ದೆಹಲಿ ಜನವರಿ 03: ಅಯೋಧ್ಯೆಯಲ್ಲಿನ (Ayodhya) ರಾಮಮಂದಿರದ (Ram mandir) ಉದ್ಘಾಟನಾ ಸಮಾರಂಭ ಜನವರಿ 22, 2024 ರಂದು ನಡೆಯಲಿದೆ. ಮಂದಿರದ ನಿರ್ಮಾಣವು ಅದ್ಧೂರಿಯಾಗಿ ನಡೆದಿದ್ದು, ಭಾರತದ ವಿವಿಧ ಭಾಗಗಳು ರಾಮಮಂದಿರಕ್ಕಾಗಿ ತಮ್ಮ ಕೊಡುಗೆಗಳನ್ನು ನೀಡುತ್ತಿವೆ. ಅಂತಹ ಒಂದು ಸ್ಥಳವು ರಾಜಸ್ಥಾನದಲ್ಲಿದೆ (Rajasthan), ಇದು ದೇವಾಲಯಕ್ಕೆ ಅದರ ಬಣ್ಣವನ್ನು ನೀಡಿದೆ.
ಇಲ್ಲಿ ನಾವು ಹೇಳುತ್ತಿರುವುದು ರಾಜಸ್ಥಾನದ ಭರತ್‌ಪುರ ಬಗ್ಗೆ. ಈ ಜಾಗ ಮಹಾಭಾರತದೊಂದಿಗೆ ನಂಟು ಹೊಂದಿದೆ. ರಾಜಸ್ಥಾನವು ಗುಲಾಬಿ ಮರಳುಗಲ್ಲು ಮತ್ತು ಮಕ್ರಾನ ಅಮೃತಶಿಲೆಯನ್ನು ಕಳುಹಿಸುವ ಮೂಲಕ ದೇವಾಲಯದ ನಿರ್ಮಾಣಕ್ಕೆ ಕೊಡುಗೆ ನೀಡಿದೆ. ರಾಜಸ್ಥಾನದ ಭರತ್‌ಪುರ ಜಿಲ್ಲೆಯಿಂದ ತಂದ 4.7 ಲಕ್ಷ ಘನ ಅಡಿ ಅಳತೆಯ ಗುಲಾಬಿ ಮರಳುಗಲ್ಲನ್ನು ದೇವಾಲಯದ ಮುಖ್ಯ ರಚನೆಯಲ್ಲಿ ಬಳಸಲಾಗಿದೆ. ಭರತ್‌ಪುರದ ಬನ್ಸಿ ಪಹಾರ್‌ಪುರ ಪ್ರದೇಶದಲ್ಲಿನ ಹಲವಾರು ಗಣಿಗಳು ಅಯೋಧ್ಯೆ ದೇವಸ್ಥಾನಕ್ಕೆ ಗುಲಾಬಿ ಮರಳುಗಲ್ಲನ್ನು ಪೂರೈಸುತ್ತಿವೆ.
ಭರತ್‌ಪುರದ ಇತಿಹಾಸವನ್ನು ಕ್ರಿ.ಪೂ. 5 ನೇ ಶತಮಾನದಲ್ಲಿ ಆ ಪ್ರದೇಶದಲ್ಲಿ ಸಮೃದ್ಧವಾದ ಮತ್ಸ್ಯ ಸಾಮ್ರಾಜ್ಯದ ಆಳ್ವಿಕೆಯಲ್ಲಿ ಗುರುತಿಸಬಹುದು. ಮಹಾಭಾರತದ ಪ್ರಕಾರ, ಭೀಷ್ಮನ ಸಮಕಾಲೀನನಾಗಿದ್ದ ಸತ್ಯವತಿಯ ಅವಳಿ ಸಹೋದರನಾಗಿದ್ದ ರಾಜ ಮತ್ಸ್ಯನಿಂದ ರಾಜ್ಯವನ್ನು ಸ್ಥಾಪಿಸಲಾಯಿತು. ಮಹಾಭಾರತ ಯುದ್ಧದ ಸಮಯದಲ್ಲಿ ಮತ್ಸ್ಯರು ಪಾಂಡವರ ಮಿತ್ರರಾಗಿದ್ದರು.ದಂತಕಥೆಗಳ ಪ್ರಕಾರ, ಭರತ್ ಎಂಬ ಹೆಸರನ್ನು ರಾಮಾಯಣದ ಕಾಲದಿಂದ ಗುರುತಿಸಬಹುದು. ಇದು ಭಗವಾನ್ ರಾಮನ ಸಹೋದರ ಭರತನಿಂದ ಬಂದಿದೆ. ಲಕ್ಷ್ಮಣನು ಭರತ್‌ಪುರದ ಆಡಳಿತ ಕುಟುಂಬದ ಕುಲದ ದೇವತೆಯಾದನು. ಅವನ ಹೆಸರು ರಾಜ್ಯದ ಮುದ್ರೆಗಳು ಮತ್ತು ಕೋಟ್-ಆಫ್-ಆರ್ಮ್ಸ್‌ನಲ್ಲಿಯೂ ಕಂಡುಬರುತ್ತದೆ.
