8 Years of Modi Government Live: ಮೋದಿ ಸರ್ಕಾರಕ್ಕೆ 8 ವರ್ಷ, ಚೆನ್ನೈ-ಹೈದರಾಬಾದ್ನಲ್ಲಿ ವಿವಿಧ ಕಾರ್ಯಕ್ರಮ
PM Modi in Tamil Nadu Live Updates: ಪ್ರಧಾನಿ ನರೇಂದ್ರ ಮೋದಿ ಅವರು 2014ರಲ್ಲಿ ಪ್ರಮಾಣವಚನ ಸ್ವೀಕರಿಸಿ ಇಂದಿಗೆ (ಮೇ 26) ಎಂಟು ವರ್ಷ ತುಂಬಿದೆ. ಇತ್ತೀಚೆಗಷ್ಟೇ ಜಪಾನ್ನ ರಾಜಧಾನಿ ಟೋಕಿಯೊದಲ್ಲಿ ನಡೆಸಿದ್ದ ಕ್ವಾಡ್ ಸಮಾವೇಶದಿಂದ ಹಿಂದಿರುಗಿರುವ ಪ್ರಧಾನಿ, ಇಂದು ತೆಲಂಗಾಣದ ಹೈದರಾಬಾದ್ ಮತ್ತು ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ನಡೆಯಲಿರುವ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಮೊದಲ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿ ಇಂದಿಗೆ (ಮೇ 26) ಎಂಟು ವರ್ಷಗಳಾಗುತ್ತಿವೆ. 2014ರ ಮೇ 26ರಂದು ಅವರು ಮೊದಲ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಇತ್ತೀಚೆಗಷ್ಟೇ ಜಪಾನ್ನ ರಾಜಧಾನಿ ಟೋಕಿಯೊದಲ್ಲಿ ನಡೆಸಿದ್ದ ಕ್ವಾಡ್ ಸಮಾವೇಶದಿಂದ ಹಿಂದಿರುಗಿರುವ ಪ್ರಧಾನಿ, ಇಂದು ತೆಲಂಗಾಣದ ಹೈದರಾಬಾದ್ ಮತ್ತು ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ನಡೆಯಲಿರುವ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
LIVE NEWS & UPDATES
-
ಅಮರ ವೀರರ ಬಲಿದಾನ ಉಜ್ವಲ ಭವಿಷ್ಯಕ್ಕಾಗಿ
ತೆಲಂಗಾಣವನ್ನು ನಾಶ ಮಾಡುತ್ತಿರುವವರು ಇಂದಿಗೂ ಇದ್ದಾರೆ. ಅಮರ ವೀರರ ಬಲಿದಾನ ಒಂದೇ ಕುಟುಂಬಕ್ಕಾಗಿ ಅಲ್ಲ, ಉಜ್ವಲ ಭವಿಷ್ಯಕ್ಕಾಗಿ ಈ ತ್ಯಾಗ ಮಾಡಲಾಗಿದೆ ಎಂದು ಮೋದಿ ಹೇಳಿದರು. ತೆಲಂಗಾಣದಲ್ಲಿ ವಂಶಪಾರಂಪರ್ಯ ರಾಜಕಾರಣದ ವಿರುದ್ಧ ಹೋರಾಡಬೇಕೆಂದರು. ತೆಲಂಗಾಣದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆಗಳು ನಡೆಯುತ್ತಿವೆ ಎಂದು ಮೋದಿ ಕಳವಳ ವ್ಯಕ್ತಪಡಿಸಿದರು.
-
ರೈಲು ನಿಲ್ದಾಣಗಳು ಮೇಲ್ದರ್ಜೆಗೆ
ಚೆನ್ನೈನ ಎಗ್ಮೋರ್, ರಾಮೇಶ್ವರಂ, ಮದುರೈ, ಕಾಟ್ಪಾಡಿ ಮತ್ತು ಕನ್ಯಾಕುಮಾರಿ ರೈಲು ನಿಲ್ದಾಣಗಳ ಅಭಿವೃದ್ಧಿಗೂ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ. ಈ ರೈಲು ನಿಲ್ದಾಣಗಳನ್ನು ₹ 1,800 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ.
-
ಚತುಷ್ಪಥ ಡಬಲ್ ಡೆಕರ್ ರಸ್ತೆ
ಚೆನ್ನೈ ನಗರದಲ್ಲಿ 21 ಕಿಮೀ ಉದ್ದದ ಚತುಷ್ಪಥ ಡಬಲ್ ಡೆಕರ್ ಎಲಿವೇಟೆಡ್ ರಸ್ತೆ ನಿರ್ಮಾಣ ಕಾಮಗಾರಿಗೂ ಇದೇ ವೇಳೆ ಮೋದಿ ಚಾಲನೆ ನೀಡಲಿದ್ದಾರೆ. ಈ ರಸ್ತೆಯು ಚೆನ್ನೈ ಬಂದರಿನಿಂದ ಮದುರವೊಯಲ್ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುತ್ತದೆ. ಈ ರಸ್ತೆಯನ್ನು ₹ 5,850 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ.
ವಿವಿಧ ಯೋಜನೆಗಳಿಗೆ ಶಿಲಾನ್ಯಾಸ
₹ 28,540 ಕೋಟಿ ವೆಚ್ಚದ ಆರು ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಇದೇ ಸಂದರ್ಭದಲ್ಲಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದರಲ್ಲಿ ₹ 14,870 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ ವೇ ಸಹ ಸೇರಿದೆ.
