Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶವರ್ಮಾ ತಿನ್ನಬೇಡಿ, ಅದು ನಮ್ಮ ಆಹಾರವಲ್ಲ: ತಮಿಳುನಾಡು ಆರೋಗ್ಯ ಸಚಿವ

ಈ ಆಹಾರವು ನಮ್ಮ ಹವಾಮಾನ ಪರಿಸ್ಥಿತಿಗಳಿಗೆ ಸರಿಹೊಂದುತ್ತದೆಯೇ ಎಂದು ಯಾರೂ ಯೋಚಿಸುವುದಿಲ್ಲ ಮತ್ತು ಈ ವಸ್ತುಗಳನ್ನು ಮಾರಾಟ ಮಾಡುವವರು ಈ ಸಂಸ್ಕರಿಸಿದ ಮಾಂಸವನನ್ನಿರಿಸಲು ಅವಕಾಶವಿದೆಯೇ ಎಂದು ಚಿಂತಿಸುವುದಿಲ್ಲ

ಶವರ್ಮಾ ತಿನ್ನಬೇಡಿ, ಅದು ನಮ್ಮ ಆಹಾರವಲ್ಲ: ತಮಿಳುನಾಡು ಆರೋಗ್ಯ ಸಚಿವ
ತಮಿಳುನಾಡು ಆರೋಗ್ಯ ಸಚಿವ ಮಾ ಸುಬ್ರಮಣಿಯನ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: May 09, 2022 | 5:27 PM

ಚೆನ್ನೈ: ಶವರ್ಮಾ (shawarma) ಭಾರತೀಯ ಆಹಾರ ಪದ್ಧತಿಯ  ಭಾಗವಲ್ಲ. ಅದನ್ನು ತಿನ್ನಬೇಡಿ ಎಂದು ತಮಿಳುನಾಡು (Tamil Nadu)  ಆರೋಗ್ಯ ಸಚಿವ ಮಾ ಸುಬ್ರಮಣಿಯನ್ (Ma Subramanian) ಹೇಳಿದ್ದಾರೆ. ಭಾನುವಾರ ಮೆಗಾ ವ್ಯಾಕ್ಸಿನೇಷನ್ ಡ್ರೈವ್‌ನ ಮೇಲ್ವಿಚಾರಣೆಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಸುಬ್ರಮಣಿಯನ್, ಇತರ ಆಹಾರ ಪದಾರ್ಥಗಳು ಲಭ್ಯವಿವೆ ಮತ್ತು ಜನರು ತಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವ ಆಹಾರವನ್ನು ಸೇವಿಸುವುದನ್ನು ತಪ್ಪಿಸಬೇಕು ಎಂದಿದ್ದಾರೆ. “ಶವರ್ಮಾ ಪಾಶ್ಚಿಮಾತ್ಯ ಆಹಾರ. ಇದು ಪಾಶ್ಚಿಮಾತ್ಯ ದೇಶಗಳಿಗೆ ಅವರ ಹವಾಮಾನ ಪರಿಸ್ಥಿತಿಗಳಿಂದ ಸರಿಹೊಂದಬಹುದು. ಆ ಪ್ರದೇಶಗಳಲ್ಲಿ ತಾಪಮಾನವು ಮೈನಸ್ ಡಿಗ್ರಿಗಳಿಗೆ ಹೋಗಬಹುದು. ಹೊರಗೆ ಇಟ್ಟರೂ ಅದು ಹಾಳಾಗುವುದಿಲ್ಲ. ಯಾವುದೇ ಮಾಂಸ ಪದಾರ್ಥಗಳಾಗಲಿ, ಫ್ರೀಜರ್‌ನಲ್ಲಿ ಸರಿಯಾದ ಸ್ಥಿತಿಯಲ್ಲಿ ನಿರ್ವಹಿಸದಿದ್ದರೆ, ಅವು ಹಾಳಾಗುತ್ತವೆ. ಹಾಳಾದ ವಸ್ತುಗಳನ್ನು ತಿನ್ನುವುದರಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ,” ಎಂದು ಹೇಳಿದರು. ಶವರ್ಮಾ ಫ್ಲಾಟ್‌ಬ್ರೆಡ್‌ನಲ್ಲಿ ಸುತ್ತಿದ ಮಸಾಲೆ ಬೆರೆಸಿದ ಮಾಂಸದಿಂದ ಮಾಡಿದ ಜನಪ್ರಿಯ ಮಧ್ಯಪ್ರಾಚ್ಯದ ಬೀದಿ ಆಹಾರವಾಗಿದೆ. ದೇಶಾದ್ಯಂತ ಇರುವ ಶವರ್ಮಾ ಅಂಗಡಿಗಳಲ್ಲಿ ಸರಿಯಾದ ಶೇಖರಣಾ ಸೌಲಭ್ಯಗಳಿಲ್ಲ. ಅವುಗಳನ್ನು ಧೂಳಿಗೆ ಒಡ್ಡಿಕೊಳ್ಳುವಂತೆ ಹೊರಾಂಗಣದಲ್ಲಿ ಇರಿಸಲಾಗುತ್ತದೆ. ಯುವ ಪೀಳಿಗೆ ಇದನ್ನು ಇಷ್ಟ ಪಡುತ್ತಾರೆ ಎಂದು ಅನೇಕ ಅಂಗಡಿಗಳು ಯಾವುದೇ ಸರಿಯಾದ ಸೌಲಭ್ಯಗಳಿಲ್ಲದೆ ಇದನ್ನು ಮಾರಾಟ ಮಾಡಲು ಪ್ರಾರಂಭಿಸಿವೆ ಎಂದು ಸುಬ್ರಮಣಿಯನ್ ಹೇಳಿದರು.

