AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Transgender World : ‘ಲತ್ ಹಿಡೀಬೇಕು, ಮನ್ಸೂರರಿಗೆ ಹಿಡಿದ ಶಿವನ ಚಟದಂತೆ, ಅಂಬೇಡ್ಕರರಿಗೆ ಹಿಡಿದ ಸಾಮಾಜಿಕ ನ್ಯಾಯದ ಚಟದಂತೆ’

Music and Talent : ‘ಆಗ ನನಗೆ 22 ವರ್ಷ. ಸಂಗೀತ ಕಲಿಯಕ್ಕೆ ಮುಖ್ಯವಾಗಿ ಏನು ಬೇಕು ಅಂತ ಯೋಚಿಸ್ತಾ ಇದ್ದೆ. ಎಲ್ರೂ ನಾನು ಹಾಡಿದ್ದನ್ನು ಕೇಳಿ “ಆಹಾ ಏನ್‌ ಟ್ಯಾಲೆಂಟು” ಅನ್ನುವಾಗ ನನಗೆ ಮೈ ಉರಿಯೋದು. ಏನು ಟ್ಯಾಲೆಂಟು? ದಿನಕ್ಕೆ ಹತ್‌ ಹತ್‌ ಗಂಟೆ ಪ್ರಾಕ್ಟೀಸ್‌ ಮಾಡಿದ್ರೆ ಯಾರ್‌ ಬೇಕಾದರೂ ಚೆನ್ನಾಗಿ ಹಾಡಬಹುದು.’ ರೂಮಿ ಹರೀಶ್

Transgender World : ‘ಲತ್ ಹಿಡೀಬೇಕು, ಮನ್ಸೂರರಿಗೆ ಹಿಡಿದ ಶಿವನ ಚಟದಂತೆ, ಅಂಬೇಡ್ಕರರಿಗೆ ಹಿಡಿದ ಸಾಮಾಜಿಕ ನ್ಯಾಯದ ಚಟದಂತೆ’
ಕರ್ನಾಟಕದ ಮೊದಲ ಮಹಿಳಾ ಶಿಲ್ಪಿ ಕನಕ ಮೂರ್ತಿ ಮತ್ತವರ ಕಲಾಕೃತಿಗಳು
ಶ್ರೀದೇವಿ ಕಳಸದ
|

