ತಮಿಳುನಾಡಿನಲ್ಲಿ ಭುಗಿಲೆದ್ದ ಭಾಷಾ ವಿವಾದ; ಹಿಂದಿಯ ರೂ. ಚಿಹ್ನೆ ಬದಲು ತಮಿಳಿನ ಅಕ್ಷರ ಬಳಕೆಗೆ ಬಿಜೆಪಿ ಆಕ್ರೋಶ
ಹಿಂದಿಯ ರೂ. ಸಿಂಬಲ್ ಬದಲು ತಮಿಳು ಭಾಷೆಯ ರೂ.ಬಳಕೆಗೆ ತಮಿಳುನಾಡು ಸರ್ಕಾರ ಬಜೆಟ್ ನಲ್ಲಿ ಘೋಷಿಸಿದೆ. ಈ ನಡೆಯನ್ನು ಬಿಜೆಪಿಯ ಕೆ. ಅಣ್ಣಾಮಲೈ ಟೀಕಿಸಿದ್ದಾರೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಇನ್ನೆಷ್ಟು ಮೂರ್ಖರಾಗಲು ಸಾಧ್ಯ? ಎಂದು ಅವರು ಲೇವಡಿ ಮಾಡಿದ್ದಾರೆ. ಎನ್‌ಇಪಿ ಮತ್ತು ತ್ರಿಭಾಷಾ ನೀತಿಯನ್ನು ವಿರೋಧಿಸಿರುವ ಸಿಎಂ ಎಂ.ಕೆ. ಸ್ಟಾಲಿನ್ 2025-26ರ ಬಜೆಟ್‌ನ ಲೋಗೋವನ್ನು ತಮಿಳು ಚಿಹ್ನೆಯೊಂದಿಗೆ ಪ್ರದರ್ಶಿಸುವ ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ.

ಚೆನ್ನೈ, (ಮಾರ್ಚ್ 13): ತಮಿಳುನಾಡಿನಲ್ಲಿ ಮುಖ್ಯಮಂತ್ರಿಯನ್ನು ಅಣಕಿಸಲು ಬಿಜೆಪಿಯ ಅಣ್ಣಾಮಲೈ ರೂಪಾಯಿ ಚಿಹ್ನೆಯ ಟ್ರಿವಿಯಾವನ್ನು ಹಂಚಿಕೊಂಡಿದ್ದಾರೆ. 2025-26ರ ಬಜೆಟ್ ಲೋಗೋದಲ್ಲಿ ರೂಪಾಯಿ ಚಿಹ್ನೆಯನ್ನು ತಮಿಳು ಅಕ್ಷರದೊಂದಿಗೆ ಬದಲಾಯಿಸಿದ್ದಕ್ಕಾಗಿ ಬಿಜೆಪಿಯ ಕೆ. ಅಣ್ಣಾಮಲೈ ಡಿಎಂಕೆ ಪಕ್ಷವನ್ನು ಟೀಕಿಸಿದ್ದಾರೆ. ಈ ಚಿಹ್ನೆಯನ್ನು ತಮಿಳಿಗರು ವಿನ್ಯಾಸಗೊಳಿಸಿದ್ದಾರೆ ಎಂದು ಉಲ್ಲೇಖಿಸಿರುವ ಅವರು ಈ ಕ್ರಮವನ್ನು “ಮೂರ್ಖತನ” ಎಂದು ಕರೆದಿದ್ದಾರೆ, ಸ್ಟುಪಿಡ್ ಸ್ಟಾಲಿನ್ ಎಂದು ಲೇವಡಿ ಕೂಡ ಮಾಡಿದ್ದಾರೆ.
2025-26ರ ಬಜೆಟ್ ಲೋಗೋದಲ್ಲಿ ರೂಪಾಯಿ ಚಿಹ್ನೆಯ ಬದಲಿಗೆ ತಮಿಳು ಅಕ್ಷರವನ್ನು ಬಳಸುವ ರಾಜ್ಯ ಸರ್ಕಾರದ ನಿರ್ಧಾರದ ಬಗ್ಗೆ ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ. ಅಣ್ಣಾಮಲೈ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ, ಅಣ್ಣಾಮಲೈ ತಮಿಳನೊಬ್ಬ ವಿನ್ಯಾಸಗೊಳಿಸಿದ ರಾಷ್ಟ್ರೀಯ ಚಿಹ್ನೆಯನ್ನು ಡಿಎಂಕೆ ನಿರ್ಲಕ್ಷಿಸಿದೆ ಎಂದು ಆರೋಪಿಸಿದ್ದಾರೆ. ಈ ಕ್ರಮವನ್ನು “ಮೂರ್ಖತನ” ಎಂದು ಟೀಕಿಸಿದ್ದಾರೆ.