The projects being inaugurated include:
Madurai-Theni railway gauge conversion project.
Third railway line between Tambaram-Chengalpattu.
2 natural gas pipelines.
Houses constructed as part of Light House Project, Chennai. pic.twitter.com/Iib6NsfzYg
— Narendra Modi (@narendramodi) May 25, 2022
ಬಡವರಿಗೆ ಮನೆಗಳು
ಚೆನ್ನೈನಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ₹ 116 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ 1,152 ಮನೆಗಳನ್ನು ಮೋದಿ ಉದ್ಘಾಟಿಸಲಿದ್ದಾರೆ.
The foundation stones will be laid for key projects such as:
Bengaluru-Chennai Expressway.
Redevelopment of 5 stations – Chennai Egmore, Rameswaram, Madurai, Katpadi and Kanniyakumari.
Multi Modal Logistic Park at Chennai. pic.twitter.com/4jZFBipZ0a
— Narendra Modi (@narendramodi) May 25, 2022
ನೈಸರ್ಗಿಕ ಅನಿಲ ಕೊಳವೆ ಮಾರ್ಗ
ಎಣ್ಣೋರ್-ಚೆಂಗಲುಪಟ್ಟು (115 ಕಿಮೀ) ಮತ್ತು ತುರುವಳ್ಳೂರು-ಬೆಂಗಳೂರು (271 ಕಿಮೀ) ನೈಸರ್ಗಿಕ ಅನಿಲ ಕೊಳವೆ ಮಾರ್ಗಗಳನ್ನು ಪ್ರಧಾನಿ ನರೇಂದ್ರ ಮೋದಿ ಇದೇ ವೇಳೆ ಉದ್ಘಾಟಿಸಲಿದ್ದಾರೆ. ಈ ಕೊಳವೆ ಮಾರ್ಗಗಳನ್ನು ₹ 1,760 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.
ರೈಲು ಮಾರ್ಗ ಲೋಕಾರ್ಪಣೆ
₹ 500 ಕೋಟಿ ವೆಚ್ಚದಲ್ಲಿ 75 ಕಿಮೀ ಉದ್ದದ ಮಧುರೈ-ಥೇಣಿ ರೈಲು ಮಾರ್ಗವನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಚೆನ್ನೈ ಉಪನಗರಗಳಾದ ಥಂಬಂ ಮತ್ತು ಚೆಂಗಲಪಟ್ಟು ನಡುವೆ 30 ಕಿಮೀ ಅಂತರದ 3ನೇ ರೈಲು ಮಾರ್ಗ ನಿರ್ಮಿಸಲಾಗಿದೆ. ಈ ಕಾಮಗಾರಿಗೆ ₹ 590 ಕೋಟಿ ವೆಚ್ಚವಾಗಿದೆ. ಈ ರೈಲು ಮಾರ್ಗಗಳನ್ನೂ ಪ್ರಧಾನಿ ನರೇಂದ್ರ ಮೋದಿ ಇಂದು ಲೋಕಾರ್ಪಣೆ ಮಾಡಲಿದ್ದಾರೆ.
ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ, ಲೋಕಾರ್ಪಣೆ
ಹೈದರಾಬಾದ್ನಿಂದ ಚೆನ್ನೈಗೆ ತೆರಳಲಿರುವ ಪ್ರಧಾನಿ ನರೇಂದ್ರ ಮೋದಿ, ₹ 31,400 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಪೂರ್ಣಗೊಂಡಿರುವ ₹ 2,960 ಕೋಟಿ ಮೊತ್ತದ ವಿವಿಧ ಕಾಮಗಾರಿಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಮುಂಚೂಣಿ ಶಿಕ್ಷಣ ಸಂಸ್ಥೆ
ಐಎಸ್ಬಿ ಶಿಕ್ಷಣ ಸಂಸ್ಥೆಯನ್ನು 2ನೇ ಡಿಸೆಂಬರ್ 2001ರಂದು ಅಂದಿನ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಉದ್ಘಾಟಿಸಿದ್ದರು. ದೇಶದ ಮುಂಚೂಣಿ ಬ್ಯುಸಿನೆಸ್ ಸ್ಕೂಲ್ ಎನಿಸಿರುವ ಹೈದರಾಬಾದ್ ಐಎಸ್ಬಿ (Indian School of Business – ISB) ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ನೀಡಲು ಸರ್ಕಾರದ ವಿವಿಧ ಇಲಾಖೆಗಳು ಮತ್ತು ಸಚಿವಾಲಯಗಳೊಂದಿಗೆ ಸಹಯೋಗ ಹೊಂದಿದೆ.
ಹೈದರಾಬಾದ್ ಕಾರ್ಯಕ್ರಮ
ಇಂದು ಮಧ್ಯಾಹ್ನ 2 ಗಂಟೆಗೆ ನಡೆಯಲಿರುವ ಹೈದರಾಬಾದ್ನ ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್ನ 20ನ ವಾರ್ಷಿಕೋತ್ಸವ ಸಮಾರಂಭದಲ್ಲಿ ಮೋದಿ ಭಾಗವಹಿಸಲಿದ್ದಾರೆ. ಸ್ನಾತಕೋತ್ತರ ಪದವೀಧರರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
Published On - May 26,2022 10:49 AM