ತನ್ನ ಲಿವ್ ಇನ್ ಸಂಗಾತಿ ಶ್ರದ್ಧಾ ವಾಕರ್ನ್ನು(Shraddha Walkar) ಕೊಂದು ದೇಹದ ಭಾಗಗಳನ್ನು ವಿಲೇವಾರಿ ಮಾಡಿರುವುದಾಗಿ ಪಾಲಿಗ್ರಾಫ್ ಪರೀಕ್ಷೆಯಲ್ಲಿ ಅಫ್ತಾಬ್ ಅಮೀನ್ ಪೂನಾವಾಲಾ (Aaftab Amin Poonawala) ತಪ್ಪೊಪ್ಪಿಕೊಂಡಿರುವುದಾಗಿ ರೋಹಿಣಿಯಲ್ಲಿರು ವಿಧಿ ವಿಜ್ಞಾನ ಪ್ರಯೋಗಾಲಯದ (Forensic Science Laboratory) ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ. ಅಂದಹಾಗೆ ಅಫ್ತಾಬ್ ಹಲವಾರು ಹುಡುಗಿಯರೊಂದಿಗೆ ಸಂಬಂಧ ಹೊಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ವರದಿ ತಿಳಿಸಿದೆ. ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಅಫ್ತಾಬ್ನ ಪಾಲಿಗ್ರಾಫ್ ಪರೀಕ್ಷೆ ಮಂಗಳವಾರ ಮುಗಿದಿದೆ. ಸೋಮವಾರ ಅವರನ್ನು ಕರೆದೊಯ್ಯುತ್ತಿದ್ದ ಪೊಲೀಸ್ ವ್ಯಾನ್ ಮೇಲೆ ದಾಳಿ ನಡೆಸಲಾಗಿತ್ತು. ಪಾಲಿಗ್ರಾಫ್ ಪರೀಕ್ಷೆಯಲ್ಲಿ ತಪ್ಪೊಪ್ಪಿಗೆ ನ್ಯಾಯಾಲಯದಲ್ಲಿ ಸ್ವೀಕಾರಾರ್ಹವಲ್ಲ. ಆದರೆ ಅಫ್ತಾಬ್ ಸತ್ಯ ಹೇಳುತ್ತಿದ್ದಾನೆಯೇ ಅಥವಾ ತನಿಖೆಯನ್ನು ದಾರಿ ತಪ್ಪಿಸುತ್ತಿದ್ದಾನೆಯೇ ಎಂದು ಖಚಿತಪಡಿಸಿಕೊಳ್ಳಲು ಪೊಲೀಸರು ಪರೀಕ್ಷೆ ನಡೆಸಬೇಕು ಎಂದಿದ್ದಾರೆ. ಅಲ್ಲದೆ, ಪಾಲಿಗ್ರಾಫ್ ಪರೀಕ್ಷೆಯಲ್ಲಿ ತಪ್ಪೊಪ್ಪಿಗೆಗಳು, ಕೆಲವು ವಸ್ತು ಸಾಕ್ಷ್ಯಗಳ ಪತ್ತೆಗೆ ಸಹಾಯವಾಗಬಹುದು. ಇನ್ನು ಅಫ್ತಾಬ್‌ನ್ನು ನಾರ್ಕೋ-ಅನಾಲಿಸಿಸ್ ಪರೀಕ್ಷೆಗೆ ಒಳಪಡಿಸುವುದು ಬಾಕಿ ಇದೆ. ಅಫ್ತಾಬ್‌ನ್ನು ನವೆಂಬರ್ 12 ರಂದು ಬಂಧಿಸಲಾಗಿದ್ದು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾನೆ. ಆತನ ತಪ್ಪೊಪ್ಪಿಗೆಯಿಂದಲೇ ಪೊಲೀಸರು ಮೇ ತಿಂಗಳಲ್ಲಿ ದೆಹಲಿಯಲ್ಲಿ ನಡೆದ ಭೀಕರ ಹತ್ಯೆಯ ತನಿಖೆ ಮುಂದುವರಿಸಿದ್ದರು.
Shraddha murder case | Accused Aftab Poonawala has confessed that he murdered Shraddha and disposed off parts of her body in a jungle. He has also confessed to being in a relationship with several girls: FSL Sources
ಇದನ್ನೂ ಓದಿ— ANI (@ANI) November 30, 2022
ವಿಚಾರಣೆಯ ಸಮಯದಲ್ಲಿ ಅಫ್ತಾಬ್, ಜಗಳದ ಸಮಯದಲ್ಲಿ ಶ್ರದ್ಧಾಳನ್ನು ಕತ್ತು ಹಿಸುಕಿದ್ದು, ಹೇಗೆ ಕತ್ತು ಹಿಸುಕಿದೆ? ನಂತರ ಅವಳ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ಯಾರಿಗೂ ಅನುಮಾನ ಬರದಂತೆ ಅವುಗಳನ್ನು ಒಂದೊಂದಾಗಿ ಹೇಗೆ ವಿಲೇವಾರಿ ಮಾಡಿದೆ ಎಂಬ ಹಲವಾರು ವಿವರಗಳನ್ನು ಬಹಿರಂಗಪಡಿಸಿದ್ದಾನೆ. ಶ್ರದ್ಧಾಳನ್ನು ಹತ್ಯೆ ಮಾಡಿದ ಮರುದಿನವೇ ಅಫ್ತಾಬ್ ದೇಹದ ಭಾಗಗಳನ್ನು ಸಂಗ್ರಹಿಸಿಡಲು ಫ್ರಿಡ್ಜ್ ಖರೀದಿಸಿದ್ದ.
ದೆಹಲಿಗೆ ಸ್ಥಳಾಂತರಗೊಳ್ಳುವ ಮೊದಲು ಮಹಾರಾಷ್ಟ್ರದಲ್ಲಿರುವಾಗಲೇ ಶ್ರದ್ಧಾ ಮತ್ತು ಅಫ್ತಾಬ್ ಸಂಬಂಧದಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು ಎಂದು ಪೊಲೀಸರು ತನಿಖೆಯಿಂದ ತಿಳಿದುಕೊಂಡಿದ್ದಾರೆ. ಶ್ರದ್ಧಾಳಿಗೆ ಅಫ್ತಾಬ್ ಥಳಿಸುತ್ತಿದ್ದ ಎಂಬುದು ಆಕೆಯ ಆಪ್ತರಿಗೆ ತಿಳಿದಿತ್ತು. ಶ್ರದ್ಧಾ ಕೂಡ ಅಫ್ತಾಬ್ ತನಗೆ ಮೋಸ ಮಾಡಿರುವ ಶಂಕೆ ವ್ಯಕ್ತಪಡಿಸಿದ್ದಳು. ಪೊಲೀಸರ ಪ್ರಕಾರ, ಅಫ್ತಾಬ್ ವಿವಿಧ ಡೇಟಿಂಗ್ ಸೈಟ್‌ಗಳ ಮೂಲಕ ಸುಮಾರು 15 ರಿಂದ 20 ಹುಡುಗಿಯರೊಂದಿಗೆ ಸಂಪರ್ಕ ಹೊಂದಿದ್ದನಾದರೂ ಇದು ಯಾವಾಗ ಆಗಿತ್ತು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಮತ್ತಷ್ಚು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:56 pm, Wed, 30 November 22