The DMK Government’s State Budget for 2025-26 replaces the Rupee Symbol designed by a Tamilian, which was adopted by the whole of Bharat and incorporated into our Currency.
Thiru Udhay Kumar, who designed the symbol, is the son of a former DMK MLA.
How stupid can you become,… pic.twitter.com/t3ZyaVmxmq
— K.Annamalai (@annamalai_k) March 13, 2025
“2025-26ರ ಡಿಎಂಕೆ ಸರ್ಕಾರದ ರಾಜ್ಯ ಬಜೆಟ್ ತಮಿಳಿಗನೊಬ್ಬ ವಿನ್ಯಾಸಗೊಳಿಸಿದ ರೂಪಾಯಿ ಚಿಹ್ನೆಯನ್ನು ಬದಲಾಯಿಸುತ್ತದೆ. ಈ ಚಿಹ್ನೆಯನ್ನು ಇಡೀ ಭಾರತ ಅಳವಡಿಸಿಕೊಂಡಿದೆ ಮತ್ತು ನಮ್ಮ ಕರೆನ್ಸಿಯಲ್ಲಿ ಸೇರಿಸಲಾಗಿದೆ. ಈ ಚಿಹ್ನೆಯನ್ನು ವಿನ್ಯಾಸಗೊಳಿಸಿದ ತಿರು ಉದಯ್ ಕುಮಾರ್ ಮಾಜಿ ಡಿಎಂಕೆ ಶಾಸಕರ ಮಗ. ನೀವು ಎಷ್ಟು ಇನ್ನೆಷ್ಟು ಮೂರ್ಖತನದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯ? ತಿರು ಎಂಕೆ ಸ್ಟಾಲಿನ್ ಅವರೇ” ಎಂದು ಅವರು ಎಕ್ಸ್ ನಲ್ಲಿ ಬರೆದಿದ್ದಾರೆ.
ಇದನ್ನೂ ಓದಿ: ಕೂಡಲೆ ಮಕ್ಕಳನ್ನು ಮಾಡಿಕೊಳ್ಳಿ; ನವವಿವಾಹಿತರಿಗೆ ಸಿಎಂ ಸ್ಟಾಲಿನ್ ಮನವಿ
ಎನ್‌ಇಪಿ ಮತ್ತು ತ್ರಿಭಾಷಾ ನೀತಿಯನ್ನು ವಿರೋಧಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, 2025-26ರ ಬಜೆಟ್‌ನ ಲೋಗೋವನ್ನು ತಮಿಳು ಚಿಹ್ನೆಯೊಂದಿಗೆ ಪ್ರದರ್ಶಿಸುವ ವೀಡಿಯೊವನ್ನು ಬಿಡುಗಡೆ ಮಾಡಿದರು. 2024 -25ರ ಬಜೆಟ್‌ನ ಹಿಂದಿನ ಬಜೆಟ್ ಲೋಗೋದಲ್ಲಿ ಭಾರತೀಯ ಕರೆನ್ಸಿ ಚಿಹ್ನೆ ರೂ. 2025-26ನೇ ಸಾಲಿನ ಬಜೆಟ್ ಮಾರ್ಚ್ 14ರಂದು ತಮಿಳುನಾಡು ವಿಧಾನಸಭೆಯಲ್ಲಿ ಮಂಡನೆಯಾಗಲಿದೆ.
சமூகத்தின் அனைத்துத் தரப்பினரும் பயன்பெறும் வகையில் தமிழ்நாட்டின் பரவலான வளர்ச்சியை உறுதி செய்திட…#DravidianModel #TNBudget2025 pic.twitter.com/83ZBFUdKZC
— M.K.Stalin (@mkstalin) March 13, 2025
ಕೇಂದ್ರ ಸರ್ಕಾರ ತಮಿಳುನಾಡಿನ ಮೇಲೆ ಹಿಂದಿ ಹೇರಲು ಬಿಡುವುದಿಲ್ಲ ಎಂದು ಎಂ.ಕೆ. ಸ್ಟಾಲಿನ್ ಹೇಳಿದ್ದಾರೆ. ಬುಧವಾರ ಎಂ.ಕೆ. ಸ್ಟಾಲಿನ್ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು, ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಎಂದರೆ ಭಾರತವನ್ನು ಅಭಿವೃದ್ಧಿಪಡಿಸುವ ಬದಲು ಹಿಂದಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ “ಕೇಸರಿ ನೀತಿ” ಎಂದು ಕರೆದರು. ಈ ನೀತಿಯು ತಮಿಳುನಾಡಿನ ಶಿಕ್ಷಣ ವ್ಯವಸ್ಥೆಯನ್ನು ನಾಶಮಾಡುವ ಬೆದರಿಕೆ ಹಾಕುತ್ತದೆ ಎಂದು ಅವರು ಆರೋಪಿಸಿದರು.
