ಸಂಗಾತಿ ಸಹರಿಸದಿದ್ದರೆ ದೈಹಿಕ ವಾಂಛೆ ತೀರಿಸಲು ಎಲ್ಲಿಗೆ ಹೋಗಬೇಕು?: ಎಫ್‌ಐಆರ್ ರದ್ದುಗೊಳಿಸಿದ ಅಲಹಾಬಾದ್ ಹೈಕೋರ್ಟ್

ಪ್ರಕರಣದ ಪ್ರಾಥಮಿಕ ಆರೋಪಗಳು ದಂಪತಿಗಳ ಲೈಂಗಿಕ ಸಂಬಂಧ ಮತ್ತು ಕೆಲವು ಲೈಂಗಿಕ ಕ್ರಿಯೆಗಳಿಗೆ ಪತ್ನಿಯ ನಿರಾಕರಣೆಯ ಸುತ್ತ ಕೇಂದ್ರೀಕೃತವಾಗಿವೆ. ಈ ಆರೋಪಗಳು ವರದಕ್ಷಿಣೆ ಕಿರುಕುಳವನ್ನು ಸೂಚಿಸುವುದಿಲ್ಲ. ದಂಪತಿಗಳ ನಡುವಿನ ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಹೆಚ್ಚು ಸೂಚಿಸುತ್ತವೆ ಎಂದು ಹೈಕೋರ್ಟ್ ಹೇಳಿದೆ.

ಸಂಗಾತಿ ಸಹರಿಸದಿದ್ದರೆ ದೈಹಿಕ ವಾಂಛೆ ತೀರಿಸಲು ಎಲ್ಲಿಗೆ ಹೋಗಬೇಕು?: ಎಫ್‌ಐಆರ್ ರದ್ದುಗೊಳಿಸಿದ ಅಲಹಾಬಾದ್ ಹೈಕೋರ್ಟ್
ಅಲಹಾಬಾದ್ ಹೈಕೋರ್ಟ್
Follow us
ರಶ್ಮಿ ಕಲ್ಲಕಟ್ಟ
|

Updated on: Oct 12, 2024 | 5:00 PM

ದೆಹಲಿ ಅಕ್ಟೋಬರ್ 12: ವ್ಯಕ್ತಿಯೊಬ್ಬರ ವಿರುದ್ಧದ ವರದಕ್ಷಿಣೆ ಆರೋಪಗಳನ್ನು ರದ್ದುಗೊಳಿದ ಅಲಹಾಬಾದ್ ಹೈಕೋರ್ಟ್ (Allahabad HC) ಈ ಆರೋಪಗಳು ವೈಯಕ್ತಿಕ ವಿವಾದಗಳಿಂದ ಪ್ರೇರೇಪಿಸಲ್ಪಟ್ಟಿರಬಹುದು ಎಂದು ತೀರ್ಪು ನೀಡಿತು. “ನೈತಿಕವಾಗಿ ಸುಸಂಸ್ಕೃತ ಸಮಾಜದಲ್ಲಿ  ಸಂಗಾತಿ ಸಹಕರಿಸದೇ ಇದ್ದರೆ ದೈಹಿಕ ವಾಂಛೆ ತೀರಿಸಲು ಒಬ್ಬರು ಎಲ್ಲಿಗೆ ಹೋಗುತ್ತಾರೆ” ಎಂದು ನ್ಯಾಯಾಲಯ ಕೇಳಿದೆ. ನ್ಯಾಯಮೂರ್ತಿ ಅನೀಶ್ ಕುಮಾರ್ ಗುಪ್ತಾ ಅವರು ಪ್ರಾಂಜಲ್ ಶುಕ್ಲಾ ಮತ್ತು ಇತರ ಇಬ್ಬರ ವಿರುದ್ಧದ ಪ್ರಕರಣವನ್ನು ವಜಾಗೊಳಿಸಿದರು. ಎಫ್‌ಐಆರ್‌ನಲ್ಲಿ ಪ್ರಸ್ತುತಪಡಿಸಿದ ಸಾಕ್ಷ್ಯಗಳು ಮತ್ತು ಸಾಕ್ಷಿಗಳ ಹೇಳಿಕೆಗಳು ವರದಕ್ಷಿಣೆ ಕಿರುಕುಳದ ಆರೋಪಗಳನ್ನು ಬೆಂಬಲಿಸುವುದಿಲ್ಲ ಎಂದು ಕಂಡುಕೊಂಡರು.

ಪ್ರಕರಣದ ಪ್ರಾಥಮಿಕ ಆರೋಪಗಳು ದಂಪತಿಗಳ ಲೈಂಗಿಕ ಸಂಬಂಧ ಮತ್ತು ಕೆಲವು ಲೈಂಗಿಕ ಕ್ರಿಯೆಗಳಿಗೆ ಪತ್ನಿಯ ನಿರಾಕರಣೆಯ ಸುತ್ತ ಕೇಂದ್ರೀಕೃತವಾಗಿವೆ. ಈ ಆರೋಪಗಳು ವರದಕ್ಷಿಣೆ ಕಿರುಕುಳವನ್ನು ಸೂಚಿಸುವುದಿಲ್ಲ. ದಂಪತಿಗಳ ನಡುವಿನ ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಹೆಚ್ಚು ಸೂಚಿಸುತ್ತವೆ ಎಂದು ಹೈಕೋರ್ಟ್ ಹೇಳಿದೆ.

