ಜಾರ್ಖಂಡ್ ಸಮ್ಮಿಶ್ರ ಸರ್ಕಾರಕ್ಕೆ 4 ವರ್ಷ: ದಲಿತರಿಗೆ 50 ವರ್ಷ ವಯಸ್ಸಿಗೇ ಪಿಂಚಣಿ, ಸಿಎಂ ಹೇಮಂತ್ ಸೊರೇನ್ ಘೋಷಣೆ
4 Years of Hemant Soren Sarkar: ಹೇಮಂತ್ ಸೊರೇನ್ ನೇತೃತ್ವದ ಜಾರ್ಖಂಡ್ ಸಮ್ಮಿಶ್ರ ಸರ್ಕಾರ ಶುಕ್ರವಾರ (ಡಿಸೆಂಬರ್ 29) ನಾಲ್ಕು ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದೆ. ಹೇಮಂತ್ ಸರ್ಕಾರ್ ಅವರ ಅಧಿಕಾರಾವಧಿಯ ನಾಲ್ಕನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಜಾರ್ಖಂಡ್ ರಾಜಧಾನಿ ರಾಂಚಿಯ ಐತಿಹಾಸಿಕ ಮೊರ್ಹಬಾದಿ ಮೈದಾನದಲ್ಲಿ ಸರ್ಕಾರವು ನಾಲ್ಕು ವರ್ಷಗಳ ವಿಜಯೋತ್ಸವ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಯೋಜಿಸಿತು.
ರಾಂಚಿ, ಡಿಸೆಂಬರ್ 30: ಹೇಮಂತ್ ಸೊರೇನ್ (Hemant Soren) ನೇತೃತ್ವದ ಜಾರ್ಖಂಡ್ ಸಮ್ಮಿಶ್ರ ಸರ್ಕಾರ ಶುಕ್ರವಾರ (ಡಿಸೆಂಬರ್ 29) ನಾಲ್ಕು ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದೆ. ಅಧಿಕಾರಾವಧಿಯ ನಾಲ್ಕನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಜಾರ್ಖಂಡ್ ರಾಜಧಾನಿ ರಾಂಚಿಯ ಐತಿಹಾಸಿಕ ಮೊರ್ಹಬಾದಿ ಮೈದಾನದಲ್ಲಿ ಸರ್ಕಾರ ನಾಲ್ಕು ವರ್ಷಗಳ ವಿಜಯೋತ್ಸವ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಯೋಜಿಸಿತು.
ಈ ಸಂದರ್ಭದಲ್ಲಿ ಸರ್ಕಾರದ ಪ್ರಮುಖ ನೀತಿಗಳು ಮತ್ತು ಸಾಧನೆಗಳನ್ನು ಘೋಷಿಸುವುದರೊಂದಿಗೆ ಮುಖ್ಯಮಂತ್ರಿ ಹೇಮಂತ್ ಸೊರೇನ್ ಹಲವಾರು ಪ್ರಮುಖ ಘೋಷಣೆಗಳನ್ನು ಮಾಡಿದರು. ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ಸುಮಾರು 5 ಸಾವಿರ ಕೋಟಿ ರೂ.ಗಳ 300ಕ್ಕೂ ಹೆಚ್ಚು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಸುಮಾರು 1,000 ಕೋಟಿ ರೂ. ಮೌಲ್ಯದ 20 ಕ್ಕೂ ಹೆಚ್ಚು ಯೋಜನೆಗಳನ್ನು ಪ್ರಾರಂಭಿಸಲಾಯಿತು. ರಾಜ್ಯದ ದಲಿತರು ಮತ್ತು ಆದಿವಾಸಿಗಳಿಗೆ ಹೊಸ ವರ್ಷದ ಉಡುಗೊರೆಯನ್ನು ಘೋಷಿಸಲಾಯಿತು. ರಾಜ್ಯದಲ್ಲಿ ಆದಿವಾಸಿ ಮತ್ತು ದಲಿತರ 60 ವರ್ಷದ ಪಿಂಚಣಿ ಅರ್ಹತೆಯನ್ನು 50 ವರ್ಷಕ್ಕೆ ಬದಲಾವಣೆ ಮಾಡಿ ಘೋಷಣೆ ಮಾಡಲಾಗುತ್ತದೆ ಎಂದರು. ಇನ್ನು ಮುಂದೆ ರಾಜ್ಯದ ಕಂಪನಿಗಳಲ್ಲಿ ಶೇ 75ರಷ್ಟು ಉದ್ಯೋಗಗಳನ್ನು ಸ್ಥಳೀಯರಿಗೆ ಮೀಸಲಿಡುವ ಕಾನೂನನ್ನು ಜಾರಿಗೊಳಿಸಲಾಗುವುದು ಎಂದು ಹೇಮಂತ್ ಸೊರೇನ್ ಭರವಸೆ ನೀಡಿದರು.
