AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

15 ನಿಮಿಷವಾದರೂ ಓಪನ್ ಆಗದ ಆ್ಯಂಬುಲೆನ್ಸ್ ಬಾಗಿಲು; ಆಕ್ಸಿಜನ್ ಇಲ್ಲದೆ ರೋಗಿ ಸಾವು

ರಾಜಸ್ಥಾನದ ಭಿಲ್ವಾರಾದಲ್ಲಿ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಈ ವಿಷಯ ಗೊತ್ತಾದ ಕೂಡಲೆ ಅವರ ಮನೆಯವರು ಆ್ಯಂಬುಲೆನ್ಸ್​ಗೆ ಫೋನ್ ಮಾಡಿದ್ದರು. ಅವರ ಕುಟುಂಬದ ಸದಸ್ಯರು ಆಸ್ಪತ್ರೆಗೆ ಕರೆದೊಯ್ಯಲು ಆ್ಯಂಬುಲೆನ್ಸ್‌ಗೆ ಕರೆ ಮಾಡಿದರು. ಆಸ್ಪತ್ರೆಗೆ ತಲುಪಿದಾಗ ಆ್ಯಂಬುಲೆನ್ಸ್‌ನ ಬಾಗಿಲು ಓಪನ್ ಆಗಲಿಲ್ಲ. ಇದರಿಂದಾಗಿ ಸಮಯ ವ್ಯರ್ಥವಾಯಿತು. ಇದರಿಂದಾಗಿ ಆ್ಯಂಬುಲೆನ್ಸ್​ ಒಳಗಿದ್ದ ಮಹಿಳೆ ಸಾವನ್ನಪ್ಪಿದರು.

15 ನಿಮಿಷವಾದರೂ ಓಪನ್ ಆಗದ ಆ್ಯಂಬುಲೆನ್ಸ್ ಬಾಗಿಲು; ಆಕ್ಸಿಜನ್ ಇಲ್ಲದೆ ರೋಗಿ ಸಾವು
Ambulance
ಸುಷ್ಮಾ ಚಕ್ರೆ
|

Updated on: Jan 21, 2025 | 4:19 PM

Share

ಜೈಪುರ: ರಾಜಸ್ಥಾನದ ಭಿಲ್ವಾರಾದಲ್ಲಿ ಮಹಿಳೆಯೊಬ್ಬರು ದುರಂತವಾಗಿ ಸಾವನ್ನಪ್ಪಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯನ್ನು ಅವರ ಮನೆಯವರು ಆ್ಯಂಬುಲೆನ್ಸ್​ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಅಚಾತುರ್ಯವೊಂದು ನಡೆದಿದೆ. ಆಕೆಯನ್ನು ಕರೆದುಕೊಂಡು ಹೋಗುತ್ತಿದ್ದ ಆ್ಯಂಬುಲೆನ್ಸ್ ಆಸ್ಪತ್ರೆ ತಲುಪಿದಾಗ ಆ ಆ್ಯಂಬುಲೆನ್ಸ್‌ನ ಬಾಗಿಲು ಸುಮಾರು 15 ನಿಮಿಷಗಳ ಕಾಲ ತೆರೆಯಲಿಲ್ಲ. ಇದರಿಂದಾಗಿ ಮಹಿಳೆಗೆ ಚಿಕಿತ್ಸೆ ನೀಡಲು ವಿಳಂಬವಾಯಿತು. ಆ್ಯಂಬುಲೆನ್ಸ್​ ಬಾಗಿಲು ತೆರೆಯುವಷ್ಟರಲ್ಲಿ ಆ ಮಹಿಳೆ ಒಳಗೇ ಸಾವನ್ನಪ್ಪಿದ್ದರು ಎಂದು ಆಕೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ಇದರ ಜೊತೆಗೆ, ಆ್ಯಂಬುಲೆನ್ಸ್‌ನಲ್ಲಿ ಆಮ್ಲಜನಕ ಸೌಲಭ್ಯವಿರಲಿಲ್ಲ ಎಂಬ ಆರೋಪವೂ ಇದೆ.

