AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

AIMIM Hate Speech: ಹಿಂದೂಗಳು ಒಬ್ಬರನ್ನು ಮದುವೆಯಾಗಿ ಮೂವರನ್ನು ಇಟ್ಟುಕೊಳ್ಳುತ್ತಾರೆ; ಶೌಕತ್ ಅಲಿ

ಮುಸ್ಲಿಮರು ಎರಡು ಮದುವೆಯಾಗುತ್ತಾರೆ. ಇಬ್ಬರು ಪತ್ನಿಯರನ್ನೂ ಗೌರವಿಸುತ್ತಾರೆ. ಆದರೆ, ಹಿಂದೂಗಳು ಒಂದು ಮದುವೆಯಾಗಿ ಮೂವರನ್ನು ಇಟ್ಟುಕೊಂಡಿರುತ್ತಾರೆ ಎಂದು ಎಐಎಂಐಎಂ ಉತ್ತರ ಪ್ರದೇಶ ಘಟಕದ ಅಧ್ಯಕ್ಷ ಶೌಕತ್ ಅಲಿ ಹೇಳಿದ್ದಾರೆ.

AIMIM Hate Speech: ಹಿಂದೂಗಳು ಒಬ್ಬರನ್ನು ಮದುವೆಯಾಗಿ ಮೂವರನ್ನು ಇಟ್ಟುಕೊಳ್ಳುತ್ತಾರೆ; ಶೌಕತ್ ಅಲಿ
ಶೌಕತ್ ಅಲಿ (ಟ್ವಿಟರ್ ಚಿತ್ರ)Image Credit source: Twitter Screengrab
TV9 Web
| Edited By: |

Updated on:Oct 16, 2022 | 10:50 AM

Share

ಲಖನೌ: ‘ಹಿಂದೂಗಳು (Hindu) ಹುಳಗಳು, ಒಂದು ಮದುವೆಯಾಗಿ ಮೂವರನ್ನು ಇಟ್ಟುಕೊಂಡಿರುತ್ತಾರೆ’ ಎಂದು ಎಐಎಂಐಎಂ (AIMIM) ಉತ್ತರ ಪ್ರದೇಶ (Uttar Pradesh) ಘಟಕದ ಅಧ್ಯಕ್ಷ ಶೌಕತ್ ಅಲಿ (Shaukat Ali) ಹೇಳಿದ್ದಾರೆ ಎನ್ನಲಾದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗಿದೆ. ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವಂಥ ಹೇಳಿಕೆ ನೀಡುವ ಮೂಲಕ ಕೋಮು ಸಾಮರಸ್ಯಕ್ಕೆ ಧಕ್ಕೆ ತಂದಿರುವ ಆರೋಪದಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಉತ್ತರ ಪ್ರದೇಶದ ಸಂಭಾಲ್​ನಲ್ಲಿ ನಡೆದ ಜಾಥಾದಲ್ಲಿ ಮಾತನಾಡಿದ್ದ ಶೌಕತ್ ಅಲಿ ಅವಹೇಳನಕಾರಿ ಹೇಳಿಕೆ ನೀಡಿದ್ದರು.

ಮುಸ್ಲಿಮರು 832 ವರ್ಷಗಳ ಕಾಲ ಹಿಂದೂಗಳನ್ನು ಆಳಿದರು. ಹಿಂದೂಗಳು ಕೈಮುಗಿದು ‘ಜಿ ಹುಜೂರ್’ ಎನ್ನುತ್ತಿದ್ದರು. ಅಂದು ನಮಗೆ ಕೈಮುಗಿಯುತ್ತಿದ್ದವರು ಇಂದು ಬೆದರಿಕೆಯೊಡ್ಡುತ್ತಿದ್ದಾರೆ ಎಂದು ಶೌಕತ್ ಹೇಳಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ವಿಡಿಯೊದಲ್ಲಿದೆ. ಮುಂದುವರಿದು, ಮುಸ್ಲಿಮರು ಎರಡು ಮದುವೆಯಾಗುತ್ತಾರೆ. ಆದರೆ, ಇಬ್ಬರು ಪತ್ನಿಯರನ್ನೂ ಗೌರವಿಸುತ್ತಾರೆ. ಹಿಂದೂಗಳು ಒಂದು ಮದುವೆಯಾಗಿ ಮೂವರನ್ನು ಇಟ್ಟುಕೊಂಡಿರುತ್ತಾರೆ ಎಂದೂ ಹೇಳಿದ್ದಾರೆ.

