Bihar Hooch Tragedy: ಬಿಹಾರದಲ್ಲಿ 16 ಜನರ ನಿಗೂಢ ಸಾವು; ದುರಂತದ ಹಿಂದೆ ಕಳ್ಳಭಟ್ಟಿ ದಂಧೆಯ ಕೈವಾಡದ ಶಂಕೆ
Bihar Hooch Tragedy: ಕಳೆದ 3 ದಿನಗಳೊಳಗೆ ಈ ಪ್ರದೇಶದ ಸುತ್ತಮುತ್ತಲೂ 16 ಜನರು ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಅವರ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.
ಪಾಟ್ನಾ: ಬಿಹಾರ ರಾಜ್ಯದ ವೆಸ್ಟ್ ಚಂಪರನ್ ಎಂಬ ಊರಿನಲ್ಲಿ 16 ಜನರು ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 5 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಳ್ಳಭಟ್ಟಿ (Hooch) ಸೇವನೆ ಮಾಡಿದ ಪರಿಣಾಮದಿಂದ 16 ಜನರು ಸಾವನ್ನಪ್ಪಿರುವ ಸಾಧ್ಯತೆಯಿದೆ (spurious liquor) ಎನ್ನಲಾಗಿದೆ.
ಕಳೆದ 3 ದಿನಗಳೊಳಗೆ ಈ ಪ್ರದೇಶದ ಸುತ್ತಮುತ್ತಲೂ 16 ಜನರು ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಅವರ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ, ಚಂಪರನ್ ಪ್ರದೇಶದಲ್ಲಿ ಕಳ್ಳಭಟ್ಟಿ ದಂಧೆ ಹೆಚ್ಚಾಗಿ ನಡೆಯುತ್ತಿರುವುದರಿಂದ ಕಳ್ಳಭಟ್ಟಿ ಸೇವಿಸಿ ಇವರೆಲ್ಲರೂ ಸಾವನ್ನಪ್ಪಿರುವ ಸಾಧ್ಯತೆಯಿದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ, ಸಾವನ್ನಪ್ಪಿದ 16 ಜನರ ಪೈಕಿ ಆರೇಳು ಜನರಿಗೆ ಆಲ್ಕೋಹಾಲ್ ಸೇವಿಸುವ ಅಭ್ಯಾಸವಿರಲಿಲ್ಲ ಎಂದು ಅವರ ಮನೆಯವರು ಹೇಳಿದ್ದಾರೆ. ಇದರಿಂದ ಈ ನಿಗೂಢ ಸಾವಿನ ರಹಸ್ಯ ಇನ್ನಷ್ಟು ಕಗ್ಗಂಟಾಗಿದೆ.
Bihar | We have been told that around 8 people died mysteriously at a village (in West Champaran) in the past 2-3 days. Their family members & villagers have not mentioned alcohol consumption. FIR has been lodged and the probe is underway: DM Kundan Kumar pic.twitter.com/DbsRIlLujp
— ANI (@ANI) July 16, 2021
ಈ ಬಗ್ಗೆ ವರದಿ ಮಾಡಿರುವ ಹಿಂದೂಸ್ತಾನ್ ಟೈಮ್ಸ್, ಮರಣೋತ್ತರ ಪರೀಕ್ಷೆಯಲ್ಲಾದರೂ ಈ 16 ಜನರ ಸಾವಿನ ಕಾರಣ ಬಯಲಾಗಲಿದೆ. ಜೋಗಿಯಾ, ಬಗಾಹಿ, ದೆವ್ರವ ಎಂಬ ಊರುಗಳಲ್ಲಿನ 8 ಜನರು ಒಂದೇ ದಿನ ಸಾವನ್ನಪ್ಪಿದ್ದಾರೆ. ಇನ್ನು, ಈ ಸಾವಿನ ಹಿಂದೆ ಕಳ್ಳಭಟ್ಟಿ ದಂಧೆಯ ಕೈವಾಡವಿರುವ ಅನುಮಾನ ಹೊಗೆಯಾಡುತ್ತಿದ್ದಂತೆ ಈ ಸಾವಿನ ಪ್ರಕರಣ ರಾಜಕೀಯ ತಿರುವನ್ನೂ ಪಡೆದುಕೊಂಡಿದೆ ಎಂದು ವರದಿ ಮಾಡಿದೆ.
The investigation is underway. Officers concerned are working on it. The locals are not ready to talk about it. We are closely monitoring the situation: Bihar Deputy CM Renu Devi on the deaths of 8 people at a village in West Champaran pic.twitter.com/PdpMTGSZ1E
— ANI (@ANI) July 16, 2021
ಆರ್ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನಿತೀಶ್ ಕುಮಾರ್ ನೇತೃತ್ವದ ರಾಜ್ಯ ಸರ್ಕಾರದ ಆಡಳಿತದಲ್ಲಿ ಪ್ರತಿವರ್ಷ ಸಾವಿರಾರು ಜನರು ಕಳ್ಳಭಟ್ಟಿ ಮತ್ತು ವಿಷಪೂರಿತ ಸಾರಾಯಿ ಸೇವನೆಯಿಂದ ಅನುಮಾನಾಸ್ಪದವಾಗಿ ಸಾವನ್ನಪ್ಪುತ್ತಲೇ ಇದ್ದಾರೆ. ಇದೇನಾ ನಿಮ್ಮ ಆಡಳಿತ ವೈಖರಿ? ಎಂದು ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಕಳ್ಳಭಟ್ಟಿ ಅಡ್ಡೆಗಳ ಮೇಲೆ ಅಬಕಾರಿ ಪೊಲೀಸರ ದಾಳಿ.. ಮುಂದೇನಾಯ್ತು?
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಹೆಲಿಕಾಪ್ಟರ್ ಪತನ: ಓರ್ವ ಪೈಲಟ್ ಸಾವು, ಮತ್ತೊಬ್ಬರಿಗೆ ಗಾಯ
(16 Dead in Bihar’s Champaran after consuming spurious liquor Suspicious Hooch Tragedy)
Published On - 1:14 pm, Sat, 17 July 21