ರಾಜಸ್ಥಾನದ ಭಿಲ್ವಾರಾದಿಂದ ಈ ಪ್ರಕರಣ ಬೆಳಕಿಗೆ ಬಂದಿದೆ. ಅಲ್ಲಿನ ಮಹಿಳೆಯೊಬ್ಬರು ಯಾವುದೋ ಸಮಸ್ಯೆಯಿಂದ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದರು. ಮಹಿಳೆಯ ಆತ್ಮಹತ್ಯಾ ಪ್ರಯತ್ನದ ಬಗ್ಗೆ ಆಕೆಯ ಕುಟುಂಬಕ್ಕೆ ತಿಳಿದುಬಂದಿತು. ಅವರು ತಕ್ಷಣ ಆ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ಆ್ಯಂಬುಲೆನ್ಸ್‌ಗೆ ಕರೆ ಮಾಡಿದರು. ಆಸ್ಪತ್ರೆ ತಲುಪಿದಾಗ ಆ್ಯಂಬುಲೆನ್ಸ್ ಬಾಗಿಲು ತೆರೆದಾಗ ಅದು ತೆರೆಯಲಿಲ್ಲ. ಆ್ಯಂಬುಲೆನ್ಸ್​ನ ಬಾಗಿಲು ಸಿಕ್ಕಿಹಾಕಿಕೊಂಡಿತು ಎಂದು ಕುಟುಂಬದವರು ಆರೋಪಿಸಿದ್ದಾರೆ.

ಇದನ್ನೂ ಓದಿ: ಬಿಬಿಎಂಪಿ ಕಸದ ಟೆಂಡರ್ ಕೊಡಿಸುವುದಾಗಿ ಮಹಿಳೆಗೆ ಲಕ್ಷಾಂತರ ರೂ ವಂಚನೆ: ಕೇಸ್ ಬುಕ್

