AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡ್ಯಾನ್ಸರ್​ ಜತೆ ಅನುಚಿತ ವರ್ತನೆ ವಿಡಿಯೋ ವೈರಲ್, ಬಿಜೆಪಿ ನಾಯಕ ಬಬ್ಬನ್ ಸಿಂಗ್ ಪಕ್ಷದಿಂದ ಉಚ್ಛಾಟನೆ

ಡ್ಯಾನ್ಸರ್​ ಜತೆ ಬಿಜೆಪಿ ನಾಯಕ ಬಬ್ಬನ್ ಸಿಂಗ್ ಅನುಚಿತ ವರ್ತನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಿಜೆಪಿ ಪಕ್ಷದಿಂದ ಉಚ್ಛಾಟಿಸಿದೆ. ಉತ್ತರ ಪ್ರದೇಶದ ಬಿಜೆಪಿ ನಾಯಕ ಬಬ್ಬನ್‌ ಸಿಂಗ್‌ ರಘುವಂಶಿ ಮಹಿಳೆಯೊಂದಿಗೆ ಅಶ್ಲೀಲವಾಗಿ ವರ್ತಿಸಿದ್ದು, ಸದ್ಯ ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. 70 ವರ್ಷದ ಬಿಜೆಪಿ ನಾಯಕ ಬಬ್ಬನ್‌ ನರ್ತಕಿಯೊಬ್ಬಳನ್ನು ತೊಡೆ ಮೇಲೆ ಕೂರಿಸಿಕೊಂಡು ಆಕೆಯ ಎದೆಯನ್ನು ಸ್ಪರ್ಶಿಸುತ್ತಿರುವುದು ವಿಡಿಯೊದಲ್ಲಿ ಕಂಡು ಬಂದಿದೆ.

ಡ್ಯಾನ್ಸರ್​ ಜತೆ ಅನುಚಿತ ವರ್ತನೆ ವಿಡಿಯೋ ವೈರಲ್,  ಬಿಜೆಪಿ ನಾಯಕ ಬಬ್ಬನ್ ಸಿಂಗ್ ಪಕ್ಷದಿಂದ ಉಚ್ಛಾಟನೆ
ಬಬ್ಬನ್ ಸಿಂಗ್
ನಯನಾ ರಾಜೀವ್
|

Updated on: May 16, 2025 | 11:04 AM

Share

ಬಲ್ಲಿಯಾ, ಮೇ 16: ಡ್ಯಾನ್ಸರ್​ ಜತೆ ಬಿಜೆಪಿ ನಾಯಕ ಬಬ್ಬನ್ ಸಿಂಗ್(Babban Singh) ಅನುಚಿತ ವರ್ತನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಿಜೆಪಿ ಪಕ್ಷದಿಂದ ಉಚ್ಛಾಟಿಸಿದೆ. ಉತ್ತರ ಪ್ರದೇಶದ ಬಿಜೆಪಿ ನಾಯಕ ಬಬ್ಬನ್‌ ಸಿಂಗ್‌ ರಘುವಂಶಿ ಮಹಿಳೆಯೊಂದಿಗೆ ಅಶ್ಲೀಲವಾಗಿ ವರ್ತಿಸಿದ್ದು, ಸದ್ಯ ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. 70 ವರ್ಷದ ಬಿಜೆಪಿ ನಾಯಕ ಬಬ್ಬನ್‌ ನರ್ತಕಿಯೊಬ್ಬಳನ್ನು ತೊಡೆ ಮೇಲೆ ಕೂರಿಸಿಕೊಂಡು ಆಕೆಯ ಎದೆಯನ್ನು ಸ್ಪರ್ಶಿಸುತ್ತಿರುವುದು ವಿಡಿಯೊದಲ್ಲಿ ಕಂಡು ಬಂದಿದೆ.

ಈ ವಿಡಿಯೋ 20 ದಿನಗಳಷ್ಟು ಹಳೆಯಾಗಿದೆ. ಈ ಘಟನೆಯು ಬಿಜೆಪಿಯ ಸ್ಥಳೀಯ ಘಟಕದಲ್ಲಿನ ಭಿನ್ನಾಭಿಪ್ರಾಯ ಸೃಷ್ಟಿಸಿದೆ. ವೀಡಿಯೊದಲ್ಲಿ, ಬಬ್ಬನ್ ಸಿಂಗ್ ಮಹಿಳಾ ನರ್ತಕಿಯನ್ನು ಕೆಟ್ಟ ರೀತಿಯಲ್ಲಿ ಸ್ಪರ್ಶಿಸುತ್ತಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ. ಆದರೆ ಇದರ ಬಗ್ಗೆ ಪ್ರಶ್ನೆಗಳನ್ನು ಕೇಳಿದಾಗ, ಅವರು ಇದನ್ನು ‘ರಾಜಕೀಯ ಪಿತೂರಿ’ ಎಂದು ಕರೆಯಲು ಪ್ರಾರಂಭಿಸಿದ್ದರು.