ಈ ಆಹಾರವು ನಮ್ಮ ಹವಾಮಾನ ಪರಿಸ್ಥಿತಿಗಳಿಗೆ ಸರಿಹೊಂದುತ್ತದೆಯೇ ಎಂದು ಯಾರೂ ಯೋಚಿಸುವುದಿಲ್ಲ ಮತ್ತು ಈ ವಸ್ತುಗಳನ್ನು ಮಾರಾಟ ಮಾಡುವವರು ಈ ಸಂಸ್ಕರಿಸಿದ ಮಾಂಸವನನ್ನಿರಿಸಲು ಅವಕಾಶವಿದೆಯೇ ಎಂದು ಚಿಂತಿಸುವುದಿಲ್ಲ. ಅವರು ವ್ಯಾಪಾರದ ಬಗ್ಗೆ ಮಾತ್ರ ಚಿಂತಿಸುತ್ತಾರೆ. ಎರಡು-ಮೂರು ದೂರುಗಳ ಹಿನ್ನೆಲೆಯಲ್ಲಿ ಆಹಾರ ಸುರಕ್ಷತಾ ಇಲಾಖೆಗೆ ರಾಜ್ಯಾದ್ಯಂತ ಈ ಅಂಗಡಿಗಳನ್ನು ಪರಿಶೀಲಿಸುವಂತೆ ಆದೇಶಿಸಿದ್ದೇವೆ. ಅಗತ್ಯ ಸೌಲಭ್ಯಗಳಿಲ್ಲದ ಸುಮಾರು 1,000 ಅಂಗಡಿಗಳಿಗೆ ದಂಡ ವಿಧಿಸಲಾಗಿದೆ, ನಾವು ಈ ಕಾರ್ಯಾಚರಣೆಯನ್ನು ಅನ್ನು ಮುಂದುವರೆಸುತ್ತೇವೆ. ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಅವರು ಹೇಳಿದರು.

ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಮೇ 1 ರಂದು ಶವರ್ಮಾ ಸೇವಿಸಿ ಬಾಲಕಿ ಸಾವಿಗೀಡಾಗಿದ್ದು 58 ಜನರು ಅಸ್ವಸ್ಥರಾಗಿದ್ದರು. ಈ ಪ್ರಕರಣದ ಹಿನ್ನಲೆಯಲ್ಲಿ ತಮಿಳುನಾಡು ಸಚಿವರು ಈ ಹೇಳಿಕೆ ನೀಡಿದ್ದಾರೆ. ಬಾಲಕಿ ಶವರ್ಮಾ ಖರೀದಿಸಿದ ಉಪಾಹಾರ ಗೃಹದಿಂದ ಸಂಗ್ರಹಿಸಲಾದ ‘ಶವರ್ಮಾ’ ಮಾದರಿಗಳಲ್ಲಿ ರೋಗಕಾರಕ ಬ್ಯಾಕ್ಟೀರಿಯಾ ಸಾಲ್ಮೊನೆಲ್ಲಾ ಮತ್ತು ಶಿಗೆಲ್ಲ ಪತ್ತೆಯಾಗಿದೆ ಎಂದು ಕೇರಳದ ಆರೋಗ್ಯ ಇಲಾಖೆ ತಿಳಿಸಿದೆ.