Updated on:Dec 07, 2021 | 12:23 PM

Share

Rumi Column – ರೂಮಿ ಕಾಲಂ : ಅಮ್ಮನ ಚಿತೆ ಹತ್ತಿಸುವಾಗ ನಂಗೆ ಉಸಿರಾಡಕ್ಕೂ ಆಗ್ತಿರ್ಲಿಲ್ಲ. ಪಿಪಿಟಿ ಕಿಟ್‌ನಲ್ಲಿ ಎಲ್ಲಾ ಮುಚ್ಕೊಂಡು ಅಮ್ಮ ಸುಡುವುದನ್ನು ನೋಡಿದ ನನಗೆ ನೆನಪಾಗಿದ್ದು “ಮೊಹೊಬತ್‌ ಕರ್ನೆವಾಲೆ ಕಮ್‌ನ ಹೋಂಗೆ ತೇರೀ ಮೆಹೆಫಿಲ್‌ ಮೆ ಲೇಕಿನ ಹಂ ನಾಹೋಂಗೆ” ಅಂದ್ರೆ, “ಪ್ರೀತೀ ಮಾಡೋವ್ರ ಸಂಖ್ಯೆ ಕಡಿಮೆ ಆಗಲ್ಲ, ಆದ್ರೆ ನಿನ್ನ ಅಂಗಳದಲ್ಲಿ ನಾನು ಇರೋದಿಲ್ಲ.” ಈಗ ನನ್ನ ಅಂಗಳದಲ್ಲಿ ಕಂಕು ಇಲ್ಲ, ವಾದಿರಾಜ್‌ ಮಾಮಾ ಇಲ್ಲ. ರಾಮರಾಯರು ಇಲ್ಲ. ಆದ್ರೆ ಅವ್ರ ಲತ್‌ ಇದೆ. ವಾದಿರಾಜ್‌ ಮಾಮಾನ ಆಯಾಮಗಳ ಶ್ರಮ ನನಗೆ ನನ್ನ ಜೀವನವನ್ನೇ ಬದಲಿಸಿಬಿಡ್ತು. ಅವರು ಲೈನ್‌ಗಳಲ್ಲಿ ಆಯಾಮಗಳನ್ನು ಹುಡುಕುವ ಲತ್ತಿಗೆ ನನ್ನ ಸ್ವರಗಳಲ್ಲಿ ಆಯಾಮಗಳನ್ನು ಹುಡುಕಲು ಕಲಿಸಿದರು. ಅಂದ್ರೆ ಒಂದು ಸ್ವರ ಹಚ್ಚಿದ್ರೆ ಅದರ ಆವಾಜಿ಼ನಲ್ಲಿ ಆಯಾಮಗಳನ್ನು ನೋಡಬೇಕು. ಅಂದ್ರೆ ಸುನಿಲ್‌ ಹೇಳೋ ಹಾಗೆ ನಮ್ಮ ಸಂವಿಧಾನದಲ್ಲಿರುವ ಆಯಾಮಗಳು. ಆಯಾಮಗಳು ಯಾವುದನ್ನೂ ಎಕ್ಸಕ್ಲೂಡ್‌ ಮಾಡದೇ ಇರೋದು. ಅದೆಷ್ಟೇ ಗ್ರೋಟೆಸ್ಕ್‌ ಆಗಲಿ, ಅಂದ್ರೆ ವಿರೂಪವಾಗಿರಲಿ… ಆವಾಜ಼ಿನಲ್ಲಿ ವಿರೂಪ ಒಂದು ರಚನೆ ಕಟ್ಟುತ್ತದೆ ಅಂತ ಮೇಷ್ಟ್ರು ಹೇಳ್ತಿದ್ರು. ರೂಮಿ ಹರೀಶ್

(ಅಲೆ : 5)

ನಂಗೆ ಬರೆಯುವ ಅಭ್ಯಾಸ ಮಾಡಿಸಿ, ಬರೆಯಕ್ಕೆ ಬರುತ್ತೆ ಬರೀ ಅಂತ ಫಸ್ಟ್‌ ಹೇಳಿದ್ದು ಪ್ರತಿಭಾ ನಂದಕುಮಾರ್.  ಅದಕ್ಕೆ ಅವರಿಗೆ ನಾನು ಯಾವಾಗಲೂ ಋಣಿ. ಓದೋ ಕಾಲದಲ್ಲಿ ನಂಗೆ ಸರಿಯಾಗಿ ಓದಕ್ಕೇ ಆಗಿಲ್ಲ. ಯಾವಾಗಲೂ ಸಂಗೀತ ಪ್ರಾಕ್ಟೀಸ್‌ ಮಾಡ್ಬೇಕು ಅಂತ ಕಂಕು ಆರ್ಡರ್‌ ಇತ್ತು. ಸಾಹಿತ್ಯ ಕಾವ್ಯ ಅಂತ ಓದಕ್ಕೆ ಟೈಮೇ ಇಲ್ಲ. ಅದರ ಮೇಲೆ ಕಾಲೇಜಿನಲ್ಲಿ ಇಂಗ್ಲೀಷ ಸಾಹಿತ್ಯವನ್ನ ಬೇರೆ ಓದಿದೆ. ಅದು ನಾನಲ್ಲ ಆಯ್ಕೆ ಮಾಡಿದ್ದು. ಕಂಕುನೇ ಡಿಸೈಡ್‌ ಮಾಡಿದ್ದು ನಾನು ಏನ್‌ ಓದಿದ್ರೆ ನಂಗೆ ಸಂಗೀತದಿಂದ ಡಿಸ್ಟ್ರಾಕ್ಟ್‌ ಆಗಲ್ಲ ಅಂತ. ಈ ಬರಿಯೋ ಹುಚ್ಚು ಬೆಳೆಸಿಕೊಂಡು ಚಿಕ್ಕ ವಯಸ್ಸಿನಲ್ಲಿ ಅಷ್ಟೂ ಇಷ್ಟೂ ಬರೀತಿದ್ದೆ. ಹಾಗೆ ನಾನು ಮೊದಲು ಬರೆದಿದ್ದನ್ನ ಇವತ್ತು ನೆನಪಿಸಿಕೊಂಡು ಅದರ ಬಗ್ಗೆ ಬರೀತಿದ್ದೀನಿ.