ಬಬ್ಬನ್ ಸಿಂಗ್ ರಘುವಂಶಿ ಆರ್ಕೆಸ್ಟ್ರಾ ಹುಡುಗಿಯೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವ ಈ ವಿಡಿಯೊವನ್ನು ಸಮಾಜವಾದಿ ಪಕ್ಷದ ನಾಯಕ ಪಂಕಜ್ ರಾಜ್‌ಭರ್ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಮತ್ತಷ್ಟು ಓದಿ: ಮಗಳನ್ನು ವೇಶ್ಯಾವಾಟಿಕೆಗೆ ಒತ್ತಾಯಿಸಿ, ಅಶ್ಲೀಲ ವಿಡಿಯೋ ರೆಕಾರ್ಡ್ ಮಾಡಿದ ಅಪ್ಪ-ಅಮ್ಮ

ಮದುವೆ ಸಮಾರಂಭವೊಂದರಲ್ಲಿ ಬಬ್ಬನ್‌ ಸಿಂಗ್‌ ಭಾಗವಹಿಸಿದ್ದರು. ಕುರ್ಚಿಯಲ್ಲಿ ಕುಳಿತಿದ್ದ ಅವರ ತೊಡೆ ಮೇಲೆ ಡ್ಯಾನ್ಸರ್‌ ಒಬ್ಬಳು ಕುಳಿತು ಅಶ್ಲೀಲವಾಗಿ ವರ್ತಿಸಿದ್ದಾಳೆ. ಎಲ್ಲರೂ ನೋಡುತ್ತಿದ್ದಂತೆ ಬಬ್ಬರ್‌ ಸಿಂಗ್‌ ಕೂಡ ಆಕೆಯ ಎದೆಯನ್ನು ಸ್ಪರ್ಶಿಸಿ ಚುಂಬಿಸಿದ್ದಾರೆ. ಈ ವಿಡಿಯೋ ವೈರಲ್ ಆದ ಬಳಿಕ ಈ ವಿಡಿಯೋ ನಿಜವಾದದ್ದಲ್ಲ ನಾನು ಹಾಗೆ ಮಾಡಿಯೇ ಇಲ್ಲ ಎಂದು ರಾಜಕೀಯ ಪಿತೂರಿ ಎಂದು ಕರೆದಿದ್ದಾರೆ.

ನನಗೀಗ 70 ವರ್ಷ ವಯಸ್ಸು. ಈ ರೀತಿ ನಾನು ಮಾಡಲು ಸಾಧ್ಯವಿಲ್ಲ, ಇದು ನಕಲಿ ವಿಡಿಯೊ. ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸದ್ಯದಲ್ಲೇ ಚುನಾವಣೆ ನಡೆಯಲಿದ್ದು, ಇದರ ಹಿಂದೆ ಸ್ಥಳೀಯ ಶಾಸಕಿ ಕೇಟ್ಕಿ ಸಿಂಗ್‌ ಮತ್ತು ಆಕೆಯ ಪತಿಯ ಕೈವಾಡವಿದೆ ನಾನು ಈ ಕುರಿತು ದೂರು ನೀಡಿದ್ದೇನೆ ಎಂದರು. ಬಿಜೆಪಿ ರಾಜ್ಯಾಧ್ಯಕ್ಷ ಭೂಪೇಂದ್ರ ಸಿಂಗ್ ಚೌಧರಿ ಅವರ ಸೂಚನೆಯ ಮೇರೆಗೆ ಶಾಸಕ ಗೋವಿಂದ ನಾರಾಯಣ್ ಶುಕ್ಲಾ ಕೂಡ ಕ್ರಿಯಾ ಪತ್ರವನ್ನು ಹೊರಡಿಸಿದ್ದಾರೆ. ಬಬ್ಬನ್ ಸಿಂಗ್ ರಘುವಂಶಿ ಅವರನ್ನು ಪಕ್ಷದಿಂದ ಹೊರಹಾಕಲು ಆದೇಶ ನೀಡಲಾಗಿದೆ.

ವಿಡಿಯೋ

ಸಕ್ಕರೆ ಕಾರ್ಖಾನೆ ಸಹಕಾರಿ ಒಕ್ಕೂಟದ ಅಧ್ಯಕ್ಷ ಬಬ್ಬನ್ ಸಿಂಗ್ ರಘುವಂಶಿ ಅವರ ಆಕ್ಷೇಪಾರ್ಹ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಬಿಜೆಪಿ ಅದನ್ನು ಗಂಭೀರವಾಗಿ ಪರಿಗಣಿಸಿದೆ. ಭಾರತೀಯ ಜನತಾ ಪಕ್ಷದ ರಾಜ್ಯ ನಾಯಕತ್ವ ಗುರುವಾರ ಅವರನ್ನು ಪಕ್ಷದಿಂದ ಹೊರಹಾಕಿತು. ರಾಜ್ಯ ನಾಯಕತ್ವ ಅವರನ್ನು ಉಚ್ಚಾಟಿಸಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ್ ಮಿಶ್ರಾ ಹೇಳಿದ್ದಾರೆ.

ಮುಂದೆ ಯಾವುದೇ ಸೂಚನೆಗಳು ಬಂದರೂ, ನಿಯಮಗಳ ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಅವರು ಪಕ್ಷದಲ್ಲಿ ಯಾವುದೇ ಹುದ್ದೆಯನ್ನು ಹೊಂದಿರಲಿಲ್ಲ. ಬುಧವಾರ, ಮದುವೆ ಸಮಾರಂಭದಲ್ಲಿ ನರ್ತಕಿಯೊಂದಿಗೆ ಅವರು ಅಶ್ಲೀಲವಾಗಿ ವರ್ತಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