
ನಾಗ್ಪುರ: ಮಸ್ಕತ್ನಿಂದ ಢಾಕಾಗೆ ತೆರಳುತ್ತಿದ್ದ ಬಿಮನ್ ಬಾಂಗ್ಲಾದೇಶ ವಿಮಾನದ (Biman Bangladesh Plane) ಪೈಲಟ್ಗೆ ವಿಮಾನ ಹಾರಾಟದ ವೇಳೆಯೇ ಹೃದಯಾಘಾತ ಉಂಟಾಗಿದೆ. ಹೀಗಾಗಿ, ನಾಗ್ಪುರದಲ್ಲಿ ವಿಮಾನ ತುರ್ತು ಭೂಸ್ಪರ್ಶವಾಗಿದೆ. ಇಂದು 126 ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದ ಬೋಯಿಂಗ್ ವಿಮಾನದ ಪೈಲಟ್ಗೆ ಹೃದಯಾಘಾತ ಆಗಿದ್ದರಿಂದ ಸಮೀಪದ ನಾಗ್ಪುರ ಏರ್ಪೋರ್ಟ್ನಲ್ಲಿ ಮಧ್ಯಾಹ್ನ 11.40ಕ್ಕೆ ತುರ್ತು ಭೂಸ್ಪರ್ಶ ಮಾಡಿದೆ ಎಂದು ಏರ್ಪೋರ್ಟ್ ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನದ ಪೈಲಟ್ ಅನ್ನು ನಾಗ್ಪುರದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಯ್ಪುರದ ಬಳಿ ವಿಮಾನ ತೆರಳುತ್ತಿದ್ದಂತೆ ಪೈಲಟ್ಗೆ ಹೃದಯಾಘಾತ ಉಂಟಾಗಿದೆ. ಹೀಗಾಗಿ, ಕೂಡಲೇ ಕೊಲ್ಕತ್ತಾದ ಎಟಿಸಿಯನ್ನು ಸಂಪರ್ಕ ಮಾಡಲಾಯಿತು. ಬಳಿಕ ಸಮೀಪದ ನಾಗ್ಪುರ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲಾಯಿತು.
ಕೊವಿಡ್ನಿಂದ ಸ್ಥಗಿತಗೊಂಡಿದ್ದ ವಿಮಾನ ಸಂಚಾರ ಕೆಲವು ದೇಶಗಳಲ್ಲಿ ಇದೀಗ ಮತ್ತೆ ಆರಂಭವಾಗಿದೆ. ಬಿಮನ್ ಬಾಂಗ್ಲಾದೇಶ ವಿಮಾನ ಕೂಡ ಕೆಲವು ದಿನಗಳಿಂದ ಭಾರತಕ್ಕೆ ಸಂಚಾರ ಸೇವೆಯನ್ನು ಆರಂಭಿಸಿದೆ. ಕೊವಿಡ್ನಿಂದ ಬಾಂಗ್ಲಾದೇಶ ಮತ್ತು ಭಾರತದ ನಡುವೆ ವಿಮಾನ ಸಂಚಾರ ಸ್ಥಗಿತವಾಗಿತ್ತು.
ಹೃದಯಾಘಾತಕ್ಕೆ ಒಳಗಾಗಿದ್ದ ಪೈಲಟ್ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ಮಾಹಿತಿ ಇನ್ನೂ ಲಭ್ಯವಾಗಿಲ್ಲ.
ಇದನ್ನೂ ಓದಿ: Kabul Blast: ಕಾಬೂಲ್ ವಿಮಾನ ನಿಲ್ದಾಣದಲ್ಲಿ 3ನೇ ಬಾಂಬ್ ಸ್ಫೋಟ, ಅಮೆರಿಕ ಯೋಧರ ಸಾವಿನ ಶಂಕೆ
ಅಫ್ಘಾನಿಸ್ತಾನದಿಂದ ಸ್ಥಳಾಂತರದ ವೇಳೆ ಜನಿಸಿದ ಮಗುವಿಗೆ ವಿಮಾನದ ಕರೆ ಚಿಹ್ನೆ ರೀಚ್ ಎಂದು ನಾಮಕರಣ
(Biman Bangladesh Pilot Suffers Heart Attack Mid-Air Flight Makes Emergency Landing in Nagpur)
Published On - 6:38 pm, Fri, 27 August 21