ಬಿಹಾರ : ನಿತೀಶ್​ ಕುಮಾರ್​ ಜತೆ ಸಚಿವರಾಗಿ 8 ಮಂದಿ ಪ್ರಮಾಣವಚನ

ಬಿಹಾರದಲ್ಲಿ ಮತ್ತೆ ಎನ್​ಡಿಎ ಸರ್ಕಾರ ಮರಳಲಿದೆ. ಜೆಡಿಯು ಮಹಾಮೈತ್ರಿಕೂಟದಿಂದ ಬೇರ್ಪಟ್ಟಿದ್ದು, ಬಿಜೆಪಿ ಜತೆಗೂಡಿ ಸರ್ಕಾರ ರಚಿಸಲಿದೆ. ಇಂದು ಸಂಜೆ ರಾಜಭವನದಲ್ಲಿ ನಿತೀಶ್​ ಕುಮಾರ್ 9ನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣವಚ ಸ್ವೀಕರಿಸಲಿದ್ದಾರೆ. ನಿತೀಶ್​ ಕುಮಾರ್(Nitish Kumar) ಜತೆಗೆ 2 ಉಪಮುಖ್ಯಮಂತ್ರಿಗಳು ಮತ್ತು 6 ಕ್ಯಾಬಿನೆಟ್​ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಬಿಹಾರ : ನಿತೀಶ್​ ಕುಮಾರ್​ ಜತೆ ಸಚಿವರಾಗಿ 8 ಮಂದಿ ಪ್ರಮಾಣವಚನ
ನಿತೀಶ್​ ಕುಮಾರ್
Follow us
ನಯನಾ ರಾಜೀವ್
|

Updated on: Jan 28, 2024 | 2:54 PM

ಬಿಹಾರದಲ್ಲಿ ಮತ್ತೆ ಎನ್​ಡಿಎ ಸರ್ಕಾರ ಮರಳಲಿದೆ. ಜೆಡಿಯು ಮಹಾಮೈತ್ರಿಕೂಟದಿಂದ ಬೇರ್ಪಟ್ಟಿದ್ದು, ಬಿಜೆಪಿ ಜತೆಗೂಡಿ ಸರ್ಕಾರ ರಚಿಸಲಿದೆ. ಇಂದು ಸಂಜೆ ರಾಜಭವನದಲ್ಲಿ ನಿತೀಶ್​ ಕುಮಾರ್ 9ನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣವಚ ಸ್ವೀಕರಿಸಲಿದ್ದಾರೆ. ನಿತೀಶ್​ ಕುಮಾರ್(Nitish Kumar) ಜತೆಗೆ 2 ಉಪಮುಖ್ಯಮಂತ್ರಿಗಳು ಮತ್ತು 6 ಕ್ಯಾಬಿನೆಟ್​ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಬಿಜೆಪಿಯಿಂದ ಸಾಮ್ರಾಟ್​ ಚೌಧರಿ,ವಿಜಯ್ ಕುಮಾರ್ ಸಿನ್ಹಾ ಮತ್ತು ಡಾ. ಪ್ರೇಮ್ ಕುಮಾರ್, ಜೆಡಿಯುನಿಂದ ವಿಜಯ್ ಚೌಧರಿ, ವಿಜೇಂದ್ರ ಯಾದವ್ ಮತ್ತು ಶ್ರವಣ್ ಕುಮಾರ್, HAMನಿಂದ ಜಿತಿನ್ ರಾಮ್ ಮಾಂಝಿ ಅವರ ಪುತ್ರ ಸಂತೋಷ್ ಕುಮಾರ್ ಸುಮನ್ ಮತ್ತು ಸ್ವತಂತ್ರ ಅಭ್ಯರ್ಥಿ ಸುಮಿತ್ ಸಿಂಗ್ ಅವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ನಿತೀಶ್​ ಕುಮಾರ್​ ಅವರು ರಾಜ್ಯಪಾಲರಿಗೆ ಬೆಂಬಲ ಸೂಚಿಸುತ್ತಿರುವ ಪತ್ರವನ್ನು ಹಸ್ತಾಂತರಿಸುತ್ತಿರುವ ಚಿತ್ರವನ್ನು ಬಿಹಾರ ಬಿಜೆಪಿ ಉಸ್ತುವಾರಿ ವಿನೋದ್​ ತಾವ್ಡೆ ಟ್ವೀಟ್​ ಮಾಡಿದ್ದಾರೆ.

ಬಿಹಾರದ ಹೊಸ ಸರ್ಕಾರದಲ್ಲಿ ಸಾಮ್ರಾಟ್​ ಚೌಧರಿ ಮತ್ತು ವಿಜಯ್ ಸಿನ್ಹಾ ಉಪಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೇಳಿದ್ದಾರೆ. ಇಂದು ಬೆಳಗ್ಗೆ ಜೆಡಿಯು ಶಾಸಕಾಂಗ ಸಭೆಯಲ್ಲಿ ನಿತೀಶ್​ ಕುಮಾರ್ ರಾಜೀನಾಮೆ ನೀಡುವ ನಿರ್ಧಾರವನ್ನು ಪ್ರಕಟಿಸಿದ್ದರು. ನಿತೀಶ್​ ಕುಮಾರ್ ರಾಜೀನಾಮೆ ನೀಡಿದ ತಕ್ಷಣವೇ ಬಿಜೆಪಿ ತನ್ನ ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರೊಂದಿಗೆ ಸಭೆ ನಡೆಸಿತು.

ಮತ್ತಷ್ಟು ಓದಿ: ಬಿಹಾರ: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ನಿತೀಶ್​ ಕುಮಾರ್ ಹೇಳಿದ್ದೇನು?

ಬಿಹಾರ ಉಸ್ತುವಾರಿ ವಿನೋದ್ ತಾವ್ಡೆ ಅವರ ಅಧ್ಯಕ್ಷತೆಯಲ್ಲಿ ಪಾಟ್ನಾ ಪಕ್ಷದ ಕಚೇರಿಯಲ್ಲಿ ನಡೆದ ಈ ಸಭೆಯಲ್ಲಿ ಬಿಜೆಪಿ ನಿತೀಶ್​ ಕುಮಾರ್ ಅವರಿಗೆ ಬೆಂಬಲ ಪತ್ರವನ್ನು ನೀಡಿತು.

ರಾಜೀನಾಮೆ ನೀಡಿದ ಬಳಿಕ ನಿತೀಶ್​ ಕುಮಾರ್ ಮಾತನಾಡಿ, ಮಹಾಮೈತ್ರಿಕೂಟದಲ್ಲಿ ಎಲ್ಲವೂ ಸರಿ ಇಲ್ಲ, ಹೀಗಾಗಿ ನಾನು ಈ ನಿರ್ಧಾರ ಮಾಡಿದ್ದೇನೆ. 2022ರ ಆಗಸ್ಟ್​ನಲ್ಲಿ ನಿತೀಶ್​ ಕುಮಾರ್ ಬಿಜೆಪಿ ನೇತೃತ್ವದ ಎನ್​ಡಿಎ ಜತೆಗಿನ ಮೈತ್ರಿ ಮುರಿದು ಮಹಾಮೈತ್ರಿಕೂಟದೊಂದಿಗೆ ಸರ್ಕಾರವನ್ನು ರಚಿಸಿತ್ತು. ಇದೀಗ 18 ತಿಂಗಳ ಬಳಿಕ ಮತ್ತೆ ಎನ್​ಡಿಎಗೆ ಮರಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