AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿಯಲ್ಲಿ ಪೌರ ಕಾರ್ಮಿಕರ ಮೇಲೆ ಬಿಜೆಪಿ ಶಾಸಕ ಹಲ್ಲೆ ನಡೆಸಿರುವುದಾಗಿ ಎಎಪಿ ಆರೋಪ, ವಿಡಿಯೊ ಬಿಡುಗಡೆ

ನೈರ್ಮಲ್ಯದ ವಿಷಯವಾಗಿ ಇತ್ತೀಚೆಗೆ ನಡೆದ ಪೌರ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಸೋತಿರುವ ತನ್ನ ಹತಾಶೆಯನ್ನು ಹೊರಹಾಕುತ್ತಿದೆ ಎಂದು ಎಎಪಿ ಹೇಳಿದೆ.

ದೆಹಲಿಯಲ್ಲಿ ಪೌರ ಕಾರ್ಮಿಕರ ಮೇಲೆ ಬಿಜೆಪಿ ಶಾಸಕ ಹಲ್ಲೆ ನಡೆಸಿರುವುದಾಗಿ ಎಎಪಿ ಆರೋಪ, ವಿಡಿಯೊ ಬಿಡುಗಡೆ
ಪೌರ ಕಾರ್ಮಿಕರ ಮೇಲೆ ಹಲ್ಲೆ (ವಿಡಿಯೊ ಚಿತ್ರ)
TV9 Web
| Edited By: ರಶ್ಮಿ ಕಲ್ಲಕಟ್ಟ|

Updated on: Dec 29, 2022 | 8:55 PM

Share

ದೆಹಲಿ: ಬಿಜೆಪಿ ಶಾಸಕ ಅಭಯ್ ವರ್ಮಾ(Abhay Verma) ದೆಹಲಿಯಲ್ಲಿ ಪೌರ ಕಾರ್ಮಿಕರೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ಆಮ್ ಆದ್ಮಿ ಪಕ್ಷ (AAP) ಗುರುವಾರ ಆರೋಪಿಸಿದೆ, ಆದರೆ ಶಾಸಕರು ಈ ಆರೋಪ ನಿರಾಕರಿಸಿದ್ದು ಸಾರ್ವಜನಿಕ ಶೌಚಾಲಯಕ್ಕೆ ಏಕೆ ಬೀಗ ಹಾಕಿದ್ದೀರಿ ಎಂದು ಮಾತ್ರ ಕೇಳಿದ್ದೇನೆ ಎಂದಿದ್ದಾರೆ. ಎಎಪಿ ಶಾಸಕ ಕುಲದೀಪ್ ಕುಮಾರ್ (Kuldeep Kumar) ವಿಡಿಯೊವನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ ಬಿಜೆಪಿ ಮತ್ತು ಎಎಪಿ ಪರಸ್ಪರ ಜಗಳವಾಡಿದೆ. ಶಾಸಕರು ಕೆಲಸಗಾರನನ್ನು ನಿಂದಿಸಿದ್ದಾರೆ ಮತ್ತು ಕಪಾಳಮೋಕ್ಷ ಮಾಡಿದ್ದಾರೆ ಎಂದು ಎಎಪಿ ಆರೋಪಿಸಿದೆ. ಪೌರ ಕಾರ್ಮಿಕರನ್ನು ಕೆಲವರು ತಳ್ಳಿ ಕಪಾಳಮೋಕ್ಷ ಮಾಡಿರುವುದು ವಿಡಿಯೊದಲ್ಲಿದೆ. ನೈರ್ಮಲ್ಯದ ವಿಷಯವಾಗಿ ಇತ್ತೀಚೆಗೆ ನಡೆದ ಪೌರ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಸೋತಿರುವ ತನ್ನ ಹತಾಶೆಯನ್ನು ಹೊರಹಾಕುತ್ತಿದೆ ಎಂದು ಎಎಪಿ ಹೇಳಿದೆ. ಎಎಪಿಯ ಹಿರಿಯ ನಾಯಕಿ ರಾಖಿ ಬಿರ್ಲಾ ಮಾತನಾಡಿ, ಕಾರ್ಮಿಕರ ಸುರಕ್ಷತೆಗೆ ಆಗ್ರಹಿಸಿ ದೆಹಲಿ ಪೊಲೀಸ್ ಆಯುಕ್ತರಿಗೆ ಪತ್ರ ಬರೆಯಲಾಗುವುದು. ದಲಿತ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಬಿಜೆಪಿ ಶಾಸಕರ ವಿರುದ್ಧ ಪ್ರಕರಣ ದಾಖಲಿಸುವಂತೆ ಕೋರುವುದಾಗಿ ಹೇಳಿದ್ದಾರೆ. ಬಿಜೆಪಿಯ ಕ್ರಮಗಳು ಅವರ ಮನಸ್ಥಿತಿಯನ್ನು ಬಿಂಬಿಸುತ್ತವೆ. ಇದು ಯಾವಾಗಲೂ ದಲಿತ ವಿರೋಧಿಯಾಗಿದೆ. ಅವರನ್ನು ಕೇವಲ ‘ವೋಟ್ ಬ್ಯಾಂಕ್’ ಎಂದು ನೋಡುತ್ತದೆ” ಎಂದು ರಾಖಿ ಬಿರ್ಲಾ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದರು.

