AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2ಕ್ಕಿಂತ ಕಡಿಮೆ ಮಕ್ಕಳಿದ್ದರೆ ಚುನಾವಣೆಯಲ್ಲಿ ಸ್ಪರ್ಧಿಸಲು ನಿಷೇಧದ ಸುಳಿವು ನೀಡಿದ ಚಂದ್ರಬಾಬು ನಾಯ್ಡು

ಕೆಲವು ವರ್ಷಗಳಿಂದೀಚೆಗೆ ಇಳಿಕೆಯಾಗುತ್ತಿರುವ ಜನನ ಪ್ರಮಾಣವನ್ನು ಬಗೆಹರಿಸುವ ಉದ್ದೇಶದಿಂದ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ 2ಕ್ಕಿಂತ ಕಡಿಮೆ ಮಕ್ಕಳನ್ನು ಹೊಂದಿರುವವರಿಗೆ ಅವಕಾಶ ನಿರಾಕರಿಸುವ ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ. ಸಣ್ಣ ಕುಟುಂಬಗಳು ಮತ್ತು ಜೀವನಶೈಲಿಯ ಪ್ರವೃತ್ತಿಯನ್ನು ಟೀಕಿಸಿದ ಚಂದ್ರಬಾಬು ನಾಯ್ಡು, ದೊಡ್ಡ ಕುಟುಂಬಗಳನ್ನು ಪ್ರೋತ್ಸಾಹಿಸುವ ನೀತಿಗಳಿಗೆ ಕರೆ ನೀಡಿದರು.

2ಕ್ಕಿಂತ ಕಡಿಮೆ ಮಕ್ಕಳಿದ್ದರೆ ಚುನಾವಣೆಯಲ್ಲಿ ಸ್ಪರ್ಧಿಸಲು ನಿಷೇಧದ ಸುಳಿವು ನೀಡಿದ ಚಂದ್ರಬಾಬು ನಾಯ್ಡು
Chandrababu Naidu
ಸುಷ್ಮಾ ಚಕ್ರೆ
|

Updated on: Jan 16, 2025 | 5:32 PM

Share

ಹೈದರಾಬಾದ್: ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ವ್ಯಕ್ತಿಗಳಿಗೆ ಮಾತ್ರ ಪಂಚಾಯತ್ ಮತ್ತು ಪುರಸಭೆಯ ಚುನಾವಣೆಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡುವ ಪ್ರಸ್ತಾಪವನ್ನು ಟಿಡಿಪಿ ಗಂಭೀರವಾಗಿ ಪರಿಗಣಿಸಿದೆ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದ್ದಾರೆ. ಈ ಮೂಲಕ 2 ಮಕ್ಕಳಿಗಿಂತ ಕಡಿಮೆ ಮಕ್ಕಳನ್ನು ಹೊಂದಿರುವವರಿಗೆ ಸ್ಥಳೀಯ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡದಿರುವ ಸುಳಿವನ್ನು ಅವರು ನೀಡಿದ್ದಾರೆ.

ಮಂಗಳವಾರ ತಿರುಪತಿ ಬಳಿಯ ತಮ್ಮ ಹುಟ್ಟೂರು ನರವರಿಪಲ್ಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಆಂಧ್ರದ ಸಿಎಂ ಚಂದ್ರಬಾಬು ನಾಯ್ಡು ಈ ಹೇಳಿಕೆ ನೀಡಿದ್ದಾರೆ. ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಜನರು ಸ್ಥಳೀಯ ಸಂಸ್ಥೆ, ನಾಗರಿಕ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ತಡೆಯುವ 30 ವರ್ಷ ಹಳೆಯ ಕಾನೂನನ್ನು ಆಂಧ್ರಪ್ರದೇಶ ರಾಜ್ಯ ವಿಧಾನಸಭೆ ರದ್ದುಗೊಳಿಸಿದ ಕೆಲವು ತಿಂಗಳುಗಳ ನಂತರ ಅವರು ಈ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಹೆತ್ತವರನ್ನು ಮಕ್ಕಳು ನೋಡಿಕೊಳ್ಳದಿದ್ದರೆ ಗಿಫ್ಟ್​ ಡೀಡ್ ರದ್ದು: ಸುಪ್ರೀಂಕೋರ್ಟ್​

