ತಮಿಳುನಾಡಲ್ಲಿ ಮದ್ಯ ಹಗರಣದ ವಿರುದ್ಧ ಪ್ರತಿಭಟನೆಗೂ ಮುನ್ನ ಅಣ್ಣಾಮಲೈ, ಇತರ ಬಿಜೆಪಿ ನಾಯಕರ ಬಂಧನ
ಟ್ಯಾಸ್ಮ್ಯಾಕ್ ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಜಾರಿ ನಿರ್ದೇಶನಾಲಯ (ಇಡಿ) ಹೇಳಿಕೊಂಡಿರುವಂತೆ, 1,000 ಕೋಟಿ ರೂ.ಗಳ ಅಕ್ರಮಗಳ ವಿರುದ್ಧ ಬಿಜೆಪಿ ನಗರದಲ್ಲಿನ ಟಿಎಎಸ್ಎಂಎಸಿ ಪ್ರಧಾನ ಕಚೇರಿಯ ಮುಷ್ಕರ ಪ್ರತಿಭಟನೆಯನ್ನು ಘೋಷಿಸಿತ್ತು. ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರನ್ನು ಇಂದು ಬೆಳಿಗ್ಗೆ ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಸರ್ಕಾರಿ ಸ್ವಾಮ್ಯದ ಮದ್ಯದ ಚಿಲ್ಲರೆ ವ್ಯಾಪಾರಿ ಸಂಸ್ಥೆಯಾದ ತಮಿಳುನಾಡು ರಾಜ್ಯ ಮಾರುಕಟ್ಟೆ ನಿಗಮದಲ್ಲಿ (TASMAC) ನಡೆದಿದೆ ಎನ್ನಲಾದ ಹಣಕಾಸಿನ ಅಕ್ರಮಗಳ ವಿರುದ್ಧ ಪ್ರತಿಭಟನೆ ನಡೆಸುವ ಕೆಲವೇ ಗಂಟೆಗಳ ಮೊದಲು ಪೊಲೀಸರು ಅವರನ್ನು ಬಂಧಿಸಿದ್ದಾರೆ.

ಚೆನ್ನೈ, (ಮಾರ್ಚ್ 17): ಟ್ಯಾಸ್ಮ್ಯಾಕ್ ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಮತ್ತು ತೆಲಂಗಾಣದ ಮಾಜಿ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಸೇರಿದಂತೆ ಹಲವಾರು ಬಿಜೆಪಿ ನಾಯಕರನ್ನು ಇಂದು (ಮಾರ್ಚ್ 17) ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಜಾರಿ ನಿರ್ದೇಶನಾಲಯ (ಇಡಿ) ಇತ್ತೀಚೆಗೆ 1,000 ಕೋಟಿ ರೂ.ಗಳ ಅಕ್ರಮಗಳ ಆರೋಪ ಮಾಡಿತ್ತು. ಇದಾದ ನಂತರ ಬಿಜೆಪಿ ನಗರದಲ್ಲಿನ ಟಿಎಎಸ್ಎಂಎಸಿ ಪ್ರಧಾನ ಕಚೇರಿಯಲ್ಲಿ ಪ್ರತಿಭಟನಾ ಮೆರವಣಿಗೆ ಮತ್ತು ಮುಷ್ಕರವನ್ನು ಘೋಷಿಸಿತ್ತು. ಇದಕ್ಕೂ ಮೊದಲು ಕಪ್ಪು ಶರ್ಟ್ ಧರಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರನ್ನು ಅವರ ಮನೆಯಿಂದ ಸುಮಾರು 1 ಕಿ.ಮೀ ದೂರದಲ್ಲಿ ಪೊಲೀಸರು ತಡೆದರು ಮತ್ತು ಪೊಲೀಸರು ಅಣ್ಣಾಮಲೈ ಹಾಗೂ ಅವರ ಬೆಂಬಲಿಗರನ್ನು ಬಂಧಿಸಿದರು.
ಪ್ರತಿಭಟನೆಗಾಗಿ ಮನೆಯಿಂದ ಹೊರಡುತ್ತಿದ್ದಾಗ ತಮಿಳಿಸೈ ಸೌಂದರರಾಜನ್ ಅವರನ್ನು ವಶಕ್ಕೆ ಪಡೆದರು. ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ, ತಮಿಳಿಸೈ ಸೌಂದರರಾಜನ್ ಸೇರಿದಂತೆ ಪಕ್ಷದ ಹಿರಿಯ ನಾಯಕರನ್ನು ಪೊಲೀಸರು ಗೃಹಬಂಧನದಲ್ಲಿ ಇರಿಸಿದ್ದಾರೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಆರೋಪಿಸಿದ್ದಾರೆ. ಮಹಿಳಾ ಮೋರ್ಚಾ ಮುಖ್ಯಸ್ಥೆ ಮತ್ತು ಕೊಯಮತ್ತೂರು ದಕ್ಷಿಣ ಶಾಸಕಿ ವನತಿ ಶ್ರೀನಿವಾಸನ್, ವಿನೋಜ್ ಪಿ ಸೆಲ್ವಂ ಮತ್ತು ಅಮರ್ ಪ್ರಸಾದ್ ರೆಡ್ಡಿ ಅವರನ್ನು ಕೂಡ ಬಂಧಿಸಲಾಗಿದೆ.
