Achievement: ದಿನಗಳಲ್ಲ ಗಂಟೆ…! 100 ಗಂಟೆಯಲ್ಲಿ 100 ಕಿಮೀ ರಸ್ತೆ; ಘಾಜಿಯಾಬಾದ್-ಅಲಿಗಡ್ ಎಕ್ಸ್​ಪ್ರೆಸ್​ವೇ ಹೊಸ ಇತಿಹಾಸ

Ghaziabad-Aligarh Expressway Milestone: ಉತ್ತರಪ್ರದೇಶದ ಘಾಜಿಯಾಬಾದ್ ಆಲಿಗಡ್ ಎಕ್ಸ್​ಪ್ರೆಸ್​ವೇನ 100 ಕಿಮೀ ರಸ್ತೆಯನ್ನು ಕೇವಲ 100 ಗಂಟೆಯಲ್ಲಿ ನಿರ್ಮಿಸಿ ದಾಖಲೆ ಬರೆಯಲಾಗಿದೆ. ಎಲ್ ಅಂಟ್ ಟಿ, ಕ್ಯೂಬ್ ಹೈವೇಸ್ ಮತ್ತು ಘಾಜಿಯಾಬಾದ್ ಆಲಿಗಡ್ ಎಕ್ಸ್​ಪ್ರೆಸ್​ವೇ ಸಂಸ್ಥೆಗಳು ಈ ಕಾರ್ಯ ಮಾಡಿ ಸೈ ಎನಿಸಿವೆ.

Achievement: ದಿನಗಳಲ್ಲ ಗಂಟೆ...! 100 ಗಂಟೆಯಲ್ಲಿ 100 ಕಿಮೀ ರಸ್ತೆ; ಘಾಜಿಯಾಬಾದ್-ಅಲಿಗಡ್ ಎಕ್ಸ್​ಪ್ರೆಸ್​ವೇ ಹೊಸ ಇತಿಹಾಸ
ಘಾಜಿಯಾಬಾದ್ ಆಲಿಗಡ್ ಎಕ್ಸ್​ಪ್ರೆಸ್​ವೇ ರಸ್ತೆ ನಿರ್ಮಾಣ ಕಾರ್ಯ

Updated on: May 21, 2023 | 10:57 AM

ನವದೆಹಲಿ: ಇತ್ತೀಚಿನ ವರ್ಷಗಳಲ್ಲಿ ಭಾರತದ ರಸ್ತೆ ಮತ್ತು ರೈಲ್ವೆ ನಿರ್ಮಾಣ ಕಾರ್ಯಗಳಿಗೆ (Road and Rail Infrastructure) ಹೊಸ ಶಕ್ತಿಸಂಚಯ ಆದಂತಿದೆ. ಹಲವು ಸಾಧನೆ, ಮೈಲಿಗಲ್ಲುಗಳು ನಿರ್ಮಾಣವಾಗುತ್ತಿವೆ. ಇದೀಗ ಉತ್ತರಪ್ರದೇಶದಲ್ಲಿ ಘಾಜಿಯಾಬಾದ್ ಆಲಿಗಡ್ ಎಕ್ಸ್​ಪ್ರೆಸ್​ವೇ (Ghaziabad-Aligarh Expressway) ಹೊಸ ಇತಿಹಾಸ ಬರೆದಿದೆ. ರಾಷ್ಟ್ರೀಯ ಹೆದ್ದಾರಿ 34ರ ಭಾಗವಾಗಿರುವ 118 ಕಿಮೀ ಉದ್ದದ ಈ ಎಕ್ಸ್​ಪ್ರೆಸ್​ವೇನಲ್ಲಿ 100 ಕಿಮೀ ಉದ್ದದ ರಸ್ತೆಯನ್ನು ಕೇವಲ 100 ಗಂಟೆಯಲ್ಲಿ ನಿರ್ಮಿಸಲಾಗಿದೆ. 100 ಗಂಟೆ ಎಂದರೆ ಸುಮಾರು 4 ದಿನ ಮಾತ್ರ.

ಈ ಸಾಧನೆ ಸಾಧ್ಯವಾಗಿದ್ದು ಒಂದು ಸ್ಪೆಷಲ್ ಪರ್ಪೋಸ್ ವೆಹಿಕಲ್​ನಿಂದ (ಎಸ್​ಪಿವಿ). ಈ ಎಕ್ಸ್​ಪ್ರೆಸ್​ವೇಗೆ ಬಿಟುಮಿನಸ್ ಕಾಂಕ್ರೀಟ್ ಹಾಕಲು ಈ ವಿಶೇಷ ವಾಹನ ಬಳಸಲಾಗಿದೆ. ಕ್ಯೂಬ್ ಹೈವೇಸ್, ಎಲ್ ಅಂಡ್ ಟಿ, ಘಾಜಿಯಾಬಾದ್ ಆಲಿಗಡ್ ಎಕ್ಸ್​ಪ್ರೆಸ್​ವೇ ಸಂಸ್ಥೆಗಳು ಈ ರಸ್ತೆ ನಿರ್ಮಾಣದಲ್ಲಿ ಭಾಗಿಯಾಗಿದ್ದವು.