“ರಾಷ್ಟ್ರೀಯ ಶಿಕ್ಷಣ ನೀತಿ ಕೇಸರಿಕರಣದ ನೀತಿಯಾಗಿದೆ. ಈ ನೀತಿಯನ್ನು ಭಾರತವನ್ನು ಅಭಿವೃದ್ಧಿಪಡಿಸಲು ರಚಿಸಲಾಗಿಲ್ಲ, ಹಿಂದಿಯನ್ನು ಅಭಿವೃದ್ಧಿಪಡಿಸಲು ರಚಿಸಲಾಗಿದೆ. ತಮಿಳುನಾಡು ಶಿಕ್ಷಣ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಾಶಪಡಿಸುವುದರಿಂದ ನಾವು ಈ ನೀತಿಯನ್ನು ವಿರೋಧಿಸುತ್ತಿದ್ದೇವೆ” ಎಂದು ಸಿಎಂ ಸ್ಟಾಲಿನ್ ತಿರುವಲ್ಲೂರಿನಲ್ಲಿ ಹೇಳಿದ್ದರು. ಎನ್‌ಇಪಿಯನ್ನು ಸ್ವೀಕರಿಸುವಂತೆ ರಾಜ್ಯವನ್ನು ಒತ್ತಾಯಿಸಲು ಕೇಂದ್ರ ಸರ್ಕಾರವು ಹಣವನ್ನು ತಡೆಹಿಡಿದಿದೆ ಎಂದು ಎಂ.ಕೆ. ಸ್ಟಾಲಿನ್ ಆರೋಪಿಸಿದ್ದರು.
ಇದನ್ನೂ ಓದಿ: ಭಾಷಾ ವಿವಾದ; ತಮಿಳುನಾಡಿನಲ್ಲಿ ಹಿಂದಿಯ ರೂಪಾಯಿ ಚಿಹ್ನೆಯ ಬದಲು ತಮಿಳು ಭಾಷೆಯ ರೂ. ಬಳಕೆಗೆ ನಿರ್ಧಾರ
ತಮಿಳುನಾಡು ರಾಜ್ಯ ಬಜೆಟ್ ದಾಖಲೆಯಲ್ಲಿ ಅಧಿಕೃತ ರೂಪಾಯಿ ಚಿಹ್ನೆಯ ಬದಲಿಗೆ ‘ರುಬಾಯಿ’ (ತಮಿಳಿನಲ್ಲಿ ರೂಪಾಯಿ) ಯನ್ನು ಸೂಚಿಸುವ ‘ರೂ’ ತಮಿಳು ಅಕ್ಷರವನ್ನು ಬಳಸಿದ್ದರಿಂದ ವಿವಾದ ಭುಗಿಲೆದ್ದಿತು. ಈ ಕ್ರಮವು ಹೊಸ ಭಾಷಾ ಚರ್ಚೆಯನ್ನು ಹುಟ್ಟುಹಾಕಿದೆ. ವಿರೋಧ ಪಕ್ಷದ ನಾಯಕರು ಡಿಎಂಕೆ ತಮಿಳು ಗುರುತಿನ ರಾಜಕೀಯದ ಪರವಾಗಿ ರಾಷ್ಟ್ರೀಯ ಚಿಹ್ನೆಗಳನ್ನು ಬದಿಗಿಟ್ಟಿದೆ ಎಂದು ಆರೋಪಿಸಿದ್ದಾರೆ. ರುಪಾಯಿ ಚಿಹ್ನೆಯನ್ನು ತಮಿಳುನಾಡು ಮೂಲದ ಶಿಕ್ಷಣ ತಜ್ಞ ಉದಯ್ ಕುಮಾರ್ ವಿನ್ಯಾಸಗೊಳಿಸಿದ್ದು, ಇದನ್ನು ಭಾರತ ಸರ್ಕಾರವು 2010ರಲ್ಲಿ ಅಧಿಕೃತವಾಗಿ ಅಳವಡಿಸಿಕೊಂಡಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