ಈ ಬಾರಿ ವಿದ್ಯುತ್ ಅವಘಡ: ಸುಟ್ಟು ಕರಕಲಾದ 8 ಕೃಷಿ ಕಾರ್ಮಿಕರು

ಹೈದರಾಬಾದ್: ಕಾರ್ಮಿಕರ ವಿಷಯದಲ್ಲಿ ಈ ಬಾರಿ ಆಂಧಪ್ರದೇಶದಿಂದ ಭಾರಿ ದಾರುಣ ಘಟನೆಯೊಂದು ವರದಿಯಾಗಿದೆ. ಮೆಣಿಸಿನ ಕಾಯಿ ತುಂಬಿಕೊಂಡು ಕಾರ್ಮಿಕರೊಂದಿಗೆ ತೆರಳುತ್ತಿದ್ದ ಟ್ರಾಕ್ಟರ್​ಗೆ ವಿದ್ಯುತ್ ತಂತಿ ತಗುಲಿದೆ. ಆ ವೇಳೆ ವಿದ್ಯುತ್ ಹರಿದು 8 ಜನ ಕಾರ್ಮಿಕರು ಸುಟ್ಟು ಕರಕಲಾಗಿದ್ದಾರೆ. ಹಲವರಿಗೆ ಸುಟ್ಟ ಗಾಯಗಳಾಗಿವೆ. ಟ್ರಾಕ್ಟರ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದದ್ದರಿಂದ ಘಟನೆ ಸಂಭವಿಸಿದೆ. ಪ್ರಕಾಶಂ ಜಿಲ್ಲೆಯ ನಾಗಲುಪ್ಪಲಪಾಡು ಮಂಡಲಂ ಮಾಚವರಂನಲ್ಲಿ ಈ ದುರ್ಘಟನೆ ನಡೆದಿದೆ. ಮೃತರ ಪೈಕಿ ಐವರು ಮಹಿಳಾ ಕಾರ್ಮಿಕರಿದ್ದರೆ, ಮೂವರು ಪುರುಷ ಕಾರ್ಮಿಕರು. ದುರಂತದ […]

ಈ ಬಾರಿ ವಿದ್ಯುತ್ ಅವಘಡ: ಸುಟ್ಟು ಕರಕಲಾದ 8 ಕೃಷಿ ಕಾರ್ಮಿಕರು
ಸಾಧು ಶ್ರೀನಾಥ್​

Updated on: May 15, 2020 | 11:12 AM

ಹೈದರಾಬಾದ್: ಕಾರ್ಮಿಕರ ವಿಷಯದಲ್ಲಿ ಈ ಬಾರಿ ಆಂಧಪ್ರದೇಶದಿಂದ ಭಾರಿ ದಾರುಣ ಘಟನೆಯೊಂದು ವರದಿಯಾಗಿದೆ. ಮೆಣಿಸಿನ ಕಾಯಿ ತುಂಬಿಕೊಂಡು ಕಾರ್ಮಿಕರೊಂದಿಗೆ ತೆರಳುತ್ತಿದ್ದ ಟ್ರಾಕ್ಟರ್​ಗೆ ವಿದ್ಯುತ್ ತಂತಿ ತಗುಲಿದೆ. ಆ ವೇಳೆ ವಿದ್ಯುತ್ ಹರಿದು 8 ಜನ ಕಾರ್ಮಿಕರು ಸುಟ್ಟು ಕರಕಲಾಗಿದ್ದಾರೆ. ಹಲವರಿಗೆ ಸುಟ್ಟ ಗಾಯಗಳಾಗಿವೆ. ಟ್ರಾಕ್ಟರ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದದ್ದರಿಂದ ಘಟನೆ ಸಂಭವಿಸಿದೆ. ಪ್ರಕಾಶಂ ಜಿಲ್ಲೆಯ ನಾಗಲುಪ್ಪಲಪಾಡು ಮಂಡಲಂ ಮಾಚವರಂನಲ್ಲಿ ಈ ದುರ್ಘಟನೆ ನಡೆದಿದೆ.

ಮೃತರ ಪೈಕಿ ಐವರು ಮಹಿಳಾ ಕಾರ್ಮಿಕರಿದ್ದರೆ, ಮೂವರು ಪುರುಷ ಕಾರ್ಮಿಕರು. ದುರಂತದ ಬಗ್ಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ತೀವ್ರ ಆಘಾತ ವ್ಯಕ್ತಪಡಿಸಿದ್ದು, ದುರ್ಘಟನೆಯಲ್ಲಿ ಗಾಯಗೊಂಡವರಿಗೆ ಸ್ಥಳೀಯವಾಗಿ ಕೂಡಲೇ ಚಿಕಿತ್ಸೆ ನೀಡಲು ಅದೇಶಿಸಿದ್ದಾರೆ.

Published On - 10:42 am, Fri, 15 May 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us