AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸನ್ನಡತೆ ಆಧಾರದ ಮೇಲೆ ಬಿಲ್ಕಿಸ್ ಬಾನೊ ಪ್ರಕರಣದ ಅಪರಾಧಿಗಳ ಬಿಡುಗಡೆ; ಎಫ್‌ಐಆರ್‌ನಲ್ಲಿರುವುದೇ ಬೇರೆ?

2017-2021ರ ನಡುವೆ ಬಿಲ್ಕಿಸ್ ಬಾನೊ ಪ್ರಕರಣದಲ್ಲಿ ಕನಿಷ್ಠ ನಾಲ್ಕು ಸಾಕ್ಷಿಗಳು ಅಪರಾಧಿಗಳ ವಿರುದ್ಧ ದೂರುಗಳು ಮತ್ತು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ

ಸನ್ನಡತೆ ಆಧಾರದ ಮೇಲೆ ಬಿಲ್ಕಿಸ್ ಬಾನೊ ಪ್ರಕರಣದ ಅಪರಾಧಿಗಳ ಬಿಡುಗಡೆ; ಎಫ್‌ಐಆರ್‌ನಲ್ಲಿರುವುದೇ ಬೇರೆ?
ಬಿಲ್ಕಿಸ್ ಬಾನೊ ಪ್ರಕರಣದ ಅಪರಾಧಿಗಳು
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Oct 19, 2022 | 8:51 PM

Share

ದೆಹಲಿ: 2002ರ ಗುಜರಾತ್ ಗಲಭೆಯಲ್ಲಿ (2002 Gujarat riots) ಬಿಲ್ಕಿಸ್ ಬಾನೊ (Bilkis Bano) ಅವರ ಮೇಲೆ ಅತ್ಯಾಚಾರವೆಸಗಿ ಆಕೆಯ ಇಡೀ ಕುಟುಂಬವನ್ನೇ ಕೊಂದ ಆರೋಪಿಗಳ 11 ಮಂದಿಯ ಶೀಘ್ರ ಬಿಡುಗಡೆಯನ್ನು ಸಮರ್ಥಿಸಿಕೊಂಡಿರುವ ಗುಜರಾತ್ ಸರಕಾರವು “ಉತ್ತಮ ನಡವಳಿಕೆ” (Good Behaviour) ಮತ್ತು ಕೇಂದ್ರದ ಅನುಮೋದನೆಯನ್ನು ಉಲ್ಲೇಖಿಸಿದೆ. ಆದರೆ ಅಕಾಲಿಕ ಬಿಡುಗಡೆಗೆ ಮುಂಚೆಯೇ ಸಾವಿರಾರು ದಿನಗಳನ್ನು ಪೆರೋಲ್‌ನಲ್ಲಿ ಕಳೆದ ಅಪರಾಧಿಗಳ ವಿರುದ್ಧ ಬಹಿರಂಗವಾದ ಎಫ್‌ಐಆರ್‌ಗಳು ಇವರು ಉತ್ತಮ ನಡವಳಿಕೆ ಹೊಂದಿಲ್ಲ ಎಂದು ಹೇಳುತ್ತಿದೆ ಎಂದು ಎನ್ ಡಿಟಿವಿ ವರದಿ ಮಾಡಿದೆ.  ಎನ್‌ಡಿಟಿವಿಗೆ ಲಭ್ಯವಾದ ಅನೇಕ ಎಫ್‌ಐಆರ್‌ಗಳು ಮತ್ತು ಪೊಲೀಸ್ ದೂರುಗಳ ಪ್ರಕಾರ, ಇದರಲ್ಲಿ ಅಪರಾಧಿಗಳು ಪೆರೋಲ್‌ನಲ್ಲಿರುವಾಗ ಸಾಕ್ಷಿಗಳಿಗೆ ಬೆದರಿಕೆ ಮತ್ತು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.ಇತ್ತ ಗುಜರಾತ್ ಸರ್ಕಾರವು ಅಪರಾಧಿಗಳು ಜೈಲಿನಲ್ಲಿ ಇದ್ದಾಗ ಮತ್ತು ಪೆರೋಲ್‌ನಲ್ಲಿ ಹೊರಬಂದಾಗ ಅವರು ಯಾವುದೇ ತಪ್ಪು ಮಾಡಿದ ಬಗ್ಗೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿ ತಮ್ಮ ವಾದವನ್ನು ಸಮರ್ಥಿಸಿಕೊಂಡಿದೆ.