पूर्व की सरकारों ने इस राज्य को बीमारू राज्य बना कर रखा था। जिस परिवार के पास छत नहीं होती वहां बीमारी भी जल्दी आती है। राज्य के 8 लाख गरीब परिवारों को आवास देना हमने चिन्हित किया। केंद्र सरकार के पास कई बार आवाज भी उठायी पर कोई लाभ नहीं मिला। केंद्र सरकार नहीं चाहती थी कि यहां… pic.twitter.com/c8PnqQ2I8v
— Hemant Soren (@HemantSorenJMM) December 29, 2023
ಈ ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ 662 ಶಿಕ್ಷಕರು, ಆರೋಗ್ಯ ಇಲಾಖೆಯ 307 ವೈದ್ಯಕೀಯ ಸಿಬ್ಬಂದಿ ಹಾಗೂ ಇತರರಿಗೆ ನೇಮಕಾತಿ ಪತ್ರ ವಿತರಿಸಲಾಯಿತು. ಇದರೊಂದಿಗೆ ಕಳೆದ ನಾಲ್ಕು ತಿಂಗಳಲ್ಲಿ ನಡೆದಿರುವ ಕಾಮಗಾರಿಗಳ ವಿವರವನ್ನೂ ಸರ್ಕಾರ ತಿಳಿಸಿದೆ.
ಆಪ್ಕೇ ದ್ವಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಇದರಲ್ಲಿ ಸಾಮಾನ್ಯ ಜನರನ್ನು ತಲುಪುವ ಮತ್ತು ಅವರ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ ಆಡಳಿತವನ್ನು ಸ್ಥಾಪಿಸಲಾಗಿದೆ. ಇದರಡಿ ಇಲ್ಲಿಯವರೆಗೆ 3500 ರೂ.ಕೋಟಿಗಳನ್ನು ವಿತರಿಸಲಾಗಿದೆ. 31 ಲಕ್ಷ ಜನರಿಗೆ ಆಸ್ತಿ ಪತ್ರಗಳನ್ನು ನೀಡಲಾಗಿದೆ. ಜೊತೆಗೆ 12,475 ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಲಾಗಿದೆ ಎಂದು ಸರ್ಕಾರ ತಿಳಿಸಿದೆ.
आपकी सरकार द्वारा हजारों करोड रुपए की लागत से हजारों किलोमीटर ग्रामीण सड़क को सुदृढ़ किया जा रहा है। वहीं 7000 करोड़ रुपयों की राशि से सड़क का चौड़ीकरण भी किया जा रहा है। रांची को ही देखिए। यहां लोग जाम झेलने को मजबूर रहते थे। 20 वर्षों में कभी भी इस समस्या का समाधान नहीं किया… pic.twitter.com/YCCJXGtEoO
— Hemant Soren (@HemantSorenJMM) December 29, 2023
ಹೇಮಂತ್ ಸರ್ಕಾರದ 4 ವರ್ಷಗಳ ಸಾಧನೆಗಳಲ್ಲಿ ಸರ್ವಜನ್ ಪಿಂಚಣಿ ಯೋಜನೆ, ಅಬುವಾ ಆವಾಸ್ ಯೋಜನೆ, ಸೋನಾ ಸೊಬ್ರಾನ್ ಧೋತಿ ಸೀರೆ ಯೋಜನೆ, ಸಾವಿತ್ರಿಬಾಯಿ ಫುಲೆ ಕಿಶೋರಿ ಸಮೃದ್ಧಿ ಯೋಜನೆ, ಫೂಲ್ ಜಾನೋ ಆಶೀರ್ವಾದ ಯೋಜನೆ, ಹಸಿರು ಪಡಿತರ ಚೀಟಿ, ಬಿರ್ಸಾ ಮುಖ್ಯ ಗ್ರಾಮ ಯೋಜನೆ, ಹಸಿರು ಗ್ರಾಮ ಯೋಜನೆ, ಬಿರ್ಸಾ ಮುಖ್ಯ ಗ್ರಾಮ ಗ್ರಾಮ ಯೋಜನೆ. ಗುರೂಜಿ ಸ್ಟೂಡೆಂಟ್ ಕ್ರೆಡಿಟ್ ಕಾರ್ಡ್ , ಮರಂಗ್ ಗೊಮ್ಕೆ ಜೈಪಾಲ್ ಸಿಂಗ್ ಮುಂಡಾ ವಿದೇಶಿ ವಿದ್ಯಾರ್ಥಿವೇತನ ಯೋಜನೆ, ಮುಖ್ಯಮಂತ್ರಿ ಸಾರಥಿ ಯೋಜನೆ, ಮುಖ್ಯಮಂತ್ರಿಗಳ ಉದ್ಯೋಗ ಯೋಜನೆ ಸೇರಿವೆ. ಕಳೆದ ನಾಲ್ಕು ವರ್ಷಗಳಲ್ಲಿ ಅನೇಕ ಸಾಧನೆಗಳು ಹೇಮಂತ್ ಸೊರೇನ್ ನೇತೃತ್ವದ ಮಹಾಮೈತ್ರಿಕೂಟ ಸರ್ಕಾರದ ಹೆಸರಿನಲ್ಲಿ ರೂಪಿಸಲ್ಪಟ್ಟಿವೆ.
ಇದನ್ನೂ ಓದಿ: ರಾಮಲಲ್ಲಾನ ವಿಗ್ರಹಗಳೆಲ್ಲವೂ ಚೆನ್ನಾಗಿವೆ, ಒಂದನ್ನು ಆಯ್ಕೆ ಮಾಡುವುದು ಕಷ್ಟ: ಚಂಪತ್ ರಾಯ್
ಜಾರ್ಖಂಡ್‌ನಲ್ಲಿ ಜೆಎಂಎಂ, ಕಾಂಗ್ರೆಸ್, ಆರ್‌ಜೆಡಿ ಮತ್ತು ಸಿಪಿಐ (ಎಂಎಲ್) ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