ಆಗ ನನಗೆ 22 ವರ್ಷ. ಸಂಗೀತ ಕಲಿಯಕ್ಕೆ ಮುಖ್ಯವಾಗಿ ಏನು ಬೇಕು ಅಂತ ಯೋಚಿಸ್ತಾ ಇದ್ದೆ. ಎಲ್ರೂ ನಾನು ಹಾಡಿದ್ದನ್ನು ಕೇಳಿ “ಆಹಾ ಏನ್‌ ಟ್ಯಾಲೆಂಟು” ಅನ್ನುವಾಗ ನನಗೆ ಮೈ ಉರಿಯೋದು. ಏನು ಟ್ಯಾಲೆಂಟು? ದಿನಕ್ಕೆ ಹತ್‌ ಹತ್‌ ಗಂಟೆ ಪ್ರಾಕ್ಟೀಸ್‌ ಮಾಡಿದ್ರೆ ಯಾರ್‌ ಬೇಕಾದರೂ ಚೆನ್ನಾಗಿ ಹಾಡಬಹುದು. ಟ್ಯಾಲೆಂಟು ಅಂದ್ರೆ ಅಷ್ಟು ಪ್ರಾಕ್ಟೀಸ್‌ನ ಅವಶ್ಯಕತೆ ಬೇಕಿಲ್ಲ. ಅದು ನಾನು ನಿಜವಾಗಿ ನೋಡಿದ್ದು ನಮ್ ದೀಪುನಲ್ಲಿ. ದೀಪು ಕೇರಳದಿಂದ ಬಂದ ಟ್ರಾನ್ಸ್‌ ಮ್ಯಾನ್.‌ ಅವನು ಯಾವ ಹಾಡನ್ನಾದರೂ ಬಹಳ ಜೀವಂತವಾಗಿ ಬಹಳ ಅಮೋಘವಾಗಿ ಹಾಡ್ತಿದ್ದ. ನನ್‌ ಚಿಕ್ಕಮ್ಮನ ಮಗಳು ಶ್ರೀವಿದ್ಯಾ ಅವಳು 3 ವರ್ಷ ಇರುವಾಗ ಅವಳಿಗೆ ಇಂಥ ರಾಗ ಅಂತ ಗೊತ್ತಿಲ್ಲ ಆದ್ರೇ ಆರಾಮ್ಸೆ ಆಲಾಪ ಮಾಡ್ತಿದ್ಲು. ಅದು ಟ್ಯಾಲೆಂಟು. ನನಗೆ ಸ್ವರಗಳನ್ನ ಅರ್ಥ ಮಾಡ್ಕೊಳಕ್ಕೇ 1 ವರ್ಷ ಹಿಡೀತು.  ನಂಗೇನು ಸಂಗೀತ ಇಷ್ಟ ಅಂತ ಕಲಿತಿದ್ದೂ ಅಲ್ಲ. ಕಂಕು ಆರ್ಡರ್‌ “ಸಂಗೀತ ಚಿಕ್ಕ ವಯಸ್ಸಿನಿಂದಲೇ ಕಲಿತು 22 ವರ್ಷಕ್ಕೆ ಸುಬ್ಬಲಕ್ಷ್ಮಿ ಥರ ಹಾಡಿ ಹೆಸರು ಮಾಡಬೇಕು” ಅಂತ.

