ಭಾರತ ವಿರೋಧಿ ವೆಬ್ಸೈಟ್, ಯುಟ್ಯೂಬ್ ಚಾನೆಲ್ಗಳ ನಿಷೇಧ: ಕೇಂದ್ರ ಸಚಿವ ಅನುರಾಗ್ ಠಾಕೂರ್
‘ವಿಶ್ವದ ಹಲವು ಪ್ರಮುಖ ದೇಶಗಳು ನಮ್ಮ ಕ್ರಮವನ್ನು ಗಮನಿಸಿವೆ. ಯುಟ್ಯೂಬ್ ಸಹ ಇಂಥ ಚಾನೆಲ್ಗಳನ್ನು ನಿರ್ಬಂಧಿಸಲು ಮುಂದಾಗಿದೆ’ ಎಂದು ತಿಳಿಸಿದರು.
ದೆಹಲಿ: ಭಾರತ ವಿರೋಧಿ ವಿಚಾರಗಳನ್ನು ಪ್ರಚಾರ ಮಾಡಿದ್ದಕ್ಕಾಗಿ 20 ಯುಟ್ಯೂಬ್ ಚಾನೆಲ್ಗಳು ಮತ್ತು ಎರಡು ವೆಬ್ಸೈಟ್ಗಳನ್ನು ನಿರ್ಬಂಧಿಸಿದ ಕೆಲವೇ ದಿನಗಳ ಬಳಿಕ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಅನುರಾಗ್ ಠಾಕೂರ್ ‘ಭಾರತದ ವಿರುದ್ಧ ಸಂಚು ನಡೆಸುವವರ ವಿರುದ್ಧ ಕೇಂದ್ರ ಸರ್ಕಾರವು ಇಂಥ ಕಠಿಣ ಕ್ರಮಗಳನ್ನು ಜರುಗಿಸುವುದನ್ನು ಮುಂದುವರಿಸಲಿದೆ’ ಎಂದು ಎಚ್ಚರಿಸಿದ್ದಾರೆ. ‘ಅಂಥವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ನಾನು ಸೂಚನೆ ನೀಡಿದ್ದೇನೆ’ ಎಂದು ತಿಳಿಸಿದ್ದಾರೆ. ‘ವಿಶ್ವದ ಹಲವು ಪ್ರಮುಖ ದೇಶಗಳು ನಮ್ಮ ಕ್ರಮವನ್ನು ಗಮನಿಸಿವೆ. ಯುಟ್ಯೂಬ್ ಸಹ ಇಂಥ ಚಾನೆಲ್ಗಳನ್ನು ನಿರ್ಬಂಧಿಸಲು ಮುಂದಾಗಿದೆ’ ಎಂದು ತಿಳಿಸಿದರು.
ಗುಪ್ತಚರ ಸಂಸ್ಥೆಗಳು ಸಂಘಟಿತ ಪ್ರಯತ್ನದಿಂದ ಒದಗಿಸಿದ ಪುರಾವೆಗಳನ್ನು ಆಧರಿಸಿ ಮಾಹಿತಿ ಮತ್ತು ಪ್ರಸಾರ ಇಲಾಖೆಯು ಕಳೆದ ಡಿಸೆಂಬರ್ನಲ್ಲಿ ಸುಳ್ಳುಸುದ್ದಿಗಳ ಮೂಲಕ ದೇಶವಿರೋಧಿ ಭಾವನೆಗಳನ್ನು ಹರಡುತ್ತಿದ್ದ 20 ಯುಟ್ಯೂಬ್ ಚಾನೆಲ್ ಹಾಗೂ ಎರಡು ವೆಬ್ಸೈಟ್ಗಳನ್ನು ನಿರ್ಬಂಧಿಸಲು ಆದೇಶ ಹೊರಡಿಸಿತ್ತು ಎಂದು ನೆನಪಿಸಿಕೊಂಡರು. ಭಾರತದ ವಿರುದ್ಧ ಸಂಚು ಹೂಡುವ ಯಾವುದೇ ಪ್ರಯತ್ನವನ್ನು ನಿಷ್ಫಲಗೊಳಿಸಲಾಗುವುದು. ಸುಳ್ಳು ಸುದ್ದಿ ಪ್ರಸಾರ ಮಾಡಿ, ಸಮಾಜ ಒಡೆಯುವ ಹುನ್ನಾರಗಳಿಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಕಳೆದ ಡಿಸೆಂಬರ್ ತಿಂಗಳಲ್ಲಿ ಸಚಿವರು 20 ಯುಟ್ಯೂಬ್ ಚಾನೆಲ್ ಹಾಗೂ ಕೆಲ ವೆಬ್ಸೈಟ್ಗಳನ್ನು ನಿರ್ಬಂಧಿಸಲು ಆದೇಶಿಸಿದ್ದರು. ಪಾಕಿಸ್ತಾನದಿಂದ ಕಾರ್ಯಾಚರಣೆ ನಡೆಸುತ್ತಿರುವ ಈ ವೆಬ್ಸೈಟ್ಗಳು ಭಾರತಕ್ಕೆ ಸಂಬಂಧಿಸಿದಂತೆ ಸುಳ್ಳು ಮಾಹಿತಿ ಹರಡುತ್ತಿವೆ ಎಂದು ದೂರಲಾಗಿತ್ತು. ಕಾಶ್ಮೀರ, ಭಾರತೀಯ ಸೇನೆ, ಅಲ್ಪಸಂಖ್ಯಾತ ಸಮುದಾಯಗಳು, ರಾಮ ಮಂದಿರ, ಜನರಲ್ ಬಿಪಿನ್ ರಾವತ್ ಸೇರಿದಂತೆ ಹಲವು ವಿಷಯಗಳ ಬಗ್ಗೆ ಈ ಚಾನೆಲ್ನಲ್ಲಿ ಸುಳ್ಳು ಮಾಹಿತಿ ಹರಡಲಾಗುತ್ತಿತ್ತು ಎಂದು ಮಾಹಿತಿ ಮತ್ತು ಪ್ರಸಾರ ಇಲಾಖೆಯ ಪತ್ರಿಕಾ ಹೇಳಿಕೆ ತಿಳಿಸಿತ್ತು.
ಇದನ್ನೂ ಓದಿ: ಮೋದಿಯವರ ಪಂಜಾಬ್ ಭೇಟಿ ವೇಳೆ ಭದ್ರತಾ ಲೋಪ ಬಗ್ಗೆ ಗೃಹ ಸಚಿವಾಲಯ ಕಠಿಣ ನಿರ್ಧಾರ ತೆಗೆದುಕೊಳ್ಳುತ್ತದೆ: ಅನುರಾಗ್ ಠಾಕೂರ್ ಇದನ್ನೂ ಓದಿ: ಮಾಜಿ ಸಿಎಂನಿಂದ ಇದು ನಿರೀಕ್ಷಿಸಿರಲಿಲ್ಲ; ಮೋದಿ ಬಗ್ಗೆ ಅಖಿಲೇಶ್ ಯಾದವ್ ಟೀಕೆಗೆ ಅನುರಾಗ್ ಠಾಕೂರ್ ಪ್ರತಿಕ್ರಿಯೆ