Jaggesh: ರಾಜ್ಯಸಭಾ ಸದಸ್ಯರಾಗಿ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದ ನಟ ಜಗ್ಗೇಶ್
Rajya Sabha Members: ರಾಜ್ಯಸಭೆಯಲ್ಲಿ ಇಂದು ನೂತನ ರಾಜ್ಯಸಭಾ ಸದಸ್ಯರು ಪ್ರಮಾಣವಚನ ಸ್ವೀಕರಿಸಿದ್ದಾರೆ.
ನವದೆಹಲಿ: ರಾಜ್ಯಸಭಾ ಸದಸ್ಯರಾಗಿ ನಟ ಜಗ್ಗೇಶ್ (Jaggesh), ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman), ಲೆಹರ್ಸಿಂಗ್ ಹಾಗೂ ಜೈರಾಮ್ ರಮೇಶ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಜ್ಯಸಭೆಯಲ್ಲಿ ಇಂದು ನೂತನ ರಾಜ್ಯಸಭಾ ಸದಸ್ಯರು ಪ್ರಮಾಣವಚನ ಸ್ವೀಕರಿಸಿದ್ದಾರೆ. ನಟ ಜಗ್ಗೇಶ್ ಕನ್ನಡ ಭಾಷೆಯಲ್ಲಿ ರಾಘವೇಂದ್ರ ಸ್ವಾಮಿಗಳ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ.
Smt @nsitharaman takes oath as the Member of Parliament (Rajya Sabha) in the presence of Hon’ble @VPSecretariat Shri @MVenkaiahNaidu in the Parliament House. The FM was recently elected to the Rajya Sabha from Karnataka for the second consecutive term. pic.twitter.com/2rUXw8obWQ
ಇದನ್ನೂ ಓದಿ— NSitharamanOffice (@nsitharamanoffc) July 8, 2022
ರಾಜ್ಯಸಭೆ ಚುನಾವಣೆಯಲ್ಲಿ ಕರ್ನಾಟಕದಿಂದ ಬಿಜೆಪಿ ಅಭ್ಯರ್ಥಿಗಳಾದ ನಿರ್ಮಲಾ ಸೀತಾರಾಮನ್ ಹಾಗೂ ಜಗ್ಗೇಶ್ ಜಯ ಸಾಧಿಸಿದ್ದರು. ನಿರ್ಮಲಾ ಸೀತಾರಾಮನ್ ಅವರಿಗೆ 46 ಮತಗಳು, ಜಗ್ಗೇಶ್ಗೆ 44 ಮತಗಳು, ಲೆಹರ್ ಸಿಂಗ್ಗೆ 33 ಮತಗಳು ಸಿಕ್ಕಿತ್ತು.
ಇಂದು ದೆಹಲಿಯಲ್ಲಿ ಪ್ರಮಾಣವಚನ ಸ್ವೀಕಾರ ಮಾಡುವ ಮೊದಲು ನಟ ಜಗ್ಗೇಶ್ ಹಾಗೂ ಅವರ ಪತ್ನಿ ಪರಿಮಳ ದೆಹಲಿಯಲ್ಲಿರುವ ರಾಯರ ಮಠಕ್ಕೆ ನಟ ಜಗ್ಗೇಶ್ ಭೇಟಿ ನೀಡಿ ಬೃಂದಾವನ ದರ್ಶನ ಮಾಡಿದ್ದಾರೆ. ರಾಜ್ಯ ಸಭಾ ಸದಸ್ಯನಾಗಿ ಪ್ರಮಾಣವಚನ ಸ್ವೀಕರಿಸುವ ಮುನ್ನ ಬೃಂದಾವನ ದರ್ಶನ ಮಾಡಿದ್ದಾರೆ. ಇಂದು ರಾಯರ ಹೆಸರುನಲ್ಲಿ ಕನ್ನಡದಲ್ಲಿ ಜಗ್ಗೇಶ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
Published On - 11:57 am, Fri, 8 July 22