ಅರ್ಜುನ್ ಸಿಂಗ್ ಮರುಸೇರ್ಪಡೆ: ಟಿಎಂಸಿಯನ್ನು ತರಾಟೆಗೆ ತೆಗೆದುಕೊಂಡ ಬಂಗಾಳ ಇಮಾಮ್ ಅಸೋಸಿಯೇಷನ್

| Updated By: ರಶ್ಮಿ ಕಲ್ಲಕಟ್ಟ

Updated on: May 23, 2022 | 8:52 PM

"ಅರ್ಜುನ್ ಸಿಂಗ್ ಮತ್ತು ಬಾಬುಲ್ ಸುಪ್ರಿಯೊ ಅವರಂತಹ ಕೋಮುವಾದಿಗಳನ್ನು ತೃಣಮೂಲ ಕಾಂಗ್ರೆಸ್‌ಗೆ ಸೇರಿಸಿಕೊಳ್ಳಲಾಗುತ್ತಿದೆ. ಪಕ್ಷದ ಈ ನಡೆಯನ್ನು ನಾವು ಖಂಡಿಸುತ್ತೇವೆ". ಟಿಎಂಸಿಯ ಈ ನಡೆಯನ್ನು ರಾಜ್ಯದ ಜನರು ನೆನಪಿಸಿಕೊಳ್ಳುತ್ತಾರೆ...

ಅರ್ಜುನ್ ಸಿಂಗ್ ಮರುಸೇರ್ಪಡೆ: ಟಿಎಂಸಿಯನ್ನು ತರಾಟೆಗೆ ತೆಗೆದುಕೊಂಡ ಬಂಗಾಳ ಇಮಾಮ್ ಅಸೋಸಿಯೇಷನ್
ಅರ್ಜುನ್ ಸಿಂಗ್
Follow us on

ಅರ್ಜುನ್ ಸಿಂಗ್ ಅವರನ್ನು ಟಿಎಂಸಿಗೆ ಮರುಸೇರ್ಪಡೆ ಮಾಡಿರುವುದಕ್ಕೆ ಬಂಗಾಳ ಇಮಾಮ್ ಅಸೋಸಿಯೇಷನ್ ಟಿಎಂಸಿಯನ್ನು ತರಾಟೆಗೆ ತೆಗೆದುಕೊಂಡಿದೆ. ಭಾನುವಾರ ಟಿಎಂಸಿಗೆ (TMC) ಮರಳಿದ ಅರ್ಜುನ್ ಸಿಂಗ್ (Arjun Singh) ಅವರು 2019 ರಲ್ಲಿ ಬಿಜೆಪಿ ಟಿಕೆಟ್‌ನಲ್ಲಿ ಬ್ಯಾರಕ್‌ಪುರದ ಸಂಸದರಾಗಿ ಆಯ್ಕೆಯಾದರು. ಅವರು ಟಿಎಂಸಿ ತೊರೆದು 2019 ರಲ್ಲಿ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಬಿಜೆಪಿ ಸೇರಿದ್ದರು. ಬಂಗಾಳ ಇಮಾಮ್ ಅಸೋಸಿಯೇಶನ್‌ನ ಅಧ್ಯಕ್ಷ ಮೊಹಮ್ಮದ್ ಯಾಹ್ಯಾ ಅವರು ಸಿಂಗ್ , ಕೋಮು ಹಿಂಸಾಚಾರವನ್ನು ಪ್ರಚೋದಿಸುತ್ತಿದ್ದಾರೆಂದು ಆರೋಪಿಸಿದ್ದ್ದು ನಾಗರಿಕರ ತಿದ್ದುಪಡಿ ಕಾಯ್ದೆ (CAA) ಪರವಾಗಿ ಮತ ಚಲಾಯಿಸಿದ್ದಾರೆ ಎಂದು ಹೇಳಿದರು. “ಅರ್ಜುನ್ ಸಿಂಗ್ ಅವರು ಬ್ಯಾರಕ್‌ಪುರದಲ್ಲಿ ಕೋಮು ಹಿಂಸಾಚಾರಕ್ಕೆ ಪ್ರೇರೇಪಿಸಿದ್ದಾರೆ. ಅವರು ಟಿಎಂಸಿ ಕಾರ್ಯಕರ್ತರನ್ನು ಹಿಂಸಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಅರ್ಜುನ್ ಸಂಸತ್ತಿನಲ್ಲಿ ಸಿಎಎಗೆ ಮತ ಹಾಕಿದ್ದರು. ಅವರು ತಮ್ಮ ಮತವನ್ನು ಹಿಂದಕ್ಕೆ ತೆಗೆದುಕೊಳ್ಳುತ್ತಾರೆಯೇ?”. ಸಿಂಗ್ ಅವರು ಬಂಗಾಳ ವಿರೋಧಿ ಮತ್ತು ಬಂಗಾಳಿ ವಿರೋಧಿ. ಅರ್ಜುನ್ ಸಿಂಗ್ ಆಜಾನ್ ನುಡಿಸುವುದನ್ನು ವಿರೋಧಿಸಿ ಕಲ್ಕತ್ತಾ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅವರು ಅರ್ಜಿಯನ್ನು ಹಿಂಪಡೆಯುತ್ತಾರೆಯೇ?” ಎಂದು ಯಾಹ್ಯಾ ಕೇಳಿದ್ದಾರೆ.

