AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸತ್ಯ ಏನಿದ್ರೂ ಪರವಾಗಿಲ್ಲ, ತಾಜ್​ಮಹಲ್​ನ 22 ಕೊಠಡಿಗಳ ಬೀಗ ತೆರೆಸಿ: ಹೈಕೋರ್ಟ್​ಗೆ​ ಅರ್ಜಿ ಸಲ್ಲಿಸಿದ ಬಿಜೆಪಿ ನಾಯಕ

ಲಖನೌ: ತಾಜ್​ಮಹಲ್​ ಕುರಿತ ಸತ್ಯ ಎಲ್ಲರಿಗೂ ಅರ್ಥವಾಗಬೇಕು. ತಾಜ್​ಮಹಲ್​ನ ಯಥಾರ್ಥ ಇತಿಹಾಸವನ್ನು ಜನರ ಎದುರು ತೆರೆದಿಡಲು ಸತ್ಯಶೋಧನ ಸಮಿತಿ ರಚಿಸಬೇಕು. ಸದಾ ಬೀಗ ಹಾಕಿರುವ 22 ಕೊಠಡಿಗಳ ಬೀಗಗಳನ್ನು ತೆರೆಯಬೇಕು ಎಂದು ಕೋರಿ ಅಲಹಾಬಾದ್ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿದೆ. ಬಿಜೆಪಿ ಅಯೋಧ್ಯೆ ಘಟಕದ ಮಾಧ್ಯಮ ಪ್ರಮುಖ್ ರಜನೀಶ್ ಸಿಂಗ್ ಈ ಸಂಬಂಧ ಅಲಹಾಬಾದ್ ಹೈಕೋರ್ಟ್​ನ ಲಖನೌ ಪೀಠದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಪ್ರಾಥಮಿಕ ಪರಿಶೀಲನೆಯ ನಂತರ ಈ ಅರ್ಜಿಯು ವಿಚಾರಣೆಗೆ ಬರಲಿದೆ. ‘ಸತ್ಯ ಏನಿದ್ದರೂ ಸರಿ, ಅದು ಜನರಿಗೆ […]

ಸತ್ಯ ಏನಿದ್ರೂ ಪರವಾಗಿಲ್ಲ, ತಾಜ್​ಮಹಲ್​ನ 22 ಕೊಠಡಿಗಳ ಬೀಗ ತೆರೆಸಿ: ಹೈಕೋರ್ಟ್​ಗೆ​ ಅರ್ಜಿ ಸಲ್ಲಿಸಿದ ಬಿಜೆಪಿ ನಾಯಕ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: May 09, 2022 | 3:47 PM

Share

ಲಖನೌ: ತಾಜ್​ಮಹಲ್​ ಕುರಿತ ಸತ್ಯ ಎಲ್ಲರಿಗೂ ಅರ್ಥವಾಗಬೇಕು. ತಾಜ್​ಮಹಲ್​ನ ಯಥಾರ್ಥ ಇತಿಹಾಸವನ್ನು ಜನರ ಎದುರು ತೆರೆದಿಡಲು ಸತ್ಯಶೋಧನ ಸಮಿತಿ ರಚಿಸಬೇಕು. ಸದಾ ಬೀಗ ಹಾಕಿರುವ 22 ಕೊಠಡಿಗಳ ಬೀಗಗಳನ್ನು ತೆರೆಯಬೇಕು ಎಂದು ಕೋರಿ ಅಲಹಾಬಾದ್ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿದೆ. ಬಿಜೆಪಿ ಅಯೋಧ್ಯೆ ಘಟಕದ ಮಾಧ್ಯಮ ಪ್ರಮುಖ್ ರಜನೀಶ್ ಸಿಂಗ್ ಈ ಸಂಬಂಧ ಅಲಹಾಬಾದ್ ಹೈಕೋರ್ಟ್​ನ ಲಖನೌ ಪೀಠದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಪ್ರಾಥಮಿಕ ಪರಿಶೀಲನೆಯ ನಂತರ ಈ ಅರ್ಜಿಯು ವಿಚಾರಣೆಗೆ ಬರಲಿದೆ. ‘ಸತ್ಯ ಏನಿದ್ದರೂ ಸರಿ, ಅದು ಜನರಿಗೆ ತಿಳಿಯಬೇಕಿದೆ. ಹೀಗಾಗಿಯೇ ತಾಜ್​ ಮಹಲ್​ನ 22 ಕೊಠಡಿಗಳ ಬೀಗ ತೆರೆಯಬೇಕು ಎಂದು ಅರ್ಜಿ ಸಲ್ಲಿಸಿದ್ದೇನೆ’ ಎಂದು ರಜನೀಶ್ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ಪುರಾತತ್ವ ಮತ್ತು ಐತಿಹಾಸಿಕ ಸ್ಮಾರಕಗಳ ಕಾಯ್ದೆ (1951) ಹಾಗೂ ಪುರಾತತ್ವ ಮತ್ತು ಪ್ರಾಚೀನ ಸ್ಮಾರಕಗಳ ಕಾಯ್ದೆಯ (1958) ಕೆಲ ಅಂಶಗಳನ್ನು ತಾಜ್ ಮಹಲ್ ವಿಚಾರದಲ್ಲಿ ಕೈಬಿಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಈ ಕಾಯ್ದೆಗಳ ಅನ್ವಯವೇ ತಾಜ್​ಮಹಲ್, ಫತೇಪುರ್ ಸಿಕ್ರಿ, ಆಗ್ರಾ ಕೋಟೆ, ಇತಿಮದ್-ಉದ್-ದೌಲಾ ಸಮಾಧಿ ಇರುವ ಸ್ಥಳಗಳನ್ನು ಐತಿಹಾಸಿಕ ಸ್ಮಾರಕಗಳು ಎಂದು ಘೋಷಿಸಲಾಗಿದೆ.

ತಾಜ್​ ಮಹಲ್ ಸ್ಮಾರಕವಿರುವ ಸ್ಥಳದಲ್ಲಿ ಪ್ರಾಚೀನ ಶಿವ ದೇವಾಲಯವಿತ್ತು ಎಂದು ಹಲವು ಬಲಪಂಥೀಯ ಸಂಘಟನೆಗಳು ಪ್ರತಿಪಾದಿಸುತ್ತಿವೆ. ಇದೇ ಅಂಶವನ್ನು ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯೂ ಪ್ರಸ್ತಾಪಿಸಿದೆ. ವಕೀಲರಾದ ರಾಮ್ ಪ್ರಕಾಶ್ ಶುಕ್ಲ ಮತ್ತು ರುದ್ರ ವಿಕ್ರಮ್ ಸಿಂಗ್ ಅರ್ಜಿದಾರರ ಪರವಾಗಿ ಹೈಕೋರ್ಟ್​ನಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ: Taj Mahal: ವಿಶ್ವವಿಖ್ಯಾತ ತಾಜ್ ಮಹಲ್ ಪ್ರವಾಸಿಗರಿಗೆ ಓಪನ್; ಒಮ್ಮೆಗೆ 650 ಜನರ ಭೇಟಿಗೆ ಮಾತ್ರ ಅವಕಾಶ

ಇದನ್ನೂ ಓದಿ: ತಾಜ್​ ಮಹಲ್ ಜಗತ್ತಿಗೇ ಅದ್ಭುತ! ಆದರೆ ಅದರ ಪ್ರತಿಮೆಯನ್ನು ಮನೆಯಲ್ಲಿ ಇಟ್ಟುಕೊಳ್ಳುವಂತಿಲ್ಲ, ಯಾಕೆ?

Follow Us
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