ಮಕ್ಕಳ ಸಂಖ್ಯೆಯನ್ನು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಸ್ಪರ್ಧಿಸುವ ಅರ್ಹತೆಗೆ ಜೋಡಿಸುವ ವಿವಾದಾತ್ಮಕ ನೀತಿಯನ್ನು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಪ್ರಸ್ತಾಪಿಸಿದ್ದಾರೆ. ಎರಡು ಮಕ್ಕಳಿಗಿಂತ ಕಡಿಮೆ ಮಕ್ಕಳಿರುವ ವ್ಯಕ್ತಿಗಳು ಸರಪಂಚ್, ಪುರಸಭೆ ಕೌನ್ಸಿಲರ್ ಅಥವಾ ಮೇಯರ್ ಹುದ್ದೆಗಳಿಗೆ ಸ್ಪರ್ಧಿಸುವುದನ್ನು ನಿಷೇಧಿಸಬೇಕು ಎಂದು ಅವರು ಸೂಚಿಸಿದ್ದಾರೆ. ಇದು ಆಂಧ್ರಪ್ರದೇಶದಲ್ಲಿ ಕ್ಷೀಣಿಸುತ್ತಿರುವ ಫಲವತ್ತತೆ ದರವನ್ನು ಪರಿಹರಿಸಬಹುದು ಎಂದು ಅವರು ಸುಳಿವು ನೀಡಿದರು.

ಕಳೆದ ವರ್ಷ ನವೆಂಬರ್‌ನಲ್ಲಿ ಆಂಧ್ರಪ್ರದೇಶದ ಶಾಸಕಾಂಗ ಸಭೆಯು ಎರಡಕ್ಕಿಂತ ಹೆಚ್ಚು ಮಕ್ಕಳಿರುವವರು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸುವ ಎಪಿ ಪಂಚಾಯತ್ ರಾಜ್ ಮತ್ತು ಎಪಿ ಪುರಸಭೆ ಕಾಯ್ದೆಗಳನ್ನು ತಿದ್ದುಪಡಿ ಮಾಡಲು ಮಸೂದೆಗಳನ್ನು ಅಂಗೀಕರಿಸಿತು.

ಇದನ್ನೂ ಓದಿ: ಟಾಲಿವುಡ್​ ಬಗ್ಗೆ ಆಸಕ್ತಿಕರ ಹೇಳಿಕೆ ನೀಡಿದ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು

ಅದರ ಬೆನ್ನಲ್ಲೇ ತಿರುಪತಿಯಲ್ಲಿ ಮಾತನಾಡಿರುವ ಸಿಎಂ ಚಂದ್ರಬಾಬು ನಾಯ್ಡು, ನಿಮ್ಮ ಪೋಷಕರು ನಾಲ್ಕರಿಂದ ಐದು ಮಕ್ಕಳನ್ನು ಹೆತ್ತರು. ನೀವು ಅದನ್ನು ಒಂದಕ್ಕೆ ಇಳಿಸಿದ್ದೀರಿ. ಇಂದು ಬುದ್ಧಿವಂತರು ಕೂಡ ಎರಡು ಪಟ್ಟು ಆದಾಯದ, ಮಕ್ಕಳಿಲ್ಲದ ಜೀವನಶೈಲಿಯನ್ನು ಆರಿಸಿಕೊಳ್ಳುತ್ತಿದ್ದಾರೆ. ಅವರ ಪೋಷಕರು ಇದೇ ರೀತಿ ಯೋಚಿಸಿದ್ದರೆ ಇಂದು ಅವರು ಅಸ್ತಿತ್ವದಲ್ಲೇ ಇರುತ್ತಿರಲಿಲ್ಲ. ಜಪಾನ್ ಮತ್ತು ದಕ್ಷಿಣ ಕೊರಿಯಾದಂತಹ ದೇಶಗಳು ಈಗಾಗಲೇ ವಯಸ್ಸಾದ ಜನಸಂಖ್ಯೆ ಮತ್ತು ಕುಸಿಯುತ್ತಿರುವ ಜನನ ದರಗಳೊಂದಿಗೆ ಹೋರಾಡುತ್ತಿವೆ ಎಂದು ಅವರು ಒತ್ತಿ ಹೇಳಿದ್ದರು.

