Assam Assembly Elections 2021: ಅಸ್ಸಾಂನ 40 ಕ್ಷೇತ್ರಗಳ ಅಭ್ಯರ್ಥಿ ಪಟ್ಟಿ ಘೋಷಿಸಿದ ಕಾಂಗ್ರೆಸ್
ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಸೇರ್ಪಡೆಗೊಂಡ ಗೊಲಾಘಾಟ್ ಬಿಟುಪಾನ್ ಸೈಕಲ ಗೊಲಾಘಾಟ್ನಿಂದ ಅಭ್ಯರ್ಥಿಯಾಗಿ ಘೋಷಣೆಗೊಂಡಿದ್ದಾರೆ. ಅದೇ ಕ್ಷೇತ್ರದಲ್ಲಿ ಕಾಂಗ್ರೆಸ್ ಮಾಜಿ ಸಚಿವ, ಈಗ ಬಿಜೆಪಿ ಸೇರಿರುವ ಅಜಂತಾ ನಿಯೋಗ್ ಬಿಜೆಪಿಯಿಂದ ಟಿಕೆಟ್ ಪಡೆದಿದ್ದಾರೆ.
ಗುವಾಹಟಿ: ಮುಂಬರುವ ವಿಧಾನಸಭಾ ಚುನಾವಣೆಗೆ ಅಸ್ಸಾಂ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ನಿನ್ನೆ (ಮಾರ್ಚ್ 6) ಬಿಡುಗಡೆಗೊಳಿಸಿದೆ. ರಾಜ್ಯದ 40 ಕ್ಷೇತ್ರಗಳ ಅಭ್ಯರ್ಥಿ ಪಟ್ಟಿಯನ್ನು ಪಕ್ಷ ಬಿಡುಗಡೆ ಮಾಡಿದೆ. ಕಾಂಗ್ರೆಸ್ನ ಹಾಲಿ ಶಾಸಕರನ್ನು ಮತ್ತೆ ಹೊಸ ಅಭ್ಯರ್ಥಿಗಳಾಗಿ ಉಳಿಸಿಕೊಂಡಿದೆ. ಅಸ್ಸಾಂ ವಿರೋಧ ಪಕ್ಷದ ನಾಯಕರೂ ಆಗಿರುವ ದೇವದತ್ತ ಸೈಕಲ ನಜಿರಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಮಾಜಿ ಸಚಿವ ರಕಿಬುಲ್ ಹುಸೈನ್ ಸಮುಗುರಿಯಿಂದ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಚಹಾ ಕೆಲಸಗಾರ ಪಂಗಡದ ಕಾಂಗ್ರೆಸ್ ಶಾಸಕರಾದ ರುಪ್ಜ್ಯೋತಿ ಕುರ್ಮಿ ಮರಿಯಾನಿಯಿಂದ ಮತ್ತು ರೋಸ್ಲಿನಾ ಟಿರ್ಕಿ ಸರುಪತೆರ್ನಿಂದ ಸ್ಪರ್ಧೆ ಮಾಡಲಿದ್ದಾರೆ.
ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಸೇರ್ಪಡೆಗೊಂಡ ಗೊಲಾಘಾಟ್ ಬಿಟುಪಾನ್ ಸೈಕಲ ಗೊಲಾಘಾಟ್ನಿಂದ ಅಭ್ಯರ್ಥಿಯಾಗಿ ಘೋಷಣೆಗೊಂಡಿದ್ದಾರೆ. ಅದೇ ಕ್ಷೇತ್ರದಲ್ಲಿ ಕಾಂಗ್ರೆಸ್ ಮಾಜಿ ಸಚಿವ, ಈಗ ಬಿಜೆಪಿ ಸೇರಿರುವ ಅಜಂತಾ ನಿಯೋಗ್ ಬಿಜೆಪಿಯಿಂದ ಟಿಕೆಟ್ ಪಡೆದಿದ್ದಾರೆ. ರಾಜೀವ್ ಲೋಚನ್ ಪೆಗು ಮಜುಲಿಯಿಂದ (ST ಮೀಸಲಾತಿ) ರಾಣಾ ಗೋಸ್ವಾಮಿ ಜೊರ್ಹಾತ್ನಿಂದ ಸ್ಪರ್ಧಿಸಲಿದ್ದಾರೆ. ತೇಜ್ಪುರ್ನಿಂದ ಅನುಜ್ ಕುಮಾರ್ ದಿಬ್ರುಘರ್ನಿಂದ ರಾಜ್ಕುಜಮಾರ್ ನೀಲನೇತ್ರ ಹಾಗೂ ದಿಗ್ಬೊಯ್ನಿಂದ ಶಿವನಾಥ್ ಚೆಟಿಯಾ ಕೈ ಪಕ್ಷದ ಚುನಾವಣಾ ಅಭ್ಯರ್ಥಿಗಳಾಗಿದ್ದಾರೆ.
ಅಸ್ಸಾಂನಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರದ ಗದ್ದುಗೆಗೆ ಏರುವ ಉತ್ಸಾಹ ತೋರಿದೆ. ಬಿಜೆಪಿ ಪಕ್ಷದ ಭರ್ಜರಿ ಪ್ರಚಾರ ಹಾಗೂ ಸವಾಲುಗಳ ನಡುವೆಯೂ ಕಾಂಗ್ರೆಸ್ ಗೆಲುವಿನ ಹೋರಾಟ ನಡೆಸುತ್ತಿದೆ. ಬಿಜೆಪಿ ಪರವಾಗಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ನಾಯಕ ಮತ್ತು ಗೃಹ ಸಚಿವ ಅಮಿತ್ ಶಾ ಪ್ರಚಾರ ನಡೆಸಿದರೆ. ಕಾಂಗ್ರೆಸ್ ಪರವಾಗಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಬಿರುಸಿನ ಯಾತ್ರೆ ಕೈಗೊಂಡಿದ್ದಾರೆ.
ಕಾಂಗ್ರೆಸ್ ನೇತೃತ್ವದ ಮಹಾಜೋತ್ ಅಥವಾ ಗ್ರಾಂಡ್ ಅಲಯನ್ಸ್ AIUDF, BPF, CPI(M), CPI, CPI(ML) ಮತ್ತು ಅಂಚಲಿಕ್ ಗಣ ಮೋರ್ಚಾ ಪಕ್ಷಗಳನ್ನು ಹೊಂದಿದೆ. ತನ್ನ ಮೈತ್ರಿ ಪಕ್ಷಗಳೊಂದಿಗೆ ಮಾತುಕತೆಯಲ್ಲಿ ತೊಡಗಿಕೊಂಡಿರುವ ಕಾಂಗ್ರೆಸ್ ಸೀಟು ಹಂಚಿಕೆ ವಿಚಾರವಾಗಿ ಚರ್ಚೆ ನಡೆಸುತ್ತಿದೆ.
ಇದನ್ನೂ ಓದಿ: Assam Elections 2021: ಅಸ್ಸಾಂನಲ್ಲೂ ಬಿಜೆಪಿ-ಕಾಂಗ್ರೆಸ್ ನಡುವೆ ಸಮರ ಜೋರು
ಇದನ್ನೂ ಓದಿ: Assam Assembly Elections 2021: ಅಸ್ಸಾಂ ಉಳಿಸಿ ಅಭಿಯಾನದ ವಿಜೇತರಿಗೆ ಕಾಂಗ್ರೆಸ್ನಿಂದ ಐಫೋನ್, ನಗದು ಬಹುಮಾನ
Published On - 6:47 pm, Sun, 7 March 21