திமுக அரசின் ரூ.1,000 கோடி டாஸ்மாக் ஊழலைக் கண்டித்து, @BJP4Tamilnadu சார்பில், இன்று சென்னை டாஸ்மாக் தலைமை அலுவலகம் முற்றுகைப் போராட்டம் அறிவித்திருந்தோம். தொடைநடுங்கி திமுக அரசு, @BJP4Tamilnadu மூத்த தலைவர்களில் ஒருவரும், முன்னாள் ஆளுநருமான, அக்கா திருமதி @DrTamilisai4BJP,… pic.twitter.com/em0UUH5sjF
— K.Annamalai (@annamalai_k) March 17, 2025
ಇದನ್ನೂ ಓದಿ: ಭಾಷಾ ವಿವಾದ; ತಮಿಳುನಾಡಿನಲ್ಲಿ ಹಿಂದಿಯ ರೂಪಾಯಿ ಚಿಹ್ನೆಯ ಬದಲು ತಮಿಳು ಭಾಷೆಯ ರೂ. ಬಳಕೆಗೆ ನಿರ್ಧಾರ
1000 ಕೋಟಿ ರೂ. ಅಕ್ರಮ:
ತಮಿಳುನಾಡು ರಾಜ್ಯ ಮಾರುಕಟ್ಟೆ ನಿಗಮದಲ್ಲಿ (TASMAC) 1,000 ಕೋಟಿ ರೂ. ಮೊತ್ತದ ಅಕ್ರಮಗಳು ನಡೆದಿದೆ ಎಂದು ಕೆ. ಅಣ್ಣಾಮಲೈ ಆರೋಪಿಸಿದ್ದಾರೆ. ಈ ವಿಷಯದ ಬಗ್ಗೆ ಬಿಜೆಪಿ ತನ್ನ ಪ್ರತಿಭಟನೆಗಳನ್ನು ಮುಂದುವರಿಸಲಿದೆ ಎಂದು ಪ್ರತಿಪಾದಿಸಿದ್ದಾರೆ. ಟೆಂಡರ್ ಪ್ರಕ್ರಿಯೆಗಳಲ್ಲಿ ಕುಶಲತೆ ಮತ್ತು ವಿವಿಧ ಡಿಸ್ಟಿಲರಿ ಕಂಪನಿಗಳ ಮೂಲಕ 1,000 ಕೋಟಿ ರೂ. ಮೊತ್ತದ ಲೆಕ್ಕವಿಲ್ಲದ ನಗದು ವಹಿವಾಟು ಸೇರಿದಂತೆ TASMAC ಕಾರ್ಯಾಚರಣೆಗಳಲ್ಲಿ ಬಹು ಅಕ್ರಮಗಳನ್ನು ಬಹಿರಂಗಪಡಿಸಿರುವುದಾಗಿ ಜಾರಿ ನಿರ್ದೇಶನಾಲಯ (ED) ಈ ಹಿಂದೆ ಘೋಷಿಸಿತ್ತು.
VIDEO | Chennai: Police detain BJP leader Tamilisai Soundararajan (@DrTamilisai4BJP) ahead of party’s protest over alleged irregularities in Tasmac.
(Full video available on PTI Videos – https://t.co/n147TvrpG7) pic.twitter.com/x6R1uzHzkR
— Press Trust of India (@PTI_News) March 17, 2025
ಇದನ್ನೂ ಓದಿ: ತಮಿಳುನಾಡಿನಲ್ಲಿ ಭುಗಿಲೆದ್ದ ಭಾಷಾ ವಿವಾದ; ಹಿಂದಿಯ ರೂ. ಚಿಹ್ನೆ ಬದಲು ತಮಿಳಿನ ಅಕ್ಷರ ಬಳಕೆಗೆ ಬಿಜೆಪಿ ಆಕ್ರೋಶ
ED ಪ್ರಕಾರ, ಮಾರ್ಚ್ 6ರಂದು ಉದ್ಯೋಗಿಗಳ ಮನೆಗಳು, ಡಿಸ್ಟಿಲರಿಗಳ ಕಾರ್ಪೊರೇಟ್ ಕಚೇರಿಗಳು ಮತ್ತು TASMAC ಸೌಲಭ್ಯಗಳ ಮೇಲೆ ನಡೆಸಿದ ದಾಳಿಯ ಸಮಯದಲ್ಲಿ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ. ಈ ಭ್ರಷ್ಟಾಚಾರ ಕೃತ್ಯಗಳಲ್ಲಿ ಲಂಚದ ಹಣವೂ ಸೇರಿದೆ ಎಂದು ಇಡಿ ಆರೋಪಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