ಆದರೆ ಬಿಜೆಪಿ ಶಾಸಕ ಅಭಯ್ ವರ್ಮಾ ಅವರು ಪ್ರತ್ಯಾರೋಪಗಳೊಂದಿಗೆ ಪ್ರತಿಕ್ರಿಯಿಸಿದ್ದು, ನನ್ನ ಸಮ್ಮುಖದಲ್ಲಿ ಜಗಳ ನಡೆದಿಲ್ಲ ಎಂದಿದ್ದಾರೆ. ನಾನು ಈ ಪ್ರದೇಶಕ್ಕೆ ಭೇಟಿ ನೀಡಿದಾಗ ಸ್ಲಂ ನಿವಾಸಿಗಳಿಗೆ ಮೀಸಲಾದ ಶೌಚಾಲಯಕ್ಕೆ ಬೀಗ ಹಾಕಲಾಗಿದೆ ಎಂಬ ದೂರು ಬಂದಿದ್ದು, ನಾನು ಕೆಲಸಗಾರನನ್ನು ಕೇಳಿದಾಗ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಆರೋಪಕ್ಕೆ ಕಾರ್ಮಿಕರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

”ಮೊದಲು ತನ್ನ ಬಳಿ ಕೀ ಇಲ್ಲ ಎಂದಿದ್ದರು. ಆದರೆ ನಾನು ಮತ್ತು ಸ್ಥಳೀಯರು ಒತ್ತಡ ಹೇರಿದಾಗ ಕೀ ತಂದು ಶೌಚಾಲಯ ತೆರೆದರು. ಇಲ್ಲಿ ಮದ್ಯವನ್ನೂ ಸಂಗ್ರಹಿಸಲಾಗಿದೆ’ ಎಂದು ಸ್ಥಳೀಯರು ಹೇಳಿದ್ದರು ಎಂದು ಶಾಸಕರು ಹೇಳಿದ್ದಾರೆ. ‘ಇಂತಹ ಸಾರ್ವಜನಿಕ ಸೌಲಭ್ಯವನ್ನು ಏಕೆ ಮುಚ್ಚಿಟ್ಟಿದ್ದೀರಿ ಎಂದು ಕೇಳುವುದು ಒಬ್ಬ ಜನಪ್ರತಿನಿಧಿಯಾಗಿ ನನ್ನ ಹಕ್ಕು, ಮುಂದೆಯೂ ಶೌಚಾಲಯಕ್ಕೆ ಬೀಗ ಹಾಕಿದರೆ ಖಂಡಿತ ಮತ್ತೊಮ್ಮೆ ಅಲ್ಲಿಗೆ ಹೋಗುತ್ತೇನೆ’ ಎಂದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
TV9 Web
TV9 Web

TV9 Kannada

Read More
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