ಇದನ್ನೂ ಓದಿ
Image
BJP vs TRS: ಬಿಜೆಪಿ, ಟಿಆರ್​ಎಸ್​, ಎಐಎಂಐಎಂ ನಡುವೆ ವಾಗ್ಯುದ್ಧಕ್ಕೆ ತೆಲಂಗಾಣ ವಿಮೋಚನಾ ದಿನದ ನೆಪ
Image
ಪ್ರಚೋದನಕಾರಿ ವಾಟ್ಸಾಪ್​ ಸ್ಟೇಟಸ್​ನಿಂದ ಗಲಾಟೆ ಪ್ರಕರಣ; AIMIM ಜಿಲ್ಲಾಧ್ಯಕ್ಷ ನಜೀರ್ ಅಹಮ್ಮದ್ ಹೊನ್ಯಾಳ್ ಬಂಧನ
Image
West Bengal Elections 2021: ಓವೈಸಿಗೆ ಟಾಟಾ ಹೇಳಿ ಮಮತಾ ಬ್ಯಾನರ್ಜಿಗೆ ಬೆಂಬಲ ನೀಡಿದ AIMIM ಬಂಗಾಳ ಘಟಕದ ಅಧ್ಯಕ್ಷ
Image
ಡಿಎಂಕೆ ಜತೆ ಅಸಾದುದ್ದೀನ್​ ಓವೈಸಿ ಮೈತ್ರಿ ಮಾತುಕತೆ; AIMIM ಸೇರ್ಪಡೆಯಾದರೆ ಹಿಂದು ವಿರೋಧಿ ಹಣೆಪಟ್ಟಿ ಬರಬಹುದು ಎಂದು ಎಚ್ಚರಿಸಿದ ಉಳಿದ ಮುಸ್ಲಿಂ ಪಕ್ಷಗಳು

ಇದನ್ನೂ ಓದಿ: ಟಿಪ್ಪು ಪರಂಪರೆ ಅಳಿಸಲು ಸಾಧ್ಯವಿಲ್ಲ: ಟಿಪ್ಪು ಎಕ್ಸ್​ಪ್ರೆಸ್ ಹೆಸರು ಬದಲಾವಣೆಗೆ ಅಸಾದುದ್ದೀನ್​ ಒವೈಸಿ ಆಕ್ಷೇಪ 

ಶೌಕತ್ ಅಲಿ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್ 153ಎ (ಧರ್ಮ, ಜನಾಂಗ, ಜನ್ಮದ ಸ್ಥಳ, ಭಾಷೆಯ ಆಧಾರದಲ್ಲಿ ವಿವಿಧ ಗುಂಪುಗಳ ನಡುವೆ ದ್ವೇಷ ಹರಡಲು ಪ್ರಚೋದನೆ ನೀಡುವುದು), 295ಎ (ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದ ಕೃತ್ಯಗಳು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಬಿಜೆಪಿ ದುರ್ಬಲಗೊಂಡಾಗ ಅವರು ಮುಸ್ಲಿಮರ ಹಿಂದೆ ಬೀಳುತ್ತಾರೆ. ಮುಸ್ಲಿಮರು ಹೆಚ್ಚು ಮಕ್ಕಳನ್ನು ಪಡೆಯುತ್ತಾರೆ, ಎರಡು ಮದುವೆಯಾಗುತ್ತಾರೆ ಎಂದೆಲ್ಲ ಹೇಳುತ್ತಾರೆ. ಅದು ನಿಜ. ನಾವು ಎರಡು ಮದುವೆಯಾಗುತ್ತೇವೆ, ಆದರೆ, ಇಬ್ಬರು ಪತ್ನಿಯರನ್ನೂ ಒಂದೇ ರೀತಿ ಗೌರವಿಸುತ್ತೇವೆ. ಹಿಂದೂಗಳು ಒಂದು ಮದುವೆಯಾಗಿ ಮೂವರನ್ನು ಇಟ್ಟುಕೊಳ್ಳುತ್ತಾರೆ. ಅದು ಯಾರಿಗೂ ಗೊತ್ತಾಗುವುದಿಲ್ಲ’ ಎಂದು ಶೌಕತ್ ಅಲಿ ಹೇಳಿದ್ದಾರೆ.

ನಿರ್ದಿಷ್ಟ ಧರ್ಮ ಉದ್ದೇಶಿಸಿ ಹೇಳಿಲ್ಲವೆಂದ ಅಲಿ:

ಹೇಳಿಕೆ ವಿವಾದಕ್ಕೀಡಾಗುತ್ತಿದ್ದಂತೆಯೇ ಸ್ಪಷ್ಟನೆ ನೀಡಿರುವ ಅಲಿ, ನಿರ್ದಿಷ್ಟ ಧರ್ಮವನ್ನು ಉದ್ದೇಶಿಸಿ ಹಾಗೆ ಹೇಳಿಲ್ಲ. ನಮ್ಮ ವಿರುದ್ಧ ಯಾರು ಆರೋಪಗಳನ್ನು ಮಾಡುತ್ತಾರೋ ಅವರನ್ನಷ್ಟೇ ಉದ್ದೇಶಿಸಿ ಹೇಳಿಕೆ ನೀಡಿದ್ದೇನೆ ಎಂದಿದ್ದಾರೆ. ಅವರ ಹೇಳಿಕೆಗೆ ಬಗ್ಗೆ ಎಐಎಂಐಎಂ ಈವರೆಗೆ ಅಧಿಕೃತ ಹೇಳಿಕೆ ನೀಡಿಲ್ಲ.

Published On - 10:47 am, Sun, 16 October 22

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?