ಆಗ್ರಾ ರೈಲಿನಲ್ಲಿ ಸಿಕ್ತು ದೇಹದ ಭಾಗಗಳು : ಆರೋಪಿಯ ಮನೆಯ ಅಡುಗೆ ಪಾತ್ರೆಯಲ್ಲೂ ಸಿಕ್ತು ಕೊಳೆತ ಮಾಂಸದ ತುಂಡುಗಳು

ಆಗ್ರಾ ರೈಲಿನಲ್ಲಿ ಪತ್ತೆಯಾದ ದೇಹದ ಭಾಗಗಳ ಪ್ರಕರಣದ ತನಿಖೆ ಚೆನ್ನೈನಲ್ಲಿ ಹೊಸ ತಿರುವು ಪಡೆದಿದೆ. ಹಯುಥನ್ ನಿಶಾ ಎಂಬ ಮಹಿಳೆಯ ದೇಹದ ಭಾಗಗಳು ಅಡುಗೆ ಪಾತ್ರೆಯಲ್ಲಿಯೂ ಸಿಕ್ಕಿವೆ. ಆರೋಪಿಗಳಾದ ಮಾಣಿಕ್ ಲಸ್ಕರ್ ಮತ್ತು ಭಾಗಬತಿ ಮಾಝಿ ತಲೆಮರೆಸಿಕೊಂಡಿದ್ದಾರೆ. ಡಿಎನ್‌ಎ ಪರೀಕ್ಷೆಗೆ ಮಾದರಿಗಳನ್ನು ಕಳುಹಿಸಲಾಗಿದೆ. ಹಣಕಾಸಿನ ವಿವಾದ ಅಥವಾ ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ.

ಆಗ್ರಾ ರೈಲಿನಲ್ಲಿ ಸಿಕ್ತು ದೇಹದ ಭಾಗಗಳು : ಆರೋಪಿಯ ಮನೆಯ ಅಡುಗೆ ಪಾತ್ರೆಯಲ್ಲೂ ಸಿಕ್ತು ಕೊಳೆತ ಮಾಂಸದ ತುಂಡುಗಳು
ರೈಲು

Updated on: Aug 24, 2026 | 7:54 AM

ಚೆನ್ನೈ, ಆಗಸ್ಟ್​ 24: ಚೆನ್ನೈನಿಂದ ನವದೆಹಲಿಗೆ ಹೊರಟಿದ್ದ ಎಕ್ಸ್‌ಪ್ರೆಸ್ ರೈಲಿ(Train)ನಲ್ಲಿ ಸೂಟ್‌ಕೇಸ್‌ನಲ್ಲಿ ಕೊಳೆತ ಸ್ಥಿತಿಯಲ್ಲಿ ಮಾನವ ದೇಹದ ಭಾಗಗಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಚೆನ್ನೈನಲ್ಲಿ ಮತ್ತಷ್ಟು ಭಯಾನಕ ಹಾಗೂ ಆಘಾತಕಾರಿ ಸತ್ಯಗಳು ಹೊರಬಿದ್ದಿವೆ. ತನಿಖೆ ನಡೆಸಿದ ಪೊಲೀಸರು, ಕೊಲೆಯಾದ ದೇಹದ ಭಾಗಗಳು ಒಡಿಶಾ ಮೂಲದ 28 ವರ್ಷದ ಹಯುಥನ್ ನಿಶಾ ಎಂಬ ಮಹಿಳೆಗೆ ಸೇರಿದ್ದು ಎಂದು ಗುರುತಿಸಿದ್ದಾರೆ.

ರೈಲಿನಲ್ಲಿ ದುರ್ವಾಸನೆ: ಆಗಸ್ಟ್ 5 ರಂದು ಚೆನ್ನೈ ಸೆಂಟ್ರಲ್‌ನಿಂದ ದೆಹಲಿಗೆ ತೆರಳುತ್ತಿದ್ದ ರೈಲು ಆಗ್ರಾ ನಿಲ್ದಾಣ ತಲುಪಿದಾಗ ಬೋಗಿಯಲ್ಲಿದ್ದ ಸೂಟ್‌ಕೇಸ್‌ನಿಂದ ತೀವ್ರ ದುರ್ವಾಸನೆ ಬಂದಿದೆ. ರೈಲ್ವೆ ಪೊಲೀಸರು ಪರಿಶೀಲಿಸಿದಾಗ ಕತ್ತರಿಸಿದ ಮಾನವ ದೇಹದ ಭಾಗಗಳು ಪತ್ತೆಯಾಗಿದ್ದವು.

