ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಉಧಂಪುರದ ಸ್ಲಾಥಿಯಾ ಚೌಕ್‌ನಲ್ಲಿ ನಡೆದ ಸ್ಫೋಟದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಈ ದುರಂತದಲ್ಲಿ 13 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ನಿಗೂಢವಾಗಿ ಉಂಟಾದ ಈ ಸ್ಫೋಟದ ನಿಖರವಾದ ಕಾರಣ ಮತ್ತು ಮೂಲವನ್ನು ಕಂಡುಹಿಡಿಯಲು ತನಿಖೆ ನಡೆಸಲಾಗುತ್ತಿದೆ.
ಈ ಘಟನೆಯ ಕುರಿತು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಟ್ವೀಟ್ ಮಾಡಿದ್ದು, ಉದಮ್‌ಪುರದ ತಹಸೀಲ್ದಾರ್ ಕಚೇರಿ ಬಳಿ “ರೆಹ್ರಿ” ಆಸುಪಾಸಿನಲ್ಲಿ ಸ್ಫೋಟ ಸಂಭವಿಸಿದೆ. ಈ ಸ್ಫೋಟದಿಂದ ಓರ್ವ ವ್ಯಕ್ತಿ ಪ್ರಾಣ ಕಳೆದುಕೊಂಡಿದ್ದಾರೆ. 13 ಗಾಯಾಳುಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ನಾನು ಅಲ್ಲಿನ ಘಟನೆಯ ಬಗ್ಗೆ ಮಾಹಿತಿ ಪಡೆಯಲು ಜಿಲ್ಲಾಧಿಕಾರಿ ಇಂದು ಚಿಬ್ ಅವರೊಂದಿಗೆ ಸಂಪರ್ಕದಲ್ಲಿದ್ದೇನೆ. ಸ್ಫೋಟಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
Blast explosion around “Rehri” near Tehsildar office at #Udhampur. One life lost, 13 injured being moved to hospital.I am in touch with D.C Smt Indu Chib on minute to minute basis. Exact cause and origin of the blast being worked out..too early to draw any definite conclusion.
— Dr Jitendra Singh (@DrJitendraSingh) March 9, 2022
ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯ ಸ್ಲಾಥಿಯಾ ಚೌಕ್‌ನಲ್ಲಿ ಇಂದು ಸಂಭವಿಸಿದ ನಿಗೂಢ ಸ್ಫೋಟದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ ಮತ್ತು 13ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಸ್ಲಾಥಿಯಾ ಚೌಕ್‌ನಲ್ಲಿ ವೆಂಡಿಂಗ್ ಕಾರ್ಟ್ ಅಡಿಯಲ್ಲಿ ಸ್ಫೋಟ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Udhampur blast | Injured have been hospitalised… Blast intensity to be revealed in further probe: Vinod Kumar, SSP Udhampur, Jammu & Kashmir pic.twitter.com/vD0KyPJiWI
— ANI (@ANI) March 9, 2022
ಇದನ್ನೂ ಓದಿ: ಪಾಕಿಸ್ತಾನದ ಸಿಬಿಯಲ್ಲಿ ಬಾಂಬ್ ಸ್ಫೋಟ: ನಾಲ್ವರು ಭದ್ರತಾ ಸಿಬ್ಬಂದಿ ಸಾವು,15ಕ್ಕೂ ಹೆಚ್ಚು ಮಂದಿಗೆ ಗಾಯ
Published On - 3:05 pm, Wed, 9 March 22