Accident: ಭೀಕರ ಅಪಘಾತ; 8 ಮಂದಿ ಸಾವು, 11 ಜನರಿಗೆ ಗಾಯ

Accident: ಭೀಕರ ಅಪಘಾತ; 8 ಮಂದಿ ಸಾವು, 11 ಜನರಿಗೆ ಗಾಯ
ಸಾಂಕೇತಿಕ ಚಿತ್ರ

ಲಾತೂರ್​-ಅಂಬಾಜೊಗೈ ರಸ್ತೆಯ ಸೈಗಾವ್ ಸಮೀಪ ಕ್ರೂಸರ್ ವಾಹನವು ಟ್ರಕ್​ಗೆ ಡಿಕ್ಕಿಯಾಯಿತು. ಅ

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Apr 24, 2022 | 8:33 AM

ಲಾತೂರ್: ಮಹಾರಾಷ್ಟ್ರದ ಲಾತೂರ್​ನಲ್ಲಿ ಸಂಭವಿಸಿರುವ ರಸ್ತೆ ಅಪಘಾತದಲ್ಲಿ 8 ಮಂದಿ ಮೃತಪಟ್ಟು, 11 ಮಂದಿಗೆ ಗಂಭೀರ ಗಾಯಗಳಾಗಿವೆ. ಲಾತೂರ್​-ಅಂಬಾಜೊಗೈ ರಸ್ತೆಯ ಸೈಗಾವ್ ಸಮೀಪ ಕ್ರೂಸರ್ ವಾಹನವು ಟ್ರಕ್​ಗೆ ಡಿಕ್ಕಿಯಾಯಿತು. ಅಪಘಾತದಲ್ಲಿ ಗಾಯಗೊಂಡ 11 ಮಂದಿಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಧಾವಿಸಿದ ಬರ್ದಾಪುರ್ ಪೊಲೀಸ್​ ಠಾಣೆಯ ಪೊಲೀಸರು ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು.

‘ಲಾತೂರ್ ಅಂಬಾಜೊಗೈ ರಸ್ತೆಯ ಸೈಗಾವ್ ಸಮೀಪದ ರಸ್ತೆಯಲ್ಲಿ ಟ್ರಕ್ ಮತ್ತು ಕ್ರೂಸ್ ಮುಖಾಮುಖಿಯಾದವು. ಅಪಘಾತದಲ್ಲಿ 8 ಮಂದಿ ಸ್ಥಳದಲ್ಲಿಯೇ ಮೃತಪಟ್ಟರೆ, 11 ಮಂದಿ ಗಂಭೀರವಾಗಿ ಗಾಯಗೊಂಡರು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಬರ್ದಾಪುರ್ ಠಾಣೆಯ ಅಸಿಸ್ಟೆಂಟ್ ಇನ್​ಸ್ಪೆಕ್ಟರ್ ಅಶೋಕ್ ಖಾರಟ್ ತಿಳಿಸಿದರು.

Follow us on

Related Stories

Most Read Stories

Click on your DTH Provider to Add TV9 Kannada