Aditya L1 Live Stream: ಭಾರತದ ಮೊದಲ ಸೌರ ಮಿಷನ್ ಆದಿತ್ಯ ಎಲ್1 ಉಡಾವಣೆಗೆ ಕ್ಷಣಗಣನೆ, 42 ಗಂಟೆಗಳಷ್ಟೇ ಬಾಕಿ

|

Updated on: Sep 01, 2023 | 11:24 AM

ಚಂದ್ರಯಾನ 3 ರಲ್ಲಿ ಯಶಸ್ಸು ಗಳಿಸಿರುವ ಭಾರತವು  ಮೂನ್ ಮಿಷನ್​ ಎನ್ನುವ ಮತ್ತೊಂದು ಯಶಸ್ಸಿನತ್ತ ಹೆಜ್ಜೆ ಹಾಕಿದೆ. ದೇಶದ ಮೊದಲ ಸೌರ ಮಿಷನ್ ಆದಿತ್ಯ ಎಲ್​1(Aditya L1)ಅನ್ನು ಸೆಪ್ಟೆಂಬರ್ 2ರಂದು ಉಡಾವಣೆ ಮಾಡಲಾಗುತ್ತದೆ. ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮತ್ತೊಂದು ಇತಿಹಾಸ ಸೃಷ್ಟಿಸುವ ಸನಿಹದಲ್ಲಿದೆ. ಆದಿತ್ಯ ಎಲ್​1 ಮಿಷನ್ ಆಂಧ್ರಪ್ರದೇಶದ ಶ್ರೀಹರಿಕೋಟಾ ಬಾಹ್ಯಾಕಾಶ ನಿಲ್ದಾಣದಿಂದ ಉಡಾವಣೆಯಾಗಲಿದೆ. ನೀವು ಈ ಪ್ರಕ್ರಿಯೆಯನ್ನು ಲೈವ್ ಆಗಿ ವೀಕ್ಷಿಸಬಹುದು.

Aditya L1 Live Stream: ಭಾರತದ ಮೊದಲ ಸೌರ ಮಿಷನ್ ಆದಿತ್ಯ ಎಲ್1 ಉಡಾವಣೆಗೆ ಕ್ಷಣಗಣನೆ, 42 ಗಂಟೆಗಳಷ್ಟೇ ಬಾಕಿ
ಆದಿತ್ಯ ಎಲ್​1
Image Credit source: Live Hindustan
Follow us on

ಚಂದ್ರಯಾನ 3 ರಲ್ಲಿ ಯಶಸ್ಸು ಗಳಿಸಿರುವ ಭಾರತವು  ಮೂನ್ ಮಿಷನ್​ ಎನ್ನುವ ಮತ್ತೊಂದು ಯಶಸ್ಸಿನತ್ತ ಹೆಜ್ಜೆ ಹಾಕಿದೆ. ದೇಶದ ಮೊದಲ ಸೌರ ಮಿಷನ್ ಆದಿತ್ಯ ಎಲ್​1(Aditya L1)ಅನ್ನು ಸೆಪ್ಟೆಂಬರ್ 2ರಂದು ಉಡಾವಣೆ ಮಾಡಲಾಗುತ್ತದೆ. ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮತ್ತೊಂದು ಇತಿಹಾಸ ಸೃಷ್ಟಿಸುವ ಸನಿಹದಲ್ಲಿದೆ. ಆದಿತ್ಯ ಎಲ್​1 ಮಿಷನ್ ಆಂಧ್ರಪ್ರದೇಶದ ಶ್ರೀಹರಿಕೋಟಾ ಬಾಹ್ಯಾಕಾಶ ನಿಲ್ದಾಣದಿಂದ ಉಡಾವಣೆಯಾಗಲಿದೆ. ನೀವು ಈ ಪ್ರಕ್ರಿಯೆಯನ್ನು ಲೈವ್ ಆಗಿ ವೀಕ್ಷಿಸಬಹುದು.

ಆದಿತ್ಯ ಎಲ್​1 ಮಿಷನ್ ಉಡಾವಣೆ ಯಾವಾಗ?
ಇಸ್ರೋ ಪ್ರಕಾರ ಭಾರತದ ಮೊದಲ ಸೌರ ಮಿಷನ್ ಸೆಪ್ಟೆಂಬರ್ 2 ರಂದು ಬೆಳಗ್ಗೆ 11.50ಕ್ಕೆ ಉಡಾವಣೆಯಾಗಲಿದೆ, ಇಸ್ರೋ ಈ ಉಡಾವಣೆಯನ್ನು ನೇರ ಪ್ರಸಾರ ಮಾಡಲಿದೆ.

