Assam Earthquake: ಅಸ್ಸಾಂನ ಗುವಾಹಟಿಯಲ್ಲಿ 3.5 ತೀವ್ರತೆಯ ಭೂಕಂಪ
ಅಸ್ಸಾಂನ ಗುವಾಹಟಿಯಲ್ಲಿ ಇಂದು 3.5 ತೀವ್ರತೆಯ ಭೂಕಂಪ(Earthquake) ಸಂಭವಿಸಿದೆ. ಬೆಳಗ್ಗೆ 5:42ರ ಸುಮಾರಿಗೆ ಕಂಪನ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಭೂಕಂಪದಿಂದ ಯಾವುದೇ ಹಾನಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆದರೆ ಮುಂಜಾನೆ ಸಂಭವಿಸಿದ ಈ ಕಂಪನದಿಂದ ಜನರು ಭಯಭೀತರಾಗಿದ್ದರು, ಅನೇಕ ಮಂದಿ ಮನೆಗಳಿಂದ ಹೊರಗೆ ಬಂದಿದ್ದಾರೆ. ಕಳೆದ ತಿಂಗಳಿನಿಂದ ಭೂಕಂಪದ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.

ಭೂಮಿಯೊಳಗೆ ಏಳು ಪ್ಲೇಟ್ಗಳಿರುತ್ತವೆ ಅದು ನಿರಂತರವಾಗಿ ತಿರುಗುತ್ತಿರುತ್ತವೆ, ಈ ಫಲಕಗಳು ಕೆಲವು ಸ್ಥಳದಲ್ಲಿ ಘರ್ಷಣೆಗೊಂಡಾಗ ಅಲ್ಲಿ ದೋಷ ರೇಖೆಯ ವಲಯವು ರೂಪುಗೊಳ್ಳುತ್ತದೆ.
ರಿಕ್ಟರ್ ಮಾಪಕದಲ್ಲಿ 2.0ಕ್ಕಿಂತ ಕಡಿಮೆ ತೀವ್ರತೆ ಭೂಕಂಪಗಳನ್ನು ಸೂಕ್ಷ್ಮ ವರ್ಗದಲ್ಲಿ ಇರಿಸಲಾಗುತ್ತದೆ. ರಿಕ್ಟರ್ ಮಾಪಕದಲ್ಲಿ ಮೈಕ್ರೋ ವರ್ಗದ 8,000 ಭೂಕಂಪಗಳು ಪ್ರಪಂಚದಾದ್ಯಂತ ನಿತ್ಯ ವರದಿಯಾಗುತ್ತದೆ.
ಮತ್ತಷ್ಟು ಓದಿ: ಫಿಲಿಪೈನ್ಸ್‌ನಲ್ಲಿ 7.5 ತೀವ್ರತೆಯ ಭೂಕಂಪನ, ಸುನಾಮಿ ಎಚ್ಚರಿಕೆ ನೀಡಿದ ಯುಎಸ್ ಏಜೆನ್ಸಿ
ಹಾಗೆಯೇ 2.0 ರಿಂದ 2.9ರ ತೀವ್ರತೆಯ ಭೂಕಂಪಗಳನ್ನು ಸಣ್ಣ ವರ್ಗದಲ್ಲಿ ಇರಿಸಲಾಗುತ್ತದೆ. ಇಂತಹ 1000 ಭೂಕಂಪಗಳು ನಿತ್ಯ ಸಂಭವಿಸುತ್ತವೆ. ಲಘು ಭೂಕಂಪಗಳು 3.0 ರಿಂದ 3.9ರ ತೀವ್ರತೆಯನ್ನು ಹೊಂದಿರುತ್ತವೆ. ಇದು ವರ್ಷದಲ್ಲಿ 49,000 ಬಾರಿ ಸಂಭವಿಸುತ್ತದೆ. ಯಾವುದೇ ಹಾನಿಯುಂಟು ಮಾಡುವುದಿಲ್ಲ. ಬಳಿಕ ತೀವ್ರತೆಯ ಭೂಕಂಪಗಳು ಸಂಭವಿಸುತ್ತವೆ.
ಭೂಕಂಪದ ಸಂದರ್ಭದಲ್ಲಿ ಏನು ಮಾಡಬೇಕು ಕಂಪನವನ್ನು ಅನುಭವಿಸಿದಾಕ್ಷಣ ಮನೆಯಿಂದ ಹೊರಗೆ ಬರಬೇಕು. ಹೊರಗೆ ಹೋಗಲು ಲಿಫ್ಟ್ ಅನ್ನು ಎಂದೂ ಬಳಸಬೇಡಿ ಟೇಬಲ್, ಹಾಸಿಗೆ, ಮೇಜಿನಂತಹ ಪೀಠೋಪಕರಣಗಳ ಕೆಳಗೆ ಇರಿ ಹಾಗೂ ಅದರ ಕಾಲುಗಳನ್ನು ಬಿಗಿಯಾಗಿ ಹಿಡಿದುಕೊಳ್ಳಿ. ನೀವು ವಾಹನದಲ್ಲಿದ್ದರೆ ಕಟ್ಟಡ, ಹೋರ್ಡಿಂಗ್ಗಳು, ಫ್ಲೈಓವರ್ಗಳಿಂದ ದೂರವಿರಿ
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