ಹಾಗಾದ್ರೆ ಸಂಗೀತ ಕಲಿಯಕ್ಕೆ ಮುಖ್ಯ ಟ್ಯಾಲೆಂಟಂತೂ ಅಲ್ಲ. ಶ್ರಮ, ಸಹನೆ ಮತ್ತೆ ಹಾಡಿದ್ದನ್ನೇ ಅದೆಷ್ಟು ಸಾರಿ ಹಾಡಿದ್ರೂ ಬೇಜಾರಾಗ್ಬಾರ್ದು. ಇಲ್ಲಿ ಟ್ರೇನ್‌ ಆಗ್ಬೇಕಿರೋದು ನಮ್ಮ ಕಿವಿ, ಕಣ್ಣು ಮತ್ತು ಆವಾಜ಼ು. ಕಿವಿ– ನಮ್ಮ ಆವಾಜ಼ಿನ ಪರಿಚಯ ನಮಗೆ ಬೆಳಿಗ್ಗೆ ಎದ್ದು ಹಲ್ಲುಜ್ಜೋದು ಎಷ್ಟು ಮಾಮೂಲೋ ಅಷ್ಟು ಮಾಮೂಲಾಗಬೇಕು. ಕಣ್ಣು– ನಮ್ಮ ಬಾಯಲ್ಲಿ ಬರುವ ಪ್ರತೀ ಅಕ್ಷರದ ರೂಪ ಆವಾಜ಼ಿನ  ರೂಪ ಮತ್ತು ಅದರ ಅಳತೆ ಕಣ್ಣಿಗೆ ಕಾಣಬೇಕು. ಆವಾಜ಼ು– ಅದು ನಮ್ಮದೇ ಅಂದ್ರೆ ನಂ ಮನಸ್ಸು, ಹೃದಯ, ಚರ್ಮ ಭಾವನೆಗಳ ರಿಫ್ಲೆಕ್ಷನ್‌ ಆಗಿರಬೇಕು, ಬೇಸಿಕಲಿ ನಮ್ಮದೇ ಪ್ರತಿರೂಪ ನಾವು ಆಗಿರ್ಬೇಕು. ಇದು ರಾಮರಾಯರು ನಮ್ ಮೇಷ್ಟ್ರು ಕಾಲ ಸರೀತಾ ಸರೀತಾ ಹೇಳ್ಕೊಟ್ಟಿದ್ದು. ಇಂಥಹ ಪ್ರಾಕ್ಟೀಸ್‌ ಜೀವನ ಪರ್ಯಂತ ಮಾಡೋಂತದ್ದು .

ಮನೇಲಿ ಸಂಗೀತ ಶುರು ಮಾಡಿದ್ದು ಮದುವೆ ಆಗುವಾಗ ನೋಡಕ್ಕೆ ಬರುವ ಗಂಡುಗಳ ಮುಂದೆ ಹಾಡಿ ಮದುವೆಗೆ ಒಳ್ಳೆ ಹೆಣ್ಣು ಎಂದು ಅನ್ನಿಸಿಕೊಳ್ಳಕ್ಕೆ. ಆದರೆ ನಂಗೆ ಸಿಕ್ಕ ಮೇಷ್ಟ್ರು ರಾಮರಾಯರು ನಂಗೆ ಬೇರೇ ಥರದ ಪ್ರೇಮವನ್ನೇ ಹಚ್ಚಿದ್ರು. ಎಷ್ಟೇ ಬೋರ್‌ ಆದ್ರೂ ಕಿವಿಯಲ್ಲಿ ಆ ಆವಾಜ಼ಿನ ಪರಿಚಯದ ಸೋಂಕು ಮತ್ತೆ ಮತ್ತೆ ಕಣ್ಣಲ್ಲಿ ಕಂಡು, ಆವಾಜ಼ಿನಲ್ಲಿ ಸ್ಪರ್ಶ ಪಡೆಯುವ ಗುಂಗು… ಇದು ಇವತ್ತಿಗೂ ಸರಿ ಹೋಗಿಲ್ಲ. ಈಗಲೂ ಅಂದ್ರೆ ಮೇಷ್ಟ್ರು ತೀರ್ಕೊಂಡು 22 ವರ್ಷ ಆಯ್ತು. ಪ್ರತೀ ದಿವಸ ತಾನ್ಪೂರ ಶರು ಮಾಡಿದ ತಕ್ಷಣ ಇದೇ…

