ಉತ್ತರ ಪ್ರದೇಶ: ಬಸ್ ಮೇಲೆ ಹೈಟೆನ್ಷನ್ ತಂತಿ ಬಿದ್ದು ಹೊತ್ತಿಕೊಂಡ ಬೆಂಕಿ, 6 ಮಂದಿ ಸಜೀವ ದಹನ
ಮದುವೆ ಮನೆಯಿಂದ ಬರುತ್ತಿದ್ದ ಬಸ್ ಮೇಲೆ ವಿದ್ಯುತ್ ತಂತಿ ಬಿದ್ದ ಪರಿಣಾಮ ಬೆಂಕಿ ಹೊತ್ತಿಕೊಂಡು 6ಕ್ಕೂ ಅಧಿಕ ಪ್ರಯಣಿಕರು ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಘಟನೆ ಉತ್ತರ ಪ್ರದೇಶದ ಗಾಜಿಪುರದಲ್ಲಿ ನಡೆದಿದೆ.
ಉತ್ತರ ಪ್ರದೇಶ(Uttar Pradesh)ದ ಗಾಜಿಪುರದಲ್ಲಿ ಭಾರಿ ಅಪಘಾತ ಸಂಭವಿಸಿದೆ, ಬಸ್ ಮೇಲೆ ಹೈ ಟೆನ್ಷನ್ ತಂತಿ ಬಿದ್ದ ಪರಿಣಾಮ ಬೆಂಕಿ ಹೊತ್ತಿಕೊಂಡಿದ್ದು, 6 ಮಂದಿ ಸಜೀವ ದಹನವಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸ್ವಲ್ಪ ಸಮಯದಲ್ಲೇ ಬೆಂಕಿ ಭೀಕರ ಸ್ವರೂಪ ಪಡೆದುಕೊಂಡಿದ್ದು, ಬಸ್ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ಮಾಹಿತಿ ಪ್ರಕಾರ ಬೆಂಕಿಯಲ್ಲಿ ಆರು ಮಂದಿ ಸಜೀವ ದಹನವಾಗಿದ್ದಾರೆ. ಈ ಅವಘಡದಲ್ಲಿ ಹೆಚ್ಚಿನ ಸಾವು ನೋವು ಸಂಭವಿಸುವ ಸಾಧ್ಯತೆ ಇದೆ.
ಮದುವೆ ಸಮಾರಂಭ ಮುಗಿಸಿ ಹಿಂದಿರುಗುತ್ತಿದ್ದರು, ಮರ್ದಾದಲ್ಲಿ ಅಪಘಾತ ಸಂಭವಿಸಿದೆ. ಡಿಎಂ, ಎಸ್ಪಿ ಸೇರಿದಂತೆ ಹಲವು ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಬಸ್ನಲ್ಲಿ 35ಕ್ಕೂ ಹೆಚ್ಚು ಮಂದಿ ಇದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಸ್ಪಂಧಿಸಿ, ಸ್ಥಳಕ್ಕೆ ಆಗಮಿಸಿ ಪರಿಹಾರ ಕಾರ್ಯ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಹರ್ಯಾಣ: ನಿಂತಿದ್ದ ವಾಹನಕ್ಕೆ ಡಿಕ್ಕಿ ಹೊಡೆದ ಕಾರು, ಆರು ಮಂದಿ ಸಾವು, 6 ಜನರಿಗೆ ಗಾಯ ಹರ್ಯಾಣದ ರೇವಾರಿಯಲ್ಲಿ ಭಾನುವಾರ ತಡರಾತ್ರಿ ಕಾರೊಂದು ನಿಂತಿದ್ದ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ 6 ಮಂದಿ ಸಾವನ್ನಪ್ಪಿದ್ದು, 6 ಜನರು ಗಾಯಗೊಂಡಿರುವ ಘಟನೆ ವರದಿಯಾಗಿದೆ. ಮಸಾಣಿ ಗ್ರಾಮದ ಸರ್ಕಾರಿ ಶಾಲೆಯ ಬಳಿ ಅಪಘಾತ ಸಂಭವಿಸಿದೆ. ಎಕ್ಸ್‌ಯುವಿ ಖಾಟೂ ಗ್ರಾಮದಿಂದ ದೆಹಲಿಗೆ ಹಿಂತಿರುಗುತ್ತಿತ್ತು. ಘರ್ಷಣೆಯಲ್ಲಿ ನಾಲ್ವರು ಮಹಿಳೆಯರು ಮತ್ತು ಇಬ್ಬರು ಪುರುಷರು ಸಾವನ್ನಪ್ಪಿದ್ದಾರೆ.
ಮತ್ತಷ್ಟು ಓದಿ: ಮಧ್ಯ ಪ್ರದೇಶ: ರಾಜ್ಯ ಸಚಿವಾಲಯದಲ್ಲಿ ಭಾರೀ ಅಗ್ನಿ ಅವಘಡ
ಖಾರ್ಖರ ಗ್ರಾಮದ ಬಳಿ ಕೆಲವರು ಸ್ಟೆಪ್ನಿಯಿಂದ ನಿಲ್ಲಿಸಿದ್ದ ವಾಹನದ ಟೈರ್ ಬದಲಾಯಿಸುತ್ತಿದ್ದಾಗ ಈ ಘಟನೆ ನಡೆದಿದೆ. ನಿಂತಿದ್ದ ವಾಹನಕ್ಕೆ ಎಕ್ಸ್‌ಯುವಿ ಡಿಕ್ಕಿ ಹೊಡೆದ ನಂತರ ಅವರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. XUV ಅದೇ ಹೌಸಿಂಗ್ ಸೊಸೈಟಿಯಲ್ಲಿ ವಾಸಿಸುವ ಜನರನ್ನು ಹೊತ್ತೊಯ್ಯುತ್ತಿತ್ತು. ಸಂತ್ರಸ್ತರ ಮರಣೋತ್ತರ ಪರೀಕ್ಷೆ ವರದಿ ನಡೆಯಲಿದೆ.
ಸಸಾರಂನಲ್ಲಿ ಟ್ರಕ್ ಹರಿದು ಓರ್ವ ಸಾವು
ಸಸಾರಂನ ಅರಾ-ಸಸಾರಂ ರಸ್ತೆಯ ನೋಖಾ ಪೊಲೀಸ್ ಠಾಣೆ ವ್ಯಾಪ್ತಿಯ ಪೆನಾರ್ ಗ್ರಾಮದ ಬಳಿ ಎರಡು ಬೈಕ್‌ಗಳ ನಡುವೆ ಡಿಕ್ಕಿ ಸಂಭವಿಸಿ ಗಾಯಾಳುಗಳು ರಸ್ತೆಗೆ ಬಿದ್ದಿದ್ದಾರೆ.ವೇಗವಾಗಿ ಬಂದ ಟ್ರಕ್ ಇಬ್ಬರು ಬೈಕ್ ಸವಾರರನ್ನು ನುಜ್ಜುಗುಜ್ಜುಗೊಳಿಸಿದೆ, ಅವರಲ್ಲಿ ಒಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ಘೋರ್ಡಿಹಿ ಗ್ರಾಮದ ನಿವಾಸಿ ಸುನಿಲ್ ಚೌಧರಿ ಎಂದು ಗುರುತಿಸಲಾಗಿದೆ.