ಅರುಣಾಚಲ ಪ್ರದೇಶದಲ್ಲಿ ವಾಯುಪಡೆ ಹೆಲಿಕಾಪ್ಟರ್ ಪತನ; ಅದರಲ್ಲಿದ್ದ ಐದೂ ಮಂದಿ ಸೇಫ್
ಸೆಪ್ಟೆಂಬರ್ನಲ್ಲಿ ಜಮ್ಮು-ಕಾಶ್ಮೀರದ ಉಧಾಂಪುರ ಜಿಲ್ಲೆಯ ಶಿವ್ಗಡ್ ಧಾರ್ ಗುಡ್ಡಪ್ರದೇಶದಲ್ಲಿ ಸೇನಾ ಹೆಲಿಕಾಪ್ಟರ್ ಪತನಗೊಂಡು ಇಬ್ಬರು ಪೈಲಟ್ಗಳು ಮೃತಪಟ್ಟಿದ್ದರು.
ಭಾರತೀಯ ವಾಯುಪಡೆಯ ಎಂಐ-17 (Mi-17) ಹೆಲಿಕಾಪ್ಟರ್ ಇಂದು ಅರುಣಾಚಲ ಪ್ರದೇಶದ ಪೂರ್ವ ಭಾಗದಲ್ಲಿ ಪತನಗೊಂಡಿದೆ. ಈ ಹಲಿಕಾಪ್ಟರ್ನಲ್ಲಿ ಇಬ್ಬರು ಪೈಲಟ್ಗಳು ಮತ್ತು ಮೂವರು ಸಿಬ್ಬಂದಿ ಸೇರಿ ಒಟ್ಟು ಐದು ಮಂದಿ ಪ್ರಯಾಣ ಮಾಡುತ್ತಿದ್ದರು. ಅದೃಷ್ಟವಶಾತ್ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಈ ಹೆಲಿಕಾಪ್ಟರ್ ಸಂಪೂರ್ಣವಾಗಿ ಪತನಗೊಳ್ಳಲಿಲ್ಲ. ಬದಲಾಗಿ ಹಾರಾಟ ನಡೆಸುತ್ತಿದ್ದಾಗ ಒಮ್ಮೆಲೆ ದೋಷ ಕಾಣಿಸಿದ ಹಿನ್ನೆಲೆಯಲ್ಲಿ ಅದನ್ನು ತುರ್ತು ಭೂಸ್ಪರ್ಶ ಮಾಡಿಸಲಾಗಿದೆ. ಹೀಗಾಗಿ ಅದರಲ್ಲಿದ್ದ ಜನರಿಗೆ ಯಾವುದೇ ಅಪಾಯವಾಗಲಿಲ್ಲ ಎನ್ನಲಾಗಿದೆ.
ಅಂದಹಾಗೆ ಈ ಹೆಲಿಕಾಪ್ಟರ್ ದುರಸ್ತಿ ಹಂತದಲ್ಲೇ ಇತ್ತು. ಪತನಗೊಂಡಿದ್ದಕ್ಕೆ ಕಾರಣ ತಿಳಿಯಲು ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಸೆಪ್ಟೆಂಬರ್ ತಿಂಗಳಲ್ಲಿ ಜಮ್ಮು-ಕಾಶ್ಮೀರದ ಉಧಾಂಪುರ ಜಿಲ್ಲೆಯ ಪಟ್ನಿಟಾಪ್ ಪ್ರವಾಸಿ ರೆಸಾರ್ಟ್ ಬಳಿಯ ಶಿವ್ಗಡ್ ಧಾರ್ ಗುಡ್ಡಪ್ರದೇಶದಲ್ಲಿ ಸೇನಾ ಹೆಲಿಕಾಪ್ಟರ್ ಪತನಗೊಂಡು ಇಬ್ಬರು ಪೈಲಟ್ಗಳು ಮೃತಪಟ್ಟಿದ್ದಾರೆ. ಹಾಗೇ ಆಗಸ್ಟ್ 3ರಂದು ಪಠಾಣ್ಕೋಟ್ ಬಳಿ ನಡೆದ ಪತನದಲ್ಲಿ ಇಬ್ಬರು ಪೈಲಟ್ಗಳು ಸಾವನ್ನಪ್ಪಿದ್ದರು.
An IAF Mi-17 helicopter today crash-landed in eastern Arunachal Pradesh with 2 pilots&3 crew members. All are safe. Helicopter was carrying out air maintenance sortie when the incident took place. Court of inquiry will be ordered to ascertain the reasons for the incident: Sources pic.twitter.com/LGMfGrwc5P
— ANI (@ANI) November 18, 2021
Published On - 2:54 pm, Thu, 18 November 21