ರಾಮರಾಯರು ಒಂದ್‌ ಮಾತು ಹೇಳ್ತಿದ್ರು, ಸಂಗೀತದ ಲತ್‌ ಹಿಡಿಬೇಕು ಅಂತ. ಲತ್‌ ಅಂದ್ರೆ ಅಡಿಕ್ಷನ್. ಅಂದ್ರೆ ಚಟ. ಚಟ ಅಂದ ತಕ್ಷಣ ಕೆಟ್ಟ ಚಟದ ಬಗ್ಗೆ ಮಾತ್ರ ಮಾತಾಡ್ತಾರೆ. ಇಂತಹ ಚಟಗಳು ಅಪರೂಪ. ಮಲ್ಲಿಕಾರ್ಜುನ ಮನ್ಸೂರರಿಗೆ ಶಿವನ ಚಟವಿದ್ದ ಹಾಗೆ, ಅಂಬೇಡ್ಕರರಿಗೆ ಸಾಮಾಜಿಕ ನ್ಯಾಯದ ಚಟವಿದ್ದ ಹಾಗೆ. ಕಂಕುಗೆ ವಾದಿರಾಜ್‌ ಮಾಮ ಕಲ್ಲಿನ ಲತ್‌ ಹಿಡಿಸಿದ ಹಾಗೆ. ನಂ ಸರ್ಸಿಮಾಗೆ ಬುದ್ಧನ ಥರ ಪ್ರೀತಿ ಹಂಚುವ ಹಾಗೆ. ಇಂಥ ಸ್ವರಗಳು ಹಾಡಬೇಕು… ಇಂಥ ಪದಗಳು ಹಾಡಬೇಕು… ಬದುಕಬೇಕು.

Rumi Column Mallikarjun Mansur Ramrao Naik Gangubai Hangal

ಹಿಂದೂಸ್ತಾನಿ ಮೇರುಕಲಾವಿದರಾದ ಪಂ. ಮಲ್ಲಿಕಾರ್ಜುನ ಮನ್ಸೂರ್, ಪಂ ರಾಮರಾವ್ ನಾಯಕ್ ಮತ್ತು ಡಾ. ಗಂಗೂಬಾಯಿ ಹಾನಗಲ್

ಅಮ್ಮನ ಚಿತೆ ಹತ್ತಿಸುವಾಗ ನಂಗೆ ಉಸಿರಾಡಕ್ಕೂ ಆಗ್ತಿರ್ಲಿಲ್ಲ. ಪಿಪಿಟಿ ಕಿಟ್‌ನಲ್ಲಿ ಎಲ್ಲಾ ಮುಚ್ಕೊಂಡು ಅಮ್ಮ ಸುಡುವುದನ್ನು ನೋಡಿದ ನನಗೆ ನೆನಪಾಗಿದ್ದು “ಮೊಹೊಬತ್‌ ಕರ್ನೆವಾಲೆ ಕಮ್‌ನ ಹೋಂಗೆ ತೇರೀ ಮೆಹೆಫಿಲ್‌ ಮೆ ಲೇಕಿನ ಹಂ ನಾಹೋಂಗೆ” ಅಂದ್ರೆ, “ಪ್ರೀತೀ ಮಾಡೋವ್ರ ಸಂಖ್ಯೆ ಕಡಿಮೆ ಆಗಲ್ಲ, ಆದ್ರೆ ನಿನ್ನ ಅಂಗಳದಲ್ಲಿ ನಾನು ಇರೋದಿಲ್ಲ.” ಈಗ ನನ್ನ ಅಂಗಳದಲ್ಲಿ ಕಂಕು ಇಲ್ಲ, ವಾದಿರಾಜ್‌ ಮಾಮಾ ಇಲ್ಲ. ರಾಮರಾಯರು ಇಲ್ಲ. ಆದ್ರೆ ಅವ್ರ ಲತ್‌ ಇದೆ. ವಾದಿರಾಜ್‌ ಮಾಮಾನ ಆಯಾಮಗಳ ಶ್ರಮ ನನಗೆ ನನ್ನ ಜೀವನವನ್ನೇ ಬದಲಿಸಿಬಿಡ್ತು. ಅವರು ಲೈನ್‌ಗಳಲ್ಲಿ ಆಯಾಮಗಳನ್ನು ಹುಡುಕುವ ಲತ್ತಿಗೆ ನನ್ನ ಸ್ವರಗಳಲ್ಲಿ ಆಯಾಮಗಳನ್ನು ಹುಡುಕಲು ಕಲಿಸಿದರು. ಅಂದ್ರೆ ಒಂದು ಸ್ವರ ಹಚ್ಚಿದ್ರೆ ಅದರ ಆವಾಜಿ಼ನಲ್ಲಿ ಆಯಾಮಗಳನ್ನು ನೋಡಬೇಕು. ಅಂದ್ರೆ ಸುನಿಲ್‌ ಹೇಳೋ ಹಾಗೆ ನಮ್ಮ ಸಂವಿಧಾನದಲ್ಲಿರುವ ಆಯಾಮಗಳು. ಆಯಾಮಗಳು ಯಾವುದನ್ನೂ ಎಕ್ಸಕ್ಲೂಡ್‌ ಮಾಡದೇ ಇರೋದು. ಅದೆಷ್ಟೇ ಗ್ರೋಟೆಸ್ಕ್‌ ಆಗಲಿ, ಅಂದ್ರೆ ವಿರೂಪವಾಗಿರಲಿ… ಆವಾಜ಼ಿನಲ್ಲಿ ವಿರೂಪ ಒಂದು ರಚನೆ ಕಟ್ಟುತ್ತದೆ ಅಂತ ಮೇಷ್ಟ್ರು ಹೇಳ್ತಿದ್ರು.

