ದೆಹಲಿ ಸಿಎಂ ಅತಿಶಿಯನ್ನು ಶೀಘ್ರ ಬಂಧಿಸಬಹುದು: ಕೇಜ್ರಿವಾಲ್ ಹೀಗೆ ಹೇಳಿದ್ದೇಕೆ?
ಮಹಿಳಾ ಸಮ್ಮಾನ್ ಯೋಜನೆ ಮತ್ತು ಸಂಜೀವನಿ ಯೋಜನೆ ಘೋಷಣೆಯಾದ ನಂತರ ಈ ಜನರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ ಎಂದು ಕೇಜ್ರಿವಾಲ್ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ. ಮುಂದಿನ ದಿನಗಳಲ್ಲಿ ನಕಲಿ ಪ್ರಕರಣ ಸೃಷ್ಟಿಸಿ ಸಿಎಂ ಅತಿಶಿ ಅವರನ್ನು ಬಂಧಿಸಲು ಪ್ಲಾನ್ ಮಾಡಿದ್ದಾರೆ. ನಾವು ಸಿಎಂ ಅತಿಶಿ ಅವರೊಂದಿಗೆ ನಿಂತಿದ್ದೇವೆ ಮತ್ತು ನಾವು ಹೆದರುವುದಿಲ್ಲ ಅಥವಾ ತಲೆಬಾಗುವುದಿಲ್ಲ ಎಂದು ಹೇಳಿದರು.
ದೆಹಲಿ ವಿಧಾನಸಭಾ ಚುನಾವಣೆ ಸನ್ನಿಹಿತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹೊಸ ಯೋಜನೆಗಳು, ಹೊಸ ಹೊಸ ಭರವಸೆಗಳನ್ನು ರಾಜಕಾರಣಿಗಳು ನೀಡುತ್ತಿದ್ದಾರೆ. ಈ ನಡುವೆ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್(Arvind Kejriwal) ದೊಡ್ಡ ಆರೋಪ ಮಾಡಿದ್ದಾರೆ. ಸುಳ್ಳು ಪ್ರಕರಣದಲ್ಲಿ ಸಿಎಂ ಅತಿಶಿಯನ್ನು ಬಂಧಿಸಬಹುದು ಎಂದು ಹೇಳಿದ್ದಾರೆ. ದೆಹಲಿ ಸರ್ಕಾರದ ಎರಡು ಇಲಾಖೆಗಳು ಮಹಿಳಾ ಸಮ್ಮಾನ್ ಯೋಜನೆ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಸಂಜೀವನಿ ಯೋಜನೆ ಬಗ್ಗೆ ಪ್ರಶ್ನೆಗಳನ್ನು ಎತ್ತಿವೆ.
ದೆಹಲಿ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಮಹಿಳಾ ಸಮ್ಮಾನ್ ಯೋಜನೆ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸಂಜೀವನಿ ಯೋಜನೆಗಾಗಿ ಪ್ರಾರಂಭಿಸಿರುವ ನೋಂದಣಿಯನ್ನು ಕಾನೂನುಬಾಹಿರವೆಂದು ಘೋಷಿಸಿದೆ.
ಮಹಿಳಾ ಸಮ್ಮಾನ್ ಯೋಜನೆ ಮತ್ತು ಸಂಜೀವನಿ ಯೋಜನೆಯಂತಹ ಕಲ್ಯಾಣ ಉಪಕ್ರಮಗಳ ಸರ್ಕಾರದ ಘೋಷಣೆಯಿಂದ ಕೆಲವರು ಅಸಮಾಧಾನಗೊಂಡಿದ್ದಾರೆ ಎಂದು ದೆಹಲಿಯ ಮಾಜಿ ಸಿಎಂ ಮತ್ತು ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಮತ್ತಷ್ಟು ಓದಿ: ದೆಹಲಿಯಲ್ಲಿ ಹೊಸ ಮನೆಗೆ ತೆರಳಲು ಸಿದ್ಧರಾದ ಅರವಿಂದ್ ಕೇಜ್ರಿವಾಲ್
ಮುಂದಿನ ಕೆಲವೇ ದಿನಗಳಲ್ಲಿ ನಕಲಿ ಪ್ರಕರಣವನ್ನು ಸೃಷ್ಟಿಸಿ ಅತಿಶಿ ಜಿಯನ್ನು ಬಂಧಿಸಲು ಯೋಜನೆ ರೂಪಿಸಿರುವುದಾಗಿ ಕೇಜ್ರಿವಾಲ್ ಹೇಳಿದರು. ಮುಂದಿನ ವರ್ಷ ದೆಹಲಿ ವಿಧಾನಸಭಾ ಚುನಾವಣೆಗೆ ಮುನ್ನ ಎಎಪಿ ಮಹಿಳೆಯರು ಮತ್ತು ವೃದ್ಧರಿಗಾಗಿ ಹಲವಾರು ಕಲ್ಯಾಣ ಯೋಜನೆಗಳನ್ನು ಘೋಷಿಸಿದೆ. ಮಹಿಳಾ ಸಮ್ಮಾನ್ ಯೋಜನೆಯಡಿ, ಮಹಾರಾಷ್ಟ್ರದ ಲಾಡ್ಲಿ ಬ್ರಾಹ್ಮಣ ಯೋಜನೆಯ ಮಾದರಿಯಲ್ಲಿ, ಅರ್ಹ ಮಹಿಳೆಯರಿಗೆ ತಿಂಗಳಿಗೆ 1,000 ರೂ. ಎಎಪಿ ಸರ್ಕಾರ ಪುನರಾಯ್ಕೆಯಾದರೆ ಈ ಮೊತ್ತವನ್ನು 2,100 ರೂ.ಗೆ ಹೆಚ್ಚಿಸಲಾಗುವುದು ಎಂದು ಕೇಜ್ರಿವಾಲ್ ಭರವಸೆ ನೀಡಿದ್ದಾರೆ.
महिला सम्मान योजना और संजीवनी योजना से ये लोग बुरी तरह से बौखला गए हैं।
अगले कुछ दिनों में फ़र्ज़ी केस बनाकर आतिशी जी को गिरफ्तार करने का इन्होंने प्लान बनाया है
उसके पहले “आप” के सीनियर नेताओं पर रेड की जायेंगी
आज 12 बजे इस पर प्रेस कांफ्रेंस करूँगा।
— Arvind Kejriwal (@ArvindKejriwal) December 25, 2024
ಅದೇ ರೀತಿ, ಸಂಜೀವನಿ ಯೋಜನೆಯು 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ದೆಹಲಿ ನಿವಾಸಿಗಳಿಗೆ ಉಚಿತ ಆರೋಗ್ಯ ಸೇವೆಯನ್ನು ಒದಗಿಸುತ್ತದೆ. ಈ ಯೋಜನೆಯು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಹಿರಿಯ ನಾಗರಿಕರ ವೈದ್ಯಕೀಯ ವೆಚ್ಚವನ್ನು ಭರಿಸುತ್ತದೆ.
ಮಹಿಳಾ ಸಮ್ಮಾನ್ ಯೋಜನೆ ಮತ್ತು ಸಂಜೀವನಿ ಯೋಜನೆಯು ದೆಹಲಿ ಸರ್ಕಾರದ ಕಾರ್ಯಕ್ರಮಗಳ ಭಾಗವಾಗಿಲ್ಲ ಎಂದು ಡಬ್ಲ್ಯುಸಿಡಿ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳು ಸಾರ್ವಜನಿಕ ನೋಟಿಸ್‌ಗಳನ್ನು ನೀಡಿವೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:13 pm, Wed, 25 December 24