“ಕಕ್ಷಿದಾರರ ನಡುವಿನ ವಿವಾದವು ಕಕ್ಷಿದಾರರ ಲೈಂಗಿಕ ವೈಮನಸ್ಸಿಗೆ ಸಂಬಂಧಿಸಿದಂತೆ ವಿವಾದವಾಗಿದೆ ಎಂಬುದು ಸ್ಪಷ್ಟವಾಗಿದೆ. ಈ ವಿವಾದದ ಕಾರಣದಿಂದಾಗಿ ವರದಕ್ಷಿಣೆಯ ಬೇಡಿಕೆಗೆ ಸಂಬಂಧಿಸಿದಂತೆ ಮಹಿಳೆ ಸುಳ್ಳು ಮತ್ತು ಸಂಯೋಜಿತ ಆರೋಪಗಳನ್ನು ಮಾಡಿದ್ದು ತ್ವರಿತ ಎಫ್ಐಆರ್ ಅನ್ನು ದಾಖಲಿಸಲಾಗಿದೆ” ಎಂದು ನ್ಯಾಯಾಲಯ ಹೇಳಿದೆ.

“ಒಬ್ಬ ಪುರುಷನು ತನ್ನ ಹೆಂಡತಿಯ ದೇಹ ಸಂಪರ್ಕಕ್ಕೆ ಬಯಸಿದರೆ ಅಥವಾ ಅದೇ ರೀತಿ ಆಕೆ ಬಯಸಿದಾಗ ಅದು ನಿರಾಕರಿಸಲ್ಪಟ್ಟರೆ, ನೈತಿಕವಾಗಿ ಸುಸಂಸ್ಕೃತ ಸಮಾಜದಲ್ಲಿ ಅವರು ತಮ್ಮ ದೈಹಿಕ ವಾಂಛೆ ಪೂರೈಸಲು ಎಲ್ಲಿಗೆ ಹೋಗುತ್ತಾರೆ?” ಎಂದು ನ್ಯಾಯಾಲಯ ಪ್ರಶ್ನಿಸಿದೆ.

ಅರ್ಜಿದಾರರಾದ ಮೀನಾ ಶುಕ್ಲಾ ಅವರು ತಮ್ಮ ಪತಿ ಪ್ರಾಂಜಲ್ ಶುಕ್ಲಾ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ತನ್ನ ಪತಿ ಅಸ್ವಾಭಾವಿಕ ಲೈಂಗಿಕತೆಯಲ್ಲಿ ತೊಡಗಿಸಿಕೊಳ್ಳಲು ಮತ್ತು ಅಶ್ಲೀಲ ಚಿತ್ರಗಳನ್ನು ವೀಕ್ಷಿಸಲು ಬಲವಂತವಾಗಿ ಮಾಡುತ್ತಿದ್ದರು ಎಂದು ಆಕೆ ಆರೋಪಿಸಿದ್ದಾರೆ.

ಎಫ್‌ಐಆರ್‌ನಲ್ಲಿ, ಪ್ರಾಂಜಲ್ ಅಶ್ಲೀಲ ಚಿತ್ರಗಳನ್ನು ನೋಡುತ್ತಿದ್ದರು. ತನ್ನ ಹೆಂಡತಿಯೊಂದಿಗೆ ಅಸ್ವಾಭಾವಿಕ ಲೈಂಗಿಕತೆಗೆ ಒತ್ತಾಯಿಸುತ್ತಿದ್ದರು. ಆಕೆ ಇದನ್ನು ಆಕ್ಷೇಪಿಸಿದಾಗ, ಅವನು ಅವಳ ಆಕ್ಷೇಪಣೆಗಳಿಗೆ ಯಾವುದೇ ಗಮನ ನೀಡಲಿಲ್ಲ ಎಂದು ಆರೋಪಿಸಿದ್ದು ಅರ್ಜಿದಾರರು ಪತ್ನಿಯನ್ನು ಬಿಟ್ಟು ಒಂಟಿಯಾಗಿ ಸಿಂಗಾಪುರಕ್ಕೆ ಹೋಗಿದ್ದಾರೆ ಎಂದೂ ಎಫ್‌ಐಆರ್‌ನಲ್ಲಿ ಹೇಳಲಾಗಿದೆ.

ವರದಕ್ಷಿಣೆ ಕಿರುಕುಳದ ಆರೋಪದಲ್ಲಿ ಮೀಶಾ ತನ್ನ ಅತ್ತೆಯಂದಿರಾದ ಮಧು ಶರ್ಮಾ ಮತ್ತು ಪುಣ್ಯ ಶೀಲ್ ಶರ್ಮಾ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಮದುವೆಗೂ ಮುನ್ನ ವರದಕ್ಷಿಣೆಗೆ ಬೇಡಿಕೆ ಇರಲಿಲ್ಲ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ತಮಿಳುನಾಡು ರೈಲು ಅಪಘಾತಕ್ಕೆ ಕಾರಣವೇನು? ರೈಲ್ವೆ ಅಧಿಕಾರಿ ಹೀಗಂತಾರೆ…

ಪ್ರಾಂಜಲ್ ವಿರುದ್ಧದ ಎಫ್‌ಐಆರ್ ಅನ್ನು ರದ್ದುಗೊಳಿಸಿದ ನ್ಯಾಯಾಲಯ, “ಈ ನ್ಯಾಯಾಲಯದ ಪರಿಗಣಿಸಿದ ಅಭಿಪ್ರಾಯದಲ್ಲಿ, ತ್ವರಿತ ಎಫ್‌ಐಆರ್ ಇಲ್ಲಿ ಅರ್ಜಿದಾರರ ವಿರುದ್ಧ ಸಾಮಾನ್ಯ ಮತ್ತು ಅಸ್ಪಷ್ಟ ಆರೋಪಗಳನ್ನು ಮಾಡುವ ಮೂಲಕ ವರದಕ್ಷಿಣೆ ಬೇಡಿಕೆ ಎಂಬುದು ಕಟ್ಟುಕತೆ ಎಂದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