ಒಬ್ಬೊಬ್ರೂ ನನ್ನ ಜೀವನ ಬಿಟ್ಟು ಹೋದಾಗ ನನಗೆ ನನ್ನ ಓದು ಕಡಿದು ಹೋಗಿದೆ. ನಾನು ಜೀವಂತ ಪುಸ್ತಕಗಳನ್ನು ಓದುತ್ತಿದ್ದೆ. ಫಮೀಲ, ಕಾಜೋಲ್‌, ತುಳಸಿ, ಕುಮಾರಿ, ದೀಪು, ಕಂಕು, ರಾಮರಾಯರು, ವಾದಿರಾಜ್‌ ಮಾಮಾ, ಸುಬ್ಬು, ರತ್ನಾಕರಮಾಮಾ….

ನನ್ನ ಸ್ವರಗಳಿಗಿಂದು ಆಯಾಮಗಳಿಲ್ಲ

ಖಾಲಿತನದ ನೆಲೆಯಲ್ಲಿ ಕಳೆದು ಹೋಗಿದೆ

ಕಣ್ಣು ಕೇಳುತ್ತಿಲ್ಲ

ಕಿವಿ ನೋಡುತ್ತಿಲ್ಲ

ಆವಾಜ಼ುಗಳು ನಿದ್ದೆ ಇಲ್ಲದ ರಾತ್ರಿಗಳಲ್ಲಿ

ಗಂಟೆ ಸದ್ದುಗಳನ್ನು ಹಸಿರೆಲೆಗಳ ಹೋರಾಟವಾಗಿ

ನೀರನ್ನು ಕೇಳಿದರೂ

ನಡುನಡುವೆ ಬಿರುಗಾಳಿಯ ಕೋಮಲ ಸ್ವರಗಳು

ತೀವ್ರ ಮಧ್ಯಮಗಳನ್ನು ಚೆಲ್ಲಿ

ನನ್ನ ಅಸ್ತಿತ್ವವನ್ನು ಪ್ರಶ್ನಿಸುತ್ತವೆ

ಎಲ್ಲಿ …. ಅವರೆಲ್ಲಿ…. ಅವರೆಲ್ಲಾ ಎಲ್ಲಿ ….

