Yummy Salad Recipe: ಬೇಸಿಗೆಯಲ್ಲಿ ನಿಮ್ಮ ದೇಹದ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿದೆ ರಾಜ್ಮಾ ಚಾವಲ್ ಸಲಾಡ್
ಈ ಸುಡು ಬೇಸಿಗೆಯಲ್ಲಿ ಆರೋಗ್ಯಕರ ಹಾಗೂ ಹಗುರವಾದ ಪಾಕವಿಧಾನವಾದ ಸಲಾಡ್‌ಗಳಲ್ಲಿ ವಿಶೇಷವಾದುದನ್ನು ಹುಡುಕುತ್ತಿದ್ದರೆ, ಈ ರಾಜ್ಮಾ ಸಲಾಡ್‌ನ್ನು ಒಮ್ಮೆ ಟ್ರೈ ಮಾಡಿ.
ಆರೋಗ್ಯಕರವಾದ ಹಾಗೂ ಹಗುರವಾಗಿರುವ ಏನಾನ್ನಾದರೂ ತಿನ್ನಬೇಕು ಅಂತಿದ್ದರೆ ಜನರು ಸಲಾಡ್ ಮೊರೆ ಹೋಗುತ್ತಾರೆ. ಇದು ತರಕಾರಿ, ಸೊಪ್ಪು ಹಣ್ಣು, ಕಾಳುಗಳಿಂದ ಕೂಡಿದ್ದು, ಆರೋಗ್ಯಕ್ಕೂ ಕೂಡಾ ಉತ್ತಮವಾಗಿರುತ್ತದೆ. ಸಲಾಡ್‌ಗಳಲ್ಲಿ ಹಲವು ಬಗೆಗಳಿವೆ. ಅದರಲ್ಲಿ ರಾಜ್ಮಾ ಸಲಾಡ್ ಕೂಡಾ ಒಂದು. ಕೆಂಪು ಕಿಡ್ನಿ ಬೀನ್ಸ್ (ರಾಜ್ಮಾ) ಪ್ರೋಟೀನ್ ಮತ್ತು ಪೊಟ್ಯಾಸಿಯಮ್‌ನ ಸಮೃದ್ಧ ಮೂಲವಾಗಿದೆ ಹಾಗೂ ಇದು ಕಡಿಮೆ ಗ್ಲೆಸೆಮಿಕ್ ಸೂಚಿಯನ್ನು ಹೊಂದಿದೆ. ಪೌಷ್ಟಿಕ ತಜ್ಞೆ ಪೂಜಾ ಮಖಿಜಾ ಅವರು ತಮ್ಮ ಇನ್ಟಾಗ್ರಾಮ್ ಖಾತೆಯಲ್ಲಿ ರಾಜ್ಮಾ ಸಲಾಡ್ ಪಾಕ ವಿಧಾನದ ಬಗ್ಗೆ ತಿಳಿಸಿಕೊಟ್ಟಿದ್ದಾರೆ.
ಈ ಸಲಾಡ್ ಮಾಡಲು ನಿಮಗೆ ಬೇಯಿಸಿದ ರಾಜ್ಮಾ ಬೇಕಾಗುತ್ತದೆ. ಅದರೊಂದಿಗೆ ಕತ್ತರಿಸಿದ ಟೊಮೆಟೊ, ಹಸಿರು ಕ್ಯಾಪ್ಸಿಕಂ, ಬೇಯಿಸಿದ ಜೋಳ, ಈರುಳ್ಳಿ, ಕೆಂಪು ಕ್ಯಾಪ್ಸಿಕಮ್, ಕೊತ್ತಂಬರಿ ಸೊಪ್ಪು, ಕೆಂಪು ಜಲಪೆನೊ ಮೆಣಸಿನಕಾಯಿ, ಬ್ರೌನ್ ರೈಸ್ ಅಥವಾ ಬಿಳಿ ಅಕ್ಕಿ ಸೇರಿಸಬೇಕು. ಹಾಗೂ ಡ್ರೆಸ್ಸಿಂಗ್‌ಗಾಗಿ ನಿಂಬೆ ರಸ, ಜೇನು ತುಪ್ಪ, ಜೀರಿಗೆ ಪುಡಿ, ತುರಿದ ಬೆಳ್ಳುಳ್ಳಿ, ಕೆಂಪು ಮೆಣಸು, ಆಮ್ಚೂರ್ ಪುಡಿ, ಉಪ್ಪು ಬಳಸಬಹುದು. ಈ ಎಲ್ಲಾ ಪದಾರ್ಥಗಳನ್ನು ಬಳಸಿ ರಾಜ್ಮಾ ಸಲಾಡ್‌ನ್ನು ನಾವು ಇತರ ತರಕಾರಿ ಸಲಾಡ್‌ಗಳಂತೆ ಅದೇ ವಿಧಾನದಲ್ಲಿ ಸುಲಭವಾಗಿ ತಯಾರಿಸಬಹುದು.
ಇದನ್ನೂ ಓದಿ: Quick and Easy Recipe: ಕೇವಲ ಮೂರು ಪದಾರ್ಥ ಬಳಸಿ ತಯಾರಿಸುವ ಈ ಕ್ವಿಕ್ ರೆಸಿಪಿಯನ್ನು ನೀವೂ ಪ್ರಯತ್ನಿಸಿ
ಕೇವಲ ಸಲಾಡ್ ಮಾತ್ರವಲ್ಲದೆ ಪೂಜಾ ಮಖಿಜಾ ಅವರು ಇತರ ಆರೋಗ್ಯಕರ ಭಕ್ಷ್ಯಗಳ ವೀಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಪೂಜಾ ಅವರು ಉತ್ತಮವಾದ ಪ್ರೋಬಯೋಟಿಕ್ ಉಪ್ಪಿನಕಾಯಿಯನ್ನು ತಯಾರಿಸುವ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಈ ಉಪ್ಪಿನ ಕಾಯಿಯನ್ನು ತಯಾರಿಸಲು ನೀವು ಒಂದು ಬಟ್ಟಲಿನಲ್ಲಿ ಕತ್ತರಿಸಿದ ಹಸಿ ಈರುಳ್ಳಿಯನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಆಪಲ್ ಸ್ಯಡರ್ ವಿನೆಗರ್ ಮತ್ತು ಬಿಸಿ ನೀರನ್ನು ಸುರಿಯಬೇಕು. ನಂತರ ಹಸಿ ಬೀಟ್ರೂಟ್ ಮತ್ತು ಉಪ್ಪನ್ನು ಸೇರಿಸಿ ಕೋಣೆ ಉಷ್ಣಾಂಶದಲ್ಲಿ 24 ರಿಂದ 36 ಗಂಟೆಗಳ ಕಾಲ ಇರಿಸಿದರೆ ಪ್ರೋಬಯೋಟಿಕ್ ಉಪ್ಪಿನಕಾಯಿ ಸಿದ್ಧವಾಗಿರುತ್ತದೆ.