ಇದನ್ನೂ ಓದಿಅಸ್ಸಾಂನಲ್ಲಿ ಶಾಲಾ ಶಿಕ್ಷಕರಿಗೆ ನೂತನ ವಸ್ತ್ರ ಸಂಹಿತೆ ಜಾರಿ; ಟೀ ಶರ್ಟ್​, ಲೆಗ್ಗಿಂಗ್ಸ್​, ಜೀನ್ಸ್ ಧರಿಸುವಂತಿಲ್ಲ

ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಈ ಕಾರ್ಯವನ್ನು ಶ್ಲಾಘಿಸಿ ಇದು ದೇಶಕ್ಕೆ ಹೆಮ್ಮೆಯ ಕ್ಷಣ ಎಂದು ಕೊಂಡಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ಶಹಬ್ಬಾಸ್​ಗಿರಿ ನೀಡಿದ್ದಾರೆ.

‘ಭಾರತದ ರಸ್ತೆ ಸೌಕರ್ಯ ಉದ್ಯಮದ ಬದ್ಧತೆಗೆ ಸಾಕ್ಷಿಯಾಗಿದೆ ಈ ಸಾಧನೆ. ಕ್ಯೂಬ್ ಹೈವೇಶ್, ಎಲ್ ಅಂಡ್ ಮತ್ತು ಘಾಜಿಯಾಬಾದ್ ಆಲಿಗಡ್ ಎಕ್ಸ್​ಪ್ರೆಸ್​ವೇ ಸಂಸ್ಥೆಗಳಿಗೆ ಧನ್ಯವಾದ ಹೇಳುತ್ತೇನೆ’ ಎಂದು ನಿತಿನ್ ಗಡ್ಕರಿ ಟ್ವೀಟ್ ಮಾಡಿದ್ದಾರೆ.

ಘಾಜಿಯಾಬಾದ್ ಆಲಿಗಡ್ ಎಕ್ಸ್​ಪ್ರೆಸ್​ವೇ ರಸ್ತೆ ಪ್ರಾಮುಖ್ಯತೆ

ದೆಹಲಿಗೆ ಸಮೀಪ ಇರುವ ಘಾಜಿಯಾಬಾದ್ ಮತ್ತು ಆಲಿಗಡ್ ಎರಡೂ ಕೂಡ ಜನಸಂಖ್ಯೆ ಹೆಚ್ಚು ಇರುವ ನಗರಗಳು. ಈ ಎರಡು ನಗರಗಳನ್ನು ಜೋಡಿಸುವ ಎಕ್ಸ್​ಪ್ರೆಸ್ ವೇ ಹಲವು ರೀತಿಯಲ್ಲಿ ಪ್ರಯೋಜನಕಾರಿ ಎನಿಸಿದೆ. ಈ ಎರಡು ನಗರಗಳ ಮಧ್ಯೆ ದಾದ್ರಿ, ಗೌತಮ್ ಬುದ್ಧ ನಗರ್, ಸಿಕಂದರಾಬಾದ್, ಬುಲಂದ್​ಶಹರ್ ಮತ್ತು ಖುದ್ರಾ ನಗರ ಮತ್ತು ಪಟ್ಟಣಗಳ ಮೂಲಕ ಈ ಎಕ್ಸ್​ಪ್ರೆಸ್ ಸಾಗಿ ಹೋಗುತ್ತದೆ.

ಇದನ್ನೂ ಓದಿG7 Summit: ಹಿರೋಷಿಮಾದಲ್ಲಿ ಮಹಾತ್ಮ ಗಾಂಧಿ ಪ್ರತಿಮೆಯನ್ನು ಅನಾವರಣಗೊಳಿಸಿದ ಪ್ರಧಾನಿ ಮೋದಿ

ಬಹಳ ಕಡಿಮೆ ಅವಧಿಯಲ್ಲಿ ಸಾಗಾಟ ಸಾಧ್ಯವಾಗುವುದರಿಂದ ಯಾವುದೇ ಎಕ್ಸ್​ಪ್ರೆಸ್​ವೇಗಳು ಒಂದು ದೇಶದ ಅರ್ಥವ್ಯವಸ್ಥೆಗೆ ಅನುಕೂಲ ಎನಿಸುತ್ತವೆ. ಒಂದು ಉತ್ತಮ ಆರ್ಥಿಕತೆಯ ದೇಶದಲ್ಲಿ ಸೌಕರ್ಯ ವ್ಯವಸ್ಥೆ ಅತ್ಯುತ್ತಮವಾಗಿರುತ್ತದೆ. ಭಾರತದಲ್ಲೂ ಈ ನಿಟ್ಟಿನಲ್ಲಿ ಪ್ರಯತ್ನಗಳಾಗುತ್ತಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us