ಆ್ಯಂಬುಲೆನ್ಸ್​ ಬಾಗಿಲು ಓಪನ್ ಮಾಡಲು 15 ನಿಮಿಷ ಪ್ರಯತ್ನಪಟ್ಟರೂ ಸಾಧ್ಯವಾಗದೆ ಇದ್ದಾಗ ಕಿಟಕಿ ಒಡೆದು ಒಳಗಿದ್ದ ಆ ಮಹಿಳೆಯನ್ನು ಹೊರಗೆಳೆದರು. ಅಷ್ಟರಲ್ಲಿ ಆ ಮಹಿಳೆ ಸಾವನ್ನಪ್ಪಿದ್ದರು. ಆಂಬ್ಯುಲೆನ್ಸ್ ಒಳಗೆ ಆಮ್ಲಜನಕ ಕೂಡ ಇರಲಿಲ್ಲ ಮತ್ತು ಆಂಬ್ಯುಲೆನ್ಸ್ ಸಿಬ್ಬಂದಿಗೆ ಆಸ್ಪತ್ರೆಗೆ ಹೋಗುವ ದಾರಿಯೂ ತಿಳಿದಿರಲಿಲ್ಲ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ. ಇದರಿಂದಾಗಿ, ಆ ಮಹಿಳೆಗೆ ಚಿಕಿತ್ಸೆ ನೀಡಲು ಹೆಚ್ಚಿನ ವಿಳಂಬವಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬೆನ್ ಡಕೆಟ್ ವಿಕೆಟ್ ಉರುಳಿಸಿದ ಸಿರಾಜ್​ಗೆ ಬೀಳುತ್ತಾ ದಂಡ?
ಬೆನ್ ಡಕೆಟ್ ವಿಕೆಟ್ ಉರುಳಿಸಿದ ಸಿರಾಜ್​ಗೆ ಬೀಳುತ್ತಾ ದಂಡ?
ಹರಿದುಬಂದ ಪ್ರವಾಸಿಗರು: ಚಂದ್ರದ್ರೋಣ ಪರ್ವತ ರಸ್ತೆ ಟ್ರಾಫಿಕ್ ಜಾಮ್
ಹರಿದುಬಂದ ಪ್ರವಾಸಿಗರು: ಚಂದ್ರದ್ರೋಣ ಪರ್ವತ ರಸ್ತೆ ಟ್ರಾಫಿಕ್ ಜಾಮ್
ರೆಸಾರ್ಟ್​ ನಲ್ಲಿ ಎಂಜಾಯ್ ಮಾಡುತ್ತಿರುವಾಗಲೇ ಕುಸಿದು ಬಿದ್ದು ವ್ಯಕ್ತಿ ಸಾವು
ರೆಸಾರ್ಟ್​ ನಲ್ಲಿ ಎಂಜಾಯ್ ಮಾಡುತ್ತಿರುವಾಗಲೇ ಕುಸಿದು ಬಿದ್ದು ವ್ಯಕ್ತಿ ಸಾವು
ಸಾಕು ನಾಯಿಯನ್ನು ಅಮಾನವೀಯವಾಗಿ ಥಳಿಸಿದ ಮನೆಕೆಲಸದಾಕೆ
ಸಾಕು ನಾಯಿಯನ್ನು ಅಮಾನವೀಯವಾಗಿ ಥಳಿಸಿದ ಮನೆಕೆಲಸದಾಕೆ
ಉದ್ಯಮಿಗೆ ಹೃದಯಾಘಾತ:ಕುಸಿದು ಬೀಳುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಉದ್ಯಮಿಗೆ ಹೃದಯಾಘಾತ:ಕುಸಿದು ಬೀಳುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ
VIDEO: ಫ್ಲೈಯಿಂಗ್ ಫಿಲಿಪ್: ಇದಪ್ಪಾ ಕ್ಯಾಚ್ ಅಂದ್ರೆ..!
VIDEO: ಫ್ಲೈಯಿಂಗ್ ಫಿಲಿಪ್: ಇದಪ್ಪಾ ಕ್ಯಾಚ್ ಅಂದ್ರೆ..!
‘ಕೆಡಿ’ ಸಿನಿಮಾದಲ್ಲಿ ಸುದೀಪ್ ನಟಿಸ್ತಾರಾ? ಪ್ರೇಮ್ ಕೊಟ್ಟ ಉತ್ತರ ಏನು?
‘ಕೆಡಿ’ ಸಿನಿಮಾದಲ್ಲಿ ಸುದೀಪ್ ನಟಿಸ್ತಾರಾ? ಪ್ರೇಮ್ ಕೊಟ್ಟ ಉತ್ತರ ಏನು?
ಬಾಲಕನ ಕುತ್ತಿಗೆಗೆ ಕಚ್ಚಿದ ಬೀದಿ ನಾಯಿ, ಆತನ ಸ್ಥಿತಿ ಯಾರಿಗೂ ಬೇಡ
ಬಾಲಕನ ಕುತ್ತಿಗೆಗೆ ಕಚ್ಚಿದ ಬೀದಿ ನಾಯಿ, ಆತನ ಸ್ಥಿತಿ ಯಾರಿಗೂ ಬೇಡ
VIDEO: ಉಫ್... ಹೀಗೂ ಕ್ಯಾಚ್ ಹಿಡೀತಾರಾ... ಅದ್ಭುತ ಅತ್ಯದ್ಭುತ
VIDEO: ಉಫ್... ಹೀಗೂ ಕ್ಯಾಚ್ ಹಿಡೀತಾರಾ... ಅದ್ಭುತ ಅತ್ಯದ್ಭುತ
ಓಪನ್ ಆಗಿ ಹೇಳ್ತೀನಿ, ಏನು ಬೇಕಾದ್ರೂ ಟ್ರೋಲ್ ಮಾಡಿಕೊಳ್ಳಿ: ಜೋಗಿ ಪ್ರೇಮ್
ಓಪನ್ ಆಗಿ ಹೇಳ್ತೀನಿ, ಏನು ಬೇಕಾದ್ರೂ ಟ್ರೋಲ್ ಮಾಡಿಕೊಳ್ಳಿ: ಜೋಗಿ ಪ್ರೇಮ್