18 ನೇ ಶತಮಾನದ ಆರಂಭದಲ್ಲಿ, ಮಹಾರಾಜ ಸೂರಜ್ ಮಲ್ ಭರತ್‌ಪುರ ಕೋಟೆಯನ್ನು ವಶಪಡಿಸಿಕೊಂಡರು. ಪ್ರತಿಸ್ಪರ್ಧಿ ಮುಖ್ಯಸ್ಥ ಖೇಮಕರನ್ ಅನ್ನು ಸೋಲಿಸಿ ಅವರು ಆಧುನಿಕ ಭರತ್‌ಪುರವನ್ನು ಸ್ಥಾಪಿಸಿದರು. ಅವರು ಪ್ರದೇಶದ ಗಡಿಗಳನ್ನು ವಿಸ್ತರಿಸಿದರು ಮತ್ತು ದೀಗ್‌ನಲ್ಲಿರುವ ಪ್ಲೆಷರ್ ಪ್ಯಾಲೇಸ್ ಕಾಂಪ್ಲೆಕ್ಸ್ ಸೇರಿದಂತೆ ರಾಜ್ಯವನ್ನು ಸುತ್ತುವರಿದ ಹಲವಾರು ಕೋಟೆಗಳು ಮತ್ತು ಅರಮನೆಗಳನ್ನು ಸ್ಥಾಪಿಸಿದರು.
ಇದನ್ನೂ ಓದಿ: ರಾಮಮಂದಿರ ಪ್ರಾಣ ಪ್ರತಿಷ್ಠೆಯಂದು ಪ್ರಧಾನಿ ಮೋದಿ ಇಡೀ ದಿನ ಉಪವಾಸ, ಸರಯೂ ನದಿಯಲ್ಲಿ ಸ್ನಾನ
ಭರತ್‌ಪುರವನ್ನು ‘ರಾಜಸ್ಥಾನದ ಪೂರ್ವ ದ್ವಾರ’ ಎಂದೂ ಕರೆಯುತ್ತಾರೆ. ಇದು ಉತ್ತರದಲ್ಲಿ ದೀಗ್, ಪೂರ್ವದಲ್ಲಿ ಮಥುರಾ, ದಕ್ಷಿಣದಲ್ಲಿ ಆಗ್ರಾ ಮತ್ತು ಧೋಲ್‌ಪುರ ಮತ್ತು ಪಶ್ಚಿಮದಲ್ಲಿ ದೌಸಾ ಮತ್ತು ಅಲ್ವಾರ್‌ಗಳಿಂದ ಗಡಿಯಾಗಿದೆ.
ಪ್ರತಿ ವರ್ಷ ಹೋಳಿಗೆ ಮುನ್ನ ಬ್ರಜ್ ಹಬ್ಬವನ್ನು ಭರತ್‌ಪುರದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಬಾಲ್ಯದಲ್ಲಿ ಬ್ರಜ್ ಪ್ರದೇಶದಲ್ಲಿ ವಾಸಿಸುತ್ತಿದ್ದ ಶ್ರೀಕೃಷ್ಣನಿಗೆ ಸಮರ್ಪಿತವಾದ ಈ ಹಬ್ಬವು ಭಾರತೀಯ ಸಂಸ್ಕೃತಿ ಮತ್ತು ನಮ್ಮ ಸಮಾಜದ ಶ್ರೀಮಂತ ಪುರಾಣಗಳನ್ನು ತೋರಿಸುತ್ತದೆ.
ಭರತ್‌ಪುರವು ಅತ್ಯಂತ ಪ್ರಸಿದ್ಧವಾದ ಪಕ್ಷಿವೀಕ್ಷಣೆಯ ತಾಣಗಳಲ್ಲಿ ಒಂದಾದ ಕಿಯೋಲಾಡಿಯೊ ಘಾನಾ ರಾಷ್ಟ್ರೀಯ ಉದ್ಯಾನವನವನ್ನು ಹೊಂದಿದೆ. ವಿಶ್ವ ಪರಂಪರೆಯ ತಾಣವನ್ನು 250 ವರ್ಷಗಳ ಹಿಂದೆ ಸ್ಥಾಪಿಸಲಾಯಿತು. ಹಳೆಯ ಶಿವ ದೇವಾಲಯವನ್ನು ಸುತ್ತುವರೆದಿರುವ ದಟ್ಟವಾದ ಕಾಡಿನ ಹೆಸರನ್ನೇ ಇದಕ್ಕೆ ಇಡಲಾಗಿದೆ. ಇದು ವಲಸೆ ಹಕ್ಕಿಗಳಿಗೆ ಹೆಸರುವಾಸಿಯಾಗಿದೆ ಮತ್ತು ಅತ್ಯಾಸಕ್ತಿಯ ಪಕ್ಷಿಪ್ರೇಮಿಗಳು ಮತ್ತು ಪಕ್ಷಿಶಾಸ್ತ್ರಜ್ಞರು ಚಳಿಗಾಲದಲ್ಲಿ ಪಕ್ಷಿಗಳನ್ನು ವೀಕ್ಷಿಸಲು ಮತ್ತು ಅಧ್ಯಯನ ಮಾಡಲು ಇಲ್ಲಿಗೆ ಬರುತ್ತಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