ಇದನ್ನೂ ಓದಿ
Image
ಶವರ್ಮಾ ತಿಂದು ಬಾಲಕಿ ಸಾವು; ಆಕೆ ಸೇವಿಸಿದ ಆಹಾರದಲ್ಲಿತ್ತು ಶಿಗೆಲ್ಲ ಬ್ಯಾಕ್ಟೀರಿಯಾ, ಏನಿದು? ಇದೆಷ್ಟು ಅಪಾಯಕಾರಿ?

ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಖಿಲ್ ಪಟ್ಟಾಭಿಷೇಕದ ಮಾತು ಸಭೆಯಲ್ಲಿ ಚರ್ಚೆಯಾಗಲಿದೆಯೇ?
ನಿಖಿಲ್ ಪಟ್ಟಾಭಿಷೇಕದ ಮಾತು ಸಭೆಯಲ್ಲಿ ಚರ್ಚೆಯಾಗಲಿದೆಯೇ?
ಪೊನ್ನಣ್ಣ ಮತ್ತು ಮಂತರ್​​ಗೌಡನನ್ನು ಬಂಧಿಸಲೇಬೇಕೆಂದು ಬಿಜೆಪಿ ನಾಯಕರ ಪಟ್ಟು
ಪೊನ್ನಣ್ಣ ಮತ್ತು ಮಂತರ್​​ಗೌಡನನ್ನು ಬಂಧಿಸಲೇಬೇಕೆಂದು ಬಿಜೆಪಿ ನಾಯಕರ ಪಟ್ಟು
ದುಡ್ಡು ಕೌಂಟ್ ಮಾಡಲು ನೋಟು ಎಣಿಸುವ ಮಶೀನ್ ತರಿಸಿದ ಅಧಿಕಾರಿಗಳು
ದುಡ್ಡು ಕೌಂಟ್ ಮಾಡಲು ನೋಟು ಎಣಿಸುವ ಮಶೀನ್ ತರಿಸಿದ ಅಧಿಕಾರಿಗಳು
ಒಂದೇ ಊರಿನವರಾದರೂ ನಾನು ವಿನಯ್​ರನ್ನು ನೋಡಿರಲಿಲ್ಲ: ಶಾಸಕ
ಒಂದೇ ಊರಿನವರಾದರೂ ನಾನು ವಿನಯ್​ರನ್ನು ನೋಡಿರಲಿಲ್ಲ: ಶಾಸಕ
ಯತ್ನಾಳ್ ಆದಷ್ಟು ಬೇಗ ಪಕ್ಷಕ್ಕೆ ವಾಪಸ್ಸಾಗುವ ನಿರೀಕ್ಷೆ ಇದೆ: ಸುಧಾಕರ್
ಯತ್ನಾಳ್ ಆದಷ್ಟು ಬೇಗ ಪಕ್ಷಕ್ಕೆ ವಾಪಸ್ಸಾಗುವ ನಿರೀಕ್ಷೆ ಇದೆ: ಸುಧಾಕರ್
ಸಪ್ತಗಿರಿ ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ: ಉಮೇಶ್
ಸಪ್ತಗಿರಿ ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ: ಉಮೇಶ್
ಛತ್ತೀಸ್‌ಗಢದ ದಾಂತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ
ಛತ್ತೀಸ್‌ಗಢದ ದಾಂತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ
ಹಾಲ್​ ಟಿಕೆಟ್​​ನೊಂದಿಗೆ ಮಾದರಿ ಒಎಂಆರ್ ಶೀಟ್ ಕೂಡ ಡೌನ್ಲೋಡ್: ಪ್ರಸನ್ನ
ಹಾಲ್​ ಟಿಕೆಟ್​​ನೊಂದಿಗೆ ಮಾದರಿ ಒಎಂಆರ್ ಶೀಟ್ ಕೂಡ ಡೌನ್ಲೋಡ್: ಪ್ರಸನ್ನ
ಪುಟ್ಟ ಬಾಲಕನ ದೈವ ನರ್ತನ: ಮೈ ಜುಮ್ಮೆನಿಸುವ ವಿಡಿಯೋ ನೋಡಿ
ಪುಟ್ಟ ಬಾಲಕನ ದೈವ ನರ್ತನ: ಮೈ ಜುಮ್ಮೆನಿಸುವ ವಿಡಿಯೋ ನೋಡಿ
CET ಪರೀಕ್ಷೆ ಬಗ್ಗೆ ಭಯ ಬೇಡ; ತಜ್ಞರು ನೀಡಿರುವ ಟಿಪ್ಸ್​​ ಇಲ್ಲಿದೆ
CET ಪರೀಕ್ಷೆ ಬಗ್ಗೆ ಭಯ ಬೇಡ; ತಜ್ಞರು ನೀಡಿರುವ ಟಿಪ್ಸ್​​ ಇಲ್ಲಿದೆ