2017-2021ರ ನಡುವೆ ಬಿಲ್ಕಿಸ್ ಬಾನೊ ಪ್ರಕರಣದಲ್ಲಿ ಕನಿಷ್ಠ ನಾಲ್ಕು ಸಾಕ್ಷಿಗಳು ಅಪರಾಧಿಗಳ ವಿರುದ್ಧ ದೂರುಗಳು ಮತ್ತು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ ಎಂದು ಎನ್‌ಡಿಟಿವಿಯ ತನಿಖೆ ಬಹಿರಂಗಪಡಿಸಿದೆ ಎನ್‌ಡಿಟಿವಿಗೆ ಒಂದು ಎಫ್‌ಐಆರ್ ಮತ್ತು ಎರಡು ಪೊಲೀಸ್ ದೂರು ಪ್ರತಿ ಸಿಕ್ಕಿದೆ.  ಇದರ ಪ್ರಕಾರ ಜುಲೈ 6, 2020 ರ ಎಫ್‌ಐಆರ್ ಅನ್ನು ಇಬ್ಬರು ಅಪರಾಧಿಗಳಾದ ರಾಧೇಶ್ಯಾಮ್ ಶಾ ಮತ್ತು ಮಿತೇಶ್‌ಭಾಯ್ ಭಟ್ ಅವರು ಪೆರೋಲ್‌ನಲ್ಲಿ ಹೊರಗಿರುವಾಗ ಅವರ ವಿರುದ್ಧ ದಾಖಲಿಸಲಾಗಿದೆ. ದಾಹೋದ್‌ನ ರಾಧಿಕಾಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು ಸೆಕ್ಷನ್ 354, 504 (ಬೆದರಿಕೆ), 506 (2) (ಕೊಲ್ಲುವ ಬೆದರಿಕೆ) ಮತ್ತು 114 (ಪ್ರಚೋದನೆ) ಅಡಿಯಲ್ಲಿ ದಾಖಲಿಸಲಾಗಿದೆ. ಇಬ್ಬರು ಅಪರಾಧಿಗಳು ಮತ್ತು ರಾಧೇಶ್ಯಾಮ್ ಅವರ ಸಹೋದರ ಆಶಿಶ್ ಸೇರಿದಂತೆ ಮೂವರು ವ್ಯಕ್ತಿಗಳು ತಮ್ಮ ಹೇಳಿಕೆಗಳೊಂದಿಗೆ ಆರೋಪಿಸುವುದಕ್ಕಾಗಿ ಸಬೇರಾಬೆನ್, ಆಕೆಯ ಮಗಳು ಅರ್ಫಾ ಮತ್ತು ಸಾಕ್ಷಿ ಪಿಂಟುಭಾಯ್ ಅವರಿಗೆ ಬೆದರಿಕೆ ಹಾಕಿದ್ದಾರೆ ಎಂದು ಎಫ್ಐಆರ್ ಹೇಳುತ್ತದೆ.

ಮತ್ತೊಬ್ಬ ಸಾಕ್ಷಿಯಾದ ಮನ್ಸೂರಿ ಅಬ್ದುಲ್ ರಜಾಕ್ ಅಬ್ದುಲ್ ಮಜೀದ್ ಅವರು ಜನವರಿ 1, 2021 ರಂದು ಸೈಲೇಶ್ ಚಿಮ್ಮನ್‌ಲಾಲ್ ಭಟ್ ವಿರುದ್ಧ ದಾಹೋದ್ ಪೊಲೀಸರಿಗೆ ಪೊಲೀಸ್ ದೂರು ಸಲ್ಲಿಸಿದ್ದು,ಭಟ್ ಪೆರೋಲ್‌ನಲ್ಲಿ ಹೊರಬಂದಾಗ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದರು.

ಈ ದೂರು ಎಫ್‌ಐಆರ್ ಆಗಿ ಬದಲಾಗಲೇ ಇಲ್ಲ.

ಇನ್ನಿಬ್ಬರು ಸಾಕ್ಷಿಗಳಾದ ಘಾಂಚಿ ಆದಂಭೈ ಇಸ್ಮಾಯಿಲ್‌ಭಾಯ್ ಮತ್ತು ಘಾಂಚಿ ಇಮ್ತಿಯಾಜ್‌ಭಾಯ್ ಯೂಸುಫ್‌ಭಾಯ್ ಅವರು ಅಪರಾಧಿಗಳಲ್ಲಿ ಒಬ್ಬರಾದ ಗೋವಿಂದ್ ನಾಯ್ ವಿರುದ್ಧ ಜುಲೈ 28, 2017 ರಂದು ದೂರು ದಾಖಲಿಸಿದ್ದಾರೆ. “ರಾಜಿ” ಮಾಡಿಕೊಳ್ಳದಿದ್ದರೆ ಆರೋಪಿಗಳು ತಮ್ಮನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

ಆಗಸ್ಟ್ 15 ರ ಸ್ವಾತಂತ್ರ್ಯ ದಿನದಂದು ಅಪರಾಧಿಗಳನ್ನು ಬಿಡುಗಡೆ ಮಾಡಲಾಯಿತು ಮತ್ತು ಗುಜರಾತ್‌ನ ಜೈಲಿನ ಹೊರಗೆ ಹೂಮಾಲೆ ಮತ್ತು ಸಿಹಿತಿಂಡಿಗಳೊಂದಿಗೆ ಸ್ವಾಗತಿಸಲಾಯಿತು. ಗುಜರಾತ್‌ನ ಪ್ರತಿವಾದವು ಸರಣಿ ತೀರ್ಪುಗಳನ್ನು ಉಲ್ಲೇಖಿಸಿದೆ. ಆದರೆ ವಾಸ್ತವಿಕ ಹೇಳಿಕೆಗಳನ್ನು ತಪ್ಪಿಸಿದೆ ಎಂದು ಸುಪ್ರೀಂ ಕೋರ್ಟ್ ನಿನ್ನೆ ಟೀಕಿಸಿತ್ತು.  “ತೀರ್ಪುಗಳ ಸರಣಿಯನ್ನು ಉಲ್ಲೇಖಿಸಿರುವ ಕೌಂಟರ್ ಅಫಿಡವಿಟ್ ಅನ್ನು ನಾನು ನೋಡಿಲ್ಲ. ವಾಸ್ತವಿಕ ಹೇಳಿಕೆಯನ್ನು ಮಾಡಬೇಕಾಗಿತ್ತು.  ವಾಸ್ತವಿಕ ಹೇಳಿಕೆ ಎಲ್ಲಿದೆ ಎಂದು ನ್ಯಾಯಮೂರ್ತಿ ಅಜಯ್ ರಸ್ತೋಗಿ ನೇತೃತ್ವದ ಪೀಠ ಕೇಳಿತ್ತು.

ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!