ಆದಿತ್ಯ ಎಲ್​1 ಮಿಷನ್​ ಲಾಂಚ್​ ಅನ್ನು ಎಲ್ಲಿ ವೀಕ್ಷಿಸಬಹುದು?

ಚಂದ್ರಯಾನ 3 ಮಿಷನ್​ನಂತೆ, ಆದಿತ್ಯ ಎಲ್​1 ಮಿಷನ್​ನ ನೇರ ಪ್ರಸಾರವನ್ನು ಆನ್​ಲೈನ್​ನಲ್ಲಿಯೂ ನೋಡಬಹುದು. ಇದರ ನೇರ ಪ್ರಸಾರವನ್ನು ಇಸ್ರೋದ ಅಧಿಕೃತ ಯೂಟ್ಯೂಬ್ ಚಾನೆಲ್, ವೆಬ್​ಸೈಟ್​ ಮತ್ತು ಫೇಸ್​ಬುಕ್ ಪುಟದಲ್ಲಿ ವೀಕ್ಷಿಸಬಹುದು. ಇದು ಭಾರತದ ಮೊದಲ ಸೌರ ಮಿಷನ್ ಆಗಿದ್ದು, ಈ ಕಾರ್ಯಾಚರಣೆಯಲ್ಲಿ ಸೂರ್ಯನ ಹೊರ ಪದರವನ್ನು ವೀಕ್ಷಿಸಲು ಬಾಹ್ಯಾಕಾಶ ನೌಕೆಯನ್ನು ಕಳುಹಿಸಲಾಗುತ್ತದೆ. ಬಾಹ್ಯಾಕಾಶ ನೌಕೆಯು ಭೂಮಿಯಿಂದ ಸುಮಾರು 1.5 ಮಿಲಿಯನ್ ಕಿಲೋಮೀಟರ್​ ದೂರದಲ್ಲಿರುವ ಎಲ್​1 ಪಾಯಿಂಟ್​ನಲ್ಲಿ ಸೂರ್ಯನ ಮೇಲ್ವಿಚಾರಣೆ ಮಾಡುತ್ತದೆ. ಲೈವ್ ಸ್ಟ್ರೀಮ್​ಗಾಗಿ ಇಲ್ಲಿ ಕ್ಲಿಕ್ ಮಾಡಿ 

ಆದಿತ್ಯ ಎಲ್​1 ಮಿಷನ್​ ಅನ್ನು PSLV-C57 ರಾಕೆಟ್ ಮೂಲಕ ಉಡಾವಣೆ ಮಾಡಲಾಗುವುದು. ಬಾಹ್ಯಾಕಾಶ ನೌಕೆಯು ತನ್ನೊಂದಿಗೆ 7 ಪೇಲೋಡ್‌ಗಳನ್ನು ಒಯ್ಯುತ್ತದೆ, ಇದು ದ್ಯುತಿಗೋಳ, ವರ್ಣಗೋಳ, ಮತ್ತು ಸೂರ್ಯನ ಹೊರಗಿನ ಪದರದ ಬಗ್ಗೆ ಮಾಹಿತಿ ಸಂಗ್ರಹಿಸಲಿದೆ.

ಆದಿತ್ಯ-ಎಲ್1 ಮಿಷನ್ ಸಂಪೂರ್ಣವಾಗಿ ಸ್ಥಳೀಯವಾಗಿದೆ. ಅನೇಕ ರಾಷ್ಟ್ರೀಯ ಸಂಸ್ಥೆಗಳು ಇದರ ತಯಾರಿಕೆಯಲ್ಲಿ ಭಾಗವಹಿಸಿವೆ. ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (IIA), ವಿಸಿಬಲ್ ಎಮಿಷನ್ ಲೈನ್ ಕರೋನಾಗ್ರಾಫ್ (VELC) ಪೇಲೋಡ್ ಅನ್ನು ಅಭಿವೃದ್ಧಿಪಡಿಸಿದೆ, ಆದರೆ ಪುಣೆಯ ಖಗೋಳವಿಜ್ಞಾನ ಮತ್ತು ಖಗೋಳ ಭೌತಶಾಸ್ತ್ರದ ಅಂತರ-ವಿಶ್ವವಿದ್ಯಾಲಯವು ಸೌರ ನೇರಳಾತೀತ ಇಮೇಜಿಂಗ್ ಟೆಲಿಸ್ಕೋಪ್ (SUIT) ಪೇಲೋಡ್ ಅನ್ನು ಅಭಿವೃದ್ಧಿಪಡಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:23 am, Fri, 1 September 23