ಮೊಹಮ್ಮದ್ ಯಾಹ್ಯಾ ಅವರು ಬಾಬುಲ್ ಸುಪ್ರಿಯೊ ಅವರನ್ನು ಬ್ಯಾಲಿಗುಂಗೆ ಉಪಚುನಾವಣೆ ವಿಧಾನಸಭಾ ಚುನಾವಣೆಗೆ ಶಾಸಕರಾಗಿ ನಾಮನಿರ್ದೇಶನ ಮಾಡುವುದನ್ನು ವಿರೋಧಿಸಿದರು.

“ಅರ್ಜುನ್ ಸಿಂಗ್ ಮತ್ತು ಬಾಬುಲ್ ಸುಪ್ರಿಯೊ ಅವರಂತಹ ಕೋಮುವಾದಿಗಳನ್ನು ತೃಣಮೂಲ ಕಾಂಗ್ರೆಸ್‌ಗೆ ಸೇರಿಸಿಕೊಳ್ಳಲಾಗುತ್ತಿದೆ. ಪಕ್ಷದ ಈ ನಡೆಯನ್ನು ನಾವು ಖಂಡಿಸುತ್ತೇವೆ”. ಟಿಎಂಸಿಯ ಈ ನಡೆಯನ್ನು ರಾಜ್ಯದ ಜನರು ನೆನಪಿಸಿಕೊಳ್ಳುತ್ತಾರೆ ಎಂದು ಯಾಹ್ಯಾ ಹೇಳಿದ್ದಾರೆ.

ಇದನ್ನೂ ಓದಿ
Arjun Singh ತೃಣಮೂಲ ಕಾಂಗ್ರೆಸ್‌ಗೆ ಮರಳಿದ ಬಿಜೆಪಿ ಸಂಸದ ಅರ್ಜುನ್ ಸಿಂಗ್
ಅಸ್ಸಾಂ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಿಪುನ್ ಬೋರಾ ಟಿಎಂಸಿಗೆ ಸೇರ್ಪಡೆ
ಪಶ್ಚಿಮ ಬಂಗಾಳದಲ್ಲಿ ಅರ್ಜುನ್ ಸಿಂಗ್ ನಿವಾಸದ ಹೊರಗೆ ಮತ್ತೊಂದು ಬಾಂಬ್ ಸ್ಫೋಟ; ಟಿಎಂಸಿ ತನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿದೆ ಎಂದ ಬಿಜೆಪಿ ಸಂಸದ

 

Published On - 7:43 pm, Mon, 23 May 22