ನಿನ್ನ ಸ್ವರದಲ್ಲೂ ಇಲ್ಲ

ನಿನ್ನ ಆಯಾಮಗಳ್ಳಲ್ಲೂ ಇಲ್ಲ…

ನಿನ್ನ ಚಟ ಸತ್ತು ಹೋಯಿತೇ…

ಚಟವಿದ್ದರೆ ನಿನ್ನ ಬದುಕು

ಅಂಬೇಡ್ಕರ್‌ ಅವರ ಸಂವಿಧಾನ ಹುಡುಕು ಮಗ

ನಿನಗೆ ಸಿಗುತ್ತೆ

ನಿನ್ನ ಉತ್ತರ…

ಈಗ ನನಗೆ ರಾಣಿ ಅಕ್ಕ ಇದ್ದಾರೆ, ವೀಣ ಅಕ್ಕಾ ಇದ್ದಾರೆ. ರಾಮಾರಾಯರು ತೀರ್ಕೊಳ್ಳೋಕ್ಕೆ ಮುಂಚೆ ಅವರನ್ನ 8 ಆಸ್ಪತ್ರೆಗಳಲ್ಲಿ ಶಿಫ್ಟ್‌ ಮಾಡಿದೆವು. ಮೊದಲು ಬ್ರೇನ್‌ ಹ್ಯಾಮರೇಜ್‌ ಅಂದ್ರು, ಹಾರ್ಟ್​ ಅಟ್ಯಾಕ್‌ ಅಂದ್ರು, ಮೆನೆಂಜಿಟಿಸ್‌ ಅಂದ್ರು. ಗಂಗೂಬಾಯಿ ಹಾನಗಲ್‌ ಬಂದು ಮೇಷ್ಟ್ರನ್ನು ನೋಡಿ ಗೋವರ್ಧನಿ ಹಾಡಿ ಅಂದ್ರು. ಅವರು ಹಾಡಿದ್ರು ಆಸ್ಪತ್ರೆಯಲ್ಲಿ. ಗಂಗೂಬಾಯಿ ಹೇಳಿದ್ರು ಶಿವಮತ್‌ ಭೈರವ್‌ ಹಾಡಕ್ಕೆ. ಅವರು ಹಾಡಿದ್ರು. ಗಂಗೂಬಾಯಿ ಆಚೆ ಬಂದು ಹೇಳಿದ್ರು, ಏನೂ ಆಗಿಲ್ಲ. ಬದುಕ್ತಾರೆ. ಆದ್ರೆ ಮ್ಯಾಸ್ಸಿವ್‌ ಹಾರ್ಟ ಅಟ್ಯಾಕ್ ಆದ ನಂತರ ಉಸಿರು ಎಳೀತಿರುವಾಗ ನಾನೇ ಪ್ರಾರ್ಥಿಸಿದೆ, ಈ ನೋವು ಅವರಿಗೆ ಕೊಡೋದು ಬೇಡ ಅಂತ.

ಯಾರೇ ಆದರೂ ಅವರ ಸಮಯದ ನಂತರ ಬೇಕಿರುವುದು, ಅವರ ಲತ್‌ ಮಾತ್ರ, ಅವರಲ್ಲಾ… ಹಾಗೇ ನನ್ನ ಲತ್‌ ಕೂಡ.

*

ವಿ.ಸೂ : ಲೇಖಕರ ಆಶಯದಂತೆ ಅವರ ಭಾಷಾಭಿವ್ಯಕ್ತಿಯ ವಿಧಾನವನ್ನು ಅವರಿಚ್ಛೆಯಂತೆಯೇ ಪ್ರಕಟಿಸಲಾಗುವುದು. ಹದಿನೈದು ದಿನಕ್ಕೊಮ್ಮೆ ಪ್ರಕಟವಾಗುವ ಈ ಅಂಕಣದ ಬಗ್ಗೆ ನಿಮ್ಮ ಅಭಿಪ್ರಾಯ, ಆಶಯ, ಪ್ರತಿಕ್ರಿಯೆಗಳಿಗಾಗಿ ಸ್ವಾಗತ : tv9kannadadigital@gmail.com

ಹಿಂದಿನ ಅಲೆ : Transgender World : ‘ಇಲ್ಲಿ ದೇವ್ರುಗಳೇ ಇಲ್ಲ, ಬರೀ ಬಾಲಮುವಾ ಸಯ್ಯ ಗುಯ್ಯ; ಯಾರು ಇವರೆಲ್ಲ?’  

Published On - 11:56 am, Tue, 7 December 21

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