1994ರಲ್ಲಿ ಚಂದ್ರಬಾಬು ನಾಯ್ಡು ಮುಖ್ಯಮಂತ್ರಿಯಾಗಿದ್ದಾಗ ಪರಿಚಯಿಸಿದ 30 ವರ್ಷಗಳ ಹಳೆಯ ನಿಯಮಕ್ಕೆ ಬದಲಾವಣೆ ತಂದಿದೆ. ಜನಸಂಖ್ಯೆಯ ಬಗ್ಗೆ ಚಂದ್ರಬಾಬು ನಾಯ್ಡು ಹೇಳಿಕೆ ನೀಡಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಜನರು ಮಾತ್ರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡುವ ಕಾನೂನುಗಳನ್ನು ತರುವ ಬಗ್ಗೆ ಚಂದ್ರಬಾಬು ನಾಯ್ಡು ಇದೇ ರೀತಿಯ ಹೇಳಿಕೆಗಳನ್ನು ನೀಡಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪುಟಿನ್ ರಹಸ್ಯ ನಿವಾಸದ ಮೇಲೆ ಉಕ್ರೇನ್ ಡ್ರೋನ್ ದಾಳಿ
ಪುಟಿನ್ ರಹಸ್ಯ ನಿವಾಸದ ಮೇಲೆ ಉಕ್ರೇನ್ ಡ್ರೋನ್ ದಾಳಿ
ಕಾರ್ಮಿಕರ ಮೇಲೆ ಹಲ್ಲೆ ಮಾಡಿ ಚಹಾ ಅಂಗಡಿ ಧ್ವಂಸಗೊಳಿಸಿದ ಪೊಲೀಸಪ್ಪ!
ಕಾರ್ಮಿಕರ ಮೇಲೆ ಹಲ್ಲೆ ಮಾಡಿ ಚಹಾ ಅಂಗಡಿ ಧ್ವಂಸಗೊಳಿಸಿದ ಪೊಲೀಸಪ್ಪ!
ದೊಡ್ಡ ಗಣಪತಿ ದೇವಸ್ಥಾನದಲ್ಲಿ ಮೋದಿ ಹೆಸರಿನಲ್ಲಿ ವಿಶೇಷ ಪೂಜೆ, ಅಭಿಷೇಕ
ದೊಡ್ಡ ಗಣಪತಿ ದೇವಸ್ಥಾನದಲ್ಲಿ ಮೋದಿ ಹೆಸರಿನಲ್ಲಿ ವಿಶೇಷ ಪೂಜೆ, ಅಭಿಷೇಕ
ಬಾಯಿ ಮುಚ್ಕೊಂಡು ಕೂತ್ಗೊ; ಕಾವ್ಯಾಗೆ ಅವಾಜ್ ಹಾಕಿದ ಧ್ರುವಂತ್
ಬಾಯಿ ಮುಚ್ಕೊಂಡು ಕೂತ್ಗೊ; ಕಾವ್ಯಾಗೆ ಅವಾಜ್ ಹಾಕಿದ ಧ್ರುವಂತ್
ಅಕ್ರಮವಾಗಿ ಪಾರ್ಟಿ ಮಾಡುತ್ತಿದ್ದವರಿಗೆ ಶಾಕ್, ಫಾರ್ಮ್​ಹೌಸ್ ಮೇಲೆ ದಾಳಿ
ಅಕ್ರಮವಾಗಿ ಪಾರ್ಟಿ ಮಾಡುತ್ತಿದ್ದವರಿಗೆ ಶಾಕ್, ಫಾರ್ಮ್​ಹೌಸ್ ಮೇಲೆ ದಾಳಿ
ಅಯ್ಯಪ್ಪ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಇಡುವುದರಿಂದ ಆಗುವ ಲಾಭಗಳೇನು?
ಅಯ್ಯಪ್ಪ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಇಡುವುದರಿಂದ ಆಗುವ ಲಾಭಗಳೇನು?
ಹೊಸ ವರ್ಷದ ಮೊದಲ ದಿನದಂದು ಈ ರಾಶಿಯವರಿಗೆ ಶುಭ ಫಲ
ಹೊಸ ವರ್ಷದ ಮೊದಲ ದಿನದಂದು ಈ ರಾಶಿಯವರಿಗೆ ಶುಭ ಫಲ
ನ್ಯೂ ಇಯರ್​​​: ಕುಡಿದು ಟೈಟಾದ ಯುವತಿ, ಆಟೋದಲ್ಲಿ ಕೂರಿಸಿ ಕಳಿಸಿದ ಪೊಲೀಸ್​​
ನ್ಯೂ ಇಯರ್​​​: ಕುಡಿದು ಟೈಟಾದ ಯುವತಿ, ಆಟೋದಲ್ಲಿ ಕೂರಿಸಿ ಕಳಿಸಿದ ಪೊಲೀಸ್​​
ಬೆಳಗಾವಿಯಲ್ಲಿ ನ್ಯೂಇಯರ್​​ ಕಿಕ್​​; ಭರ್ಜರಿ ಸ್ಟೆಪ್​ ಹಾಕಿದ ಜನರು
ಬೆಳಗಾವಿಯಲ್ಲಿ ನ್ಯೂಇಯರ್​​ ಕಿಕ್​​; ಭರ್ಜರಿ ಸ್ಟೆಪ್​ ಹಾಕಿದ ಜನರು
New Year 2026: ಹೊಸವರ್ಷಕ್ಕೆ ಅದ್ಧೂರಿ ಸ್ವಾಗತ; ಕುಣಿದು ಕುಪ್ಪಳಿಸಿದ ಜನರು
New Year 2026: ಹೊಸವರ್ಷಕ್ಕೆ ಅದ್ಧೂರಿ ಸ್ವಾಗತ; ಕುಣಿದು ಕುಪ್ಪಳಿಸಿದ ಜನರು