ಆಗ್ರಾ ಪೊಲೀಸರ ಮಾಹಿತಿಯಂತೆ ಚೆನ್ನೈ ಸೆಂಟ್ರಲ್ ನಿಲ್ದಾಣದ ಸಿಸಿಟಿವಿ ಪರಿಶೀಲಿಸಿದಾಗ, ಇಬ್ಬರು ವ್ಯಕ್ತಿಗಳು ಅದೇ ಮಾದರಿಯ ಟ್ರಾಲಿ ಸೂಟ್‌ಕೇಸ್‌ನೊಂದಿಗೆ ರೈಲು ಹತ್ತಿರುವುದು ಸ್ಪಷ್ಟವಾಗಿ ದಾಖಲಾಗಿತ್ತು. ಶಂಕಿತರನ್ನು ಮಾಣಿಕ್ ಉದ್ದೀನ್ ಲಸ್ಕರ್ ಮತ್ತು ಭಾಗಬತಿ ಮಾಝಿ ಎಂದು ಗುರುತಿಸಿದ ಚೆನ್ನೈ ಪೊಲೀಸರು, ಉಪನಗರವಾದ ಗೂಡುವಾಂಚೇರಿಯಲ್ಲಿರುವ ಅವರ ಬಾಡಿಗೆ ಮನೆಯ ಮೇಲೆ ದಾಳಿ ನಡೆಸಿದರು.

ಮತ್ತಷ್ಟು ಓದಿ: ಬೆಂಗಳೂರು – ತಿರುವನಂತಪುರ ಮಧ್ಯೆ ವಿಶೇಷ ರೈಲು ಸಂಚಾರ: ಇಲ್ಲಿದೆ ವೇಳಾಪಟ್ಟಿ, ನಿಲುಗಡೆ ವಿವರ

ಮನೆಯನ್ನು ಶೋಧಿಸಿದಾಗ ಅಡುಗೆ ಪಾತ್ರೆಯೊಂದರಲ್ಲಿ ಮಹಿಳೆಯ ದೇಹದ ಉಳಿದ ಕೊಳೆತ ಭಾಗಗಳು ಪತ್ತೆಯಾಗಿದ್ದು, ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಇಬ್ಬರೂ ಆರೋಪಿಗಳು ತಲೆಮರೆಸಿಕೊಂಡಿದ್ದು, ಪತ್ತೆಗಾಗಿ ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿದೆ.

ಡಿಎನ್‌ಎ ಮ್ಯಾಚಿಂಗ್: ಆಗ್ರಾ ರೈಲಿನಲ್ಲಿ ಸಿಕ್ಕ ಸೂಟ್‌ಕೇಸ್ ಹಾಗೂ ಚೆನ್ನೈನ ಮನೆಯ ಪಾತ್ರೆಯಲ್ಲಿ ಪತ್ತೆಯಾದ ದೇಹದ ಭಾಗಗಳು ಒಂದೇ ಮಹಿಳೆಗೆ ಸೇರಿವೆಯೇ ಎಂಬುದನ್ನು ವೈಜ್ಞಾನಿಕವಾಗಿ ದೃಢಪಡಿಸಲು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಮಾದರಿಗಳನ್ನು ರವಾನಿಸಲಾಗಿದೆ.

ಸಂತ್ರಸ್ತೆಯ ಮಗ ಚೆನ್ನೈನಲ್ಲಿ ನಾಪತ್ತೆ ದೂರು ದಾಖಲಿಸಿದ್ದು, ಹಣಕಾಸಿನ ವಿವಾದ ಅಥವಾ ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಈ ಕ್ರೂರ ಹತ್ಯೆ ನಡೆದಿದೆಯೇ ಎಂಬ ಆಯಾಮದಲ್ಲಿ ತನಿಖೆ ಮುಂದುವರೆದಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us