ಸೈಫ್ ಅಲಿಖಾನ್ ಅಭಿನಯದ ತಾಂಡವ್ ವಿರುದ್ಧ ಸಿಡಿದೆದ್ದ ಬಿಜೆಪಿ ನಾಯಕರು; ಕ್ಷಮೆಗೆ ಒತ್ತಾಯ
ತಾಂಡವ್ ವೆಬ್ ಸೀರಿಸ್ಗೆ ನಿಷೇಧ ಹೇರುವಂತೆ ಒತ್ತಾಯಿಸಿ, ಬಿಜೆಪಿ ಸಂಸದ ಮನೋಜ್ ಕೋಟಾಕ್ ಅವರು, ಮಾಹಿತಿ ಮತ್ತು ಪ್ರಸಾರ ಇಲಾಖೆ ಸಚಿವ ಪ್ರಕಾಶ್ ಜಾವಡೇಕರ್ಗೆ ಪತ್ರ ಬರೆದಿದ್ದಾರೆ. ಒಟಿಟಿ ಫ್ಲಾಟ್ಫಾರಂ ನಿಯಂತ್ರಣಕ್ಕೆ ಪ್ರಾಧಿಕಾರ ರಚಿಸುವಂತೆ ಮನವಿ ಮಾಡಿದ್ದಾರೆ.
ಇತ್ತೀಚೆಗಷ್ಟೇ ಅಮೇಜಾನ್ ಪ್ರೈಮ್ ವಿಡಿಯೊದಲ್ಲಿ ಬಿಡುಗಡೆಯಾಗಿರುವ, ನಟ ಸೈಫ್ ಅಲಿಖಾನ್ ಅಭಿನಯದ ‘ತಾಂಡವ್’ ವೆಬ್ ಸೀರಿಸ್ ವಿರುದ್ಧ ಬಿಜೆಪಿ ನಾಯಕ ರಾಮ್ ಕದಮ್ ಸೇರಿ ಹಲವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವೆಬ್ ಸರಣಿ ಹಿಂದೂಗಳ ಭಾವನೆಗೆ ಧಕ್ಕೆ ತರುವಂತಿದೆ ಎಂದು ಆರೋಪಿಸಿದ್ದಾರೆ.
ಅದ್ಯಾಕೆ ಸದಾ ಯಾವುದಾದರೂ ಒಂದು ಸಿನಿಮಾ ಮತ್ತು ವೆಬ್ ಸೀರಿಸ್ ಮೂಲಕ ಹಿಂದೂ ದೇವರು, ದೇವತೆಗಳಿಗೆ ಪದೇಪದೆ ಅಗೌರವ ತೋರಲಾಗುತ್ತದೆ? ಈಗ ಅಂಥದ್ದೇ ಒಂದು ವೆಬ್ ಸರಣಿಯಲ್ಲಿ ಸೈಫ್ ಅಲಿಖಾನ್ ಪಾತ್ರ ನಿರ್ವಹಿಸಿ, ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆಯನ್ನುಂಟುಮಾಡಿದ್ದಾರೆ. ಈ ವೆಬ್ ಸೀರಿಸ್ನಲ್ಲಿ ಶಿವನನ್ನು ತುಂಬ ಹಗುರವಾಗಿ ಚಿತ್ರಿಸಲಾಗಿದೆ. ಈ ಭಾಗವನ್ನು ನಿರ್ದೇಶಕ ಅಲಿ ಅಬ್ಬಾಸ್ ಜಾಫರ್ ತೆಗೆದುಹಾಕಬೇಕು ಎಂದು ಕದಮ್ ಆಗ್ರಹಿಸಿದ್ದಾರೆ. ಅಷ್ಟೇ ಅಲ್ಲ ಇದರಲ್ಲಿ ಇರುವ ಎಲ್ಲರೂ ಕ್ಷಮೆ ಕೇಳಬೇಕು ಎಂದೂ ಒತ್ತಾಯಿಸಿದ್ದಾರೆ. ವೆಬ್ ಸರಣಿಯ ಸ್ವರೂಪವನ್ನು ಬದಲಿಸುವವರೆಗೂ ನಾವು boycott Tandavನ್ನು ಮುಂದುವರಿಸುತ್ತೇವೆ ಎಂದಿದ್ದಾರೆ.
ಪೊಲೀಸರಿಗೆ ದೂರು ಇನ್ನು ತಾಂಡವ್ನಲ್ಲಿ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಡಿ ರಾಮ್ ಕದಮ್ ಇದರ ನಿರ್ಮಾಪಕರ ವಿರುದ್ಧ ಘಾಟ್ಕೋಪಾರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಶೋನಲ್ಲಿರುವ ಪಾತ್ರಧಾರಿಗಳು, ನಿರ್ಮಾಪಕರು, ನಿರ್ದೇಶಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದ್ದಾರೆ.
ಕೇಂದ್ರ ಸಚಿವರಿಗೆ ಪತ್ರ ಇನ್ನು ತಾಂಡವ್ ವೆಬ್ ಸೀರಿಸ್ಗೆ ನಿಷೇಧ ಹೇರುವಂತೆ ಒತ್ತಾಯಿಸಿ, ಬಿಜೆಪಿ ಸಂಸದ ಮನೋಜ್ ಕೋಟಾಕ್ ಅವರು, ಮಾಹಿತಿ ಮತ್ತು ಪ್ರಸಾರ ಇಲಾಖೆ ಸಚಿವ ಪ್ರಕಾಶ್ ಜಾವಡೇಕರ್ಗೆ ಪತ್ರ ಬರೆದಿದ್ದಾರೆ. ಒಟಿಟಿ ಫ್ಲಾಟ್ಫಾರಂ ನಿಯಂತ್ರಣಕ್ಕೆ ಪ್ರಾಧಿಕಾರ ರಚಿಸುವಂತೆ ಮನವಿ ಮಾಡಿದ್ದಾರೆ. ಆನ್ಲೈನ್ ಫ್ಲಾಟ್ಫಾರಂಗಳಲ್ಲಿ ಸೆನ್ಸಾರ್ಗೆ ಯಾವುದೇ ಪ್ರಾಧಿಕಾರ ಇಲ್ಲದ ಕಾರಣ, ಪದೇಪದೆ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟಾಗುತ್ತಿದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.
ಒಂದು ಕೋಟಿ ಲಂಚಕ್ಕೆ ಬೇಡಿಕೆ ಆರೋಪ -CBIನಿಂದ ಇಬ್ಬರು ಹಿರಿಯ ರೈಲ್ವೆ ಅಧಿಕಾರಿಗಳ ಬಂಧನ