಟಾವನ್ನು ವಿಶ್ಲೇಷಿಸಿದ್ದಾರೆ. ಈ ಅಧ್ಯಯನವನ್ನು ಜರ್ನಲ್ ಆಫ್ ದಿ ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ನಲ್ಲಿ ಪ್ರಕಟಿಸಲಾಗಿದೆ.
ಯುವ ಮತ್ತು ಮಧ್ಯವಯಸ್ಕರಲ್ಲಿ ಖಿನ್ನತೆ ಮತ್ತು ಹೃದ್ರೋಗದ ನಡುವೆ ಸಂಬಂಧವಿದೆ ಎಂದು ಅಧ್ಯಯನದ ಫಲಿತಾಂಶಗಳು ತೋರಿಸುತ್ತವೆ.
ಈ ಎರಡು ಪರಿಸ್ಥಿತಿಗಳ ನಡುವಿನ ಸಂಬಂಧವು ಪ್ರೌಢಾವಸ್ಥೆಯಲ್ಲಿಯೇ ಪ್ರಾರಂಭವಾಗಬಹುದು ಎಂದು ಅಧ್ಯಯನವು ಸೂಚಿಸಿದೆ.
ಮತ್ತಷ್ಟು ಓದಿ: Mental Health: ನಿಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಇಲ್ಲಿವೆ ಉತ್ತಮ ಸಲಹೆ
ಖಿನ್ನತೆ ಮತ್ತು ಹೃದ್ರೋಗದ ನಡುವಿನ ಸಂಬಂಧವೇನು?
ಪಿಟಿಐ ವರದಿಯ ಪ್ರಕಾರ, ನೀವು ಒತ್ತಡದಲ್ಲಿರುವಾಗ ಅಥವಾ ಆತಂಕ ಮತ್ತು ಖಿನ್ನತೆಯಿಂದ ಬಳಲುತ್ತಿರುವಾಗ, ನಿಮ್ಮೊಳಗೆ ಭಾವನೆಗಳು ಬದಲಾಗುತ್ತಿರುತ್ತದೆ, ಇದರಿಂದಾಗಿ ನಿಮ್ಮ ಹೃದಯ ಬಡಿತ ಮತ್ತು ರಕ್ತದೊತ್ತಡ ಹೆಚ್ಚಾಗುತ್ತದೆ.
ಈ ಅಧ್ಯಯನದ ಲೇಖಕಿ ಗರಿಮಾ ಶರ್ಮಾ, ಹತಾಶ ಭಾವನೆಯಿಂದಾಗಿ ನೀವು ಧೂಮಪಾನ, ಮದ್ಯಪಾನ, ಕಡಿಮೆ ನಿದ್ರೆ ಮತ್ತು ದೈಹಿಕವಾಗಿ ನಿಷ್ಕ್ರಿಯತೆಯಂತಹ ಕೆಟ್ಟ ಅಭ್ಯಾಸಗಳಿಗೆ ಬಲಿಯಾಗಬಹುದು, ಈ ಎಲ್ಲಾ ಅಭ್ಯಾಸಗಳು ನಿಮ್ಮ ಹೃದಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎಂದು ಹೇಳಲಾಗಿದೆ.
ಯಾವೆಲ್ಲಾ ಅಂಶಗಳು ಪರಿಣಾಮ ಬೀರುತ್ತವೆ?
ಅಧ್ಯಯನದ ಪ್ರಕಾರ, ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್, ಅಧಿಕ ತೂಕ ಅಥವಾ ಬೊಜ್ಜು, ಧೂಮಪಾನ, ಮಧುಮೇಹ, ಕಳಪೆ ಜೀವನಶೈಲಿ ಮತ್ತು ಆಹಾರವು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ಈ ಎಲ್ಲಾ ಅಂಶಗಳು ನಿಮ್ಮ ಹೃದಯದ ಆರೋಗ್ಯದ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ಪರಿಣಾಮ ಬೀರುತ್ತವೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